ಟಿವಿ9 ಡೇರ್2ಡ್ರೀಮ್ ಪ್ರಶಸ್ತಿ ಸೀಸನ್-3ರ ಪ್ರದಾನ ಸಮಾರಂಭ ನವೆಂಬರ್ 30 ಮಧ್ಯಾಹ್ನ 1ಕ್ಕೆ
ಟಿವಿ9 ನೆಟ್ವರ್ಕ್ ಮತ್ತು SAP India ಸಹಯೋಗದಲ್ಲಿ ಡೇರ್2ಡ್ರೀಮ್ ಅವಾರ್ಡ್ಸ್ ಪ್ರಶಸ್ತಿ ಪ್ರದಾನ ಸಮಾರಂಭದ ಬಗ್ಗೆ ವಿವರ ಈ ಲೇಖನದಲ್ಲಿದೆ.
ಟಿವಿ9 ನೆಟ್ವರ್ಕ್ ಮತ್ತು SAP India ಸಹಯೋಗದಲ್ಲಿ ಡೇರ್2ಡ್ರೀಮ್ ಅವಾರ್ಡ್ಸ್ ಮೂರನೇ ಅವತರಣಿಕೆಯ ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 30, 2021ರಂದು ಮಂಗಳವಾರ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ. ಕಿರು, ಸಣ್ಣ ಮತ್ತು ಮಧ್ಯಮ ಸಂಸ್ಥೆಗಳ ಸಚಿವಾಲಯದ ಕಾರ್ಯದರ್ಶಿ ಆದ ಬಿ.ಬಿ. ಸ್ವಾಯಿನ್ ಅವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಮುಖ ಭಾಷಣ ಮಾಡಲಿದ್ದಾರೆ. ಕೊರೊನಾ ಸಾಂಕ್ರಾಮಿಕದ ಸಂಕಷ್ಟ ಕಾಲವನ್ನು ಮೆಟ್ಟಿ ನಿಂತ ಉದ್ಯಮಿಗಳ ಯಶೋಗಾಥೆಯನ್ನು ಗುರುತಿಸುವುದು ಇದರ ಧ್ಯೇಯವಾಗಿದೆ. ಈ ಕೈಗಾರಿಕೋದ್ಯಮಿ ನಾಯಕರು ಕೊರೊನಾ ಪಿಡುಗಿನ ಸಂಕಷ್ಟ ಕಾಲದಲ್ಲಿ ಹೊಸ ವಿಧಾನಗಳನ್ನು ಅಳವಡಿಸಿಕೊಂಡು, ಡಿಜಿಟಲ್ ಬದಲಾವಣೆಗೆ ಮಣೆ ಹಾಕಿ, ಉತ್ಪನ್ನ ಅಭಿವೃದ್ಧಿ ತಂತ್ರಗಳು ಮತ್ತು ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ತಮ್ಮ ಕೈಗಾರಿಕೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.
Watch Shri B.B. Swain, Secretary(MSME) deliver keynote address at India’s biggest Entrepreneurial Awards @TV9Bharatvarsh on 30.11.2021 at 01.00 PM pic.twitter.com/cGNCCGDfHn
— Ministry of MSME (@minmsme) November 27, 2021
ಟಿವಿ9 ಡೇರ್2ಡ್ರೀಮ್ ಅವಾರ್ಡ್ ವಿಭಾಗಗಳು ಹೀಗಿವೆ: ಎರಡು ಸೆಗ್ಮೆಂಟ್ ಒಟ್ಟು 15 ವಿಭಾಗಗಳಲ್ಲಿ ಅವಾರ್ಡ್ಗಳನ್ನು ನೀಡಲಾಗುವುದು: 1. 75 ಕೋಟಿ ರೂಪಾಯಿಯಿಂದ 150 ಕೋಟಿ ರೂಪಾಯಿ ವಾರ್ಷಿಕ ವಹಿವಾಟು ಹೊಂದಿರುವ ಕೈಗಾರಿಕೆಗಳು 2. 150 ಕೋಟಿ ರೂಪಾಯಿ ವಾರ್ಷಿಕ ವಹಿವಾಟು ಹೊಂದಿರುವ ಮಧ್ಯಮ ಕಾರ್ಪೊರೇಟ್ ವಲಯ
15 ವಿಭಾಗಗಳು ಹೀಗಿವೆ: 1. ಕಂಪೆನಿ ಆಫ್ ದಿ ಇಯರ್ ವಲಯವಾರು ಪ್ರಶಸ್ತಿಗಳು (ಪ್ರತಿ ವಲಯದಲ್ಲೂ 8-9 ಪ್ರಶಸ್ತಿಗಳು) 2. ಎಮರ್ಜಿಂಗ್ ಕಂಪೆನಿ ಆಫ್ ದಿ ಇಯರ್ 3. ತಂತ್ರಜ್ಞಾನ ಅಳವಡಿಸಿಕೊಂಡು ಉದ್ಯಮವನ್ನು ಮಾರ್ಪಾಡು ಮಾಡಿರುವ ಕೈಗಾರಿಕೆ
ಪ್ರೇರಣಾದಾಯಕ ನಾಯಕ: 1. ಯುವ ಉದ್ಯಮ ನಾಯಕ 2. ವರ್ಷದ ಮಹಿಳಾ ಉದ್ಯಮಿ 3. ವರ್ಷದ ಉದ್ಯಮಿ
ಭಾರತದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದ ಕಾರ್ಯಕ್ರಮವನ್ನು ಮುಂಚೂಣಿ ನ್ಯೂಸ್ ಚಾನೆಲ್ ಟಿವಿ9 ಭಾರತ್ವರ್ಷ್ದಲ್ಲಿ ಮತ್ತು ಟಿವಿ9 ನೆಟ್ವರ್ಕ್ನ ನಾನಾ ಡಿಜಿಟಲ್ ವೇದಿಕೆಗಳಲ್ಲಿ ಪ್ರಸಾರ ಮಾಡಲಾಗುವುದು.
ಇದನ್ನೂ ಓದಿ: Dare 2 Dream Awards: ಟಿವಿ9, ಸ್ಯಾಪ್ ಇಂಡಿಯಾ ಸಹಯೋಗದಲ್ಲಿ ಡೇರ್2ಡ್ರೀಮ್ ಅವಾರ್ಡ್ಸ್; ವಿವರ ಓದಿ