SBI mega property e-auction: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಆಸ್ತಿಗಳ ಮೆಗಾ ಇ-ಹರಾಜು

| Updated By: Srinivas Mata

Updated on: Oct 25, 2021 | 1:14 PM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಅಕ್ಟೋಬರ್ 25ರಿಂದ ಆಸ್ತಿಗಳ ಮೆಗಾ ಇ- ಹರಾಜು ಆರಂಭವಾಗಿದೆ. ಆ ಬಗ್ಗೆ ವಿವರಗಳು ಇಲ್ಲಿ ಇದ್ದು, ಹಂತಹಂತವಾಗಿ ಮಾಹಿತಿ ನೀಡಲಾಗಿದೆ.

SBI mega property e-auction: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಆಸ್ತಿಗಳ ಮೆಗಾ ಇ-ಹರಾಜು
ಸಾಂದರ್ಭಿಕ ಚಿತ್ರ
Follow us on

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India)ದಿಂದ ಆಸ್ತಿ ಖರೀದಿದಾರರಿಗೆ ಅದ್ಭುತವಾದ ಅವಕಾಶವೊಂದು ಸಿಗುತ್ತಿದೆ. ಇಂದಿನಿಂದ ಅನ್ವಯ ಆಗುವಂತೆ (ಅಕ್ಟೋಬರ್ 25, 2021) ಆಸ್ತಿಗಳ ಇ-ಹರಾಜು ಆರಂಭಿಸಿದೆ. ಟ್ವೀಟ್ ಮೂಲಕ ಈ ಬಗ್ಗೆ ಮಾಹಿತಿ ನೀಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ವಿವಿಧ ಬಗೆಯ ಆಸ್ತಿಗಳ ಹರಾಜು ಮಾಡುವುದಾಗಿ ಹೇಳಿಕೊಂಡಿದೆ. ಎಲ್ಲ ಬಗೆಯ ಆಸ್ತಿಗಳು, ಸೆಕ್ಯೂರಿಟೀಸ್​ ಮತ್ತು ಅಡಮಾನ ಮಾಡಿದ ಆಸ್ತಿಗಳನ್ನು ಇ-ಹರಾಜು ಮಾಡಲಾಗುತ್ತದೆ. ವೆಬ್​ಸೈಟ್- https://www.bankeauctions.com/Sbi ಇದರಲ್ಲಿ ಆಸ್ತಿ, ಮೀಸಲು ಬೆಲೆಗಳು ಮತ್ತು ಇತರ ಮಾಹಿತಿಗಳ ಬಗ್ಗೆ ಪರಿಶೀಲನೆ ಮಾಡಬಹುದು. ಈ ಎಸ್​ಬಿಐ ಮೆಗಾ ಆಸ್ತಿ ಇ- ಹರಾಜಿನಲ್ಲಿ ಭಾಗವಹಿಸಬೇಕು ಅಂದರೆ ಎಸ್​ಬಿಐ ವೆಬ್​ಸೈಟ್​ನಲ್ಲಿ ಪ್ರಸ್ತಾವ ಮಾಡಿರುವ ದಾಖಲೆಗಳು ಇರಬೇಕು.

– ಇ-ಹರಾಜಿನ ನೋಟಿಸ್​ನಲ್ಲಿ ತಿಳಿಸಿರುವಂತೆ ಆ ನಿರ್ದಿಷ್ಟ ಆಸ್ತಿಯ ಇಎಂಡಿ ಇರಬೇಕು.

– ಸಂಬಂಧಪಟ್ಟ ಶಾಖೆಯಲ್ಲಿ ಕೆವೈಸಿ (ನೋ ಯುವರ್ ಕಸ್ಟಮರ್) ದಾಖಲಾತಿಗಳು ಸಲ್ಲಿಸಬೇಕು.

– ಸಿಂಧುವಾದ ಡಿಜಿಟಲ್ ಸಿಗ್ನೇಚರ್- ಬಿಡ್ಡರ್​ಗಳು ಇ-ಹರಾಜುದಾರರನ್ನು ಅಥವಾ ಯಾವುದಾದರೂ ಅಂಗೀಕೃತ ಸಂಸ್ಥೆಯಿಂದ ಡಿಜಿಟಲ್ ಸಿಗ್ನೇಚರ್ ಪಡೆಯಬೇಕು.

-ಲಾಗ್​ ಇನ್ ಐಡಿ ಮತ್ತು ಪಾಸ್​ವರ್ಡ್​- ಇದನ್ನು ಇಎಂಡಿ ಠೇವಣಿ ಸಲ್ಲಿಸಿ ಹಾಗೂ ಸಂಬಂಧಪಟ್ಟ ಶಾಖೆಯಲ್ಲಿ ಕೆವೈಸಿ ದಾಖಲಿಸಿದ ನಂತರ ಇ-ಹರಾಜುದಾರರು ಬಿಡ್ಡರ್​ನ ಇಮೇಲ್​ ಐಡಿಗೆ ಕಳುಹಿಸಲಾಗುತ್ತದೆ.

