Stock Market: ಮೂರು ದಿನಗಳ ನಂತರ ಎಚ್ಚರಗೊಂಡ ಗೂಳಿ; ಆರಂಭಿಕ ವಹಿವಾಟಿನಲ್ಲಿ ಏರುಮುಖದ ಟ್ರೆಂಡ್

ಮೂರು ದಿನಗಳಿಂದ ಷೇರು ಮಾರುಕಟ್ಟೆಯಲ್ಲಿ ಕುಣಿಯುತ್ತಿದ್ದ ಕರಡಿ ವಿರುದ್ಧ ಗೂಳಿ ಕಾಳಗಕ್ಕೆ ಇಳಿದಿದೆ. ಪರಿಣಾಮವಾಗಿ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಸುಮಾರು 500 ಅಂಕಗಳ ಏರಿಕೆ ಕಂಡಿದೆ.

Stock Market: ಮೂರು ದಿನಗಳ ನಂತರ ಎಚ್ಚರಗೊಂಡ ಗೂಳಿ; ಆರಂಭಿಕ ವಹಿವಾಟಿನಲ್ಲಿ ಏರುಮುಖದ ಟ್ರೆಂಡ್
ಷೇರು ಮಾರುಕಟ್ಟೆ: ಆರಂಭಿಕ ವಹಿವಾಟಿನಲ್ಲಿ ಏರುಮುಖದ ಟ್ರೆಂಡ್
Follow us
TV9 Web
| Updated By: Rakesh Nayak Manchi

Updated on:Sep 27, 2022 | 10:24 AM

ಕಳೆದ ಮೂರು ದಿನಗಳಿಂದ ಷೇರು ಮಾರುಕಟ್ಟೆ (Stock Market)ಯಲ್ಲಿ ಕರಡಿ ಕುಣಿತದಿಂದ ಷೇರುಗಳು ಕುಸುತಗೊಂಡಿತ್ತು. ಆದರೆ ಇಂದು ಆರಂಭಿಕ ವಹಿವಾಟಿನಲ್ಲಿ ಏರುಮುಖದ ಟ್ರೆಂಡ್ ಕಂಡುಬರುತ್ತಿದ್ದು, ಮಾರುಕಟ್ಟೆಯಲ್ಲಿ ವಹಿವಾಟು ಆರಂಭವಾದ ಅರ್ಧ ಗಂಟೆಯಲ್ಲಿ ಸೆನ್ಸೆಕ್ಸ್ (Sensex) ಸುಮಾರು 500 ಅಂಕಗಳ ಏರಿಕೆ ಕಂಡಿದೆ. ಇದರೊಂದಿಗೆ ನಿಫ್ಟಿ (Nifty) ಮತ್ತೊಮ್ಮೆ 17150 ರ ಮಟ್ಟವನ್ನು ದಾಟಿದೆ. ಕೆಳಮಟ್ಟಕ್ಕೆ ತಲುಪಿರುವ ದೊಡ್ಡ ಷೇರುಗಳ ಖರೀದಿಯಿಂದಾಗಿ ಷೇರುಗಳಲ್ಲಿ ಈ ಚೇತರಿಕೆ ಕಂಡುಬಂದಿದೆ. ಮೊದಲ ಒಂದು ಗಂಟೆಯಲ್ಲಿ ಮಾರುಕಟ್ಟೆಯಲ್ಲಿ ಸರ್ವತೋಮುಖ ಖರೀದಿ ಕಂಡು ಬಂದಿದೆ. ಬ್ಯಾಂಕ್, ತೈಲ ಮತ್ತು ಅನಿಲದಲ್ಲಿ ಹೆಚ್ಚಿನ ಚೇತರಿಕೆ ದಾಖಲಾಗಿದೆ. ಈ ವಾರದ ಮೊದಲ ದಿನ ಸೋಮವಾರ ಭಾರಿ ಕುಸಿತ ಕಂಡಿತ್ತು. ಮಾರುಕಟ್ಟೆಯ ಆರಂಭದಲ್ಲಿಯೇ ಸೆನ್ಸೆಕ್ಸ್ (Sensex) 900ಕ್ಕೂ ಹೆಚ್ಚು ಅಂಕ ಕುಸಿದಿತ್ತು.

