ಆಂಥ್ರೊಪಿಕ್-ಟಿಸಿಎಸ್ ಎಐ ಡೀಲ್; 50,000 ಉದ್ಯೋಗಿಗಳಿಗೆ ಸಿಗಲಿದೆ ಕ್ಲಾಡ್ ತರಬೇತಿ

TCS & Anthropic Forge Global AI Alliance: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಆಂಥ್ರೊಪಿಕ್ ಜೊತೆ ಜಾಗತಿಕ AI ಪಾಲುದಾರಿಕೆ ಘೋಷಿಸಿದೆ. ಈ ಒಪ್ಪಂದದ ಅಡಿಯಲ್ಲಿ, TCS ತನ್ನ 50,000 ಉದ್ಯೋಗಿಗಳಿಗೆ 'ಕ್ಲಾಡ್' AI ಮಾಡೆಲ್‌ಗಳ ಬಗ್ಗೆ ತರಬೇತಿ ನೀಡಲಿದೆ. ಇಂಜಿನಿಯರಿಂಗ್, ಹಣಕಾಸು ಸೇರಿದಂತೆ ವಿವಿಧ ವಿಭಾಗಗಳ ಸಿಬ್ಬಂದಿಗಳಿಗೆ ತರಬೇತಿ ನೀಡಿ, ಗ್ರಾಹಕರಿಗೆ AI ಪರಿಹಾರಗಳನ್ನು ಒದಗಿಸಲು ಪ್ರತ್ಯೇಕ ವ್ಯಾಪಾರ ಘಟಕವನ್ನು ಸ್ಥಾಪಿಸಲಾಗುವುದು. ಇದು ಭಾರತದಲ್ಲಿ AI-ಸಜ್ಜಿತ ಕಾರ್ಯಪಡೆಯನ್ನು ನಿರ್ಮಿಸಲು ನೆರವಾಗಲಿದೆ.

ಆಂಥ್ರೊಪಿಕ್-ಟಿಸಿಎಸ್ ಎಐ ಡೀಲ್; 50,000 ಉದ್ಯೋಗಿಗಳಿಗೆ ಸಿಗಲಿದೆ ಕ್ಲಾಡ್ ತರಬೇತಿ
ಆಂಥ್ರೊಪಿಕ್ ಕ್ಲಾಡ್
Image Credit source: Getty Images

Updated on: Jun 11, 2026 | 2:28 PM

ನವದೆಹಲಿ, ಜೂನ್ 11: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇರಿಸಿದ್ದು, ಪ್ರಖ್ಯಾತ AI ಕಂಪನಿಯಾದ ‘ಆಂಥ್ರೊಪಿಕ್’ (Anthropic) ಜೊತೆ ಜಾಗತಿಕ ಪಾಲುದಾರಿಕೆಯನ್ನು ಘೋಷಿಸಿದೆ. ಈ ಯೋಜನೆಯ ಭಾಗವಾಗಿ, TCS ತನ್ನ 50,000 ಉದ್ಯೋಗಿಗಳಿಗೆ ಆಂಥ್ರೊಪಿಕ್‌ನ ‘ಕ್ಲಾಡ್’ (Claude) AI ಮಾಡಲ್ ಅನ್ನು ಬಳಸುವ ಕುರಿತು ತರಬೇತಿ ನೀಡಲಿದೆ. ಇಂಜಿನಿಯರಿಂಗ್, ಹಣಕಾಸು, ಕಾನೂನು, ಮಾರ್ಕೆಟಿಂಗ್ ಮತ್ತು ಮಾರಾಟ ವಿಭಾಗದ ಉದ್ಯೋಗಿಗಳು ಈ ತಂತ್ರಜ್ಞಾನವನ್ನು ತಮ್ಮ ಕೆಲಸದಲ್ಲಿ ಅಳವಡಿಸಿಕೊಳ್ಳಲಿದ್ದಾರೆ.

ಈ ಒಪ್ಪಂದದ ಅಡಿಯಲ್ಲಿ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪನಿಯು ಒಂದು ಪ್ರತ್ಯೇಕ ವ್ಯಾಪಾರ ಘಟಕವನ್ನು (Business Unit) ಸ್ಥಾಪಿಸಲಿದ್ದು, ಇದು ಆಂಥ್ರೊಪಿಕ್‌ನ ‘ಕ್ಲಾಡ್’ ಮಾದರಿಗಳನ್ನು ಬಳಸಿಕೊಂಡು ಗ್ರಾಹಕರಿಗೆ AI ಪರಿಹಾರಗಳನ್ನು ಒದಗಿಸುವ ಕೆಲಸ ಮಾಡಲಿದೆ.

ಕ್ಲಾಡ್ ಯಾವ ಕ್ಷೇತ್ರಗಳಿಗೆ ಲಾಭ?

