AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Locker Fee: ಎಸ್​ಬಿಐ, ಐಸಿಐಸಿಐ ಬ್ಯಾಂಕ್, ಪಿಎನ್​ಬಿ ಬ್ಯಾಂಕ್ ಲಾಕರ್​ ಶುಲ್ಕಗಳ ವಿವರ ಇಲ್ಲಿದೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್​ ನ್ಯಾಷನಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಸೇಫ್ ಡೆಪಾಸಿಟ್ ಲಾಕರ್ ಶುಲ್ಕಗಳ ಬಗ್ಗೆ ವಿವರಗಳು ಇಲ್ಲಿವೆ.

Bank Locker Fee: ಎಸ್​ಬಿಐ, ಐಸಿಐಸಿಐ ಬ್ಯಾಂಕ್, ಪಿಎನ್​ಬಿ ಬ್ಯಾಂಕ್ ಲಾಕರ್​ ಶುಲ್ಕಗಳ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jan 18, 2022 | 12:24 PM

Share

ಪ್ರಮುಖ ಕಾಗದ- ಪತ್ರಗಳು, ಆಭರಣಗಳನ್ನು ಜೋಪಾನವಾಗಿ ಇಡುವುದಕ್ಕೆ ಬ್ಯಾಂಕ್ ಲಾಕರ್‌ಗಳು ಜನಪ್ರಿಯ ಸಾಧನವಾಗಿದೆ. ಈ ಸೇವೆಗೆ ಬ್ಯಾಂಕ್‌ಗಳು ಶುಲ್ಕ ವಿಧಿಸುತ್ತವೆ. ಇದು ಲಾಕರ್‌ನ ಗಾತ್ರವನ್ನು ಆಧರಿಸಿದೆ. ಬ್ಯಾಂಕ್ ಲಾಕರ್ ಶುಲ್ಕಗಳು (Bank Safe Deposit Locker Fee) ಲಾಕರ್‌ನ ಗಾತ್ರ ಮತ್ತು ಪ್ರದೇಶವನ್ನು ಅವಲಂಬಿಸಿರುತ್ತದೆ- ನಗರ, ಗ್ರಾಮೀಣ ಅಥವಾ ಮೆಟ್ರೋ ಹೀಗೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (ಆರ್‌ಬಿಐ) ಬ್ಯಾಂಕ್‌ಗಳು ಒದಗಿಸುವ ಸೇಫ್ ಡೆಪಾಸಿಟ್ ಲಾಕರ್ ಮತ್ತು ಸೇಫ್ ಕಸ್ಟಡಿ ಆರ್ಟಿಕಲ್ ಸೌಲಭ್ಯಗಳ ಕುರಿತು ಸೆಪ್ಟೆಂಬರ್‌ನಲ್ಲಿ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿತು. ಹೊಸ ಲಾಕರ್ ನಿಯಮಗಳು ಜನವರಿ 1, 2022ರಿಂದ ಜಾರಿಗೆ ಬಂದಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಐಸಿಐಸಿಐ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಬ್ಯಾಂಕ್ ಲಾಕರ್‌ಗಳ ಶುಲ್ಕಗಳ ನೋಟ ಇಲ್ಲಿದೆ:

ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ಲಾಕರ್ ಶುಲ್ಕಗಳು: 1) ಎಸ್​ಬಿಐ ಸಣ್ಣ ಲಾಕರ್ ಬಾಡಿಗೆ ಶುಲ್ಕಗಳು ನಗರ ಮತ್ತು ಮೆಟ್ರೋ : ರೂ. 2000 + ಜಿಎಸ್​ಟಿ ಗ್ರಾಮೀಣ ಮತ್ತು ಅರೆ ನಗರ: ರೂ. 1500 + ಜಿಎಸ್​ಟಿ

2) ಎಸ್​ಬಿಐ ಮಧ್ಯಮ ಗಾತ್ರದ ಲಾಕರ್ ಬಾಡಿಗೆ ಶುಲ್ಕಗಳು ನಗರ ಮತ್ತು ಮೆಟ್ರೋ : ರೂ. 4000 + ಜಿಎಸ್​ಟಿ ಗ್ರಾಮೀಣ ಮತ್ತು ಅರೆ ನಗರ: ರೂ. 3000 + ಜಿಎಸ್​ಟಿ

