Gold Rate Today: ವೀಕೆಂಡ್ನಲ್ಲಿ ಆಭರಣ ಖರೀದಿಸಲು ಯೋಚಿಸಿದ್ದೀರಾ? ಇಂದಿನ ಚಿನ್ನ, ಬೆಳ್ಳಿ ದರ ವಿವರ ಹೀಗಿದೆ
Gold Silver Price Today: ಕೇವಲ ಮದುವೆ ಸಮಾರಂಭಗಳಿಗೆ ಚಿನ್ನವನ್ನು ತೊಟ್ಟು ಅಲಂಕಾರಗೊಳ್ಳುವುದೊಂದೇ ಅಲ್ಲದೇ ಆಪತ್ಕಾಲದಲ್ಲಿ ಸಹಾಯವಾಗುತ್ತದೆ ಎಂದು ಚಿನ್ನವನ್ನು ಖರೀದಿಸಿಡುತ್ತೇವೆ. ಚಿನ್ನದ ಮೇಲೆ ಹೂಡಿಕೆ ಮಾಡುವ ಪದ್ಧತಿ ಇಂದಿನದಲ್ಲ.
Gold Silver Rate Today| ಬೆಂಗಳೂರು: ಚಿನ್ನದ ದರದಲ್ಲಿ ಏರಿಳಿತ ಕಾಣುವುದು ಸರ್ವೇ ಸಾಮಾನ್ಯ. ಜುಲೈ ತಿಂಗಳದ ಮೊದಲ ದಿನ ದರ ಇಳಿಕೆ ಆಗಿರುವುದು ಗ್ರಾಹಕರಿಗೆ ಖುಷಿ ತಂದಿತ್ತು. ಬಳಿಕ ಕೊಂಚವೇ ಚಿನ್ನಾಭರಣದ ದರ ಏರುತ್ತ ಸಾಗಿದೆ. ನಿನ್ನೆ ಕೂಡಾ ದರ ಹೆಚ್ಚಳವಾಗಿದ್ದು, ಇಂದು ( ಜುಲೈ 4, ಭಾನುವಾರ) ಚಿನ್ನದ ದರ ಕೊಂಚ ಏರಿಕೆ ಆಗಿದೆ. 100 ಗ್ರಾಂ ಚಿನ್ನಕ್ಕೆ ಸುಮಾರು 1,000 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.
ಚಿನ್ನ ಖರೀದಿಸಬೇಕು ಎಂಬ ಆಸೆ ಇರುವುದು ಸಹಜ. ಅದೆಷ್ಟೋ ವರ್ಷಗಳಿಂದ ಚಿನ್ನ ಕೊಳ್ಳಲೆಂದೇ ಹಣವನ್ನು ಕೂಡಿಟ್ಟು ಬಂದಿರುವದೂ ನಿಜ. ಆದರೆ ಕೂಡಿಟ್ಟ ಹಣಕ್ಕೆ ನಾವು ಅಂದುಕೊಂಡ ಚಿನ್ನಾಭರಣವನ್ನು ಕೊಳ್ಳಲು ದರ ಹೊಂದಬೇಕು. ಹಾಗಾಗಿಯೇ ಚಿನ್ನದ ದರ ಪರಿಶೀಲಿಸುವ ಆಸಕ್ತಿಯೂ ಹೆಚ್ಚು. ಮದುವೆ ಸಮಾರಂಭಗಳಿಗೆ ಚಿನ್ನವನ್ನು ಖರೀದಿಸುತ್ತೇವೆ. ಚಿನ್ನಾಭರಣ ತೊಟ್ಟು ಆಚರಣೆಯನ್ನು ಸಂಭ್ರಮಿಸುತ್ತೇವೆ. ಹಾಗಿದ್ದಾಗ ಇಂದು ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟಿದೆ ಎಂಬುದನ್ನು ತಿಳಿಯಿರಿ.
