SBI Home Loan EMI: ರೆಪೋ ದರ ಹೆಚ್ಚಾದ ಮೇಲೆ ಎಸ್ಬಿಐ ಹೋಮ್ ಲೋನ್ ಇಎಂಐ ಎಷ್ಟು ಜಾಸ್ತಿ? ಇಲ್ಲಿದೆ ಲೆಕ್ಕ
ಆರ್ಬಿಐನಿಂದ ರೆಪೋ ದರ ಏರಿಕೆ ಆದ ಮೇಲೆ ಎಸ್ಬಿಐ ಹೋಮ್ ಲೋನ್ ಬಡ್ಡಿ ದರ ಹೆಚ್ಚಳ ಮಾಡಲಾಗಿದೆ. ಇನ್ನು ಮುಂದೆ ಇಎಂಐ ಎಷ್ಡು ಹೆಚ್ಚಾಗಲಿದೆ ಎಂಬ ಲೆಕ್ಕಾಚಾರ ಇಲ್ಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಳೆದ ವಾರ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿದ್ದು, ಶೇಕಡಾ 4.90ಕ್ಕೆ ಹೆಚ್ಚಿಸಿದ ನಂತರ ಅನೇಕ ಬ್ಯಾಂಕ್ಗಳು ತಮ್ಮ ಸಾಲ ಮತ್ತು ಠೇವಣಿ ದರಗಳನ್ನು ಹೆಚ್ಚಿಸಿವೆ. ಅದಕ್ಕೆ ಇತ್ತೀಚಿನ ಸೇರ್ಪಡೆ ಅಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ಗೃಹ ಸಾಲದ ಕನಿಷ್ಠ ಬಡ್ಡಿ ದರವನ್ನು ಬ್ಯಾಂಕ್ ಶೇ 7.55ಕ್ಕೆ ಹೆಚ್ಚಿಸಿದೆ. ಇತ್ತೀಚಿನ ಹೆಚ್ಚಳ ಅಂದರೆ ಸಾಮಾನ್ಯ ಗೃಹ ಸಾಲ ಯೋಜನೆಯಡಿ 800ಕ್ಕಿಂತ ಹೆಚ್ಚು ಕ್ರೆಡಿಟ್ ಸ್ಕೋರ್ ಹೊಂದಿರುವ ಸಾಲಗಾರರರಿಗೆ ಕನಿಷ್ಠ ದರವು ಈಗ ಶೇ 7.55 ಆಗಿದೆ. ಬ್ಯಾಂಕ್ನ ವೆಬ್‌ಸೈಟ್‌ನ ಪ್ರಕಾರ, ಎಕ್ಸ್ಟರ್ನಲ್ ಬೆಂಚ್‌ಮಾರ್ಕ್ ಲೆಂಡಿಂಗ್ ರೇಟ್ ದರವನ್ನು (EBLR) ಕನಿಷ್ಠ ಶೇ 7.55ಕ್ಕೆ ಹೆಚ್ಚಿಸಿದೆ. ಈ ಹಿಂದೆ ಇದ್ದ ಶೇ 7.05ರಿಂ ಹೆಚ್ಚಾಗಿದೆ. ಆದರೆ ಕ್ರೆಡಿಟ್ ಸ್ಕೋರ್ ಅನ್ನು ಅವಲಂಬಿಸಿ ಅಪಾಯದ ಪ್ರೀಮಿಯಂ ಅನ್ನು ಸೇರಿಸಲಾಗುತ್ತದೆ.
