Stock Market Tarot Card Report: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದೀರಾ? ಹಾಗಾದ್ರೆ ಆಗಸ್ಟ್ ತಿಂಗಳು ಹೇಗಿರಲಿದೆ ಎಂಬುದನ್ನ ಮೊದಲು ತಿಳಿಯಿರಿ

ಷೇರು ಮಾರುಕಟ್ಟೆ ಟ್ಯಾರೋಟ್​ ಕಾರ್ಡ್​ ವರದಿ: ಆಗಸ್ಟ್ ತಿಂಗಳಲ್ಲಿ ಯಾರು ಯಾವ ರೀತಿಯ ಹೂಡಿಕೆ ಮಾಡಿದರೆ ಲಾಭ ಸಿಗಲಿದೆ. ಹಾಗೂ ಷೇರು ಮಾರುಕಟ್ಟೆಯಲ್ಲಿ ಯಾರ ಭವಿಷ್ಯ ಚನ್ನಾಗಿದೆ ಎಂಬ ಭವಿಷ್ಯವನ್ನು ಕಾರ್ಡ್ ರೀಡ್ ಮೂಲಕ ತಿಳಿಯಬಹುದು.

Stock Market Tarot Card Report: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದೀರಾ? ಹಾಗಾದ್ರೆ ಆಗಸ್ಟ್ ತಿಂಗಳು ಹೇಗಿರಲಿದೆ ಎಂಬುದನ್ನ ಮೊದಲು ತಿಳಿಯಿರಿ
ಸಾಂದರ್ಭಿಕ ಚಿತ್ರ
Updated By: Digi Tech Desk

Updated on: Aug 03, 2022 | 9:31 AM

ಸ್ಟಾಕ್ ಮಾರ್ಕೆಟ್ ಅಥವಾ ಷೇರು ಮಾರುಕಟ್ಟೆಯಲ್ಲಿ(Stock Market) ಹೂಡಿಕೆ ಮಾಡಿ ಲಾಭ ಪಡೆಯುವುದು ಸುಲಭದ ಮಾತಲ್ಲ. ಆದ್ರೆ ಬಹುತೇಕ ಮಂದಿ ತಮ್ಮ ಸುರಕ್ಷಿತ ಮತ್ತು ಸುಭದ್ರ ಭವಿಷ್ಯಕ್ಕಾಗಿ ಷೇರು ಮಾರುಕಟ್ಟೆಯ ಮೊರೆ ಹೋಗುತ್ತಾರೆ. ಬಹುತೇಕ ಭಾರಿ ಎಡವಿದರೆ. ಆಗೊಮ್ಮೆ, ಈಗೊಮ್ಮೆ ಲಾಭ ಪಡೆಯಬಹುದು. ಕೆಲವರಂತೂ ತಮ್ಮ ಮೂಲ ಬಂಡವಾಳವೂ ಕೈಗೆ ಸಿಗದೆ ಮುಳುಗಿದುಂಟು. ಹೀಗಾಗಿ ಷೇರು ಮಾಡುಕಟ್ಟೆ ಪ್ರವೇಶಿಸಲು ಬಹಳ ಜನ ಹೆದರುತ್ತಾರೆ. ಆದ್ರೆ ಆಗಸ್ಟ್ ತಿಂಗಳಲ್ಲಿ ಯಾರು ಯಾವ ರೀತಿಯ ಹೂಡಿಕೆ ಮಾಡಿದರೆ ಲಾಭ ಸಿಗಲಿದೆ. ಹಾಗೂ ಷೇರು ಮಾರುಕಟ್ಟೆಯಲ್ಲಿ ಯಾರ ಭವಿಷ್ಯ ಚನ್ನಾಗಿದೆ ಎಂಬ ಭವಿಷ್ಯವನ್ನು ಕಾರ್ಡ್ ರೀಡ್ ಮೂಲಕ ತಿಳಿಯಬಹುದು.

