AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paytm: ಪೇಟಿಎಂ ಎರಡನೇ ತ್ರೈಮಾಸಿಕದ ನಷ್ಟ 473 ಕೋಟಿ ರೂ.

ಪೇಟಿಎಂ 2021- 22ನೇ ಸಾಲಿನ ಎರಡನೇ ತ್ರೈಮಾಸಿಕ ಜುಲೈನಿಂದ ಸೆಪ್ಟೆಂಬರ್​ಗೆ ಕ್ರೋಡೀಕೃತ ನಷ್ಟವು 473 ಕೋಟಿ ರೂಪಾಯಿಗೆ ವಿಸ್ತರಣೆ ಆಗಿದೆ.

Paytm: ಪೇಟಿಎಂ ಎರಡನೇ ತ್ರೈಮಾಸಿಕದ ನಷ್ಟ 473 ಕೋಟಿ ರೂ.
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Nov 27, 2021 | 5:56 PM

Share

ಹಣಕಾಸು ತಂತ್ರಜ್ಞಾನ ಸಂಸ್ಥೆ ಪೇಟಿಎಂನ ಮಾತೃಸಂಸ್ಥೆ ಒನ್​ 97 ಕಮ್ಯುನಿಕೇಷನ್ಸ್​ ಶನಿವಾರದಂದು 2021- 22ನೇ ಸಾಲಿನ ಜುಲೈನಿಂದ ಸೆಪ್ಟೆಂಬರ್​ ತ್ರೈಮಾಸಿಕದ ಫಲಿತಾಂಶವನ್ನು ಪ್ರಕಟಿಸಿದ್ದು, ಕ್ರೋಡೀಕೃತ ನಷ್ಟ 473 ಕೋಟಿ ರೂಪಾಯಿ ಆಗಿದೆ. ಮುಖ್ಯವಾಗಿ ಪಾವತಿ ಪ್ರೊಸೆಸಿಂಗ್ ಶುಲ್ಕದ ಹೆಚ್ಚಳದ ಹಿನ್ನೆಲೆಯಲ್ಲಿ ನಷ್ಟದ ಪ್ರಮಾಣದ ವಿಸ್ತರಣೆ ಆಗಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 436.7 ಕೋಟಿ ರೂಪಾಯಿ ನಷ್ಟವಾಗಿತ್ತು ಎಂಬುದು ವಿನಿಮಯ ಕೇಂದ್ರದಲ್ಲಿ ಮಾಡಿರುವ ಫೈಲಿಂಗ್​ನಲ್ಲಿ ಗೊತ್ತಾಗಿದೆ. ಕ್ರೋಡೀಕೃತ ಒಟ್ಟಾರೆ ಆದಾಯ ಶೇ 49.6ರಷ್ಟು ಹೆಚ್ಚಳವಾಗಿ 1086.4 ಕೋಟಿ ರೂಪಾಯಿ ಮುಟ್ಟಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 663.9 ಕೋಟಿ ರೂಪಾಯಿ ವರದಿ ಆಗಿತ್ತು.

“ನಮ್ಮ ವೆಚ್ಚದಲ್ಲಿ ಸುಧಾರಣೆ ಕಂಡಿದ್ದೇವೆ. ತಂತ್ರಜ್ಞಾನದ ಮತ್ತು ವ್ಯಾಪಾರಿಗಳ ಮೂಲ ವಿಸ್ತರಣೆಗಾಗಿ ಹೂಡಿಕೆಯನ್ನು ನಿರಂತರವಾಗಿ ಹಾಗೂ ಹೆಚ್ಚಿಸುತ್ತಾ ಹೋಗಲಾಗಿದೆ. ಸ್ಪಷ್ಟವಾಗಿ, ನಗದೀಕರಣ ಮತ್ತು ಯುಪಿಐ ಹೊರತಾದ ವ್ಯವಹಾರವು ನಮ್ಮ ಫಲಿತಾಂಶ ಹಾಗೂ ವೆಚ್ಚಗಳನ್ನು ತೋರಿಸುತ್ತಿದೆ. ಭಾರತದ ಪಾವತಿ ಹಾಗೂ ಹಣಕಾಸು ಸೇವೆ ಒಳಗೊಳ್ಳುವಿಕೆಯಲ್ಲಿ ಆವಿಷ್ಕಾರ ಮತ್ತು ಹೂಡಿಕೆಗೆ ಬದ್ಧವಾಗಿದ್ದೇವೆ,” ಎಂದು ಪೇಟಿಎಂ ವಕ್ತಾರ ಹೇಳಿದ್ದಾರೆ.

