Rakesh Jhunjunwala: 5000 ರೂ.ನಿಂದ 34 ಸಾವಿರ ಕೋಟಿಯ ಸಾಮ್ರಾಜ್ಯ ಕಟ್ಟಿದ ರಾಕೇಶ್​ ಜುಂಜುನ್​ವಾಲಾಗೆ ಜುಲೈ 5 ಜನ್ಮದಿನ

Happy Birthday Rakesh Jhunjunwala:: ಜುಲೈ 5, 2021ಕ್ಕೆ ರಾಕೇಶ್​ ಜುಂಜುನ್​ವಾಲಾ ಅವರಿಗೆ 61ನೇ ಜನ್ಮ ದಿನಾಚರಣೆ ಸಂಭ್ರಮ. 5000 ರೂಪಾಯಿಯಿಂದ ಆರಂಭಿಸಿ, ಇವತ್ತಿಗೆ 34,000 ಕೋಟಿ ರೂಪಾಯಿಯ ಸಾಮ್ರಾಜ್ಯ ಕಟ್ಟಿದ್ದಾರೆ. ಆ ಯಶೋಗಾಥೆಯ ಸಣ್ಣ ಪರಿಚಯ ಇಲ್ಲಿದೆ.

Rakesh Jhunjunwala: 5000 ರೂ.ನಿಂದ 34 ಸಾವಿರ ಕೋಟಿಯ ಸಾಮ್ರಾಜ್ಯ ಕಟ್ಟಿದ ರಾಕೇಶ್​ ಜುಂಜುನ್​ವಾಲಾಗೆ ಜುಲೈ 5 ಜನ್ಮದಿನ
ರಾಕೇಶ್​ ಜುಂಜುನ್​ವಾಲಾ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on:Jul 04, 2021 | 12:05 PM

ಜುಲೈ 5, 2021ಕ್ಕೆ ರಾಕೇಶ್ ಜುಂಜುನ್​ವಾಲಾಗೆ 61ನೇ ಜನ್ಮದಿನದ ಸಂಭ್ರಮ. ಷೇರು ಮಾರುಕಟ್ಟೆಯ ಪ್ರಸ್ತಾವ ಬಂದಾಗೆಲ್ಲ, “ಭಾರತದ ವಾರೆನ್ ಬಫೆಟ್” ಎಂದು ಇವರನ್ನು ನೆನಪಿಸಿಕೊಳ್ಳಲಾಗುತ್ತದೆ. ರಾಕೇಶ್ ಅವರ ತಂದೆ ತೆರಿಗೆ ಅಧಿಕಾರಿ ಆಗಿದ್ದವರು. ಇನ್ನು ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಲ್ಲೇ ಬೆಳೆದವರು. ಜುಂಜುನ್​ವಾಲಾ ಷೇರು ಮಾರುಕಟ್ಟೆಗೆ ಕಾಲಿರಿಸಿದ್ದು 1985ರಲ್ಲಿ. ಅಂದರೆ 36 ವರ್ಷಗಳ ಹಿಂದೆ, ತಮ್ಮ ಕಾಲೇಜು ದಿನಗಳಲ್ಲಿ. ಆ ಸಮಯಕ್ಕೆ ಬಿಎಸ್​ಇ ಸೆನ್ಸೆಕ್ಸ್ 150 ಪಾಯಿಂಟ್ ಇತ್ತು. ಇವತ್ತಿಗೆ 52 ಸಾವಿರ ಪಾಯಿಂಟ್​ಗೂ ಮೇಲಿದೆ. ಜುಂಜುನ್​ವಾಲಾ 5000 ರೂಪಾಯಿ ಹೂಡಿಕೆಯೊಂದಿಗೆ ಹೂಡಿಕೆ ಶುರು ಮಾಡಿದವರು. ಫೋರ್ಬ್ಸ್ ಪ್ರಕಾರ, ಜುಲೈ 3, 2021ಕ್ಕೆ ಅನ್ವಯ ಆಗುವಂತೆ ರಾಕೇಶ್​ ಜುಂಜುನ್​ವಾಲಾ ಅವರ ನಿವ್ವಳ ಆಸ್ತಿ ಮೌಲ್ಯ 34,387 ಕೋಟಿ ರೂಪಾಯಿ. ಅವರ ಪಾಲಿನ ಅತಿ ದೊಡ್ಡ ಯಶಸ್ಸು ಅಂದರೆ ಅದು ಟಾಟಾ ಟೀ. 1986ನೇ ಇಸವಿಯಲ್ಲೇ 5 ಲಕ್ಷ ರೂಪಾಯಿ ಲಾಭ ಮಾಡಿದ್ದರು. ಟಾಟಾ ಟೀ ಕಂಪೆನಿಯ ಷೇರುಗಳನ್ನು ಒಂದಕ್ಕೆ 43 ರೂಪಾಯಿಯಂತೆ ಖರೀದಿಸಿ, ಮೂರು ತಿಂಗಳಲ್ಲೇ ಒಂದಕ್ಕೆ 143 ರೂಪಾಯಿ ಬಂತು. ಅಂದರೆ ಹಾಕಿದ ಪ್ರತಿ ರೂಪಾಯಿಗೂ ಮೂರು ಪಟ್ಟು ಲಾಭ.

