ನೀವು ಪ್ಯಾನ್ ಕಾರ್ಡ್ ಕಳೆದುಕೊಂಡಿದ್ದೀರಾ? ಚಿಂತಿಸಬೇಡಿ, ಇ-ಪ್ಯಾನ್ ಕಾರ್ಡ್ ಪಡೆಯಲು ಸುಲಭ ವಿಧಾನ ಇಲ್ಲಿದೆ

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31ರ ಗಡುವು ಸಮೀಪಿಸುತ್ತಿದೆ. ಸಲ್ಲಿಸಬೇಕಾದ ದಾಖಲೆಗಳಲ್ಲಿ ಒಂದಾದ ಪ್ಯಾನ್ ಕಾರ್ಡ್ ಕಳೆದುಕೊಂಡಿದ್ದೀರಾ? ಹಾಗಿದ್ದರೆ ಇ-ಪ್ಯಾನ್ ಕಾರ್ಡ್ ಡೌನ್​ಲೋಡ್ ಮಾಡಿಕೊಳ್ಳಬಹುದು. ಇಲ್ಲಿದೆ ಡೌನ್​ಲೋಡ್ ಮಾಡಿಕೊಳ್ಳುವ ಸುಲಭ ವಿಧಾನ.

ನೀವು ಪ್ಯಾನ್ ಕಾರ್ಡ್ ಕಳೆದುಕೊಂಡಿದ್ದೀರಾ? ಚಿಂತಿಸಬೇಡಿ, ಇ-ಪ್ಯಾನ್ ಕಾರ್ಡ್ ಪಡೆಯಲು ಸುಲಭ ವಿಧಾನ ಇಲ್ಲಿದೆ
ಸಾಂಕೇತಿಕ ಚಿತ್ರ
TV9kannada Web Team

| Edited By: Rakesh Nayak

Jul 25, 2022 | 12:56 PM

ಆದಾಯ ತೆರಿಗೆ ಇಲಾಖೆ ಕೊಡುವ ಪ್ಯಾನ್ ಕಾರ್ಡ್ (Pan Card) ನಂಬರ್ ಒಂದು ಶಾಶ್ವತ ಖಾತೆ ಸಂಖ್ಯೆ ಆಗಿರುತ್ತದೆ. ಭಾರತದ ಪ್ರತಿಯೊಬ್ಬ ನಾಗರಿಕನೂ ಆದಾಯ ತೆರಿಗೆ ಕಟ್ಟುವ ಸಂದರ್ಭದಲ್ಲಿ ಹಾಗೂ ಹಣಕಾಸು ವ್ಯವಹಾರ ನಿರ್ವಹಿಸುವಾಗ ಈ ಕಾರ್ಡ್ ಅಗತ್ಯವಾಗಿದೆ. ಇದೀಗ ಆದಾಯ ತೆರಿಗೆ ರಿಟರ್ನ್ಸ್ (Income Tax Returns) ಸಲ್ಲಿಸಲು ಜುಲೈ 31ರ ಗಡುವು ಸಮೀಪಿಸುತ್ತಿದೆ. ಇದರ ಅಂತಿಮ ದಿನಾಂಕವನ್ನು ವಿಸ್ತರಿಸುವ ಸಾಧ್ಯತೆಯಿಲ್ಲ. ರಿಟರ್ನ್ಸ್ ಸಲ್ಲಿಸುವಾಗ ಪ್ಯಾನ್ ಕಾರ್ಡ್ ಸಲ್ಲಿಸಲೇಬೇಕು. ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದ್ದರೆ ಒಕೆ, ಕಾಣೆಯಾಗಿದ್ದರೆ ಏನು ಗತಿ? ಚಿಂತಿಸಬೇಡಿ, ನೀವು ನಿಮ್ಮ ಪ್ಯಾನ್ ಕಾರ್ಡ್ ಅನ್ನು ಕಳೆದುಕೊಂಡಿದ್ದರೆ ಎಲೆಕ್ಟ್ರಾನಿಕ್ ಪ್ಯಾನ್ ಕಾರ್ಡ್ ಅಥವಾ ಇ-ಪ್ಯಾನ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಹಾಗಿದ್ದರೆ ಇ-ಪ್ಯಾನ್ ಕಾರ್ಡ್ ಡೌನ್​ಲೋಡ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ.

ಪ್ಯಾನ್ ಕಾರ್ಡ್ ಕಳೆದುಕೊಂಡವರು ಇ-ಪ್ಯಾನ್ ಕಾರ್ಡ್ ಅಥವಾ ಎಲೆಕ್ಟ್ರಾನಿಕ್ ಪ್ಯಾನ್ ಕಾರ್ಡ್ ಎಲೆಕ್ಟ್ರಾನಿಕ್ ಪ್ಯಾನ್ ಕಾರ್ಡ್ ಅನ್ನು ಐಟಿ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ನಿಂದ ತಕ್ಷಣವೇ ಡೌನ್‌ಲೋಡ್ ಮಾಡಬಹುದು. ಇದಕ್ಕಾಗಿ ನೀವು ಈ ಹಂತಗಳನ್ನು ಅನುಸರಿಸಿ:

– incometax.gov.in/iec/foportal ವೆಬ್‌ಸೈಟ್‌ಗೆ ಭೇಟಿ ನೀಡಿ

– ‘ತತ್‌ಕ್ಷಣ ಇ-ಪ್ಯಾನ್ ಆಯ್ಕೆ’ ಮೇಲೆ ಕ್ಲಿಕ್ ಮಾಡಿ ಮತ್ತು ‘ಹೊಸ ಇ-ಪ್ಯಾನ್’ ಆಯ್ಕೆ ಮಾಡಿ

– ನಿಮ್ಮ PAN ಕಾರ್ಡ್ ಸಂಖ್ಯೆಯನ್ನು ನಮೂದಿಸುವಂತೆ ಕೇಳುತ್ತದೆ. ನಿಮಗೆ ಪ್ಯಾನ್ ಕಾರ್ಡ್ ನಂಬರ್ ನೆನಪಿಲ್ಲದಿದ್ದರೆ ಆಧಾರ್ ಕಾರ್ಡ್ ಸಂಖ್ಯೆ ಕೂಡ ನಮೂದಿಸಬಹುದು.

– ನಂತರ ‘ನಿಯಮಗಳು ಮತ್ತು ಷರತ್ತುಗಳು’ ಮೂಲಕ ಹೋಗಿ ಮತ್ತು ‘ಸಮ್ಮತಿಸಿ’ (Accept) ಕ್ಲಿಕ್ ಮಾಡಿ

–  ಈ ವೇಳೆ ನಿಮ್ಮ ನೋಂದಾಯಿತ ಮೊಬೈಲ್ ನಂಬರ್​ಗೆ ಒಂದು ಬಾರಿ OTP ಬರುತ್ತದೆ

– OTP ನಮೂದಿಸಿದ ನಂತರ ಎಲ್ಲಾ ವಿವರಗಳನ್ನು ಪರಿಶೀಲಿಸಿ, ಕೊನೆಯಲ್ಲಿ ‘ಸಲ್ಲಿಸು’ (Submit) ಒತ್ತಿರಿ

– ಹೀಗೆ ಮಾಡಿದಾಗ ಪ್ಯಾನ್ ಕಾರ್ಡ್ ಅನ್ನು PDF ರೂಪದಲ್ಲಿ ನಿಮ್ಮ ನೋಂದಾಯಿತ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಈ PDF ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada