AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rakesh Jhunjhunwala: ಷೇರುಪೇಟೆ ವಹಿವಾಟಿನ ಆರಂಭದ 15 ನಿಮಿಷದಲ್ಲಿ ಜುಂಜುನ್​ವಾಲಾರ 900 ಕೋಟಿ ರೂಪಾಯಿ ಉಡೀಸ್

ಜೂನ್ 17ನೇ ತಾರೀಕಿನ ಸೋಮವಾರದ ಷೇರುಪೇಟೆಯ ಅರಂಭದ 15 ನಿಮಿಷದ ಸೆಷನ್​ನಲ್ಲಿ ಹೂಡಿಕೆದಾರ ರಾಕೇಶ್​ ಜುಂಜುನ್​ವಾಲಾ ಅವರು 900 ಕೋಟಿ ರೂಪಾಯಿ ನಿವ್ವಳ ಮೌಲ್ಯ ಕಳೆದುಕೊಂಡರು.

Rakesh Jhunjhunwala: ಷೇರುಪೇಟೆ ವಹಿವಾಟಿನ ಆರಂಭದ 15 ನಿಮಿಷದಲ್ಲಿ ಜುಂಜುನ್​ವಾಲಾರ 900 ಕೋಟಿ ರೂಪಾಯಿ ಉಡೀಸ್
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Jun 17, 2022 | 2:13 PM

Share

ಷೇರುಪೇಟೆಯಲ್ಲಿ ಜೂನ್ 17ನೇ ತಾರೀಕಿನ ಶುಕ್ರವಾರ ಬೆಳಗಿನ ವ್ಯವಹಾರದಲ್ಲಿ ಸತತ ಆರನೇ ನೇರ ಸೆಷನ್‌ನಲ್ಲಿ ಮಾರಾಟದ ಟ್ರೆಂಡ್ ವಿಸ್ತರಣೆ ಆಗಿತ್ತು. ಈ ಮಧ್ಯೆ ಮಾರ್ಕೆಟ್​ನ ಬಿಗ್ ಬುಲ್ ರಾಕೇಶ್ ಜುಂಜುನ್‌ವಾಲಾ (Rakesh Jhunjhunwala) ಇಂದಿನ (ಶುಕ್ರವಾರ) ಆರಂಭಿಕ ವಹಿವಾಟಿನ 15 ನಿಮಿಷಗಳಲ್ಲಿ ಸುಮಾರು 900 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಟೈಟಾನ್ ಕಂಪೆನಿ, ಮೆಟ್ರೋ ಬ್ರಾಂಡ್ಸ್ ಮತ್ತು ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಷೂರೆನ್ಸ್ ಕಂಪೆನಿ ಲಿಮಿಟೆಡ್ ನಷ್ಟ ಕಂಡವು.

ಟೈಟಾನ್ ಷೇರು ಬೆಲೆಯಲ್ಲಿ ಕುಸಿತ

ಟೈಟಾನ್ ಕಂಪೆನಿಯ ಷೇರಿನ ಬೆಲೆ ಇಂದು ಕಡಿಮೆ ಮಟ್ಟದಿಂದ ಪ್ರಾರಂಭವಾಯಿತು ಮತ್ತು ಬೆಳಗ್ಗೆ 9.30ರ ಹೊತ್ತಿಗೆ ರೂ. 1997ರ ಹಂತವನ್ನು ತಲುಪಿತು. ಎನ್​ಎಸ್​ಇಯಲ್ಲಿ ಅದರ ಗುರುವಾರದ ಮಟ್ಟ ರೂ. 2060.95ರಿಂದ ಪ್ರತಿ ಷೇರಿಗೆ ರೂ. 63.95 ಕುಸಿತವನ್ನು ದಾಖಲಿಸಿತು.

ಸ್ಟಾರ್ ಹೆಲ್ತ್ ಷೇರು ಬೆಲೆಯಲ್ಲಿ ಇಳಿಕೆ

ಸ್ಟಾರ್ ಹೆಲ್ತ್ ಷೇರಿನ ಬೆಲೆ ಇಂದು ಕುಸಿತದಿಂದಲೇ ಪ್ರಾರಂಭವಾಯಿತು ಮತ್ತು ಬೆಳಗ್ಗೆ 9.30ರ ಹೊತ್ತಿಗೆ ರೂ. 609.05ಕ್ಕೆ ತಲುಪಿತು. ಗುರುವಾರದಂದು ಈ ಸ್ಟಾಕ್ ರೂ. 664.15 ಮಟ್ಟದಲ್ಲಿ ಮುಕ್ತಾಯಗೊಂಡಿದ್ದರಿಂದ ಇಂದು ಷೇರು ಮಾರುಕಟ್ಟೆ ಪ್ರಾರಂಭವಾದ 15 ನಿಮಿಷಗಳಲ್ಲಿ ರೂ. 55.10 ಕುಸಿತ ಕಂಡಿದೆ.

