Stock Market: ಮುಂಜಾನೆ ವಹಿವಾಟಿನ ಕುಸಿತದ ನಂತರ ಚೇತರಿಕೆಯತ್ತ ಮುಖ ಮಾಡಿದ ಮಾರುಕಟ್ಟೆ

ಭಾರತೀಯ ರಿಸರ್ವ್​ ಬ್ಯಾಂಕ್ ರೆಪೊ ದರಗಳನ್ನು ಏರಿಸಿದ ನಂತರ ಷೇರುಪೇಟೆಯತ್ತ ಹೂಡಿಕೆದಾರರ ಒಲವು ಹೆಚ್ಚಾಗಿದ್ದು, ಆರಂಭಿಕ ವಹಿವಾಟಿನಲ್ಲಿ ಕುಸಿತಕಂಡಿದ್ದ ಷೇರು ಮಾರುಕಟ್ಟೆ ಇದೀಗ ಚೇತರಿಕೆಯತ್ತ ಮುಖಮಾಡಿದೆ.

Stock Market: ಮುಂಜಾನೆ ವಹಿವಾಟಿನ ಕುಸಿತದ ನಂತರ ಚೇತರಿಕೆಯತ್ತ ಮುಖ ಮಾಡಿದ ಮಾರುಕಟ್ಟೆ
ಮುಂಜಾನೆ ವಹಿವಾಟಿನ ಕುಸಿತದ ನಂತರ ಚೇತರಿಕೆಯತ್ತ ಮುಖ ಮಾಡಿದ ಷೇರು ಮಾರುಕಟ್ಟೆ
Edited By:

Updated on: Sep 30, 2022 | 1:41 PM

ಷೇರು ಮಾರುಕಟ್ಟೆ: ರೆಪೊ ದರ ಏರಿಕೆಯಿಂದ ಹಣದುಬ್ಬರ ತಗ್ಗಬಹುದು ಎಂಬ ನಿರೀಕ್ಷೆಯ ಹಿನ್ನೆಲೆಯಲ್ಲಿ ಷೇರುಪೇಟೆಯತ್ತ ಹೂಡಿಕೆದಾರರ ಒಲವು ಮತ್ತೆ ವ್ಯಕ್ತವಾಗುತ್ತಿದೆ. ಮುಂಜಾನೆ ವಹಿವಾಟಿನ ಕುಸಿತದ ನಂತರ ಇದೀಗ ಷೇರು ಮಾರುಕಟ್ಟೆ (Stock Market) ಚೇತರಿಕೆಯತ್ತ ಮುಖ ಮಾಡಿದೆ. ಪ್ರಸ್ತುತ, ಸೆನ್ಸೆಕ್ಸ್ (Sensex) ದಿನದ ಕುಸಿತದ ಮಟ್ಟದಿಂದ 1200 ಅಂಶಗಳಿಗಿಂತಲೂ ಹೆಚ್ಚು ಏರಿಕೆ ಕಂಡು 57424 ತಲುಪಿದೆ. ಇನ್ನು ‘ನಿಫ್ಟಿ 50’ ಸೂಚ್ಯಂತವು 250 ಅಂಶಗಳಷ್ಟು ಏರಿಕೆ ಕಂಡು 17,050 ಮಟ್ಟ ತಲುಪಿದೆ.

ನಿಫ್ಟಿ ಸ್ಮಾಲ್‌ಕ್ಯಾಪ್ 100 ಮತ್ತು ನಿಫ್ಟಿ ಮಿಡ್‌ಕ್ಯಾಪ್ 100 ಸೂಚ್ಯಂಕಗಳು ತಲಾ ಶೇಕಡಾ 0.9 ರಷ್ಟು ಏರಿಕೆಯಾಗಿದೆ. ಏತನ್ಮಧ್ಯೆ ಇಂಡಿಯಾ VIX ಶೇಕಡಾ 5 ಕ್ಕಿಂತ ಹೆಚ್ಚು ಕುಸಿದಿದೆ. ವಲಯವಾರು, ನಿಫ್ಟಿ ಪಿಎಸ್‌ಯು ಬ್ಯಾಂಕ್ ಮತ್ತು ನಿಫ್ಟಿ ಬ್ಯಾಂಕ್‌ನಂತಹ ದರ-ಸೂಕ್ಷ್ಮ ವಲಯಗಳು ಶೇ.2ಕ್ಕಿಂತ ಹೆಚ್ಚು ಲಾಭ ಗಳಿಸಿದವು. ಅಲ್ಲದೆ, ನಿಫ್ಟಿ ರಿಯಾಲ್ಟಿ ಮತ್ತು ನಿಫ್ಟಿ ಆಟೋ ಸೂಚ್ಯಂಕಗಳು ತಲಾ 1 ಪ್ರತಿಶತದಷ್ಟು ಏರಿದವು.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