ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಹಲವಾರು ನಿಶ್ಚಿತ ಠೇವಣಿಗಳ (Fixed Deposits) ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿನ ಅಪ್ಡೇಟ್ ಪ್ರಕಾರ, ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ರೂ. 2 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. ಹೊಸ ದರಗಳು ಮೇ 10ರ ಮಂಗಳವಾರದಿಂದ ಜಾರಿಗೆ ಬಂದಿದೆ. ಆದರೆ 7 ರಿಂದ 45 ದಿನಗಳವರೆಗೆ ಅಲ್ಪಾವಧಿಯ ನಿಶ್ಚಿತ ಠೇವಣಿ (SBI FD) ಮೇಲೆ ಬಡ್ಡಿಯನ್ನು ಹೆಚ್ಚಿಸಿಲ್ಲ. ಹೊಸ ದರಗಳ ಅಡಿಯಲ್ಲಿ 46 ದಿನಗಳಿಂದ 149 ದಿನಗಳವರೆಗೆ ಮುಕ್ತಾಯಗೊಳ್ಳುವ ಎಫ್ಡಿಗಳು 50 ಬೇಸಿಸ್ ಪಾಯಿಂಟ್ ಹೆಚ್ಚಿನ ಆದಾಯವನ್ನು ನೀಡುತ್ತವೆ. ಒಂದು ವರ್ಷಕ್ಕಿಂತ ಹೆಚ್ಚು ಮತ್ತು 2 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಬಡ್ಡಿಯನ್ನು 40 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಲಾಗಿದೆ.
2 ರಿಂದ 3 ವರ್ಷಗಳ ನಡುವಿನ ಅವಧಿಯ ಠೇವಣಿಗಳಿಗೆ ಬಡ್ಡಿದರವನ್ನು 65 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಲಾಗಿದೆ. 3ರಿಂದ 5 ವರ್ಷಗಳವರೆಗೆ ಮತ್ತು 5 ರಿಂದ 10 ವರ್ಷಗಳವರೆಗೆ ಎಫ್‌ಡಿಯಲ್ಲಿ ಹೆಚ್ಚಳವು ಭಾರೀ ಪ್ರಮಾಣದಲ್ಲಿ ಆಗಿದೆ. ಇದಕ್ಕಾಗಿ ಈಗ ಶೇಕಡಾ 4.5ರ ಬಡ್ಡಿಯನ್ನು ಪಡೆಯುತ್ತಾರೆ, ಈ ಹಿಂದೆ ಶೇಕಡಾ 3.6ರಷ್ಟಿತ್ತು. ಕಳೆದ ವಾರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರವನ್ನು 40 ಬೇಸಿಸ್ ಪಾಯಿಂಟ್‌ಗಳಿಂದ, ಅಂದರೆ ಶೇಕಡಾ 4.40ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ ನಂತರ ಹಲವಾರು ಬ್ಯಾಂಕ್‌ಗಳು ದರ ಏರಿಕೆಯನ್ನು ಘೋಷಿಸುತ್ತಿವೆ. ಭಾರತದಲ್ಲಿ ಹೆಚ್ಚುತ್ತಿರುವ ಹಣದುಬ್ಬರವನ್ನು ನಿಯಂತ್ರಿಸಲು ಇದನ್ನು ಪ್ರಾಥಮಿಕವಾಗಿ ಮಾಡಲಾಗುತ್ತಿದೆ.
ಎಸ್‌ಬಿಐ ಎಫ್‌ಡಿ ಬಡ್ಡಿ ದರಗಳ ವಿವರ ಇಲ್ಲಿದೆ:
7 ರಿಂದ 45 ದಿನಗಳು- ಶೇ 3
46 ರಿಂದ 179 ದಿನಗಳು- ಶೇ 3.5
180 ದಿನಗಳಿಂದ 210 ದಿನಗಳು- ಶೇ 3.5
211 ದಿನಗಳಿಂದ 1 ವರ್ಷ- ಶೇ 3.75
1 ವರ್ಷದಿಂದ 2 ವರ್ಷಗಳವರೆಗೆ- ಶೇ 4
2 ವರ್ಷದಿಂದ 3 ವರ್ಷಗಳವರೆಗೆ- ಶೇ 4.25
3 ವರ್ಷದಿಂದ 5 ವರ್ಷಗಳವರೆಗೆ- ಶೇ 4.5
5 ವರ್ಷದಿಂದ 10 ವರ್ಷಗಳವರೆಗೆ- ಶೇ 4.5
ಹಿರಿಯ ನಾಗರಿಕರಿಗೆ 2022ರ ಎಸ್‌ಬಿಐ ಎಫ್‌ಡಿ ಬಡ್ಡಿ ದರಗಳು ಎಲ್ಲ ಅವಧಿಗಳಿಗೆ ಸಾಮಾನ್ಯ ಬಡ್ಡಿ ದರಗಳಿಗಿಂತ 50 ಬೇಸಿಸ್ ಪಾಯಿಂಟ್‌ಗಳು ಹೆಚ್ಚು ನೀಡಲಾಗುತ್ತದೆ.
ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Bank Locker Fee: ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಪಿಎನ್ಬಿ ಬ್ಯಾಂಕ್ ಲಾಕರ್ ಶುಲ್ಕಗಳ ವಿವರ ಇಲ್ಲಿದೆ