ಮೆಟ್ರೋ ಬ್ರಾಂಡ್‌ಗಳ ಷೇರು ಬೆಲೆಯಲ್ಲಿ ನಷ್ಟ

ರಾಕೇಶ್ ಜುಂಜುನ್‌ವಾಲಾರ ಇತರ ಎರಡು ಸ್ಟಾಕ್‌ಗಳಂತೆ ಇಂದು ಮೆಟ್ರೋ ಬ್ರಾಂಡ್‌ಗಳ ಷೇರು ಕಡಿಮೆ ಅಂತರದೊಂದಿಗೆ ಪ್ರಾರಂಭವಾಯಿತು ಮತ್ತು ಬೆಳಗ್ಗೆ 9.30 ರ ಹೊತ್ತಿಗೆ ರೂ. 535.35 ಕ್ಕೆ ತಲುಪಿತು. ಆರಂಭಿಕ ಗಂಟೆಯ 15 ನಿಮಿಷಗಳಲ್ಲಿ ಪ್ರತಿ ಷೇರಿಗೆ ರೂ. 14.30 ಇಳಿಕೆ ಆಯಿತು.

ರಾಕೇಶ್ ಜುಂಜುನ್​ವಾಲಾ ನಿವ್ವಳ ಮೌಲ್ಯದಲ್ಲಿ ಕುಸಿತ

2022ರ ಹಣಕಾಸು ವರ್ಷ ನಾಲ್ಕನೇ ತ್ರೈಮಾಸಿಕದಲ್ಲಿ ಟೈಟಾನ್ ಕಂಪೆನಿಯ ಷೇರುದಾರರ ಮಾದರಿ ಪ್ರಕಾರ, ರಾಕೇಶ್ ಜುಂಜುನ್‌ವಾಲಾ 3,53,10,395 ಕಂಪೆನಿ ಷೇರುಗಳನ್ನು ಹೊಂದಿದ್ದಾರೆ ಮತ್ತು ಅವರ ಪತ್ನಿ ರೇಖಾ ಜುಂಜುನ್‌ವಾಲಾ 95,40,575 ಟೈಟಾನ್ ಷೇರುಗಳನ್ನು ಹೊಂದಿದ್ದಾರೆ. ಆದ್ದರಿಂದ ಜುಂಜುನ್​ವಾಲಾ ದಂಪತಿ ಒಟ್ಟಾಗಿ 4,48,50,970 ಟೈಟಾನ್ ಷೇರುಗಳನ್ನು ಹೊಂದಿದ್ದಾರೆ. ಇಂದು ಸ್ಟಾಕ್ ಮಾರುಕಟ್ಟೆ ಪ್ರಾರಂಭವಾದ 15 ನಿಮಿಷಗಳಲ್ಲಿ ಟೈಟಾನ್ ಷೇರಿನ ಬೆಲೆ 63.95 ಕುಸಿದಿದ್ದು, ಈ ಟಾಟಾ ಸ್ಟಾಕ್‌ನಲ್ಲಿನ ಕುಸಿತದಿಂದಾಗಿ ಜುಂಜುನ್‌ವಾಲಾ ಅವರ ನಿವ್ವಳ ಮೌಲ್ಯವು ಸುಮಾರು ರೂ. 287 ಕೋಟಿ (ರೂ. 63.95 x 4,48,50,970) ಕಡಿಮೆ ಆಯಿತು.

ಅದೇ ರೀತಿ ರಾಕೇಶ್ ಜುಂಜುನ್‌ವಾಲಾ ಅವರು 10,07,53,935 ಸ್ಟಾರ್ ಹೆಲ್ತ್ ಷೇರುಗಳನ್ನು ಹೊಂದಿದ್ದಾರೆ. ಅದು ಇಂದು ಷೇರು ಮಾರುಕಟ್ಟೆ ಪ್ರಾರಂಭವಾದ 15 ನಿಮಿಷಗಳಲ್ಲಿ ಪ್ರತಿ ಷೇರಿಗೆ ರೂ. 55.10 ಕುಸಿದಿದೆ. ಆದ್ದರಿಂದ ರಾಕೇಶ್ ಜುಂಜುನ್‌ವಾಲಾ ಪೋರ್ಟ್‌ಫೋಲಿಯೊದ ಈ ಸ್ಟಾಕ್‌ನಲ್ಲಿನ ಕುಸಿತದಿಂದಾಗಿ ನಿವ್ವಳ ಮೌಲ್ಯವು ಸುಮಾರು ರೂ. 555 ಕೋಟಿ (₹55.10 x 10,07,53,935) ಕುಸಿದಿದೆ.