ಇವತ್ತಿಗೆ ರಾಕೇಶ್​ ಜುಂಜುನ್​ವಾಲಾ ಅವರನ್ನು ಬಿಗ್ ಬುಲ್ -ಗೂಳಿ (ಷೇರುಗಳ ಬೆಲೆಯಲ್ಲಿ ಏರಿಕೆ ಆಗುತ್ತದೆ ಎಂಬ ಅಂದಾಜಿನಲ್ಲಿ ಖರೀದಿ ಮಾಡುವವರು) ಎಂದು ಹೂಡಿಕೆದಾರರು ಕರೆಯುತ್ತಾರೆ. ಆದರೆ 1992ರಲ್ಲಿ ಹರ್ಷದ್ ಮೆಹ್ತಾ ಹಗರಣ ಆದ ನಂತರದಲ್ಲಿ ಬೇರೆಯದೇ ರಾಕೇಶ್ ಆಗಿದ್ದರು. ಇದನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಶಾರ್ಟ್​ ಸೆಲ್ಲಿಂಗ್ ಅಂತ ಇದೆ. ಅಂದರೆ, ಯಾವುದೇ ಕಂಪೆನಿಯ ಷೇರು ಬೆಲೆ ಕುಸಿತ ಕಾಣುತ್ತದೆ ಎಂದು ಮುಂಚೆಯೇ ಅಂದಾಜು ಮಾಡಿ, ಅದನ್ನು ಮಾರಾಟ ಮಾಡುವುದು (ಆ ಷೇರುಗಳು ಇಲ್ಲದಿದ್ದಾಗಲೂ). ಮಾರಿದ ಮೇಲೆ ಆ ಷೇರು ಬೆಲೆ ಕಡಿಮೆಯಾದ ನಂತರದಲ್ಲಿ (ಅದಕ್ಕೂ ಇಂತಿಷ್ಟು ಸಮಯ ಅಂತಿದೆ) ಯಾವ ಸಂಖ್ಯೆಯಲ್ಲಿ ಮಾರಲಾಗಿದೆಯೋ ಅಷ್ಟನ್ನು ಖರೀದಿಸುವುದು. ಆಗ ಮಾರಾಟ ಮಾಡಿದ ಸಂಖ್ಯೆಯ ಷೇರುಗಳನ್ನು, ಆ ನಂತರದಲ್ಲಿ ಖರೀದಿಸಿದ ಷೇರುಗಳು ಸರಿತೂಗಿಸುತ್ತವೆ. ಈ ರೀತಿ ವ್ಯವಹಾರ ಮಾಡುವುದನ್ನು ಶಾರ್ಟ್​ ಸೆಲ್ಲಿಂಗ್ ಹಾಗೂ ವ್ಯಕ್ತಿಗಳನ್ನು ಬೇರ್ (ಕರಡಿ) ಎನ್ನಲಾಗುತ್ತದೆ.

