ಭಾರತದ ಷೇರು ಮಾರುಕಟ್ಟೆಯಲ್ಲಿನ 8,21,666.77 ಕೋಟಿ ರೂಪಾಯಿ, ಅಂದರೆ 8.22 ಲಕ್ಷ ಕೋಟಿ ರೂಪಾಯಿ ಹೂಡಿಕೆದಾರರ ಹಣ ನವೆಂಬರ್ 22ನೇ ತಾರೀಕಿನ ಸೋಮವಾರದ ಒಂದೇ ದಿನ ಕೊಚ್ಚಿಕೊಂಡು ಹೋಗಿದೆ. ಕಳೆದ ಹಲವು ತಿಂಗಳಲ್ಲೇ ಕಂಡರಿಯದ ಪ್ರಮಾಣದಲ್ಲಿ ಮಾರಾಟದ ಒತ್ತಡ ಬಿದ್ದಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಸೋಮವಾರ ಒಂದು ದಿನ ಕಳೆದುಕೊಂಡ ಈ ಮೊತ್ತವಿದೆಯಲ್ಲಾ, ಕರ್ನಾಟಕ ಬಜೆಟ್ಗಿಂತ (2021- 22ರಲ್ಲಿ 2.46 ಲಕ್ಷ ಕೋಟಿ ರೂಪಾಯಿ) ಮೂರು ಪಟ್ಟಿಗೂ ಅಧಿಕವಾಗುತ್ತದೆ. ಬಿಎಸ್ಇ ಸೆನ್ಸೆಕ್ಸ್ 1,170.12 ಪಾಯಿಂಟ್ಸ್ ಅಥವಾ ಶೇ 1.96ರಷ್ಟು ಕುಸಿದು, 58,465.89 ಪಾಯಿಂಟ್ಸ್ ಮುಟ್ಟಿತು. ಕಳೆದ ಏಳು ತಿಂಗಳ ಅವಧಿಯಲ್ಲಿ ಒಂದೇ ದಿನದಲ್ಲಿ ಷೇರು ಮಾರುಕಟ್ಟೆಯು ಕಂಡ ಅತಿದೊಡ್ಡ ಕುಸಿತ ಇದು. ಮತ್ತು ಸತತ ನಾಲ್ಕನೇ ಸೆಷನ್ ಸೆನ್ಸೆಕ್ಸ್ ಇಳಿಕೆ ದಾಖಲಿಸಿದೆ. ಒಂದು ಹಂತದಲ್ಲಿ ಸೆನ್ಸೆಕ್ಸ್ 1624.09 ಪಾಯಿಂಟ್ಸ್ ನೆಲ ಕಚ್ಚಿತ್ತು. ಬಿಎಸ್ಇ ಲಿಸ್ಟೆಡ್ ಕಂಪೆನಿಗಳು 8,21,666.77 ಕೋಟಿ ರೂಪಾಯಿ ಕಡಿಮೆ ಆಗಿ, 2,60,98,530.22 ಕೋಟಿ ರೂಪಾಯಿ ತಲುಪಿತು.
“ಸ್ಥಿರವಾದ ಜಾಗತಿಕ ಪ್ರಭಾವದ ಮಧ್ಯೆಯೂ ಇಂದಿನ ವಹಿವಾಟಿನ ಅವಧಿಯಲ್ಲಿ ಭಾರತೀಯ ಮಾರುಕಟ್ಟೆಯು ತೀಕ್ಷ್ಣವಾದ ಮಾರಾಟಕ್ಕೆ ಸಾಕ್ಷಿಯಾಗಿದೆ. ಕೃಷಿ ಕಾನೂನು ಮಸೂದೆಗಳನ್ನು ಹಿಂತೆಗೆದುಕೊಳ್ಳುವಾಗ ರಿಲಯನ್ಸ್ ಮಾರುಕಟ್ಟೆಯ ಮೇಲೆ ಒತ್ತಡವನ್ನು ಬೀರಿದೆ ಮತ್ತು ಪೇಟಿಎಂ ಐಪಿಒ ಕಳಪೆ ಪ್ರದರ್ಶನವು ಬಹುನಿರೀಕ್ಷಿತ ಇಳಿಕೆಗೆ ಕೆಲವು ನೆಪಗಳಾಗಿವೆ. ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಮಾರಾಟ ಮಾಡುತ್ತಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ನಿರಂತರವಾಗಿ ಮೌಲ್ಯಮಾಪನಗಳನ್ನು ವಿಸ್ತರಿಸಲಾಗಿದೆ ಎಂದು ಭಾವಿಸುತ್ತಿದ್ದಾರೆ. ಆದರೆ ಇನ್ನೂ ಭಾರತದ ಮೇಲೆ ದೀರ್ಘಾವಧಿಯ ಬುಲಿಶ್ ದೃಷ್ಟಿಕೋನವನ್ನು ಹೊಂದಿದ್ದಾರೆ,” ಎನ್ನುತ್ತಾರೆ ವಿಶ್ಲೇಷಕರು.
ಪೇಟಿಎಂನ ಮಾತೃ ಸಂಸ್ಥೆಯಾದ One97 ಕಮ್ಯುನಿಕೇಷನ್ಸ್, ಬಿಎಸ್ಇನಲ್ಲಿ ಷೇರಿಗೆ ಶೇ 13ರಷ್ಟು ಕುಸಿದು, ರೂ. 1,360.30 ತಲುಪಿತು. “ರಿಲಯನ್ಸ್-ಅರಾಮ್ಕೋ ಒಪ್ಪಂದದ ರದ್ದತಿ, ಕೃಷಿ ಕಾಯ್ದೆಗಳ ಹಿಂಪಡೆಯುವಿಕೆ, ಎಫ್‌ಐಐಗಳ ನಿರಂತರ ಮಾರಾಟ ಮತ್ತು ಪೇಟಿಎಂ ಲಿಸ್ಟಿಂಗ್ನಿಂದ ನಿರಾಶೆಗೀಡಾದ ಮಾರುಕಟ್ಟೆ ಭಾವನೆಗಳು ಮಾರುಕಟ್ಟೆಯಲ್ಲಿ ಮುಕ್ತ ಕುಸಿತಕ್ಕೆ ಕಾರಣವಾಯಿತು,” ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್‌ನ ಲಿಮಿಟೆಡ್ ರಿಟೇಲ್ ರೀಸರ್ಚ್ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕಾ ಹೇಳಿದ್ದಾರೆ.
ಇದನ್ನೂ ಓದಿ: Share Market News: ಷೇರು ಮಾರುಕಟ್ಟೆಯಲ್ಲಿ ‘ಕರಡಿ ಹಿಡಿತ’; 1500ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿದ ಸೆನ್ಸೆಕ್ಸ್