ಟಾಟಾ ಮೋಟಾರ್ಸ್- ಜಮ್ಮು ಅಂಡ್ ಕಾಶ್ಮೀರ್ ಬ್ಯಾಂಕ್ ಪಾಲುದಾರಿಕೆಯಲ್ಲಿ ಆಕರ್ಷಕ ಸಾಲ ಯೋಜನೆ
ಭಾರೀ, ಮಧ್ಯಮ ಟ್ರಕ್ಗಳ ಖರೀದಿಯ ಮೇಲೆ ಟಾಟಾ ಮೋಟಾರ್ಸ್ ಮತ್ತು ಜಮ್ಮು- ಕಾಶ್ಮೀರ ಬ್ಯಾಂಕ್ನ ಜಂಟಿ ಗ್ರಾಹಕರಿಗೆ ವಿಶೇಷ ಟಾಟಾ ಡಿಲೈಟ್ ಪಾಯಿಂಟ್ಗಳನ್ನು ನೀಡುತ್ತದೆ. ಟಾಟಾ ಮೋಟಾರ್ಸ್- ಜಮ್ಮು-ಕಾಶ್ಮೀರ ಬ್ಯಾಂಕ್ ಹಣಕಾಸು ಸಣ್ಣ ವಾಣಿಜ್ಯ ವಾಹನಗಳು ಮತ್ತು ಪಿಕ್-ಅಪ್ ಟ್ರಕ್ಗಳಿಗೆ ವಿಶೇಷ ವಾಹನ ನಿರ್ವಹಣಾ ಕಾರ್ಯಕ್ರಮ ಒದಗಿಸಲಿದೆ.
ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಕಂಪೆನಿ ಟಾಟಾ ಮೋಟಾರ್ಸ್ ಈಗ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ನೊಂದಿಗೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಪಾಲುದಾರಿಕೆಯಿಂದ ಟಾಟಾ ಮೋಟಾರ್ಸ್ನ ವಾಣಿಜ್ಯ ವಾಹನ ಎಲ್ಲಕ್ಕೂ ಪ್ರಯೋಜನಕಾರಿ ಕೊಡುಗೆಗಳು ದೊರೆಯುವಂತಾಗುತ್ತದೆ. ಭಾರೀ, ಮಧ್ಯಮ ಟ್ರಕ್ಗಳ ಖರೀದಿಯ ಮೇಲೆ ಟಾಟಾ ಮೋಟಾರ್ಸ್ ಮತ್ತು ಜಮ್ಮು- ಕಾಶ್ಮೀರ ಬ್ಯಾಂಕ್ನ ಜಂಟಿ ಗ್ರಾಹಕರಿಗೆ ವಿಶೇಷ ಟಾಟಾ ಡಿಲೈಟ್ ಪಾಯಿಂಟ್ಗಳನ್ನು ನೀಡುತ್ತದೆ. ಟಾಟಾ ಮೋಟಾರ್ಸ್- ಜಮ್ಮು-ಕಾಶ್ಮೀರ ಬ್ಯಾಂಕ್ ಹಣಕಾಸು ಸಣ್ಣ ವಾಣಿಜ್ಯ ವಾಹನಗಳು ಮತ್ತು ಪಿಕ್-ಅಪ್ ಟ್ರಕ್ಗಳಿಗೆ ವಿಶೇಷ ವಾಹನ ನಿರ್ವಹಣಾ ಕಾರ್ಯಕ್ರಮ ಒದಗಿಸಲಿದೆ. ಜಮ್ಮು-ಕಾಶ್ಮೀರ ಬ್ಯಾಂಕ್ ವಿಶೇಷ ಸಾಲದಿಂದ ಮೌಲ್ಯಕ್ಕೆ (ಲೋನ್ ಟು ವ್ಯಾಲ್ಯೂ- ಎಲ್ಟಿವಿ) ಅನುಪಾತಗಳನ್ನು ಒದಗಿಸುತ್ತದೆ ಮತ್ತು ಸ್ಪರ್ಧಾತ್ಮಕ ಬಡ್ಡಿ ದರಗಳೊಂದಿಗೆ ಎಲ್ಲ ವಾಹನ ವಿಭಾಗಗಳಿಗೆ ವಿಸ್ತೃತ ಅವಧಿಯನ್ನು ಒದಗಿಸುತ್ತದೆ. ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ದೇಶಾದ್ಯಂತ 950ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ.
ಈ ಪಾಲುದಾರಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಟಾಟಾ ಮೋಟಾರ್ಸ್ ವಾಣಿಜ್ಯ ವಾಹನ ವ್ಯಾಪಾರ ಘಟಕದ ಅಧ್ಯಕ್ಷ ಗಿರೀಶ್ ವಾಘ್, “ಜಮ್ಮು ಮತ್ತು ಕಾಶ್ಮೀರದ ಮಾರುಕಟ್ಟೆ ನಾಯಕನಾಗಿ, ಕೇಂದ್ರಾಡಳಿತ ಪ್ರದೇಶದ ಅತಿದೊಡ್ಡ ಬ್ಯಾಂಕ್ನೊಂದಿಗೆ ಸೇರಲು ನಾವು ಸಂತೋಷಗೊಂಡಿದ್ದೇವೆ. ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ನೊಂದಿಗೆ ಈ ಪಾಲುದಾರಿಕೆಯು ನಮ್ಮ ಗ್ರಾಹಕರಿಗೆ ವಾಹನ ಹಣಕಾಸು ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಇದು ಸರಕು, ಪ್ರಯಾಣಿಕರ ಮತ್ತು ನಿರ್ಮಾಣ ವಿಭಾಗಗಳಲ್ಲಿ ಟಾಟಾ ಮೋಟಾರ್ಸ್ನ ವ್ಯಾಪಕ ಶ್ರೇಣಿಯ ಉತ್ಪನ್ನಗಳೊಂದಿಗೆ ಕೇಂದ್ರಾಡಳಿತ ಪ್ರದೇಶದ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ. ಜಮ್ಮು ಮತ್ತು ಕಾಶ್ಮೀರ ಬ್ಯಾಂಕಿಗೆ ಇರುವ ಅನುಭವವನ್ನು ಬಳಸಿಕೊಳ್ಳುತ್ತೇವೆ. ನಮ್ಮ ಪ್ರಯತ್ನಗಳೊಂದಿಗೆ ಹಣಕಾಸಿನ ತಡೆರಹಿತ ಲಭ್ಯತೆಯನ್ನು ಖಚಿತಪಡಿಸುತ್ತೇವೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಜಮ್ಮ ಮತ್ತು ಕಾಶ್ಮೀರ ಬ್ಯಾಂಕ್ ಅಧ್ಯಕ್ಷ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆದ ಆರ್.ಕೆ.ಚಿಬ್ಬರ್, “ದೊಡ್ಡ ಮತ್ತು ಗುಣಮಟ್ಟದ ಬ್ರ್ಯಾಂಡ್ಗಳೊಂದಿಗೆ ಪಾಲುದಾರಿಕೆಯು ಜೆ.ಕೆ.ಬ್ಯಾಂಕ್ನ ಸ್ಟ್ರಾಟೆಜಿಕ್ ಯೋಜನೆಯ ಕೇಂದ್ರಬಿಂದು ಆಗಿದೆ. ನಮ್ಮ ಗ್ರಾಹಕರಿಗೆ ವ್ಯಾಪಕ ಮತ್ತು ಎಂಡ್-ಟು-ಎಂಡ್ ಹಣಕಾಸು ಪರಿಹಾರಗಳ ಲಭ್ಯತೆಯಲ್ಲಿ ಖಚಿತಪಡಿಸಿಕೊಳ್ಳಲು ಟಾಟಾ ಮೋಟಾರ್ಸ್ನೊಂದಿಗೆ ಪಾಲುದಾರಿಕೆಯನ್ನು ನಾವು ಒಂದು ಅವಕಾಶವಾಗಿ ನೋಡುತ್ತೇವೆ. ಈ ಒಪ್ಪಂದವು ಗ್ರಾಹಕರಿಗೆ ಪ್ರೀಮಿಯಂ ಗೋ-ಟು-ಮಾರ್ಕೆಟ್ ಪ್ಯಾಕೇಜ್ಗೆ ಅನುವು ಮಾಡಿಕೊಡುತ್ತದೆ. ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ನ ಹೆಚ್ಚು ಕಸ್ಟಮೈಸ್ ಹಣಕಾಸು ಸಾಲ ಯೋಜನೆಗಳು ಟಾಟಾ ಮೋಟಾರ್ಸ್ ನೀಡುವ ವಾಣಿಜ್ಯ ವಾಹನಗಳ ವೈವಿಧ್ಯಮಯ ಆಯ್ಕೆಗಳೊಂದಿಗೆ ಸೇರಿವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Tata passenger vehicles: ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನಗಳ ಬೆಲೆ ಮೇ 8ರಿಂದ ಏರಿಕೆ
(Tata Motors signed MOU with Jammu and Kashmir bank for commercial vehicle finance solution)
Published On - 4:01 pm, Fri, 9 July 21