ಪೇಟಿಎಂನ ಪಾವತಿ ಪ್ರೊಸೆಸಿಂಗ್ ಶುಲ್ಕಗಳ ವೆಚ್ಚವು ಶೇ 36ರಷ್ಟು ಹೆಚ್ಚಳವಾಗಿ, 670 ಕೋಟಿ ರೂಪಾಯಿಯನ್ನು ಮುಟ್ಟಿದೆ. 2020-21ರ ಇದೇ ಅವಧಿಯಲ್ಲಿ ರೂ. 492.4 ಕೋಟಿ ಇತ್ತು. ಸಿಬ್ಬಂದಿ ಅನುಕೂಲಕ್ಕಾಗಿ ಮೀಸಲಿಡುವ ವೆಚ್ಚವು ಶೇ 35ರಷ್ಟು ಜಾಸ್ತಿಯಾಗಿ, 386.5 ಕೋಟಿ ರೂಪಾಯಿ ಮುಟ್ಟಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 286.2 ಕೋಡಿ ರೂ. ಇತ್ತು. ಸಾಫ್ಟ್‌ವೇರ್, ಕ್ಲೌಡ್ ಮತ್ತು ಡೇಟಾ ಸೆಂಟರ್‌ನಲ್ಲಿ ಕಂಪೆನಿಯ ವೆಚ್ಚವು ಶೇ 56.5ರಷ್ಟು ಏರಿಕೆಯಾಗಿದ್ದು, ಪರಿಶೀಲನೆಯ ಅವಧಿಯಲ್ಲಿ 72.1 ಕೋಟಿ ರೂಪಾಯಿಗಳಿಂದ 112.9 ಕೋಟಿ ರೂಪಾಯಿಗೆ ಏರಿಕೆ ಆಗಿದೆ.

“ನಮ್ಮ ಗಮನವು ಗ್ರಾಹಕ ಮತ್ತು ವ್ಯಾಪಾರಿ ವಿಸ್ತರಣೆಯ ಮೇಲೆ ಉಳಿದಿದೆ ಹಾಗೂ ಭಾರತೀಯ ಇಂಟರ್​ನೆಟ್ ಎಕೋ ಸಿಸ್ಟಮ್ ಮತ್ತು ಹಣಕಾಸು ಸೇವೆಗಳ ಶೀಘ್ರ ಅಳವಡಿಕೆಯಿಂದ ಒದಗಿಸಲಾದ ಅವಕಾಶಗಳನ್ನು ನಗದು ಮಾಡಲು ನಮ್ಮ ವ್ಯಾಪಾರ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ” ಎಂದು ವಕ್ತಾರರು ಹೇಳಿದ್ದಾರೆ. ಎರಡನೇ ತ್ರೈಮಾಸಿಕದಲ್ಲಿ Paytm ನ ಒಟ್ಟು ವ್ಯಾಪಾರದ ಮೌಲ್ಯವು (GMV) 2020-21ರ ಅನುಗುಣವಾದ ತ್ರೈಮಾಸಿಕದಲ್ಲಿ 94,700 ಕೋಟಿ ರೂಪಾಯಿಗಳಿಂದ 1,95,600 ಕೋಟಿ ರೂಪಾಯಿಗಳಿಗೆ ದ್ವಿಗುಣಗೊಂಡಿದೆ. ತ್ರೈಮಾಸಿಕದಲ್ಲಿ ಕಂಪೆನಿಯ ಸರಾಸರಿ ಮಾಸಿಕ ವಹಿವಾಟು ಬಳಕೆದಾರರು (MTU) ವರ್ಷದಿಂದ ವರ್ಷಕ್ಕೆ (YOY) 5.74 ಮಿಲಿಯನ್‌ಗೆ ಶೇಕಡಾ 33 ರಷ್ಟು ಹೆಚ್ಚಾಗಿದ್ದಾರೆ ಎಂದು ಪೇಟಿಎಂ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Paytm Listing: ಪೇಟಿಎಂ ಐಪಿಒದಲ್ಲಿ ಸಂಗ್ರಹಿಸಿದ್ದ 18 ಸಾವಿರ ಕೋಟಿಯ ದುಪ್ಪಟ್ಟಿಗೂ ಹೆಚ್ಚು ಹಣ 38 ಸಾವಿರ ಕೋಟಿ ಕಳ್ಕೊಂಡ ಹೂಡಿಕೆದಾರರು

Published On - 5:56 pm, Sat, 27 November 21