ಒಂದು ಸಂದರ್ಶನದಲ್ಲಿ ಸ್ವತಃ ರಾಕೇಶ್ ಇದನ್ನು ಒಪ್ಪಿಕೊಂಡಿದ್ದು, ಶಾರ್ಟ್​ ಸೆಲ್ಲಿಂಗ್​ನಲ್ಲಿ ಬಹಳ ಹಣ ಮಾಡಿದ್ದೆ ಎಂದಿದ್ದಾರೆ. ಆಗ ಬೇರ್​ಗಳ ಗುಂಪುಗಳು ಇದ್ದವು. 1990ರ ದಶಕದಲ್ಲಿ ಬೇರು ಬಿಟ್ಟಂಥ ಗುಂಪುಗಳು ಅವು. ಅಂತದ್ದೊಂದು ಗುಂಪನ್ನು ಮನು ಮಾಣೆಕ್ ಮುನ್ನಡೆಸುತ್ತಿದ್ದರು. ಆತನನ್ನು ಬ್ಲ್ಯಾಕ್ ಕೋಬ್ರಾ ಎನ್ನಲಾಗುತ್ತಿತ್ತು. ಅದರಲ್ಲಿ ರಾಧಾ ಕಿಶನ್ ದಮಾನಿ, ರಾಕೇಶ್​ ಜುಂಜುನ್​ವಾಲಾ ಮತ್ತಿತರರು ಇದ್ದರು. ಪತ್ರಕರ್ತೆ ಸುಚೇತಾ ದಲಾಲ್ ಅವರು ಹರ್ಷದ್ ಮೆಹ್ತಾ ಹಗರಣವನ್ನು 1992ರಲ್ಲಿ ಬಯಲಿಗೆ ಎಳೆದ ಮೇಲೆ ಷೇರು ಮಾರಕೆಟ್ ಮಹಾ ಪತನ ಕಂಡಿತು. ಆ ಸಂದರ್ಭದಲ್ಲಿ ಶಾರ್ಟ್​ ಸೆಲ್ಲಿಂಗ್​ ಮೂಲಕ ಹಣ ಮಾಡಿಕೊಂಡ ಬಗ್ಗೆ ರಾಕೇಶ್ ಹೇಳಿಕೊಂಡಿದ್ದಾರೆ.

ಅದು RARE ಎಂಟರ್​ಪ್ರೈಸಸ್: Ra- ರಾಕೇಶ್, Re- ರೇಖಾ 1987ರಲ್ಲಿ ರಾಕೇಶ್ ರಾಧೇಶ್ಯಾಮ್ ಜುಂಜುನ್​ವಾಲಾ ಅವರು ಅಂಧೇರಿಯ ರೇಖಾರನ್ನು ಮದುವೆಯಾದರು. ಆಕೆ ಕೂಡ ಷೇರು ಮಾರ್ಕೆಟ್ ಹೂಡಿಕೆದಾರರು. 2003ರಲ್ಲಿ ತಮ್ಮದೇ ಸ್ವಂತ ಸ್ಟಾಕ್ ಟ್ರೇಡಿಂಗ್ ಸಂಸ್ಥೆ ರೇರ್ ಎಂಟರ್​ಪ್ರೈಸಸ್ ಆರಂಭಿಸಿದರು. ತಮ್ಮ ಹೆಸರಿನ ಆರಂಭದಲ್ಲಿನ ಇಂಗ್ಲಿಷ್​ನ ಎರಡಕ್ಷರ (Ra) ಹಾಗೂ ಪತ್ನಿ ಹೆಸರಿಂದ ಆರಂಭದಲ್ಲಿ ಬರುವ ಇಂಗ್ಲಿಷ್​ನ ಎರಡಕ್ಷರ (Re) ಸೇರಿಸಿ, ಈ ಸಂಸ್ಥೆಗೆ Rare ಎಂಟರ್​ಪ್ರೈಸಸ್ ಎಂದಿಡಲಾಗಿದೆ.

