AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank locker: ಜನವರಿ 1ರಿಂದ ಬ್ಯಾಂಕ್​ ಲಾಕರ್​ ನಿಯಮಾವಳಿಗಳಲ್ಲಿ ಬದಲಾವಣೆ; ಈ ಅಂಶಗಳು ತಿಳಿದಿರಲಿ

ಬ್ಯಾಂಕ್​ ಲಾಕರ್​ಗಳಿಗೆ ಸಂಬಂಧಿಸಿದಂತೆ ಜನವರಿ 1, 2022ರಿಂದ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಏನು ಆ ಬದಲಾವಣೆಗಳು ಎಂಬ ಮಾಹಿತಿ ಈ ಲೇಖನದಲ್ಲಿದೆ.

Bank locker: ಜನವರಿ 1ರಿಂದ ಬ್ಯಾಂಕ್​ ಲಾಕರ್​ ನಿಯಮಾವಳಿಗಳಲ್ಲಿ ಬದಲಾವಣೆ; ಈ ಅಂಶಗಳು ತಿಳಿದಿರಲಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 03, 2022 | 11:14 AM

ನೀವೇನಾದರೂ ಬ್ಯಾಂಕ್ ಲಾಕರ್ ಬಾಡಿಗೆಗೆ ಪಡೆಯಬೇಕು ಅಂತ ಆಲೋಚನೆ ಮಾಡುತ್ತಿದ್ದೀರಾ? ಅದಕ್ಕೂ ಮುಂಚೆ ಜನವರಿ 1, 2022ರಿಂದ ಜಾರಿಗೆ ಬಂದಿರುವ ಹೊಸ ನಿಯಮಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸೆಪ್ಟೆಂಬರ್‌ನಲ್ಲಿ ಸೇಫ್ ಡೆಪಾಸಿಟ್ ಲಾಕರ್‌ಗೆ ಸಂಬಂಧಿಸಿದಂತೆ ಮತ್ತು ಸೇಫ್ ಕಸ್ಟಡಿಯಲ್ಲಿನ ವಸ್ತುಗಳಿಗೆ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. “ಜನವರಿ 1, 2022ರಿಂದ ಪರಿಷ್ಕೃತ ಸೂಚನೆಗಳು ಜಾರಿಗೆ ಬರುತ್ತವೆ (ನಿರ್ದಿಷ್ಟಪಡಿಸಿದ ಸ್ಥಳಗಳನ್ನು ಹೊರತುಪಡಿಸಿ). ಮತ್ತು ಹೊಸ ಹಾಗೂ ಅಸ್ತಿತ್ವದಲ್ಲಿರುವ ಸೇಫ್ ಡೆಪಾಸಿಟ್ ಲಾಕರ್‌ಗಳು ಮತ್ತು ಬ್ಯಾಂಕ್​ಗಳಲ್ಲಿರುವ ವಸ್ತುಗಳ ಸುರಕ್ಷಿತವಾಗಿ ಇಡುವ ಸೌಲಭ್ಯ ಎರಡಕ್ಕೂ ಇದು ಅನ್ವಯಿಸುತ್ತದೆ,” ಎಂದು ಕೇಂದ್ರ ಬ್ಯಾಂಕ್ ಅಧಿಸೂಚನೆ ತಿಳಿಸಿದೆ.

1 ಜನವರಿ 2022ರಿಂದ ಜಾರಿಗೆ ಬರುವ ಹೊಸ ಬ್ಯಾಂಕ್ ಲಾಕರ್ ನಿಯಮಗಳ ಕುರಿತು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ: 1) ಲಾಕರ್‌ ಹಂಚಿಕೆಯ ಸಮಯದಲ್ಲಿ “ಟರ್ಮ್ ಡೆಪಾಸಿಟ್” ತೆಗೆದುಕೊಳ್ಳಲು ಬ್ಯಾಂಕ್‌ಗಳಿಗೆ ಆರ್‌ಬಿಐ ಅವಕಾಶ ನೀಡಿದೆ. ಇದು ಮೂರು ವರ್ಷಗಳ ಬಾಡಿಗೆ ಮತ್ತು ಲಾಕರ್ ಅನ್ನು ಒಡೆಯುವ ಸಂದರ್ಭ ಎದುರಾದಲ್ಲಿ ತಗುಲುವ ಶುಲ್ಕವನ್ನು ಒಳಗೊಂಡಿರುತ್ತದೆ.

