Interest On Savings Account: ಉಳಿತಾಯ ಖಾತೆಯಲ್ಲಿನ ಮೊತ್ತಕ್ಕೇ ಶೇ 6.75ರ ತನಕ ಬಡ್ಡಿ ದರ ನೀಡುವ ಬ್ಯಾಂಕ್ಗಳಿವು
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ರೆಪೋ ದರದ ಏರಿಕೆ ಮಾಡಿದ ನಂತರ ಈ ಬ್ಯಾಂಕ್‌ಗಳು ಉಳಿತಾಯ ಖಾತೆಗಳ ಮೇಲೆ ಶೇ 6.75ರ ತನಕ ಬಡ್ಡಿ ದರವನ್ನು ನೀಡುತ್ತಿವೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಎರಡು ಬಾರಿ ಸತತವಾಗಿ ರೆಪೋ ದರ ಏರಿಕೆ ಮಾಡಿದ ನಂತರ, ಅಂದರೆ ಮೇ ಮತ್ತು ಜೂನ್‌ನಲ್ಲಿ ಒಟ್ಟು 90 ಬೇಸಿಸ್ ಪಾಯಿಂಟ್ಗಳಿಂದ ಮೇಲೇರಿ ಶೇ 4.9ಕ್ಕೆ ತಲುಪಿದೆ (100 ಬೇಸಿಸ್ ಪಾಯಿಂಟ್ಸ್ = ಶೇ 1ರಷ್ಟು). ಇದೀಗ ಆಕ್ಸಿಸ್ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್ ಸೇರಿ ಹಲವಾರು ಖಾಸಗಿ ಬ್ಯಾಂಕ್‌ಗಳು ಮತ್ತು ಇತರರು ಉಳಿತಾಯ ಖಾತೆಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿವೆ. ಸಣ್ಣ ಮತ್ತು ಹೊಸ ಖಾಸಗಿ ಬ್ಯಾಂಕ್‌ಗಳು ಉಳಿತಾಯ ಖಾತೆಯಲ್ಲಿನ ಮೊತ್ತಕ್ಕೆ ಶೇಕಡಾ 6.75ರ ವರೆಗಿನ ದರಗಳನ್ನು ನೀಡುತ್ತವೆ, ಇದು ಪ್ರಮುಖ ಖಾಸಗಿ ಬ್ಯಾಂಕ್‌ಗಳಿಗೆ ಹೋಲಿಸಿದರೆ ಬಹಳ ಹೆಚ್ಚು. ಅನಿಶ್ಚಿತ ಸಮಯದಲ್ಲಿ ಲಿಕ್ವಿಡಿಟಿ ಮತ್ತು ತುರ್ತು ಪರಿಸ್ಥಿತಿಗಳಿಗಾಗಿ ಉಳಿತಾಯ ಖಾತೆಗಳಲ್ಲಿ ನಿಮ್ಮ ಹೆಚ್ಚುವರಿ ಆದಾಯದ ಭಾಗವನ್ನು ಇರಿಸಿಕೊಳ್ಳಲು ಅಭ್ಯಾಸ ಮಾಡಿ. ಉಳಿತಾಯ ಖಾತೆಗಳ ಮೇಲೆ ಉತ್ತಮ ಬಡ್ಡಿ ದರಗಳನ್ನು ನೀಡುವ ಖಾಸಗಿ ಬ್ಯಾಂಕ್‌ಗಳು ಇಲ್ಲಿವೆ. ಅಂದ ಹಾಗೆ ಈ ಡೇಟಾವನ್ನು ಬ್ಯಾಂಕ್‌ಬಜಾರ್ ಸಂಗ್ರಹಿಸಿದೆ.
- ಡಿಸಿಬಿ ಬ್ಯಾಂಕ್ ಉಳಿತಾಯ ಖಾತೆಗಳ ಮೇಲೆ ಶೇಕಡಾ 6.75ರ ವರೆಗಿನ ಬಡ್ಡಿದರಗಳನ್ನು ನೀಡುತ್ತದೆ. ಖಾಸಗಿ ಬ್ಯಾಂಕ್ಗಳಲ್ಲಿ ಈ ಬ್ಯಾಂಕ್ ಅತ್ಯುತ್ತಮ ಬಡ್ಡಿ ದರಗಳನ್ನು ನೀಡುತ್ತದೆ. ಕನಿಷ್ಠ ಬ್ಯಾಲೆನ್ಸ್ 2,500 ರಿಂದ 5,000 ರೂ.
- ಆರ್ಬಿಎಲ್ ಬ್ಯಾಂಕ್ ಉಳಿತಾಯ ಖಾತೆಗಳ ಮೇಲೆ ಶೇಕಡಾ 6ರ ವರೆಗೆ ಬಡ್ಡಿದರಗಳನ್ನು ನೀಡುತ್ತಿದೆ. ಸರಾಸರಿ ಮಾಸಿಕ ಬಾಕಿ 2,500 ರಿಂದ 5,000 ರೂ.