ನಿಫ್ಟಿ 17016 ರ ಹಿಂದಿನ ಮುಕ್ತಾಯದ ಮಟ್ಟಕ್ಕೆ ವಿರುದ್ಧವಾಗಿ 17111 ರ ಮಟ್ಟದಲ್ಲಿ ತೆರೆದಿದೆ. ಅಂದರೆ, 90ಕ್ಕೂ ಹೆಚ್ಚು ಅಂಕ ಏರಿಕೆ ಕಂಡಿದೆ. ವಹಿವಾಟಿನ ಮೊದಲ ಅರ್ಧ ಗಂಟೆಯಲ್ಲಿ ನಿಫ್ಟಿ 17165 ರ ಮೇಲಿನ ಮಟ್ಟವನ್ನು ತಲುಪಿತು. ಮತ್ತೊಂದೆಡೆ, ಸೆನ್ಸೆಕ್ಸ್ ಹಿಂದಿನ ಮುಕ್ತಾಯದ ಮಟ್ಟವಾದ 57145 ರ ವಿರುದ್ಧ 57376 ಮಟ್ಟದಲ್ಲಿ ಪ್ರಾರಂಭವಾಯಿತು. ಮೊದಲ ಅರ್ಧ ಗಂಟೆಯಲ್ಲಿ ಸೂಚ್ಯಂಕವು 57704 ರ ಮೇಲಿನ ಹಂತಗಳನ್ನು ತಲುಪಿತು. ಅಂದರೆ ಅದರಲ್ಲಿ 500ಕ್ಕೂ ಹೆಚ್ಚು ಅಂಕಗಳ ಏರಿಕೆ ಕಂಡು ಬಂದಿದೆ. ಆರಂಭಿಕ ವಹಿವಾಟಿನಲ್ಲಿ ಮಾರುಕಟ್ಟೆಯಲ್ಲಿ ಸರ್ವತೋಮುಖ ಲಾಭ ಕಂಡುಬಂದಿದೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಆರಂಭಿಕ ವಹಿವಾಟಿನಲ್ಲಿ ಅತ್ಯಧಿಕ ಏರಿಕೆ ಕಂಡುಬಂದಿದೆ. ಸೂಚ್ಯಂಕವು ಶೇಕಡಾ 1.5 ಕ್ಕಿಂತ ಹೆಚ್ಚಿನ ಲಾಭದೊಂದಿಗೆ ವಹಿವಾಟು ನಡೆಸುತ್ತಿದೆ. ಮತ್ತೊಂದೆಡೆ, ಐಟಿ, ಎಫ್‌ಎಂಸಿಜಿ, ತೈಲ ಮತ್ತು ಅನಿಲ ವಲಯಗಳು ಶೇಕಡಾ ಒಂದಕ್ಕಿಂತ ಹೆಚ್ಚು ಬೆಳವಣಿಗೆಯನ್ನು ಕಾಣುತ್ತಿವೆ. ವ್ಯಾಪಾರಿಗಳ ಭಯವನ್ನು ತೋರಿಸುವ ಚಂಚಲತೆ ಸೂಚ್ಯಂಕವು ಇಂದು ಕುಸಿತವನ್ನು ಕಾಣುತ್ತಿದೆ ಮತ್ತು ಆರಂಭಿಕ ವಹಿವಾಟಿನಲ್ಲಿ ಸೂಚ್ಯಂಕವು ಶೇಕಡಾ 2.5 ರಷ್ಟು ಮುರಿದಿದೆ.