ಜೂನ್ 15, 2022ರಿಂದ ಜಾರಿಗೆ ಬರುವಂತೆ ಎಸ್ಬಿಐ ಮಾರ್ಜಿನಲ್ ಕ್ರೆಡಿಟ್ ಲೆಂಡಿಂಗ್ ರೇಟ್ (MCLR) ಕನಿಷ್ಠ ವೆಚ್ಚವನ್ನು ಶೇ 0.20ವರೆಗೆ ಪರಿಷ್ಕರಿಸಿದೆ. ಬೆಂಚ್‌ಮಾರ್ಕ್ ಒಂದು ವರ್ಷದ ಎಂಸಿಎಲ್‌ಆರ್ ದರವನ್ನು ಈ ಹಿಂದೆ ಶೇಕಡಾ 7.20ರಿಂದ ಶೇಕಡಾ 7.40ಗೆ ಏರಿಸಲಾಗಿದೆ. ವಾಹನ, ಗೃಹ ಮತ್ತು ವೈಯಕ್ತಿಕ ಸಾಲಗಳು ಸೇರಿದಂತೆ ಹೆಚ್ಚಿನ ಗ್ರಾಹಕ ಸಾಲಗಳು MCLRಗೆ ಸಂಬಂಧಿಸಿವೆ. 800 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವ ಸಾಲಗಾರರು ಸಾಮಾನ್ಯ ಗೃಹ ಸಾಲಗಳ ಮೇಲೆ ಕನಿಷ್ಠ 7.55 ಶೇಕಡಾ ಬಡ್ಡಿದರವನ್ನು ಪಾವತಿಸುತ್ತಾರೆ. ಈ ಸಂದರ್ಭದಲ್ಲಿ ಅಪಾಯದ ಪ್ರೀಮಿಯಂ ಶೂನ್ಯವಾಗಿರುತ್ತದೆ. ಅಪಾಯದ ಪ್ರೀಮಿಯಂ ಅನ್ನು CIBIL ಸ್ಕೋರ್ ನಿರ್ಧರಿಸುತ್ತದೆ; ಕಡಿಮೆ ಕ್ರೆಡಿಟ್ ಸ್ಕೋರ್, ಹೆಚ್ಚಿನ ಅಪಾಯದ ಪ್ರೀಮಿಯಂ ದರಕ್ಕೆ ಕಾರಣ ಆಗುತ್ತದೆ.
750 ರಿಂದ 799ರ ಮಧ್ಯದ ಕ್ರೆಡಿಟ್ ಸ್ಕೋರ್‌ಗೆ ಬಡ್ಡಿ ದರವು ಶೇಕಡಾ 7.65 ಆಗಿರುತ್ತದೆ. ಇಲ್ಲಿ ರಿಸ್ಕ್ ಪ್ರೀಮಿಯಂ 10 ಬೇಸಿಸ್ ಪಾಯಿಂಟ್‌ಗಳಾಗಿರುತ್ತದೆ. ಮಹಿಳಾ ಸಾಲಗಾರರು ಈ ಸಾಲಗಳ ಮೇಲೆ ಶೇ 0.05 ರಿಯಾಯಿತಿಯನ್ನು ಪಡೆಯುತ್ತಾರೆ. ಮರುಹೊಂದಿಸುವ ದಿನಾಂಕ ಬಂದ ನಂತರ, ಸಾಲಗಾರರು ತಮ್ಮ ಸಾಲಗಳ ಮೇಲಿನ ಹೆಚ್ಚಿನ ಬಡ್ಡಿ ದರಗಳನ್ನು ಪಾವತಿಸಲು ಬಾಧ್ಯರಾಗಿರುತ್ತಾರೆ. ಅಂದರೆ, ಹೆಚ್ಚಿನ EMI ಅಥವಾ ಅದರ ವ್ಯಾಪ್ತಿ ಇದ್ದರೆ ಅವರ ಸಾಲದ ಅವಧಿಯನ್ನು ವಿಸ್ತರಿಸಲಾಗುತ್ತದೆ. ನೀವು ಎಸ್ಬಿಐ ಗೃಹ ಸಾಲವನ್ನು ಹೊಂದಿದ್ದರೆ ಇತ್ತೀಚಿನ ಬಡ್ಡಿದರ ಹೆಚ್ಚಳದ ಪರಿಣಾಮವಾಗಿ ನಿಮ್ಮ EMI ಎಷ್ಟು ಹೆಚ್ಚಾಗುತ್ತದೆ ಎಂಬುದನ್ನು ಇಲ್ಲಿ ತೋರಿಸಲಾಗಿದೆ.
ಗೃಹ ಸಾಲ 35 ಲಕ್ಷ ರೂ., 800 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್‌ಗೆ ಶೇ 7.55ರ ಬಡ್ಡಿ ದರದ ಲೆಕ್ಕಾಚಾರ ಇಲ್ಲಿದೆ:
ಸಾಲದ ಮೊತ್ತ: 35 ಲಕ್ಷ ರೂ.
