ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಸುಂಕದಲ್ಲಿ ಭರ್ಜರಿ ಹೆಚ್ಚಳ; ಡೀಸಲ್​ಗೆ 55.5 ರೂ, ಎಟಿಎಫ್​ಗೆ 42 ರೂ ಸುಂಕ

Export duty on diese and ATF hike to Rs 55.5 and Rs 42 per liter: ಡೀಸಲ್ ಮೇಲಿನ ರಫ್ತು ಸುಂಕವನ್ನು ಲೀಟರ್​ಗೆ 21.5 ರೂ ಇದ್ದದ್ದು 55.5 ರೂಗೆ ಏರಿಸಲಾಗಿದೆ. ಏವಿಯೇಶನ್ ಟರ್ಬೈನ್ ಇಂಧನದ ಮೇಲಿನ ರಫ್ತು ಸುಂಕವನ್ನು 29.5 ರೂನಿಂದ 42 ರೂಗೆ ಹೆಚ್ಚಿಸಲಾಗಿದೆ. ಇತ್ತೀಚೆಗೆ ಪ್ರೀಮಿಯಮ್ ಡೀಸಲ್ ಮೇಲೆ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಪರಿಷ್ಕರಿಲಾಗಿತ್ತು.

ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಸುಂಕದಲ್ಲಿ ಭರ್ಜರಿ ಹೆಚ್ಚಳ; ಡೀಸಲ್​ಗೆ 55.5 ರೂ, ಎಟಿಎಫ್​ಗೆ 42 ರೂ ಸುಂಕ
ಪೆಟ್ರೋಲ್
Image Credit source: Shutterstock

Updated on: Apr 12, 2026 | 12:24 PM

ನವದೆಹಲಿ, ಏಪ್ರಿಲ್ 12: ಕೆಲ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ ರಫ್ತು ಸುಂಕವನ್ನು (Exports Duty) ಗಣನೀಯವಾಗಿ ಹೆಚ್ಚಿಸಿದೆ. ಆಂತರಿಕವಾಗಿ ಈ ಇಂಧನ ಲಭ್ಯತೆ ಕಡಿಮೆ ಆಗದಂತೆ ನೋಡಿಕೊಳ್ಳಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಡೀಸಲ್ ಮತ್ತು ಜೆಟ್ ಇಂಧನದ ಮೇಲಿನ ಸುಂಕ ಹೆಚ್ಚಿದೆ. ಅಚ್ಚರಿ ಎಂಬಂತೆ ಪೆಟ್ರೋಲ್ ಮೇಲೆ ಯಾವುದೇ ರಫ್ತು ಸುಂಕ ಹಾಕಲಾಗಿಲ್ಲ.

ಡೀಸಲ್ ಮೇಲಿನ ರಫ್ತು ಸುಂಕವನ್ನು ಲೀಟರ್​ಗೆ 34 ರೂಗಳಷ್ಟು ಏರಿಸಲಾಗಿದೆ. 21.5 ರೂ ಇದ್ದ ಇದರ ರಫ್ತು ಸುಂಕವನ್ನು 55.5 ರೂಗೆ ಹೆಚ್ಚಿಸಲಾಗಿದೆ. ಹಾಗೆಯೇ, ಎಟಿಎಫ್ (ಏವಿಯೇಶನ್ ಟರ್ಬೈನ್ ಫುಯೆಲ್) ಅಥವಾ ಜೆಟ್ ಇಂಧನದ ಮೇಲಿನ ರಫ್ತು ಸುಂಕವನ್ನು 12.5 ರೂಗಳಷ್ಟು ಹೆಚ್ಚಿಸಲಾಗಿದೆ. 29.5 ರೂ ಇದ್ದ ಇದರ ಬೆಲೆಯನ್ನು 42 ರೂಗೆ ಏರಿಸಲಾಗಿದೆ.

ಇದನ್ನೂ ಓದಿ: ಟೋಲ್ ಬೂತ್​ನಲ್ಲಿ ಇನ್ಮುಂದೆ ಕ್ಯಾಷ್ ಪೇಮೆಂಟ್​ಗೆ ಅವಕಾಶವೇ ಇಲ್ಲ; ಫಾಸ್​ಟ್ಯಾಗ್ ಕಡ್ಡಾಯ

ಪೆಟ್ರೋಲ್ ಮೇಲಿನ ರಫ್ತು ಸುಂಕವನ್ನು ಸರ್ಕಾರ ಹೆಚ್ಚಿಸಿಲ್ಲ. ಸದ್ಯ ಈ ವ್ಯಾಪಕ ಬಳಕೆಯ ಇಂಧನಕ್ಕೆ ಸರ್ಕಾರ ಶೂನ್ಯ ಸುಂಕ ಹಾಕುತ್ತಿದೆ. ಈ ಕ್ರಮ ಮುಂದುವರಿಯುತ್ತದೆ.

ಇದೇ ವೇಳೆ, ಆಂತರಿಕವಾಗಿ ಕೆಲ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ಹಾಗು ಸೆಸ್ ಅನ್ನು ಪರಿಷ್ಕರಿಸಲಾಗಿದೆ. ಹೈಸ್ಪೀಡ್ ಡೀಸಲ್ ಅಥವಾ ಪ್ರೀಮಿಯಮ್ ಡೀಸಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಸ್​ಎಇಡಿ) ಲೀಟರ್​ಗೆ 24 ರೂಗೆ ಏರಿಸಲಾಗಿದೆ. ರಸ್ತೆ ಮತ್ತು ಮೂಲಸೌಕರ್ಯ ಸೆಸ್ ದರವನ್ನು 36 ರೂಗೆ ಹೆಚ್ಚಳಗೊಳಿಸಲಾಗಿದೆ.

ಇದನ್ನೂ ಓದಿ: AMFI data: ಮಾರ್ಚ್​ನಲ್ಲಿ ಈಕ್ವಿಟಿ ಫಂಡ್​ಗಳಿಗೆ ಹೂಡಿಕೆ ಸುಗ್ಗಿ; ಶೇ. 55ರಷ್ಟು ಹೆಚ್ಚಿದ ಒಳಹರಿವು

ರಫ್ತು ಸುಂಕ ಪರಿಷ್ಕರಣೆ ಯಾಕೆ?

ಅತಿಹೆಚ್ಚು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನ ಪಡೆಯುತ್ತದೆ. ಕಚ್ಚಾ ತೈಲವನ್ನು ಆಮದು ಮಾಡಿಕೊಂಡು, ಅದನ್ನು ಸಂಸ್ಕರಿಸಿ, ಪೆಟ್ರೋಲ್, ಡೀಸಲ್, ಜೆಟ್ ಫುಯಲ್ ಇತ್ಯಾದಿ ವಿವಿಧ ಪೆಟ್ರೋಲಿಯಂ ಉತ್ಪನ್ನಗಳಾಗಿ ತಯಾರಿಸುತ್ತದೆ. ಆಂತರಿಕ ಬಳಕೆ ಬೇಕಾಗುವಷ್ಟು ಇಟ್ಟುಕೊಂಡು, ಉಳಿದವನ್ನು ರಫ್ತು ಮಾಡಲು ಅವಕಾಶ ಕೊಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us