AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tomato Price: ಟೊಮೆಟೊ ದರ ಕಳೆದ ವರ್ಷ ನವೆಂಬರ್​ಗೆ ಹೋಲಿಸಿದಲ್ಲಿ ಶೇ 142ರಷ್ಟು ಏರಿಕೆ

ಟೊಮೆಟೊ ಬೆಲೆಯಲ್ಲಿ ನವೆಂಬರ್ ತಿಂಗಳಲ್ಲಿ ಶೇ 142ರಷ್ಟು ಹೆಚ್ಚಳವಾಗಿದೆ. ಈ ಬೆಲೆ ಹಿಂದಿನ ಕಾರಣ ಏನು ಎಂಬುದನ್ನು ಕ್ರಿಸಿಲ್ ರೀಸರ್ಚ್ ತಿಳಿಸಿದೆ.

Tomato Price: ಟೊಮೆಟೊ ದರ ಕಳೆದ ವರ್ಷ ನವೆಂಬರ್​ಗೆ ಹೋಲಿಸಿದಲ್ಲಿ ಶೇ 142ರಷ್ಟು ಏರಿಕೆ
ಪ್ರಾತಿನಿಧಿಕ ಚಿತ್ರ
TV9 Web
| Updated By: Srinivas Mata|

Updated on: Nov 27, 2021 | 11:42 PM

Share

ಕ್ರಿಸಿಲ್ ರೀರ್ಚ್ ಪ್ರಕಾರ, ನವೆಂಬರ್‌ನಲ್ಲಿ ಟೊಮೆಟೊ ಬೆಲೆ ವರ್ಷದಿಂದ ವರ್ಷಕ್ಕೆ ಶೇ 142ರಷ್ಟು ಜಿಗಿದಿದೆ. ಮತ್ತು ಇನ್ನೂ 45-50 ದಿನಗಳವರೆಗೆ ಏರಿಕೆ ಆಗುವ ಸಾಧ್ಯತೆಯಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳು ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಟೊಮೆಟೊದ ಪ್ರಮುಖ ಪೂರೈಕೆದಾರರು. ಆದರೆ ಕರ್ನಾಟಕ (ಸಾಮಾನ್ಯಕ್ಕಿಂತ ಶೇ 105ರಷ್ಟು), ಆಂಧ್ರಪ್ರದೇಶ (ಶೇ 40ರಷ್ಟು ಸಾಮಾನ್ಯಕ್ಕಿಂತ ಹೆಚ್ಚು) ಮತ್ತು ಮಹಾರಾಷ್ಟ್ರ (ಶೇ 22ರಷ್ಟು ಸಾಮಾನ್ಯಕ್ಕಿಂತ ಹೆಚ್ಚು) ಅತಿವೃಷ್ಟಿಯಿಂದ ಬೆಳೆದ ಬೆಳೆಗಳು ಹಾನಿಗೊಳಗಾಗಿವೆ.

“ನಮ್ಮ ನೆಲದ ಸ್ಥಿತಿಗತಿಯು ಕರ್ನಾಟಕದಲ್ಲಿ ಪರಿಸ್ಥಿತಿ ಎಷ್ಟು ಕಠೋರ ಆಗಿದೆ ಎಂಬುದನ್ನು ಸೂಚಿಸುತ್ತಿದೆ. ಅಂದರೆ ಮಹಾರಾಷ್ಟ್ರದ ನಾಸಿಕ್‌ನಿಂದ ಟೊಮೆಟೊಗಳನ್ನು ಕಳುಹಿಸಲಾಗುತ್ತಿದೆ ಎಂದು ತೋರಿಸುತ್ತದೆ. ನವೆಂಬರ್ 25ರಂದು ಟೊಮೆಟೊ ಬೆಲೆಗಳು ವರ್ಷದಿಂದ ವರ್ಷದ ಲೆಕ್ಕಕ್ಕೆ ಶೇ 142ರಷ್ಟು ಹೆಚ್ಚಾಗಿದೆ ಮತ್ತು ಮಧ್ಯಪ್ರದೇಶ ಹಾಗೂ ರಾಜಸ್ಥಾನದಿಂದ ಜನವರಿಯಿಂದ ದೇಶಾದ್ಯಂತದ ಕೊಯ್ಲು ಮಾರುಕಟ್ಟೆಯನ್ನು ತಲುಪುವವರೆಗೆ ಮುಂದಿನ 45-50 ದಿನಗಳವರೆಗೆ ಹೆಚ್ಚಾಗುವ ನಿರೀಕ್ಷೆಯಿದೆ,” ಎಂದು ಕ್ರಿಸಿಲ್ ಸಂಶೋಧನೆಯ ನಿರ್ದೇಶಕ ಹೇತಲ್ ಗಾಂಧಿ ಹೇಳಿದ್ದಾರೆ. ಪ್ರಸ್ತುತ ಗರಿಷ್ಠ ಮಟ್ಟದಿಂದ ಶೇ 30ರಷ್ಟು ಇಳಿಕೆಯಾಗಿ, ಎರಡು-ಮೂರು ತಿಂಗಳಲ್ಲಿ ಪ್ರತಿ ಕೇಜಿಗೆ 47 ರೂಪಾಯಿ ತಲುಪುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