ಸ್ಟಾಕ್ ಮಾರ್ಕೆಟ್ ಮತ್ತು ಕಮೋಡಿಟಿ ಪ್ರೈಸ್ಗೆ ಆಗಸ್ಟ್ ತಿಂಗಳು ಹೇಗಿರಲಿದೆ?

ಸೆನ್ಸೆಕ್ಸ್, ನಿಫ್ಟಿ ಮತ್ತು ಬ್ಯಾಂಕ್ ನಿಫ್ಟಿಗೆ ಆಗಸ್ಟ್ ತಿಂಗಳ ಮೊದಲ ಹತ್ತು ದಿನಗಳು ಉತ್ತಮವಾಗಿರಲಿದೆ. ಹಾಗೂ ಸೆನ್ಸೆಕ್ಸ್ ಪಾಯಿಟ್ಸ್ ನಿರೀಕ್ಷೆಗಿಂತ ಹೆಚ್ಚು ಏರಿಕೆಯಾಗಲಿದೆ. ನಿಫ್ಟಿ ಮತ್ತು ಬ್ಯಾಂಕ್ ನಿಫ್ಟಿಯಲ್ಲೂ ಅದೇ ರೀತಿಯ ಬದಲಾವಣೆ ಕಾಣಲು ಸಿಗುತ್ತದೆ. ಆದ್ರೆ ಆಗಸ್ಟ್ 11 ಮತ್ತು ಆಗಸ್ಟ್ 20ರ ನಡುವೆ ಮಾರ್ಕೆಟ್ ಕುಸಿಯಲಿದೆ. ಇದರ ನಡುವೆ ಖುಷಿಯ ವಿಚಾರ ಅಂದ್ರೆ ಮಾರ್ಕೆಟ್ ಕುಸಿದರೂ ಬ್ಯಾಂಕ್ ನಿಫ್ಟಿ ಅದನ್ನು ನಿಭಾಯಿಸಲಿದೆ.

ಇನ್ನು ಆಗಸ್ಟ್ ತಿಂಗಳ ಕೊನೆ 10 ದಿನ ಅಂದರೆ ಆಗಸ್ಟ್ 21ರಿಂದ ಆಗಸ್ಟ್ 31ರ ವರೆಗೆ ನಿಧಾನವಾಗಿ ಮಾರುಕಟ್ಟೆಯಲ್ಲಿ ಏರಿಕೆ ಕಂಡುಬರಲಿದೆ. ಲಾಭವೂ ಮೆಲ್ಲಗತಿಯಲ್ಲಾಗಲಿದೆ. ಆದ್ರೆ ಬ್ಯಾಂಕ್ ನಿಫ್ಟಿಯಲ್ಲಿ ಭಾರೀ ಏರಿಕೆ ಕಂಡು ಬರಲಿದೆ.

ಕ್ರೂಡ್ ಆಯಿಲ್ ಬೆಲೆ ಕುಸಿತ

ಕ್ರೂಡ್ ಆಯಿಲ್ ಬೆಲೆ ಕುಸಿಯುವ ಸಾಧ್ಯತೆ ಇದೆ. ಒಪೆಕ್ ರಾಷ್ಟ್ರಗಳು (OPEC nations) ಕ್ರೂಡ್ ಆಯಿಲ್ ಇಂದಿನ ಬೆಲೆಯನ್ನೇ ನಿರ್ವಹಿಸಲು ಪ್ರಯತ್ನಿಸಲಿವೆ. ಆದ್ರೆ ಇಷ್ಟೆಲ್ಲಾ ಪರಿಶ್ರಮದ ನಡುವೆಯೂ ಕ್ರೂಡ್ ಆಯಿಲ್ ಬೆಲೆ ಕುಸಿಯುವ ಸಾಧ್ಯತೆ ಇದೆ. ಹಾಗೂ ಚಿನ್ನ, ಬೆಳ್ಳಿ ಏರಿಕೆಯಾಗುವ ಸಾಧ್ಯತೆ ಇದೆ. ಚಿನ್ನ, ಬೆಳ್ಳಿ ದುಬಾರಿಯಾಗಲಿದೆ.