ITR: ಆದಾಯ ತೆರಿಗೆ ಕಟ್ಟಿದ್ದೀರಾ? ಈ ಮೀಮ್ಗಳನ್ನು ನೋಡಿ ನಿಟ್ಟುಸಿರು ಬಿಡಿ
ITR Meme : ಆನ್ಲೈನ್ನಲ್ಲಿ ಆದಾಯ ತೆರಿಗೆ ಪಾವತಿಸಲು ಸಾಧ್ಯವಾಗದಿದ್ದುದಕ್ಕೆ ಅನೇಕರು ಮೀಮ್ಗಳನ್ನು ಸೃಷ್ಟಿಸಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಇವುಗಳನ್ನು ಓದುತ್ತಾ ಹೋದಂತೆ ನೀವು ನಗೆಗಡಲಲ್ಲಿ ತೇಲುತ್ತೀರಿ. ಹಾಂ! ಓದಲು, ನೋಡಲು, ಟ್ಯಾಕ್ಸ್ ಕಟ್ಟಬೇಕಿಲ್ಲ.
ಆದಾಯ ತೆರಿಗೆ ಪಾವತಿಗೆ ಜುಲೈ 31 ಅಂತಿಮ ದಿನಾಂಕವಾಗಿತ್ತು. ಅವಧಿ ಸಮೀಪಿಸುತ್ತಿದ್ದಂತೆ ಆನ್ಲೈನ್ನಲ್ಲಿ ಗಡುವನ್ನು ವಿಸ್ತರಿಸಲು ತೆರಿಗೆ ಪಾವತಿದಾರರು #Extend_Due_Date_Immediately ಎಂಬ ಹ್ಯಾಷ್ಟ್ಯಾಗ್ನಡಿ ಕೋರಿಕೆ ಸಲ್ಲಿಸಿದರು. ಈತನಕ ಸುಮಾರು 5,000 ಜನ ಪೋಸ್ಟ್ಗಳನ್ನು ಟ್ವಿಟರ್ನಡಿ ನೋಡಬಹುದಾಗಿದೆ. ಆದರೆ ಸರ್ಕಾರ ಅವಧಿ ವಿಸ್ತರಣೆಗೆ ಸಂಬಂಧಿಸಿದಂತೆ ಈ ಮನವಿ ಕುರಿತು ಯಾವುದೇ ಅಧಿಸೂಚನೆ ಹೊರಡಿಸಿಲ್ಲ. ಈ ಮಧ್ಯೆ ಕಳೆದ ಮೂರು ವರ್ಷಗಳಲ್ಲಿ ಆದಾಯ ತೆರಿಗೆ ಪಾವತಿಸಲು (ITR Filing) ಅವಧಿ ವಿಸ್ತರಿಸದೇ ಇರುವುದು ಇದೇ ಮೊದಲು ಎಂಬುದು ಗಮನಾರ್ಹ. ಹೀಗಾಗಿ ಬೇಸತ್ತ ಜನ ಟ್ವಿಟರ್ನಲ್ಲಿ ಸಾಕಷ್ಟು ಮೀಮ್ಗಳನ್ನು ಹಂಚಿಕೊಳ್ಳುವುದರ ಮೂಲಕ ತಮ್ಮ ಅಸಮಾಧಾನ ಹೊರಗೆಡವಿದ್ದಾರೆ. ಇಂಟರ್‌ನೆಟ್ ಸಮಸ್ಯೆ, ಲಾಗಿನ್ ಸಮಸ್ಯೆ, ಪ್ಯಾನ್ಕಾರ್ಡ್ ಹುಡುಕುವುದು ಹೀಗೆ ಫೈಲಿಂಗ್ ಮಾಡಬೇಕಾದ ಸಂದರ್ಭದಲ್ಲಿ ಎದುರಿಸುವ ಸಮಸ್ಯೆಗಳನ್ನಿಟ್ಟುಕೊಂಡೇ ಮೀಮ್ಗಳು (ITR Meme) ಸೃಷ್ಟಿಯಾಗಿವೆ.
ಆದಾಯ ತೆರಿಗೆ ವೆಬ್‌ಸೈಟ್ ಪ್ರಕಾರ, ಜುಲೈ 28 ರವರೆಗೆ ಒಟ್ಟು 4,09,49,663 ಪಾವತಿದಾರರು ಆದಾಯ ತೆರಿಗೆ ಪಾವತಿಸಿದ್ದಾರೆ. ಈ ಪೈಕಿ 2,41,15,777 ಪಾವತಿಗಳನ್ನು ಪರಿಶೀಲಿಸಲಾಗಿದೆ. ಆದರೆ ಆದಾಯ ತೆರಿಗೆ ಪೋರ್ಟಲ್ ಮಾಹಿತಿಯ ಪ್ರಕಾರ, 10,45,31,679 ಜನರು ನೋಂದಾಯಿಸಿಕೊಂಡಿದ್ದರೂ ಪಾವತಿಯಾಗಿದ್ದು ಕೇವಲ ಶೇ. 40.
Tax Professionals returning home after completing First phase of tax season:#IncomeTaxReturns #ITRFiling pic.twitter.com/YYj8mQgeaq
— CA Akhil Pachori (@akhilpachori) July 31, 2022
ಇದಕ್ಕೆ ಕಾರಣ, ಪೋರ್ಟಲ್ನಲ್ಲಿ ಮಾಹಿತಿಯನ್ನು ತುಂಬುವಾಗ ವಿವಿಧ ರೀತಿಯ ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದು. ಈ ಸಮಸ್ಯೆಗಳನ್ನೇ ಸಾಕಷ್ಟು ಜನರು ಟ್ವಿಟರ್ ಮೂಲಕ ಹ್ಯಾಷ್ಟ್ಯಾಗ್ನಡಿ ವ್ಯಕ್ತಪಡಿಸಿ ಅಸಮಾಧಾನ ತೋರಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರೀಯ ನೇರ ತೆರಿಗೆ ಮಂಡಳಿ ಮತ್ತಿತರ ಟ್ವಿಟರ್ ಖಾತೆಗಳಿಗೆ ಟ್ಯಾಗ್ ಮಾಡಿದ್ದಾರೆ. ಅನೇಕ ಕ್ಷೇತ್ರತಜ್ಞರು ತೆರಿಗೆ ಪಾವತಿಸಲು ಗಡುವನ್ನು ವಿಸ್ತರಿಸುವುದಿಲ್ಲವೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
To all CA and tax consultants #ITRFiling #IncomeTaxReturns pic.twitter.com/AYxZEK0e0m
— KT? (@_KaumudiTiwarii) July 31, 2022
Still waiting for the OTP. It’s almost 1 hour. #ITRFiling pic.twitter.com/I5WNxoCE7M
— Subhash Singh (@sisodiyaji0761) July 31, 2022
All Tax Professionals & CA’s with their team after First Phase of ITR Filing is over..#ITRFiling ….#IncomeTaxReturns ..#ITRs pic.twitter.com/1DcQ4DWgtR
— Vru$hang $ (@v2shah) July 31, 2022
Published On - 11:22 am, Tue, 2 August 22