ಎಲ್ಲಾ ವಲಯಗಳು ಅಲ್ಪ ಲಾಭದೊಂದಿಗೆ ತೆರೆದಿದ್ದು, ನಿಫ್ಟಿ ಪಿಎಸ್​ಯು ಬ್ಯಾಂಕ್, ನಿಫ್ಟಿ ವೀಡಿಯಾ, ನಿಫ್ಟಿ ಮೆಟಲ್, ನಿಫ್ಟಿ ಆಟೋ ಸೂಚ್ಯಂಕಗಳು ವಹಿವಾಟಿನಲ್ಲಿ ಶೇ 1ರಷ್ಟು ಏರಿದವು. ಪವರ್ ಗ್ರಿಡ್ ಕಾರ್ಪೋರೇಷನ್, ಒಎನ್​ಜಿಸಿ, ಕೋಲ್ ಇಂಡಿಯಾ, ಸಿಪ್ಲಾ ಮತ್ತು ಎನ್​ಟಿಪಿಸಿ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದರೆ, ಹೀರೋ ಮೋಟೊ ಕಾರ್ಪ್, ಬಜಾಜ್ ಆಟೋ, ಡಿವಿಸ್ ಲ್ಯಾಬ್ಸ್, ಐಷರ್ ಮೋಟಾರ್ಸ್ ಮತ್ತು ಟೆಕ್ ಮಹೀಂದ್ರಾ ಹಿಂದುಳಿದಿವೆ. ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಬ್ಯಂಕವು ಇನ್ಫೋಸಿಸ್, ಎಚ್​ಸಿಎಲ್ ಟೆಕ್ನಾಲಜೀಸ್, ವಿಪ್ರೋ ಬೆಂಬಲದೊಂದಿಗೆ ಶೇ 1ರಷ್ಟು ಏರಿಕೆಯಾಗಿದೆ.

ಇನ್ನು ಮಹೀಂದ್ರಾ ಲಾಜಿಸ್ಟಿಕ್ಸ್ ಷೇರುಗಳು ರಿವಿಗೊ ಸೇವೆಗಳು ಮತ್ತು ಅದರ B2B ಎಕ್ಸ್​ಪ್ರೆಸ್ ವ್ಯವಹಾರಗಳನ್ನು ಸ್ವಾದೀನಪಡಿಸಿಕೊಳ್ಳಲು ಅದರ ಪ್ರವರ್ತಕರೊಂದಿಗೆ ವ್ಯಾಪಾರ ವರ್ಗಾವಣೆ ಒಪ್ಪಂದವನ್ನು ಮಾಡಿಕೊಂಡಿರುವುದಾಗಿ ಕಂಪನಿಯು ಘೋಷಿಸಿದ ನಂತರ ಸ್ಲಂಪ್ ಸೇಲ್ ಆಧಾರದ ಮೇಲೆ ಸುಮಾರು 4 ಪ್ರತಿಶತದಷ್ಟು ಏರಿತು. ಇಂದಿನ ಮಾರುಕಟ್ಟೆಯ ಮನಸ್ಥಿತಿಯು ರೂಪಾಯಿಯ ಮಟ್ಟ, ತೈಲ ಬೆಲೆಗಳು ಮತ್ತು ವಿದೇಶಿ ಒಳಹರಿವುಗಳಿಂದ ಕೂಡಿದೆ. ಬ್ಲಾಕ್​ಸ್ಟೋನ್ ಇಂಕ್ ಸೆ.27ರಂದು ಬ್ಲಾಕ್ ಡೀಲ್​ಗಳ ಮೂಲಕ 2650 ಕೋಟಿ ಮೌಲ್ಯದ ಎಂಬಿಸಿ REITನ 7.7 ಕೋಟಿ ಯುನಿಟ್​ಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ. ಬ್ಲಾಕ್ ಡೀಲ್​ನ ಆಫರ್ ಬೆಲೆ ಪ್ರತಿ ಯುನಿಟ್​ಗೆ 345 ರೂಪಾಯಿ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:24 am, Tue, 27 September 22

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