2) ಆದರೆ, ಬ್ಯಾಂಕ್​ಗಳು ಈಗಾಗಲೇ ಲಾಕರ್ ಹೊಂದಿರುವವರು ಅಥವಾ ತೃಪ್ತಿದಾಯಕ ಆಪರೇಟಿವ್ ಖಾತೆಯನ್ನು ಹೊಂದಿರುವವರಿಂದ ಅಂತಹ ಟರ್ಮ್ ಡೆಪಾಸಿಟ್​ಗಳನ್ನು ಒತ್ತಾಯಿಸಬಾರದು ಎಂದು ಅದು ಹೇಳಿದೆ.

3) ಗ್ರಾಹಕರು ಸತತವಾಗಿ ಮೂರು ವರ್ಷಗಳ ಕಾಲ ಬಾಡಿಗೆಯನ್ನು ಪಾವತಿಸದಿದ್ದಲ್ಲಿ ಸರಿಯಾದ ಕಾರ್ಯವಿಧಾನವನ್ನು ಅನುಸರಿಸಿ ಯಾವುದೇ ಲಾಕರ್ ಅನ್ನು ತೆರೆಯಲು ಬ್ಯಾಂಕ್​ಗಳು ವಿವೇಚನೆಯನ್ನು ಹೊಂದಿರುತ್ತವೆ.

4) ಬ್ಯಾಂಕ್‌ಗಳು ಶಾಖೆಗಳ ಪ್ರಕಾರ ಖಾಲಿ ಇರುವ ಲಾಕರ್‌ಗಳ ಪಟ್ಟಿಯನ್ನು ಹಾಗೆಯೇ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕಾಯುವ ಪಟ್ಟಿಯನ್ನು ನಿರ್ವಹಿಸಬೇಕು.

5) ಲಾಕರ್ ಹಂಚಿಕೆಗಾಗಿ ಎಲ್ಲ ಅರ್ಜಿಗಳ ಸ್ವೀಕೃತಿಯನ್ನು ಬ್ಯಾಂಕ್‌ಗಳು ಅಂಗೀಕರಿಸಬೇಕು ಮತ್ತು ಹಂಚಿಕೆಗೆ ಲಾಕರ್‌ಗಳು ಲಭ್ಯ ಇಲ್ಲದಿದ್ದರೆ ಗ್ರಾಹಕರಿಗೆ ವೇಯ್ಟ್ ಲಿಸ್ಟ್ ಸಂಖ್ಯೆಯನ್ನು ಒದಗಿಸಬೇಕು ಎಂದು ಕೇಂದ್ರ ಬ್ಯಾಂಕ್ ಹೇಳಿದೆ.

6) ಬ್ಯಾಂಕ್‌ಗಳು ನಿರ್ಲಕ್ಷ್ಯದಿಂದ ಲಾಕರ್‌ಗಳಲ್ಲಿನ ವಸ್ತುಗಳಿಗೆ ಯಾವುದೇ ನಷ್ಟ ಅಥವಾ ಹಾನಿ ಸಂಭವಿಸಿದಲ್ಲಿ ಅವರ ಜವಾಬ್ದಾರಿಯನ್ನು ವಿವರಿಸುವುದಕ್ಕೆ ಮಂಡಳಿ-ಅನುಮೋದಿತ ನೀತಿಯನ್ನು ಜಾರಿಗೆ ತರಲು ಸೂಚಿಸಲಾಗಿದೆ.

ಇದನ್ನೂ ಓದಿ: RBI Guidelines For Lockers: ಬ್ಯಾಂಕ್​ ಲಾಕರ್​ಗಳಿಗೆ ಸಂಬಂಧಿಸಿದಂತೆ ಆರ್​ಬಿಐನಿಂದ ಮಹತ್ವದ ಮಾರ್ಗಸೂಚಿ

ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?
ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ; ಈ ವರ್ಷ ಅದೃಷ್ಟವೋ ಅದೃಷ್ಟ!
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ; ಈ ವರ್ಷ ಅದೃಷ್ಟವೋ ಅದೃಷ್ಟ!
ಬಾಗಲಕೋಟೆ: ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು
ಬಾಗಲಕೋಟೆ: ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು
ಮಕರ ರಾಶಿಯ ಮೇಲೆ ಗುರು ಸಂಚಾರದ ಪ್ರಭಾವ ಹೇಗಿರಲಿದೆ?
ಮಕರ ರಾಶಿಯ ಮೇಲೆ ಗುರು ಸಂಚಾರದ ಪ್ರಭಾವ ಹೇಗಿರಲಿದೆ?