3) ಎಸ್​ಬಿಐ ದೊಡ್ಡ ಲಾಕರ್ ಬಾಡಿಗೆ ಶುಲ್ಕಗಳು ನಗರ ಮತ್ತು ಮೆಟ್ರೋ : ರೂ. 8000 + ಜಿಎಸ್​ಟಿ ಗ್ರಾಮೀಣ ಮತ್ತು ಅರೆ ನಗರ: ರೂ. 6000 + ಜಿಎಸ್​ಟಿ

4) ಎಸ್​​ಬಿಐ ಅತಿ ದೊಡ್ಡ ಲಾಕರ್ ಬಾಡಿಗೆ ಶುಲ್ಕಗಳು ನಗರ ಮತ್ತು ಮೆಟ್ರೋ : ರೂ. 12000 + ಜಿಎಸ್​ಟಿ ಗ್ರಾಮೀಣ ಮತ್ತು ಅರೆ ನಗರ: ರೂ. 9000 + ಜಿಎಸ್​ಟಿ

ಎಸ್‌ಬಿಐ ಸಣ್ಣ ಮತ್ತು ಮಧ್ಯಮ ಗಾತ್ರದ ಲಾಕರ್‌ಗಳಿಗೆ ರೂ. 500 ಮತ್ತು ಜಿಎಸ್‌ಟಿಯ ಒಂದು-ಬಾರಿ ಲಾಕರ್ ನೋಂದಣಿ ಶುಲ್ಕವನ್ನು ವಿಧಿಸುತ್ತದೆ ಆದರೆ ದೊಡ್ಡ ಮತ್ತು ಹೆಚ್ಚುವರಿ-ದೊಡ್ಡ ಲಾಕರ್‌ಗಳಿಗೆ ರೂ. 1,000 ಮತ್ತು ಜಿಎಸ್‌ಟಿ ಪಾವತಿಸಬೇಕಾಗುತ್ತದೆ.

ಐಸಿಐಸಿಐ ಬ್ಯಾಂಕ್ ಲಾಕರ್ ಶುಲ್ಕಗಳು: ಐಸಿಐಸಿಐ ಬ್ಯಾಂಕ್ ಸಣ್ಣ ಗಾತ್ರದ ಲಾಕರ್‌ಗೆ ರೂ. 1,200ರಿಂದ ರೂ. 5,000 ವರೆಗೆ ಶುಲ್ಕ ವಿಧಿಸುತ್ತದೆ ಮತ್ತು ಹೆಚ್ಚು ದೊಡ್ಡದಾದರೆ ಬಾಡಿಗೆ ರೂ. 10,000ದಿಂದ ರೂ. 22,000ವರೆಗೆ ಇರುತ್ತದೆ. ಈ ಶುಲ್ಕಗಳು ಜಿಎಸ್​ಟಿ ಹೊರತುಪಡಿಸಿ ಇದೆ. ಐಸಿಐಸಿಐ ಬ್ಯಾಂಕ್ ವಾರ್ಷಿಕ ಬಾಡಿಗೆ ಮೊತ್ತವನ್ನು ಮುಂಗಡವಾಗಿ ಸಂಗ್ರಹಿಸುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಲಾಕರ್ ಶುಲ್ಕಗಳು: ಪಂಜಾಬ್ ನ್ಯಾಷನಲ್ ಬ್ಯಾಂಕ್ ಜನವರಿ 15ರಿಂದ ಜಾರಿಗೆ ಬರುವಂತೆ ಲಾಕರ್ ಶುಲ್ಕವನ್ನು ಹೆಚ್ಚಿಸಿದೆ. ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಲಾಕರ್ ವಾರ್ಷಿಕ ಬಾಡಿಗೆ ರೂ. 1,250ರಿಂದ ರೂ. 10,000 ವರೆಗೆ ಬದಲಾಗುತ್ತದೆ. ನಗರ ಮತ್ತು ಮೆಟ್ರೋಗೆ, ಬ್ಯಾಂಕ್ ಶುಲ್ಕವು ರೂ. 2,000ದಿಂದ ರೂ. 10,000 ವರೆಗೆ ಬದಲಾಗುತ್ತದೆ.

ಇದನ್ನೂ ಓದಿ: Bank locker: ಜನವರಿ 1ರಿಂದ ಬ್ಯಾಂಕ್​ ಲಾಕರ್​ ನಿಯಮಾವಳಿಗಳಲ್ಲಿ ಬದಲಾವಣೆ; ಈ ಅಂಶಗಳು ತಿಳಿದಿರಲಿ

Published On - 12:22 pm, Tue, 18 January 22

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್