Closing Bell: ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 700ಕ್ಕೂ ಹೆಚ್ಚು ಪಾಯಿಂಟ್ಸ್, ನಿಫ್ಟಿ 225 ಪಾಯಿಂಟ್ಸ್ ಕುಸಿತ

| Updated By: Srinivas Mata

Updated on: Jun 22, 2022 | 6:55 PM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಜೂನ್ 22ರ ಬುಧವಾರದಂದು 700ಕ್ಕೂ ಹೆಚ್ಚು ಪಾಯಿಂಟ್ಸ್, ನಿಫ್ಟಿ 225 ಪಾಯಿಂಟ್ಸ್ ಕುಸಿತ ಕಂಡಿದೆ.

Closing Bell: ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 700ಕ್ಕೂ ಹೆಚ್ಚು ಪಾಯಿಂಟ್ಸ್, ನಿಫ್ಟಿ 225 ಪಾಯಿಂಟ್ಸ್ ಕುಸಿತ
ಸಾಂದರ್ಭಿಕ ಚಿತ್ರ
Follow us on

ಕಚ್ಚಾ ತೈಲ ಬೆಲೆಗಳ ಕುಸಿತವನ್ನು ಸಹ ಪರಿಗಣಿಸದಂತೆ, ದುರ್ಬಲ ಜಾಗತಿಕ ಸನ್ನಿವೇಶ ಮತ್ತು ಎಲ್ಲ ವಲಯಗಳಲ್ಲಿನ ಷೇರುಗಳ ಮಾರಾಟದ ಕಾರಣಕ್ಕೆ ಜೂನ್ 22ರ ಬುಧವಾರದಂದು ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳು ಇಳಿಕೆ ದಾಖಲಿಸಿದವು. ಸತತ ಎರಡು ದಿನಗಳ ಕಾಲ ಏರಿಕೆ ಹಾದಿಯಲ್ಲಿದ್ದ ಷೇರುಪೇಟೆ ನಷ್ಟದ ಹಾದಿಗೆ ಮರಳಿದವು. ಬುಧವಾರದ ಮುಕ್ತಾಯದ ವೇಳೆಗೆ ಬಿಎಸ್​ಇ ಸೆನ್ಸೆಕ್ಸ್ 709.54 ಪಾಯಿಂಟ್ ಅಥವಾ ಶೇ 1.35ರಷ್ಟು ಕುಸಿದು, 51,822.53 ಪಾಯಿಂಟ್ಸ್​ನಲ್ಲಿ ಮುಕ್ತಾಯ ಕಂಡಿತು. ಇನ್ನು ಎನ್​ಎಸ್​ಇ ನಿಫ್ಟಿ 225.50 ಪಾಯಿಂಟ್ ಅಥವಾ ಶೇ 1.44ರಷ್ಟು ಕುಸಿದು, 15,413.30ರಲ್ಲಿ ವಹಿವಾಟು ಚುಕ್ತಾ ಮಾಡಿತು. ಅಮೆರಿಕ ಸರ್ಕಾರ ಮತ್ತು ತೈಲ ಉದ್ಯಮದ ನಡುವೆ ಹದಗೆಟ್ಟ ಸಂಬಂಧಗಳ ಮಧ್ಯೆ ಚಾಲಕರಿಗೆ ವೆಚ್ಚವನ್ನು ಕಡಿತಗೊಳಿಸಲು ಇಂಧನದ ಮೇಲಿನ ತೆರಿಗೆಗಳನ್ನು ಇಳಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಮುಂದಾಗಿರುವುದರ ಮಧ್ಯೆ ತೈಲ ಬೆಲೆಗಳು ಕುಸಿದಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಬೆಂಚ್​ಮಾರ್ಕ್ ಬ್ರೆಂಟ್ ಕಚ್ಚಾ ಫ್ಯೂಚರ್ಸ್ ಯುಎಸ್​ಡಿ 4.65 ಅಥವಾ ಶೇ 4.1ರಷ್ಟು ಕುಸಿದು, ಬ್ಯಾರೆಲ್​ಗೆ ಯುಎಸ್​ಡಿ 110ರಲ್ಲಿ, ಆದರೆ ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್​ಮೀಡಿಯೇಟ್ (WTI) ಫ್ಯೂಚರ್ಸ್ ಯುಎಸ್​ಡಿ 5.08 ಅಥವಾ ಶೇ 4.6ರಷ್ಟು ಇಳಿದು, ಯುಎಸ್​ಡಿ 104.44ಕ್ಕೆ ಕುಸಿದಿದೆ ಎಂದು ಅದು ಸೇರಿಸಿದೆ. “ಅಲ್ಪಾವಧಿಯ ಪುಲ್-ಬ್ಯಾಕ್ ಏರಿಕೆಯು ಇಂದಿನ ಮಾರುಕಟ್ಟೆಯಲ್ಲಿ ಅನಿಶ್ಚಿತತೆಯ ಮಟ್ಟವನ್ನು ತೋರಿಸುತ್ತದೆ. ವಾಲ್ಯೂಮ್ ಬಿಗಿಗೊಳಿಸುವಿಕೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿನ ದೌರ್ಬಲ್ಯವು ಮಾರುಕಟ್ಟೆಯನ್ನು ಕೆಳಕ್ಕೆ ಎಳೆದಿದೆ. ನಂತರದ ದಿನಗಳಲ್ಲಿ ಅಮೆರಿಕದ ಫೆಡ್ ದರದ ಬಗ್ಗೆ ತುಂಬ ಕುತೂಹಲದಿಂದ ನೋಡಲಾಗುತ್ತದೆ,” ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಇಂದಿನ ವ್ಯವಹಾರದಲ್ಲಿ ಎಲ್ಲ ವಲಯದ ಸೂಚ್ಯಂಕಗಳು ಇಳಿಕೆಯಲ್ಲಿ ಕೊನೆಗೊಂಡಿವೆ. ನಿಫ್ಟಿ ಲೋಹ ಸೂಚ್ಯಂಕ ಶೇ 4.8ರಷ್ಟು ಕುಸಿದಿದ್ದರೆ, ನಿಫ್ಟಿ ಬ್ಯಾಂಕ್, ಫಾರ್ಮಾ, ಮಾಹಿತಿ ತಂತ್ರಜ್ಞಾನ ಮತ್ತು ಇಂಧನ ಸೂಚ್ಯಂಕಗಳು ಶೇ 1ರಿಂದ 2ರಷ್ಟು ಕುಸಿದಿವೆ. ಬಿಎಸ್‌ಇಯಲ್ಲಿ ಲೋಹದ ಸೂಚ್ಯಂಕವು ಶೇ 5ರಷ್ಟು ಕುಸಿತದೊಂದಿಗೆ ಅತಿ ಹೆಚ್ಚು ನಷ್ಟ ಕುಸಿತ ಕಂಡಿದ್ದರ ಪೈಕಿ ಮೊದಲ ಸ್ಥಾನದಲ್ಲಿದೆ. ಕ್ಯಾಪಿಟಲ್ ಗೂಡ್ಸ್, ಹೆಲ್ತ್‌ಕೇರ್, ಮಾಹಿತಿ ತಂತ್ರಜ್ಞಾನ, ತೈಲ ಮತ್ತು ಅನಿಲ, ವಿದ್ಯುತ್ ಮತ್ತು ರಿಯಾಲ್ಟಿ ಸೂಚ್ಯಂಕಗಳು ಶೇಕಡಾ 1ರಿಂದ 2ರಷ್ಟು ಕುಸಿದಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಶೇ 1.5ರಷ್ಟು ಕುಸಿದಿದ್ದು, ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇ 1ರಷ್ಟು ಕುಸಿದಿದೆ.