ಹಣಕಾಸು ಸೇವೆಗಳು (Financial Services), ಆರೋಗ್ಯ ರಕ್ಷಣೆ, ಲೈಫ್ ಸೈನ್ಸಸ್, ಟೆಲಿಕಾಂ, ವಾಯುಯಾನ ಮತ್ತು ಸಾರ್ವಜನಿಕ ಸೇವೆಗಳಂತಹ ಕ್ಷೇತ್ರಗಳಿಗೆ ಈ AI ತಂತ್ರಜ್ಞಾನವನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ಮುಖ್ಯವಾಗಿ ವಿಶ್ವಾಸಾರ್ಹತೆ ಮತ್ತು ನಿಯಂತ್ರಕ ನಿಯಮಗಳನ್ನು (Regulatory Compliance) ಕಟ್ಟುನಿಟ್ಟಾಗಿ ಪಾಲಿಸಬೇಕಾದ ಕ್ಷೇತ್ರಗಳಿಗೆ ಇದು ಹೆಚ್ಚು ಸಹಕಾರಿಯಾಗಲಿದೆ.

ಇದನ್ನೂ ಓದಿ: ಭಾರತ ವಿಭಾಗದ ಬಾಗಿಲು ಮುಚ್ಚಿದ ಅಮೆರಿಕದ ಓಪನ್​ಡೋರ್; ಕಂಪನಿಯ ಎಲ್ಲಾ 250 ಭಾರತೀಯ ಉದ್ಯೋಗಿಗಳಿಗೆ ಗೇಟ್​ಪಾಸ್

ಆಂಥ್ರೋಪಿಕ್ ಸಿಇಒ ಹೇಳಿಕೆ

ಭಾರತವು ತಮ್ಮ ಕಂಪನಿಯ ಪಾಲಿಗೆ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಈ ಪಾಲುದಾರಿಕೆಯು ಭಾರತದಲ್ಲಿನ ತಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಆಂಥ್ರೊಪಿಕ್‌ನ ಸಿಇಒ ಡಾರಿಯೋ ಅಮೋಡೆ ಅವರು ತಿಳಿಸಿದ್ದಾರೆ.

TCS ಕಂಪನಿಯು ಕೇವಲ AI ಪ್ರಯೋಗಗಳಿಗೆ ಸೀಮಿತವಾಗದೆ, ಉತ್ಪಾದನಾ ಮಟ್ಟದಲ್ಲಿ (Production-scale) AI ಅಪ್ಲಿಕೇಶನ್‌ಗಳನ್ನು ನಿಯೋಜಿಸಲು ಮತ್ತು ಅದಕ್ಕೆ ಅಗತ್ಯವಾದ ಭದ್ರತೆ ಹಾಗೂ ನಿಖರತೆಯನ್ನು ಖಾತ್ರಿಪಡಿಸಲು ಈ ತಂತ್ರಜ್ಞಾನವನ್ನು ಬಳಸಲಿದೆ.

TCS iON ಪಾತ್ರ

ಟಿಸಿಎಸ್​ನ ‘TCS iON’ ವಿಭಾಗವು ಕ್ಲಾಡ್ ಮಾಡಲ್​ಗಳನ್ನು ಕಲಿಸಲು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಇದು ಭಾರತದಲ್ಲಿ ‘AI-ಸಜ್ಜಿತ’ (AI-ready) ಕಾರ್ಯಪಡೆಯನ್ನು ನಿರ್ಮಿಸಲು ನೆರವಾಗಲಿದೆ.

ಇದನ್ನೂ ಓದಿ: ಪೆಟ್ರೋಲ್ ಬೆಲೆ ಇಳಿಯುತ್ತಾ? ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಸುಂಕ ರದ್ದುಗೊಳಿಸಿರುವುದು ಯಾರಿಗೆ ಲಾಭ?

ಟಿಸಿಎಸ್​ನ ಸಿಇಒ ಮತ್ತು ಎಂಡಿಯಾದ ಕೃತಿವಾಸನ್ ಅವರು ಈ ಒಪ್ಪಂದವನ್ನು ಸ್ವಾಗತಿಸಿದ್ದಾರೆ. ಟಿಸಿಎಸ್​ನ ಎಂಜಿನಿಯರಿಂಗ್ ಸಾಮರ್ಥ್ಯ ಮತ್ತು ಔದ್ಯಮಿಕ ಪರಿಗಣಿತಿ ಜೊತೆಗೆ ಕ್ಲಾಡ್​ನ ಶಕ್ತಿಯು ಸೇರಿದರೆ ಗ್ರಾಹಕರಿಗೆ ಎಐ ಅಳವಡಿಕೆ ಕಾರ್ಯವನ್ನು ಸುಲಭಗೊಳಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಈ ಬೆಳವಣಿಗೆಯ ನಡುವೆಯೂ, ಮಾರುಕಟ್ಟೆಯಲ್ಲಿ TCS ಷೇರುಗಳು ಸದ್ಯಕ್ಕೆ 52 ವಾರಗಳ ಕನಿಷ್ಠ ಮಟ್ಟದ ಸಮೀಪವೇ ವಹಿವಾಟು ನಡೆಸುತ್ತಿವೆ ಎಂದು ವರದಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us