ರಾಕೇಶ್​ ಜುಂಜುನ್​ವಾಲಾ ಬಳಿ ಇರುವ 37 ಸ್ಟಾಕ್​ಗಳ ಮೌಲ್ಯ ಹತ್ತಿರ ಹತ್ತಿರ ರೂ. 20,000 ಕೋಟಿ ಸಾರ್ವಜನಿಕವಾಗಿ ತಿಳಿಸಿರುವಂತೆ, ಈ ವರ್ಷದ ಮಾರ್ಚ್​ ಕೊನೆ ಹೊತ್ತಿಗೆ ​ ರಾಕೇಶ್​ ಜುಂಜುನ್​ವಾಲಾ ಮತ್ತು ಅಸೋಸಿಯೇಟ್ಸ್ ಬಳಿ 37 ಸ್ಟಾಕ್ಸ್​ಗಳಿವೆ. ಟೈಟಾನ್​ ಕಂಪೆನಿ, ಟಾಟಾ ಮೋಟಾರ್ಸ್, ಕ್ರಿಸಿಲ್, ಲುಪಿನ್, ಫೋರ್ಟೀಸ್ ಹೆಲ್ತ್​ಕೇರ್, ನಜಾರ ಟೆಕ್ನಾಲಜೀಸ್, ಫೆಡರಲ್ ಬ್ಯಾಂಕ್, ಡೆಲ್ಟಾ ಕಾರ್ಪ್, ಡಿಬಿ ರಿಯಾಲ್ಟಿ ಮತ್ತು ಟಾಟಾ ಕಮ್ಯುನಿಕೇಷನ್ಸ್ ಕಂಪೆನಿಯ ಷೇರುಗಳು ಇದರಲ್ಲಿ ಒಳಗೊಂಡಿವೆ. ಇವುಗಳದೇ ಒಟ್ಟು ಮೌಲ್ಯ ರೂ. 19,695.3 ಕೋಟಿ ಇದೆ. ಇನ್ನು ಜುಂಜುನ್​ವಾಲಾ ಬಳಿ ಇರುವ ಸ್ಟಾಕ್​ಗಳ ಪೈಕಿ ಅತಿ ಹೆಚ್ಚಿನ ಮೌಲ್ಯದ್ದು ಟೈಟಾನ್​ ಕಂಪೆನಿ. 7,879 ಕೋಟಿ ಮೌಲ್ಯದ ಟೈಟಾನ್ ಕಂಪೆನಿಯ ಷೇರುಗಳು ಅವರ ಬಳಿ ಇವೆ. ನಂತರದಲ್ಲಿ ಟಾಟಾ ಮೋಟಾರ್ಸ್ 1474.4 ಕೋಟಿ ರೂ., ಆ ನಂತರ ಕ್ರಿಸಿಲ್ 1,063.2 ಕೋಟಿ ರೂಪಾಯಿಯಷ್ಟು ಷೇರುಗಳಿವೆ.