ರಾಕೇಶ್ ಜುಂಜುನ್‌ವಾಲಾ ಅವರು ತಮ್ಮ ಹೆಂಡತಿ ರೇಖಾ ಜುಂಜುನ್‌ವಾಲಾ ಮೂಲಕ ಮೆಟ್ರೋ ಬ್ರಾಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಜನವರಿಯಿಂದ ಮಾರ್ಚ್ 2022ರ ತ್ರೈಮಾಸಿಕಕ್ಕೆ ಮೆಟ್ರೋ ಬ್ರಾಂಡ್‌ಗಳ ಷೇರುದಾರರ ಮಾದರಿಯ ಪ್ರಕಾರ, ರೇಖಾ ಜುಂಜುನ್‌ವಾಲಾ ಕಂಪೆನಿಯ 3,91,53,600 ಷೇರುಗಳನ್ನು ಹೊಂದಿದ್ದಾರೆ. ಅದು ಇಂದು ಮಾರುಕಟ್ಟೆ ಪ್ರಾರಂಭವಾದ 15 ನಿಮಿಷಗಳಲ್ಲಿ ಪ್ರತಿ ಷೇರಿಗೆ ರೂ. 14.30 ಕುಸಿದಿದೆ. ಆದ್ದರಿಂದ ರಾಕೇಶ್ ಜುಂಜುನ್‌ವಾಲಾ ಅವರ ನಿವ್ವಳ ಮೌಲ್ಯವು ರೂ. 56 ಕೋಟಿ (ರೂ. 14.30 x 3,91,53,600) ಕರಗಿತು.

ಹೀಗೆ ಟೈಟಾನ್ ಕಂಪೆನಿ, ಸ್ಟಾರ್ ಹೆಲ್ತ್ ಮತ್ತು ಮೆಟ್ರೋ ಬ್ರಾಂಡ್‌ಗಳ ಷೇರುಗಳನ್ನು ಇಂದಿನ ಮಾರಾಟ ಒತ್ತಡದಲ್ಲಿ ರಾಕೇಶ್ ಜುಂಜುನ್‌ವಾಲಾ ಅವರು ಷೇರು ಮಾರುಕಟ್ಟೆ ಪ್ರಾರಂಭವಾದ 15 ನಿಮಿಷಗಳಲ್ಲಿ ಸುಮಾರು ರೂ. 900 ಕೋಟಿ ಕಳೆದುಕೊಂಡರು.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Rakesh Jhunjhunwala: 70 ಸಾವಿರ ಚದರಡಿ ವ್ಯಾಪ್ತಿಯಲ್ಲಿ ಎದ್ದು ನಿಲ್ಲಲಿದೆ ಬಿಲಿಯನೇರ್​ ರಾಕೇಶ್​ ಜುಂಜುನ್​ವಾಲಾ ಒಡೆತನದ 13 ಅಂತಸ್ತಿನ ಕಟ್ಟಡ

ಗವಿಸಿದ್ದಪ್ಪ ಕೊಲೆಗೆ ಮತ್ತೊಂದು ಟ್ವಿಸ್ಟ್: ಸ್ಫೋಟಕ ಅಂಶ ಬಿಚ್ಚಿಟ್ಟ ತಾಯಿ
ಗವಿಸಿದ್ದಪ್ಪ ಕೊಲೆಗೆ ಮತ್ತೊಂದು ಟ್ವಿಸ್ಟ್: ಸ್ಫೋಟಕ ಅಂಶ ಬಿಚ್ಚಿಟ್ಟ ತಾಯಿ
ಆತ್ಮಹತ್ಯೆಗೆ ಯತ್ನಿಸಿದವನಿಗೆ ಕೊನೆ ಕ್ಷಣದಲ್ಲಿ ಹುಟ್ಟಿತು ಬದುಕಬೇಕೆಂಬ ಆಸೆ
ಆತ್ಮಹತ್ಯೆಗೆ ಯತ್ನಿಸಿದವನಿಗೆ ಕೊನೆ ಕ್ಷಣದಲ್ಲಿ ಹುಟ್ಟಿತು ಬದುಕಬೇಕೆಂಬ ಆಸೆ
ಪ್ರವಾಹದಲ್ಲಿ ಸಿಲುಕಿದ್ದ ಶಾಲಾ ಮಕ್ಕಳನ್ನು ಕಾಪಾಡಿದ ಮುಂಬೈ ಪೊಲೀಸರು
ಪ್ರವಾಹದಲ್ಲಿ ಸಿಲುಕಿದ್ದ ಶಾಲಾ ಮಕ್ಕಳನ್ನು ಕಾಪಾಡಿದ ಮುಂಬೈ ಪೊಲೀಸರು
ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ
ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ
ಧರ್ಮಸ್ಥಳ ಪ್ರಕರಣ ತನಿಖೆಯಲ್ಲಿ ಏನೇನಾಯ್ತು? ಗೃಹ ಸಚಿವ ಕೊಟ್ಟ ಮಾಹಿತಿ
ಧರ್ಮಸ್ಥಳ ಪ್ರಕರಣ ತನಿಖೆಯಲ್ಲಿ ಏನೇನಾಯ್ತು? ಗೃಹ ಸಚಿವ ಕೊಟ್ಟ ಮಾಹಿತಿ
ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?
ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?
ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು
ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು
ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಎಲ್ಲರಿಗೂ ಇದೆ ಮಾರಿ ಹಬ್ಬ
ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಎಲ್ಲರಿಗೂ ಇದೆ ಮಾರಿ ಹಬ್ಬ
ದಾರಿಯುಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮುಖ ಕಚ್ಚಿದ ಬೀದಿ ನಾಯಿ
ದಾರಿಯುಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮುಖ ಕಚ್ಚಿದ ಬೀದಿ ನಾಯಿ