– ಬಿಡ್ಡರ್​ಗಳು ಲಾಗ್​ ಇನ್​ ಮಾಡಿ ಮತ್ತು ನಿಯಮಾವಳಿಯ ಪ್ರಕಾರ ಹರಾಜಿನ ಅವಧಿಯಲ್ಲಿ ಬಿಡ್ ಮಾಡಬೇಕು.

ಎಸ್​ಬಿಐ ಆಸ್ತಿ ಇ- ಹರಾಜಿನಲ್ಲಿ ಭಾಗವಹಿಸುವುದು ಹೇಗೆ?
ಇ- ಹರಾಜಿಗೆ ಆನ್​ಲೈನ್​ನಲ್ಲಿ ಬಿಡ್​ ಮಾಡಬೇಕಾಗುತ್ತದೆ. ಒಂದು ವೇಳೆ ಈ ಡಿಜಿಟಲ್ ಹರಾಜಿನಲ್ಲಿ ಭಾಗವಹಿಸಲು ಬಯಸಿದರೆ ಮೊಬೈಲ್ ಫೋನ್​ ಸಂಖ್ಯೆ ಮತ್ತು ಇಮೇಲ್​ ಮೂಲಕ ನೋಂದಣಿ ಆಗಬೇಕು. ಆ ನಂತರ ಕೆವೈಸಿ ಕಾಗದಗಳನ್ನು ಅಪ್​ಲೋಡ್​ ಆದ ಮೇಲೆ ಒಂದು ಸಲ ದೃಢೀಕರಣ ಸಂಪೂರ್ಣವಾದ ನಂತರ ಆನ್​ಲೈನ್ ಚಲನ್ ಭರ್ತಿ ಮಾಡಬೇಕಾಗುತ್ತದೆ. ಆ ನಂತರ ಆನ್​ಲೈನ್​ನಲ್ಲಿ ಬಿಡ್ ಮಾಡಬಹುದು. ಸಾಮಾನ್ಯವಾಗಿ, ಯಾರು ಸಾಲವನ್ನು ಮರುಪಾವತಿ ಮಾಡಿರುವುದಿಲ್ಲವೋ ಅಂಥವರ ಆಸ್ತಿ ಇದಾಗಿರುತ್ತದೆ. ಹಾಗೆ ಸಾಲ ಬಾಕಿ ಉಳಿಸಿಕೊಂಡವರ ಆಸ್ತಿಯನ್ನು ಬ್ಯಾಂಕ್​ಗಳು ಇಂಡಿಯನ್ ಬ್ಯಾಂಕ್ಸ್ ಆಕ್ಷನ್ಸ್ ಮಾರ್ಟಗೇಜ್ಡ್ ಪ್ರಾಪರ್ಟೀಸ್ ಇನ್ಫರ್ಮೇಷನ್ (IBAPI) ಮೂಲಕ ಹರಾಜಿಗೆ ಇಡುತ್ತವೆ.

“ಇಂಡಿಯನ್ ಬ್ಯಾಂಕ್ಸ್ ಆಕ್ಷನ್ಸ್ ಮಾರ್ಟಗೇಜ್ಡ್ ಪ್ರಾಪರ್ಟೀಸ್ ಇನ್ಫರ್ಮೇಷನ್ (IBAPI) ಪೋರ್ಟಲ್ ಎಂಬುದು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್​ (IBA) ಉಪಕ್ರಮ. ಹಣಕಾಸು ಸೇವೆ ಇಲಾಖೆಯ (Department Of Financial Services) ಅಡಿಯಲ್ಲಿ ರೂಪಿಸಿರುವ ನೀತಿಗಳಲ್ಲಿ ಬರುತ್ತದೆ. ಹಣಕಾಸು ಸಚಿವಾಲಯ ಸಾಮಾನ್ಯ ಪ್ಲಾಟ್​ಫಾರ್ಮ್ ಒದಗಿಸಿದ್ದು, ಅಡಮಾನ ಮಾಡಿ ಸಾಲ ಹಿಂತಿರುಗಿಸದ ಆಸ್ತಿಯನ್ನು ಹರಾಜು ಮಾಡುವ ಮುನ್ನ ಅಲ್ಲಿ ಮಾಹಿತಿ ಪ್ರದರ್ಶಿಸಲಾಗುತ್ತದೆ. ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳಿಂದ ಇದು ಶುರುವಾಗುತ್ತದೆ. ಖರೀದಿ ಮಾಡಬೇಕು ಎಂದಿರುವವರು ಈ ಪೋರ್ಟಲ್ ಬಳಸಿ ಆಸ್ತಿಯ ಮಾಹಿತಿಯನ್ನು ಹುಡುಕಬಹುದು ಮತ್ತು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು,” ಎಂದು Ibapi ವೆಬ್​ಸೈಟ್​ನಲ್ಲಿ ತಿಳಿಸಲಾಗಿದೆ. ​

ಇದನ್ನೂ ಓದಿ: SBI Internet Banking: ಕನ್ನಡ, ತಮಿಳು, ತೆಲುಗು ಸೇರಿ 15 ಭಾಷೆಗಳಲ್ಲಿ ಎಸ್​ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಲಭ್ಯ