ಅವಧಿ: 20 ವರ್ಷ
ಬಡ್ಡಿ ದರ: ಶೇ 7.05
ಹಳೆಯ ಇಎಂಐ: 27,241
ಹೊಸ ಬಡ್ಡಿದರ: ಶೇ 7.55
ಹೊಸ ಇಎಂಐ: 28,303 ರೂ.
ಇಎಂಐ ಹೆಚ್ಚಳ: 1,062 ರೂಪಾಯಿ
ಒಂದು ವೇಳೆ 70 ಲಕ್ಷ ಸಾಲ ಪಡೆದಿದ್ದಲ್ಲಿ ಸಿಬಿಲ್ ಸ್ಕೋರ್ 800 ಅಥವಾ ಅದಕ್ಕಿಂತ ಹೆಚ್ಚಿದ್ದಲ್ಲಿ ಶೇ 7.55ರ ಹೊಸ ಬಡ್ಡಿ ದರ ಅನ್ವಯ ಆಗುತ್ತದೆ.
ಸಾಲದ ಮೊತ್ತ: 70 ಲಕ್ಷ ರೂ.
ಅವಧಿ: 20 ವರ್ಷ
ಬಡ್ಡಿ ದರ: ಶೇ 7.05
ಹಳೆಯ ಇಎಂಐ: 54,481
ಹೊಸ ಬಡ್ಡಿದರ: ಶೇ 7.55
ಹೊಸ ಇಎಂಐ: 56,606 ರೂ.
ಇಎಂಐ ಹೆಚ್ಚಳ: 2,125 ರೂಪಾಯಿ
ಗೃಹ ಸಾಲ 35 ಲಕ್ಷ ರೂ., 750ರಿಂದ 799 ಕ್ರೆಡಿಟ್ ಸ್ಕೋರ್‌ಗೆ ಶೇ 7.55ರ ಬಡ್ಡಿ ದರದ ಲೆಕ್ಕಾಚಾರ ಇಲ್ಲಿದೆ:
ಸಾಲದ ಮೊತ್ತ: 35 ಲಕ್ಷ ರೂ.
ಅವಧಿ: 20 ವರ್ಷ
ಬಡ್ಡಿ ದರ: ಶೇ 7.15
ಹಳೆಯ ಇಎಂಐ: 27,451
ಹೊಸ ಬಡ್ಡಿದರ: ಶೇ 7.65
ಹೊಸ ಇಎಂಐ: 28,518 ರೂ.
ಇಎಂಐ ಹೆಚ್ಚಳ: 1,067 ರೂಪಾಯಿ
ಗೃಹ ಸಾಲ 70 ಲಕ್ಷ ರೂ., 750ರಿಂದ 799 ಕ್ರೆಡಿಟ್ ಸ್ಕೋರ್‌ಗೆ ಶೇ 7.55ರ ಬಡ್ಡಿ ದರದ ಲೆಕ್ಕಾಚಾರ ಇಲ್ಲಿದೆ:
ಸಾಲದ ಮೊತ್ತ: 70 ಲಕ್ಷ ರೂ.
ಅವಧಿ: 20 ವರ್ಷ
ಬಡ್ಡಿ ದರ: ಶೇ 7.15
ಹಳೆಯ ಇಎಂಐ: 54,903
ಹೊಸ ಬಡ್ಡಿದರ: ಶೇ 7.65
ಹೊಸ ಇಎಂಐ: 57,035 ರೂ.
ಇಎಂಐ ಹೆಚ್ಚಳ: 2,132 ರೂಪಾಯಿ
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Home Loan: ಹೋಮ್ ಲೋನ್ಗೆ ಏರಲಿದೆ ಭಾರೀ ಪ್ರಮಾಣದಲ್ಲಿ ಬಡ್ಡಿದರ; ಇಎಂಐ ಪಾವತಿ ನಿಭಾಯಿಸುವುದಕ್ಕೆ ಇಲ್ಲಿದೆ 7 ದಾರಿ