Asian Economy: ಏಷ್ಯಾದ ಕೆಲವು ಆರ್ಥ ವ್ಯವಸ್ಥೆಗಳಿಗೆ ಹಿಂಜರಿತದ ಗಂಡಾಂತರ ಎದುರಿಗೇ ಇದೆ- ಸಮೀಕ್ಷೆಗಳ ಒಟ್ಟಾಭಿಪ್ರಾಯ!

Economic Recession: ಸಾಮಾನ್ಯವಾಗಿ, ಏಷ್ಯಾದ ಆರ್ಥಿಕ ಹಿಂಜರಿತದ ಅಪಾಯವು ಸುಮಾರು 20-25% ರಷ್ಟಿದೆ. ಅದೇ ಯುಎಸ್ ಹಿಂಜರಿತ ಗಂಡಾಂತರ ಪ್ರವೇಶಿಸುವ ಸಾಧ್ಯತೆ ಶೇ. 40 ರಷ್ಟು ಇದ್ದರೆ, ಯುರೋಪ್ 50-55% ರಷ್ಟಿದೆ ಎಂಬ ಆತಂಕವಿದೆ.

Asian Economy: ಏಷ್ಯಾದ ಕೆಲವು ಆರ್ಥ ವ್ಯವಸ್ಥೆಗಳಿಗೆ ಹಿಂಜರಿತದ ಗಂಡಾಂತರ ಎದುರಿಗೇ ಇದೆ- ಸಮೀಕ್ಷೆಗಳ ಒಟ್ಟಾಭಿಪ್ರಾಯ!
ಏಷ್ಯಾದ ಕೆಲವು ಆರ್ಥ ವ್ಯವಸ್ಥೆಗಳಿಗೆ ಹಿಂಜರಿತದ ಗಂಡಾಂತರ ಎದುರಿಗೇ ಇದೆ- ಸಮೀಕ್ಷೆಗಳ ಒಟ್ಟಾಭಿಪ್ರಾಯ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jul 25, 2022 | 9:58 PM

ಏಷ್ಯಾದ ಕೆಲವು ಆರ್ಥ ವ್ಯವಸ್ಥೆಗಳಿಗೆ (Asian Economy) ಹಿಂಜರಿತದ ಗಂಡಾಂತರ (Recession) ಎದುರಿಗೇ ಇದೆ ಎಂಬ ಸಮೀಕ್ಷೆಗಳ ಒಟ್ಟಾಭಿಪ್ರಾಯ ಕಂಗೆಡಿಸುವಂತಿದೆ. ಇದರಿಂದ ಕೇಂದ್ರೀಯ ಬ್ಯಾಂಕುಗಳು ಹಿಂಜರಿತದ ಅಪಾಯವನ್ನು ತಪ್ಪಿಸಲು ಬಡ್ಡಿದರ ಹೆಚ್ಚಳಗಳಿಗೆ ಮತ್ತಷ್ಟು ವೇಗ ನೀಡಲು ಹವಣಿಸುತ್ತಿವೆ ಎಂದು ಬ್ಲೂಮ್‌ಬರ್ಗ್ ಅರ್ಥಶಾಸ್ತ್ರಜ್ಞರ ಸಮೀಕ್ಷೆ (Bloomberg survey) ವ್ಯಾಖ್ಯಾನಿಸಿದೆ.

ಶ್ರೀಲಂಕಾವು ತನ್ನ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ಮಧ್ಯದಲ್ಲಿದ್ದು, ಮುಂದಿನ ವರ್ಷದಲ್ಲಿ ಹಿಂಜರಿತಕ್ಕೆ ಬೀಳುವ ಸಂಭವನೀಯತೆ 85 % ರಷ್ಟಿದೆ. ಈ ಹಿಂದಿನ ಸಮೀಕ್ಷೆಯಲ್ಲಿ ಇದು 33 % ಅವಕಾಶವಿತ್ತು. ಭೂಪಟದ ಈ ಭಾಗದಲ್ಲಿ ಇದುವರೆಗಿನ ಗರಿಷ್ಠ ಹೆಚ್ಚಳ ಇದಾಗಿದೆ. ಇದೇ ಬ್ಲೂಮ್‌ಬರ್ಗ್ ಆರ್ಥಿಕ ತಜ್ಞರು ನ್ಯೂಜಿಲೆಂಡ್, ತೈವಾನ್, ಆಸ್ಟ್ರೇಲಿಯಾ ಮತ್ತು ಫಿಲಿಪೈನ್ಸ್‌ ದೇಶಗಳಲ್ಲಿ ಸಹ ಆರ್ಥಿಕ ಹಿಂಜರಿತದ ಸಾಧ್ಯತೆಯನ್ನು ಅನುಕ್ರಮವಾಗಿ 33%, 20%, 20% ಮತ್ತು 8% ಕ್ಕೆ ಹೆಚ್ಚಿಸಿದ್ದಾರೆ. ಆ ದೇಶಗಳಲ್ಲಿ ಕೇಂದ್ರೀಯ ಬ್ಯಾಂಕುಗಳು ಹಣದುಬ್ಬರವನ್ನು ತಗ್ಗಿಸಲು ಬಡ್ಡಿದರಗಳನ್ನು ಹೆಚ್ಚಿಸುತ್ತಿವೆ.

ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್​​ ಆಫ್​ ಅಮೆರಿಕಾಗೆ ಹೋಲಿಸಿದರೆ ಏಷ್ಯಾದ ಕೆಲ ನಿರ್ದಿಷ್ಟ ಆರ್ಥಿಕತೆಗಳು ಹೆಚ್ಚಾಗಿ ಸ್ಥಿತಿವಂತವಾಗಿವೆ ಎಂಬುದು ಚೇತೋಹಾರಿಯಾಗಿದೆ. ಇತರ ಹಲವಾರು ಏಷ್ಯಾದ ಆರ್ಥಿಕತೆಗಳಿಗೆ ಹಿಂಜರಿತದ ಸಂಭವನೀಯತೆ ಇಲ್ಲದಿರುವುದು ಸಮೀಕ್ಷೆಯಲ್ಲಿ ಬಯಲಾಗಿದೆ. ಚೀನಾ ಆರ್ಥಿಕ ಹಿಂಜರಿತಕ್ಕೆ ತುತ್ತಾಗುವ ಸಾಧ್ಯತೆ ಕೇವಲ 20 % ರಷ್ಟಿದೆ ಅನ್ನುತ್ತಾರೆ ಇದೇ ಅರ್ಥಶಾಸ್ತ್ರಜ್ಞರು. ಇನ್ನು, ದಕ್ಷಿಣ ಕೊರಿಯಾ ಅಥವಾ ಜಪಾನ್ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವ ಸಾಧ್ಯತೆ ಶೇ. 25 ರಷ್ಟಿದೆ.

ಹೆಚ್ಚುತ್ತಿರುವ ಇಂಧನ ಬೆಲೆಗಳು ಜರ್ಮನಿ ಮತ್ತು ಫ್ರಾನ್ಸ್‌ನಂತಹ ದೇಶಗಳನ್ನು ಹೆಚ್ಚು ಬಾಧಿಸತೊಡಗಿವೆ. ಇದು ಆ ಭಾಗದ ಇತರೆ ದೇಶಗಳ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಮೂಡೀಸ್ ಅನಾಲಿಟಿಕ್ಸ್ ಇಂಕ್‌ನ ಏಷ್ಯಾ ಪೆಸಿಫಿಕ್ ಭಾಗದ ಮುಖ್ಯ ಅರ್ಥಶಾಸ್ತ್ರಜ್ಞ ಸ್ಟೀವನ್ ಕೊಕ್ರೇನ್ ಹೇಳಿದ್ದಾರೆ.

ಸಾಮಾನ್ಯವಾಗಿ, ಏಷ್ಯಾದ ಆರ್ಥಿಕ ಹಿಂಜರಿತದ ಅಪಾಯವು ಸುಮಾರು 20-25% ರಷ್ಟಿದೆ. ಅದೇ ಯುಎಸ್ ಹಿಂಜರಿತ ಗಂಡಾಂತರ ಪ್ರವೇಶಿಸುವ ಸಾಧ್ಯತೆ ಶೇ. 40 ರಷ್ಟು ಇದ್ದರೆ, ಯುರೋಪ್ 50-55% ರಷ್ಟಿದೆ ಎಂಬ ಆತಂಕವನ್ನು ಹೊರಹಾಕಿದ್ದಾರೆ.

ಬ್ಲೂಮ್‌ಬರ್ಗ್ ಎಕನಾಮಿಕ್ಸ್ ಮಾದರಿಯು ಮುಂದಿನ 12 ತಿಂಗಳೊಳಗೆ US ಆರ್ಥಿಕ ಹಿಂಜರಿತದ ಸಾಧ್ಯತೆಯನ್ನು 38% ನಲ್ಲಿಟ್ಟಿದೆ. ಇದು ಕೆಲವೇ ತಿಂಗಳುಗಳ ಮೊದಲು ಸುಮಾರು ಶೂನ್ಯವಾಗಿತ್ತು. ಈ ಆರ್ಥಿಕ ಮಾದರಿಯು ಅನೇಕ ಅಂಶಗಳನ್ನು ಪರಿಗಣೆನೆಗೆ ತೆಗೆದುಕೊಳ್ಳುದೆ. ವಸತಿ ನಿರ್ಮಾಣಕ್ಕೆ ನೀಡಿರುವ ಪರವಾನಗಿಗಳು ಮತ್ತು ಗ್ರಾಹಕರ ಸಮೀಕ್ಷೆಯ ಡೇಟಾದಿಂದ 10 ವರ್ಷ ಮೂರು ತಿಂಗಳ ಖಜಾನೆ ಇಳುವರಿಗಳ ನಡುವಿನ ಅಂತರದವರೆಗಿನ ವಿವಿಧ ಅಂಶಗಳನ್ನು ಇದು ಒಳಗೊಂಡಿದೆ.