ಕೇವಲ ಮದುವೆ ಸಮಾರಂಭಗಳಿಗೆ ಚಿನ್ನವನ್ನು ತೊಟ್ಟು ಅಲಂಕಾರಗೊಳ್ಳುವುದೊಂದೇ ಅಲ್ಲದೇ ಆಪತ್ಕಾಲದಲ್ಲಿ ಸಹಾಯವಾಗುತ್ತದೆ ಎಂದು ಚಿನ್ನವನ್ನು ಖರೀದಿಸಿಡುತ್ತೇವೆ. ಚಿನ್ನದ ಮೇಲೆ ಹೂಡಿಕೆ ಮಾಡುವ ಪದ್ಧತಿ ಇಂದಿನದಲ್ಲ. ಹಾಗಿರುವಾಗ ಮಾರುಕಟ್ಟೆಯಲ್ಲಿ ಆಭರಣದ ಬೆಲೆ ಎಷ್ಟಿದೆ ಎಂಬ ಕುತೂಹಲ ಕೆರಳುತ್ತದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,300 ರೂಪಾಯಿಗೆ ಏರಿಕೆ ಆಗಿದೆ. 100 ಗ್ರಾಂ ಚಿನ್ನದ ದರ 4,43,000 ರೂಪಾಯಿಗೆ ಏರಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,330 ರೂಪಾಯಿ ಇದೆ. ಹಾಗೆಯೇ 100 ಗ್ರಾಂ ಚಿನ್ನದ ದರ 4,83,300 ರೂಪಾಯಿಗೆ ಏರಿದೆ. ಸರಿಸುಮಾರು 1,100 ರೂಪಾಯಿಯಷ್ಟು ಹೆಚ್ಚಳವಾಗಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,850 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,46,500 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,930 ರೂಪಾಯಿಗೆ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ದರ 4,89,300 ರೂಪಾಯಿಗೆ ಏರಿಕೆ ಆಗಿದೆ. ಸರಿಸುಮಾರು 2,200 ರೂಪಾಯಿ ಏರಿಕೆ ಕಂಡಿದೆ. ಬೆಳ್ಳಿ ದವೂ ಸಹ ಕೊಂಚ ಏರಿಕೆಯಾಗಿದ್ದು ಕೆಜಿ ಬೆಳ್ಳಿಗೆ 74,900 ರೂಪಾಯಿಗೆ ಏರಿಕೆಯಾಗಿದೆ. ಸುಮಾರು 1,000 ರೂಪಾಯಿಯಷ್ಟು ಏರಿಕೆ ಕಂಡಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,450 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ದರ 4,64,500 ರೂಪಾಯಿಗೆ ಏರಿಕೆ ಆಗಿದೆ. ಸುಮಾರು 1,000 ರೂಪಾಯಿಯಷ್ಟು ಏರಿಕೆ ಕಂಡುಬಂದಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,450 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,04,500 ರೂಪಾಯಿ ಏರಿಕೆ ಆಗಿದೆ. ಕೆಜಿ ಬೆಳ್ಳಿ ಬೆಲೆ 69,200 ರೂಪಾಯಿ ನಿಗದಿಯಾಗಿದೆ. ಸುಮಾರು 700 ರೂಪಾಯಿಯಷ್ಟು ಏರಿಕೆ ಕಂಡಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,300 ರೂಪಾಯಿಗೆ ಏರಿಕೆ ಕಂಡಿದೆ. 100 ಗ್ರಾಂ ಚಿನ್ನದ ದರ 4,63,000 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,300 ರೂಪಾಯಿಗೆ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ದರ 4,73,000 ರೂಪಾಯಿಗೆ ಏರಿದೆ. ಬೆಳ್ಳಿ ಬೆಲೆಯೂ ಕೊಂಚ ಏರಿಕೆ ಕಂಡಿದ್ದು ಕೆಜಿ ಬೆಳ್ಳಿಗೆ 69,200 ರೂಪಾಯಿಗೆ ಏರಿಕೆಯಾಗಿದೆ. ಸರಿಸುಮಾರು 700 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಒಟ್ಟಾರೆಯಾಗಿ ಪ್ರಮುಖ ಎಲ್ಲಾ ನಗರಗಳಲ್ಲಿಯೂ ಸಹ ಆಭರಣದ ಬೆಲೆ ಏರಿಕೆ ಕಂಡಿದೆ. ಅಂತೆಯೇ, ಬೆಳ್ಳಿ ಬೆಲೆಯಲ್ಲೂ ಸಹ ಕೊಂಚ ಏರಿಕೆ ಆಗಿದೆ.
ಇದನ್ನೂ ಓದಿ:
Gold Rate Today: ಇಂದು ಚಿನ್ನದ ದರ ಏರಿಕೆ, ಬೆಳ್ಳಿ ಬೆಲೆ ಇಳಿಕೆ; ವಿವಿಧ ನಗರಗಳಲ್ಲಿನ ದರ ವಿವರ ಇಲ್ಲಿದೆ
Published On - 8:41 am, Sun, 4 July 21