ಗೂಗಲ್, ಮೈಕ್ರೋಸಾಫ್ಟ್ ಇತ್ಯಾದಿ ಟೆಕ್ ಕಂಪನಿಗಳ ಬ್ರಿಟಿಷ್ ಈಸ್ಟ್ ಇಂಡಿಯಾ ಸಂಸ್ಥೆಗೆ ಹೋಲಿಸಿದ ಶ್ರೀಧರ್ ವೆಂಬು

Sridhar Vembu compares today's tech giants to British East India Company: ಗೂಗಲ್, ಮೈಕ್ರೋಸಾಫ್ಟ್​ನಂತಹ ಟೆಕ್ ಕಂಪನಿಗಳನ್ನು ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಸಬಹುದು ಎಂದು ಉದ್ಯಮಿ ಶ್ರೀಧರ್ ವೆಂಬು ಅಭಿಪ್ರಾಯಪಟ್ಟಿದ್ದಾರೆ. ಗೂಗಲ್ ಕಂಪನಿ ಒಂದೇ ದಿನ ಬರೋಬ್ಬರಿ 32 ಬಿಲಿಯನ್ ಡಾಲರ್​ನಷ್ಟು ಡೆಟ್ ರೈಸ್ ಮಾಡಿದ ಘಟನೆಗೆ ಜೋಹೋ ಸಂಸ್ಥಾಪಕರಾದ ವೆಂಬು ಕೊಟ್ಟ ಪ್ರತಿಕ್ರಿಯೆ ಇದು.

ಗೂಗಲ್, ಮೈಕ್ರೋಸಾಫ್ಟ್ ಇತ್ಯಾದಿ ಟೆಕ್ ಕಂಪನಿಗಳ ಬ್ರಿಟಿಷ್ ಈಸ್ಟ್ ಇಂಡಿಯಾ ಸಂಸ್ಥೆಗೆ ಹೋಲಿಸಿದ ಶ್ರೀಧರ್ ವೆಂಬು
ಗೂಗಲ್

Updated on: Feb 15, 2026 | 5:20 PM

ನವದೆಹಲಿ, ಫೆಬ್ರುವರಿ 15: ಜೋಹೋ ಸಂಸ್ಥಾಪಕ ಶ್ರೀಧರ್ ವೆಂಬು (Sridhar Vembu) ಅವರು ಜಾಗತಿಕ ಟೆಕ್ ದೈತ್ಯ ಕಂಪನಿಗಳನ್ನು ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಕೆ ಮಾಡಿದ್ದಾರೆ. ಗೂಗಲ್ ಸಂಸ್ಥೆ ಒಂದೇ ದಿನದಲ್ಲಿ 32 ಬಿಲಿಯನ್ ಡಾಲರ್​ನಷ್ಟು (3 ಲಕ್ಷ ಕೋಟಿ ರೂ) ಫಂಡ್ ಸೃಷ್ಟಿಸಿಕೊಂಡಿರುವುದನ್ನು ಉಲ್ಲೇಖಿಸುತ್ತಾ, ವೆಂಬು ಅವರು ಈ ಅನಿಸಿಕೆ ವ್ಯಕ್ತಪಡಿಸಿದ್ದಾರೆ. 17ನೇ ಶತಮಾನದಲ್ಲಿ ಆರಂಭವಾದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ 19ನೇ ಶತಮಾನದ ಮಧ್ಯ ಭಾಗದವರೆಗೂ ಅಸ್ತಿತ್ವದಲ್ಲಿತ್ತು. 200ಕ್ಕೂ ಹೆಚ್ಚು ವರ್ಷ ಕಾಲ ಜಗತ್ತಿನ ಹಲವು ಭಾಗಗಳನ್ನು ತನ್ನ ಅಂಕೆಯಲ್ಲಿಟ್ಟುಕೊಂಡಿತ್ತು. ಈಗಿನ ಟೆಕ್ ಕಂಪನಿಗಳನ್ನು ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಕೆ ಮಾಡಿರುವುದು ಕುತೂಹಲದ ಸಂಗತಿ.

ಗೂಗಲ್ ಕಂಪನಿಯ ಅಗಾಧ ಫಂಡ್ ಎತ್ತುವಳಿ ಸಾಮರ್ಥ್ಯದ ಬಗ್ಗೆ ಅವಿರಳ್ ಭಟ್ನಾಗರ್ ಅವರು ಹಾಕಿದ ಎಕ್ಸ್ ಪೊಸ್ಟ್​ಗೆ ಶ್ರೀಧರ್ ವೆಂಬು ಪ್ರತಿಕ್ರಿಯೆಯಾಗಿ ಹೋಲಿಕೆ ಮಾಡಿದ್ದಾರೆ.

ಇದನ್ನೂ ಓದಿ: ನಗರಗಳೇ ಅಭಿವೃದ್ಧಿ ಯಂತ್ರಗಳು; ಸರ್ಕಾರದಿಂದ 1 ಲಕ್ಷ ಕೋಟಿ ರೂ ಅರ್ಬನ್ ಚಾಲೆಂಜ್ ಫಂಡ್

‘ಗೂಗಲ್ 1 ದಿನದಲ್ಲಿ 32 ಬಿಲಿಯನ್ ಸಾಲ ಪಡೆದಿದೆ. ಭಾರತದಂತಹ ಸಾರ್ವಭೌಮ ಸರ್ಕಾರಕ್ಕೆ ಇಷ್ಟು ಸಾಲ ಎತ್ತಲು 100 ದಿನ ಬೇಕಾಗುತ್ತದೆ. ಗೂಗಲ್ 1 ಬಿಲಿಯನ್ ಡಾಲರ್ ಮೌಲ್ಯದ 100 ವರ್ಷದ ಬಾಂಡ್ ಅನ್ನೂ ವಿತರಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಹೋಲಿಸಿದರೆ ಭಾರತದ ಅತ್ಯಂತ ಸುದೀರ್ಘ ಬಾಂಡ್ 40 ವರ್ಷದ್ದು. ದೊಡ್ಡ ಟೆಕ್ ಕಂಪನಿಗಳು ಈಗ ಫಂಡ್ ರೈಸಿಂಗ್ ಅಗಾಧತೆಯಲ್ಲಿ ಮತ್ತು ಅವಧಿಯಲ್ಲಿ ಸಾರ್ವಭೌಮ ರಾಷ್ಟ್ರಗಳಂತೆ ಕಾರ್ಯನಿರ್ವಹಿಸುತ್ತಿವೆ’ ಎಂದು ಹೂಡಿಕೆದಾರರೂ ಆಗಿರುವ ಅವಿರಳ್ ಭಟ್ನಾಗರ್ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಜೋಹೋ ಕಾರ್ಪೊರೇಶನ್​ನ ಸಂಸ್ಥಾಪಕರಾದ ಶ್ರೀಧರ್ ವೆಂಬು ಅವರು ಈಗಿನ ಟೆಕ್ ಕಂಪನಿಗಳನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಸಿದ್ದಾರೆ.

ಶ್ರೀಧರ್ ವೆಂಬು ಅವರ ಎಕ್ಸ್ ಪೋಸ್ಟ್

ಇದನ್ನೂ ಓದಿ: ಆಂಟ್ರೋಪಿಕ್ ಹಾಗೂ ಇತರ 13 ಎಐ ಕಂಪನಿಗಳೊಂದಿಗೆ ಮುಕೇಶ್ ಅಂಬಾನಿ ಅವರ ಜಿಯೋ ಮೈತ್ರಿ

ಗೂಗಲ್, ಮೈಕ್ರೋಸಾಫ್ಟ್, ಆ್ಯಪಲ್, ಮೆಟಾ, ಎನ್​ವಿಡಿಯಾ, ಅಮೇಜಾನ್ ಮತ್ತು ಟೆಸ್ಲಾ ಕಂಪನಿಗಳನ್ನು ಬಿಗ್ ಟೆಕ್ ಅಥವಾ ಮ್ಯಾಗ್ನಿಫಿಕೆಂಟ್ ಸೆವೆನ್ ಕಂಪನಿಗಳೆಂದು ಬಣ್ಣಿಸಲಾಗುತ್ತದೆ. ಈ ಒಂದೊಂದು ಕಂಪನಿಯ ಮಾರುಕಟ್ಟೆ ಮೌಲ್ಯವು ದೊಡ್ಡ ದೇಶದ ಜಿಡಿಪಿಗೆ ಸಮವಾಗಿದೆ. ಆ್ಯಪಲ್ ಕಂಪನಿಯ ಮೌಲ್ಯವು ಇಟಲಿಗಿಂತ ಹೆಚ್ಚಿನದ್ದಾಗಿದೆ. ಮಾರುಕಟ್ಟೆಯಲ್ಲಿ ಇವುಗಳ ಏಕಸ್ವಾಮ್ಯ ಎದ್ದು ಕಾಣುವಂತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:19 pm, Sun, 15 February 26