ಅದೇ ರೀತಿ, ಈರುಳ್ಳಿ ಬೆಲೆ ಎರಡು ವಾರಗಳಲ್ಲಿ ಕಡಿಮೆ ಆಗಲು ಪ್ರಾರಂಭಿಸಬೇಕು ಎಂದು ಕ್ರಿಸಿಲ್ ಹೇಳಿದೆ. “ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ತರಕಾರಿಗಳಲ್ಲಿ ಶೇ 14ರಷ್ಟಿರುವ ಈರುಳ್ಳಿ ಬೆಳೆಯ ಮೇಲೂ ಪರಿಣಾಮ ಬೀರಿದೆ. ಆಗಸ್ಟ್‌ನಲ್ಲಿ ಮಳೆ ಕೊರತೆಯಿಂದಾಗಿ ಮಹಾರಾಷ್ಟ್ರದ ಪ್ರಮುಖ ಬೆಳೆಯುವ ಪ್ರದೇಶಗಳಲ್ಲಿ ನಾಟಿ ವಿಳಂಬವಾಯಿತು. ಇದು ಅಕ್ಟೋಬರ್‌ನಲ್ಲಿ ಆವಕವನ್ನು ವಿಳಂಬಗೊಳಿಸಿತು. ಇದು ಸೆಪ್ಟೆಂಬರ್‌ಗೆ ಹೋಲಿಸಿದರೆ ಬೆಲೆಗಳಲ್ಲಿ ಶೇ 65ರಷ್ಟು ಹೆಚ್ಚಳಕ್ಕೆ ಕಾರಣವಾಯಿತು,” ಎಂದು ಗಾಂಧಿ ಹೇಳಿದ್ದಾರೆ. ಮುಂದಿನ 10-15 ದಿನಗಳಲ್ಲಿ ಹರ್ಯಾಣದಂತಹ ಉತ್ತರದ ರಾಜ್ಯಗಳಿಂದ ಹೊಸ ದಾಸ್ತಾನು ನಿರೀಕ್ಷಿಸಲಾಗಿದೆ. ಇದು ಭಾರತದಾದ್ಯಂತ ಬೆಲೆಗಳನ್ನು ಕಡಿಮೆ ಮಾಡುತ್ತದೆ. ಆದರೂ ಈರುಳ್ಳಿ ಉತ್ಪಾದನೆಯ ಶೇ 70ರಷ್ಟು ರಾಬಿ ಋತುವಿನಲ್ಲಿ ಆಗುವುದರಿಂದ ನವೆಂಬರ್ ಪ್ರಮುಖ ಬಿತ್ತನೆಯ ತಿಂಗಳು ಮತ್ತು ಆವಕ ಹಾಗೂ ಬೆಲೆ ಎರಡಕ್ಕೂ ಮಳೆಯು ಪ್ರಮುಖ ಮೇಲ್ವಿಚಾರಣೆ ಆಗಿದೆ,” ಎಂದು ಗಾಂಧಿ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರೀ ಮಳೆಗೆ ಐದು ಲಕ್ಷ ಹೆಕ್ಟೇರ್ ಬೆಳೆ ನಾಶ; ದುಪ್ಪಟ್ಟಾದ ತರಕಾರಿ ಬೆಲೆ, ಪ್ಯಾಕೆಟ್ ಒಂದರಲ್ಲಿ 2 ಟೊಮೆಟೋ ಮಾರಾಟ!