AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ವಿಭಾಗದ ಬಾಗಿಲು ಮುಚ್ಚಿದ ಅಮೆರಿಕದ ಓಪನ್​ಡೋರ್; ಕಂಪನಿಯ ಎಲ್ಲಾ 250 ಭಾರತೀಯ ಉದ್ಯೋಗಿಗಳಿಗೆ ಗೇಟ್​ಪಾಸ್

Opendoor Closes India Ops: ಅಮೆರಿಕದ ರಿಯಲ್ ಎಸ್ಟೇಟ್ ಟೆಕ್ ಕಂಪನಿ ಓಪನ್‌ಡೋರ್ ತನ್ನ ಭಾರತದ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದ್ದು, ಸುಮಾರು 250 ಉದ್ಯೋಗಿಗಳಿಗೆ ಕೆಲಸ ಕಡಿತವಾಗಿದೆ. ಕಂಪನಿಯು ತನ್ನ ಗಮನವನ್ನು ಅಮೆರಿಕದಲ್ಲಿರುವ ಗ್ರಾಹಕರಿಗೆ ಮತ್ತು AI-ನೇಟಿವ್ ವ್ಯವಸ್ಥೆಗಳಿಗೆ ಬದಲಾಯಿಸಿದೆ. ಕೆಲಸ ಕಳೆದುಕೊಂಡವರಿಗೆ ಪರಿಹಾರ ಪ್ಯಾಕೇಜ್ ನೀಡಲಾಗುವುದು ಎಂದು ಸಿಇಒ ಕಾಜ್ ನೆಜಾಟಿಯನ್ ತಿಳಿಸಿದ್ದಾರೆ. ಇದು ತಂತ್ರಜ್ಞಾನದಲ್ಲಿ AI ಪ್ರಭಾವದಿಂದಾದ ಮತ್ತೊಂದು ಉದ್ಯೋಗ ಕಡಿತವಾಗಿದೆ.

ಭಾರತ ವಿಭಾಗದ ಬಾಗಿಲು ಮುಚ್ಚಿದ ಅಮೆರಿಕದ ಓಪನ್​ಡೋರ್; ಕಂಪನಿಯ ಎಲ್ಲಾ 250 ಭಾರತೀಯ ಉದ್ಯೋಗಿಗಳಿಗೆ ಗೇಟ್​ಪಾಸ್
ಲೇಆಫ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 11, 2026 | 12:57 PM

Share

ನವದೆಹಲಿ, ಜೂನ್ 11: ಅಮೆರಿಕ ಮೂಲದ ರಿಯಲ್ ಎಸ್ಟೇಟ್ ಟೆಕ್ ಕಂಪನಿಯಾದ ‘ಓಪನ್‌ಡೋರ್’ (Opendoor) ತನ್ನ ಭಾರತದ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಇದರಿಂದ ಭಾರತದಲ್ಲಿನ ಅದರ ಸುಮಾರು 250 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಓಪನ್‌ಡೋರ್‌ನ ಸಿಇಒ ಕಾಜ್ ನೆಜಾಟಿಯನ್ (Kaz Nejatian) ಅವರ ಪ್ರಕಾರ, ಕಂಪನಿಯು ತನ್ನ ಕಾರ್ಯಾಚರಣೆಯನ್ನು ಅಮೆರಿಕದಲ್ಲಿರುವ ಗ್ರಾಹಕರಿಗೆ ಹತ್ತಿರವಾಗಿಸಲು ಈ ನಿರ್ಧಾರವನ್ನು ಕೈಗೊಂಡಿದೆ. ಕಂಪನಿಯ ಕೆಲಸದ ಪ್ರಕ್ರಿಯೆಗಳು ಅಮೆರಿಕದ ಗ್ರಾಹಕರೊಂದಿಗೆ ನೇರ ಸಂಪರ್ಕದಲ್ಲಿರುವುದು ಉತ್ತಮ ಎಂದು ಕಂಪನಿ ಭಾವಿಸಿದೆ.