- ಐಡಿಎಫ್ಸಿ ಫಸ್ಟ್ ಬ್ಯಾಂಕ್ ಉಳಿತಾಯ ಖಾತೆಗಳ ಮೇಲೆ ಶೇ 6ರ ವರೆಗೆ ಬಡ್ಡಿದರಗಳನ್ನು ನೀಡುತ್ತಿದೆ. ಸರಾಸರಿ ಮಾಸಿಕ ಬಾಕಿ 10,000 ರೂ.
- ಬಂಧನ್ ಬ್ಯಾಂಕ್ ಉಳಿತಾಯ ಖಾತೆಗಳ ಮೇಲೆ ಶೇಕಡಾ 6ರ ವರೆಗೆ ಬಡ್ಡಿದರವನ್ನು ನೀಡುತ್ತಿದೆ. ಮಾಸಿಕ ಸರಾಸರಿ ಬಾಕಿ 5,000 ರೂ.
- ಯೆಸ್ ಬ್ಯಾಂಕ್ ಉಳಿತಾಯ ಖಾತೆಗಳ ಮೇಲೆ ಶೇಕಡಾ 5ರಷ್ಟು ಬಡ್ಡಿದರಗಳನ್ನು ನೀಡುತ್ತಿದೆ. ಸರಾಸರಿ ಮಾಸಿಕ ಬಾಕಿ 25,000 ರೂ.
- ಹೊಸ ರೀಟೇಲ್ ಗ್ರಾಹಕರನ್ನು ಸೆಳೆಯಲು ಪ್ರಮುಖ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಹೋಲಿಸಿದರೆ ಸಣ್ಣ ಮತ್ತು ಹೊಸ ಖಾಸಗಿ ಬ್ಯಾಂಕ್‌ಗಳು ಉಳಿತಾಯ ಖಾತೆಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿವೆ. ನೀವು ದೀರ್ಘಾವಧಿಯ ದಾಖಲೆ, ಉತ್ತಮ ಸೇವಾ ಮಾನದಂಡಗಳು, ವಿಶಾಲವಾದ ಶಾಖೆ ನೆಟ್‌ವರ್ಕ್ ಮತ್ತು ನಗರಗಳಾದ್ಯಂತ ಎಟಿಎಂ ಸೇವೆಗಳನ್ನು ಹೊಂದಿರುವ ಬ್ಯಾಂಕ್ ಅನ್ನು ಆಯ್ಕೆ ಮಾಡಬೇಕು. ಇವೆಲ್ಲ ಇವೆ ಎಂದಾದರೆ ಉಳಿತಾಯ ಖಾತೆಗಳ ಮೇಲಿನ ಹೆಚ್ಚಿನ ಬಡ್ಡಿಯು ಬೋನಸ್ ಆಗಿರುತ್ತದೆ.
- ಎಲ್ಲ ಬಿಎಸ್ಇ-ಲಿಸ್ಟೆಡ್ ಖಾಸಗಿ ಬ್ಯಾಂಕ್‌ಗಳನ್ನು ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರವನ್ನು ಡೇಟಾ ಒಗ್ಗೂಡಿಸಲು ಪರಿಗಣಿಸಲಾಗಿದೆ. ಬ್ಯಾಂಕ್‌ಬಜಾರ್ ಜೂನ್ 15, 2022ರಂತೆ ಡೇಟಾವನ್ನು ಸಂಗ್ರಹಿಸಿದೆ. ವೆಬ್‌ಸೈಟ್‌ಗಳು ಡೇಟಾವನ್ನು ಜಾಹೀರಾತು ಮಾಡದ ಬ್ಯಾಂಕ್‌ಗಳನ್ನು ಪರಿಗಣಿಸುವುದಿಲ್ಲ. ನಿಯಮಿತ ಉಳಿತಾಯ ಖಾತೆ ಮತ್ತು ಮೂಲ ಉಳಿತಾಯ ಬ್ಯಾಂಕ್ ಠೇವಣಿ (BSBD) ಖಾತೆಯನ್ನು ಹೊರತುಪಡಿಸಿ ಕನಿಷ್ಠ ಬ್ಯಾಲೆನ್ಸ್ ಅಗತ್ಯವನ್ನು ಪರಿಗಣಿಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: RBI: ರೆಪೋ ರೇಟ್ ಶೇ. 4.90ಕ್ಕೆ ಹೆಚ್ಚಿಸಿದ ಆರ್ಬಿಐ; ಬ್ಯಾಂಕ್ ಸಾಲದ ಬಡ್ಡಿ ದರವೂ ಏರಿಕೆ