ಬಿಎಸ್‌ಇಯಲ್ಲಿ 100ಕ್ಕೂ ಹೆಚ್ಚು ಕಂಪೆನಿಗ: ಷೇರುಗಳು 52 ವಾರದ ಕನಿಷ್ಠ ಮಟ್ಟ ತಲುಪಿವೆ. ಇವುಗಳಲ್ಲಿ ಆಕ್ಸಿಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಯುಪಿಎಲ್, ಸಿಂಫನಿ, ಸ್ಪೈಸ್‌ಜೆಟ್, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ, ಜೆಕೆ ಸಿಮೆಂಟ್ ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಸೇರಿವೆ.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ

ಬಿಪಿಸಿಎಲ್ ಶೇ 1.56

ಹೀರೋ ಮೋಟೋಕಾರ್ಪ್ ಶೇ 1.01

ಟಿಸಿಎಸ್ ಶೇ 0.34

ಪವರ್​ ಗ್ರಿಡ್ ಕಾರ್ಪೊರೇಷನ್ ಶೇ 0.14

ಮಾರುತಿ ಸುಜುಕಿ ಶೇ 0.03

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ

ಹಿಂಡಾಲ್ಕೋ -6.72

ಯುಪಿಎಲ್ ಶೇ -6.20

ಟಾಟಾ ಸ್ಟೀಲ್ ಶೇ -5.28

ಜೆಎಸ್​ಡಬ್ಲ್ಯು ಸ್ಟೀಲ್ ಶೇ -4.48

ವಿಪ್ರೋ ಶೇ -3.27

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಷೇರು ಮಾರುಕಟ್ಟೆ ಬೆಲೆಗಳ ಏರಿಳಿತ ಊಹಿಸುವುದು ಹೇಗೆ ಗೊತ್ತಾ..! ಇಲ್ಲಿದೆ ಮಾಹಿತಿ

Published On - 6:55 pm, Wed, 22 June 22