ITR Filing: ಆದಾಯ ತೆರಿಗೆ ಪಾವತಿಗೆ ಗಡುವು ಮುಕ್ತಾಯ; ಕೊನೆಯ ದಿನ 68 ಲಕ್ಷ ITR ಸಲ್ಲಿಕೆ
Income Tax Returns: ಕಳೆದ ಹಣಕಾಸು ವರ್ಷದಲ್ಲಿ (2020-21) ಸುಮಾರು 5.89 ಕೋಟಿ ITRಗಳನ್ನು ಸಲ್ಲಿಸಲಾಗಿತ್ತು. ಅದಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚು ಆದಾಯ ತೆರಿಗೆ ಪಾವತಿಯಾಗಿದೆ.
ನವದೆಹಲಿ: 2021-22ರ ಆರ್ಥಿಕ ವರ್ಷದ ಆದಾಯ ತೆರಿಗೆ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿತ್ತು. ನಿನ್ನೆ ರಾತ್ರಿ 11 ಗಂಟೆಯವರೆಗೆ 67.97 ಲಕ್ಷ ಆದಾಯ ತೆರಿಗೆ ರಿಟರ್ನ್ಸ್ (ITR Filing) ಸಲ್ಲಿಕೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಈಗಾಗಲೇ ಹಲವು ಬಾರಿ ಆದಾಯ ತೆರಿಗೆ ಪಾವತಿಗೆ ಕೊನೆಯ ದಿನಾಂಕವನ್ನು ವಿಸ್ತರಿಸಿದ್ದ ಕೇಂದ್ರ ಸರ್ಕಾರ ಈ ಬಾರಿ ಗಡುವನ್ನು ವಿಸ್ತರಿಸಿಲ್ಲ.
ಭಾನುವಾರ ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್ಸ್ ಅಂಕಿಅಂಶಗಳು ಹೀಗಿವೆ. ನಿನ್ನೆ ರಾತ್ರಿ 11 ಗಂಟೆಯವರೆಗೆ 67,97,067 ITRಗಳನ್ನು ಸಲ್ಲಿಸಲಾಗಿದೆ. ಕೊನೆಯ 1 ಗಂಟೆಯಲ್ಲಿ 4,50,013 ITRಗಳನ್ನು ಸಲ್ಲಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.
Statistics of Income Tax Returns filed today. 67,97,067 #ITRs have been filed upto 2300 hours today & 4,50,013 #ITRs filed in the last 1hr. For any assistance, pl connect on orm@cpc.incometax.gov.in or on our help desk nos 1800 103 0025 & 1800 419 0025. We will be glad to assist!
— Income Tax India (@IncomeTaxIndia) July 31, 2022
ಐಟಿಆರ್ ಫೈಲಿಂಗ್ ಮಧ್ಯರಾತ್ರಿಯವರೆಗೆ ನಡೆಯಿತು. ಕೊನೆಯ ದಿನ ಹಲವು ಜನರು ಆದಾಯ ತೆರಿಗೆ ಪಾವತಿಸುವ ವೇಳೆ ಸಾಕಷ್ಟು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದರು. ಈ ಗಡುವಿನ ನಂತರ ತೆರಿಗೆ ಪಾವತಿ ಮಾಡುವವರು ವಿಳಂಬವಾದ ಫೈಲಿಂಗ್‌ಗೆ ದಂಡ ಪಾವತಿಸಬೇಕಾಗುತ್ತದೆ. ಜುಲೈ 30ರವರೆಗೆ ಒಟ್ಟಾರೆ 5.10 ಕೋಟಿ ಆದಾಯ ತೆರಿಗೆ ಪಾವತಿಯಾಗಿತ್ತು. ಭಾನುವಾರ ರಾತ್ರಿಯವರೆಗೂ ಆದಾಯ ತೆರಿಗೆ ಇಲಾಖೆಯಿಂದ ಸಹಾಯವಾಣಿ ಸಂಖ್ಯೆಯನ್ನು ನೀಡಲಾಗಿತ್ತು. ನಿನ್ನೆಗೆ ಗಡುವು ಮುಗಿದಿರುವುದರಿಂದ ಇಂದಿನಿಂದ ಯಾರಾದರೂ ಆದಾಯ ತೆರಿಗೆ ಪಾವತಿಸಬೇಕಾದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.
ಕಳೆದ ಹಣಕಾಸು ವರ್ಷದಲ್ಲಿ (2020-21) ಸುಮಾರು 5.89 ಕೋಟಿ ITRಗಳನ್ನು ಸಲ್ಲಿಸಲಾಗಿತ್ತು. ಅದಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚು ಆದಾಯ ತೆರಿಗೆ ಪಾವತಿಯಾಗಿದೆ.
ಆದಾಯ ತೆರಿಗೆ ಕಾನೂನುಗಳ ಪ್ರಕಾರ, ಮೌಲ್ಯಮಾಪನ ವರ್ಷದ ಡಿಸೆಂಬರ್ 31ರೊಳಗೆ 5 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಇರುವವರು ತಮ್ಮ ಐಟಿಆರ್ ಅನ್ನು ಸಲ್ಲಿಸದಿದ್ದರೆ 5,000 ಶುಲ್ಕವನ್ನು ಪಾವತಿಸಬೇಕಾಗುತ್ತದೆ. 5 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ವ್ಯಕ್ತಿಗಳು ವಿಳಂಬವಾಗಿ ಆದಾಯ ತೆರಿಗೆ ಪಾವತಿಸಿದರೆ 1,000 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಬಾಕಿ ಪಾವತಿಸದ ತೆರಿಗೆಯನ್ನು ಹೊಂದಿರುವವರು ವಿಳಂಬವಾದ ತಿಂಗಳಿಗೆ ಹೆಚ್ಚುವರಿ ಶೇ. 1ರಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.