ಬ್ಯಾಂಕಿಂಗ್​ ವಲಯದ ಬಗ್ಗೆ ಈಗ ಜುಂಜುನ್​ವಾಲಾ ದೃಷ್ಟಿ ಬ್ಯಾಂಕಿಂಗ್ ವಲಯದ ಬಗ್ಗೆ ರಾಕೇಶ್​ ಜುಂಜುನ್​ವಾಲಾ ಅತೀವ ಭರವಸೆ ಇರಿಸಿದ್ದಾರೆ. ಯಾವುದು ಅಸಮಸರ್ಥ ಬ್ಯಾಂಕ್​ಗಳು ಎನಿಸಿಕೊಂಡಿವೆಯೋ ಅವುಗಳ ಆದಾಯ ಮತ್ತು ವೆಚ್ಚದ ಪ್ರಮಾಣ ತುಂಬ ಜಾಸ್ತಿ ಇದೆ. ಅದು ದೊಡ್ಡ ಪ್ರಮಾಣದಲ್ಲಿ ಕಡಿಮೆ ಆಗಲಿದೆ. ಮತ್ತು ಈ ವರ್ಷ ಭಾರತದ ಜಿಡಿಪಿ ಶೇ 14ರಿಂದ ಶೇ 15ರಷ್ಟು ಏರಿಕೆ ಆಗಲಿದೆ ಎಂಬ ನಿರೀಕ್ಷೆ ರಾಕೇಶ್ ಅವರದು. ಇನ್ನು ಮುಂಬರುವ ವರ್ಷಗಳಲ್ಲಿ ನಾಮಿನಲ್ ಜಿಡಿಪಿ ಶೇ 10ರಿಂದ 12 ಆಗಬಹುದು ಎಂದಿದ್ದಾರೆ. ಇದಕ್ಕೆ ಅವರು ನೀಡುವ ಕಾರಣ ಏನೆಂದರೆ, ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಆಗಿರುವ ರಚನಾತ್ಮಕ ಬದಲಾವಣೆಗಳು. ಇನ್ನು ಕೊವಿಡ್​-19 ಬಿಕ್ಕಟ್ಟಿನ ಮಧ್ಯೆಯೂ ಡಿಜಿಟೈಸೇಷನ್ ಕಾರಣಕ್ಕೆ ವರ್ಕ್​ ಫ್ರಮ್ ಹೋಮ್ ಸಾಧ್ಯವಾಗಿದೆ ಎಂದಿದ್ದಾರೆ.

“ಅಲೆ ಅಥವಾ ಅಲೆ ಇಲ್ಲದಿರಲಿ, ಭಾರತೀಯ ಆರ್ಥಿಕತೆಯು ಇಂಥ ಬಿಕ್ಕಟ್ಟು ಎದುರಿಸಲು ಸಿದ್ಧವಾಗಿದೆ,” ಎಂದಿದ್ದಾರೆ ರಾಕೇಶ್. ಬಹಳ ಎಚ್ಚರಿಕೆಯಿಂದ ಇರಿ ಎಂಬುದು ಹೂಡಿಕೆದಾರರಿಗೆ ರಾಕೇಶ್​ ನೀಡುವ ಎಚ್ಚರಿಕೆ. ಕೊರೊನಾ ಮೂರನೇ ಅಲೆಗೂ ಸೇರಿಸಿಯೇ ಷೇರು ಮಾರುಕಟ್ಟೆ ರಿಯಾಯಿತಿಯಲ್ಲಿ ವಹಿವಾಟು ನಡೆಸುತ್ತಿದೆ ಎನ್ನುತ್ತಾರೆ.

ಇದನ್ನೂ ಓದಿ: Stock news: ಈ ಷೇರು ನವೆಂಬರ್​ನಲ್ಲಿ 18 ರೂಪಾಯಿ, ಏಪ್ರಿಲ್​ನಲ್ಲಿ 2680 ರೂಪಾಯಿ; ಆರ್ಕಿಡ್ ಫಾರ್ಮಾ ಏನಿದೇನು?

(India’s big bull Rakesh Jhunjhunwala 61st birthday on July 5th 2021. Here is the success story of him, from Rs 5000 investment to 34,000 crore Rupees big empire)

Published On - 12:02 pm, Sun, 4 July 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