ಈ ನಿರ್ಧಾರದಿಂದ ಭಾರತದಲ್ಲಿರುವ ಸುಮಾರು 250 ಮಂದಿ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ. ಕಂಪನಿಯು ಈಗಾಗಲೇ ಕೆಲವು ಹುದ್ದೆಗಳನ್ನು ಅಮೆರಿಕಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ. ಇದೇ ವೇಳೆ, ಈ ನಿರ್ಧಾರವು ಭಾರತದಲ್ಲಿನ ಉದ್ಯೋಗಿಗಳ ಕೆಲಸದ ಗುಣಮಟ್ಟದ ಮೇಲೆ ತೆಗೆದುಕೊಂಡಿದ್ದಲ್ಲ ಎಂದು ಸಿಇಒ ಸ್ಪಷ್ಟಪಡಿಸಿದ್ದಾರೆ. ಭಾರತೀಯ ಉದ್ಯೋಗಿಗಳು ಕಂಪನಿಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್ ಬೆಲೆ ಇಳಿಯುತ್ತಾ? ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಸುಂಕ ರದ್ದುಗೊಳಿಸಿರುವುದು ಯಾರಿಗೆ ಲಾಭ?

ಕೆಲಸ ಕಳೆದುಕೊಂಡವರಿಗೆ ಪರಿಹಾರ ಪ್ಯಾಕೇಜ್

ಕೆಲಸ ಕಳೆದುಕೊಂಡ ಉದ್ಯೋಗಿಗಳಿಗೆ ನೆರವಾಗಲು ಕಂಪನಿಯು ‘ಟ್ರಾನ್ಸಿಷನ್ ಪ್ಯಾಕೇಜ್’ (Transition Package) ನೀಡುತ್ತಿದೆ. ಇದರಲ್ಲಿ ಸೇವೆಯಿಂದ ಬಿಡುಗಡೆ ಹೊಂದಿದ ನಂತರದ ವೇತನ (Severance Pay), ಉದ್ಯೋಗ ಹುಡುಕಾಟಕ್ಕೆ ನೆರವು (Outplacement services) ಸೇರಿದಂತೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸಲಾಗುತ್ತಿದೆ.

ಓಪನ್​ಡೋರ್ ಸಿಇಒ ಅವರ ಟ್ವೀಟ್

ಮ್ಯಾನುಯಲ್ ವರ್ಕ್​ಗಳಿಗಾಗಿ ಭಾರತೀಯ ಉದ್ಯೋಗಿಗಳ ಬಳಕೆ

ಓಪನ್‌ಡೋರ್ ಭಾರತದ ತಂಡವನ್ನು ಮ್ಯಾನುವಲ್ ಕೆಲಸಗಳಿಗಾಗಿ ಬಳಸಿಕೊಳ್ಳುತ್ತಿತ್ತು. ಈಗ ಕಂಪನಿಯು ತನ್ನ ವ್ಯವಸ್ಥೆಗಳನ್ನು ಏಕೀಕೃತಗೊಳಿಸಿ (Unified Systems), ಅಮೆರಿಕದಲ್ಲಿ ಸಣ್ಣ ‘ಎಐ-ನೇಟಿವ್’ (AI-native) ತಂಡಗಳನ್ನು ನೇಮಿಸಿಕೊಳ್ಳುತ್ತಿರುವುದರಿಂದ ಭಾರತದ ಕಾರ್ಯಾಚರಣೆಯ ಅಗತ್ಯವಿಲ್ಲ ಎಂದು ನಿರ್ಧರಿಸಿದೆ. ಅಮೆರಿಕದ ಎಲ್ಲಾ ಕಡೆ ಓಪನ್​ಡೋರ್​ನ ಬಹಳ ಸಣ್ಣ ಸಣ್ಣ ತಂಡಗಳು ಇರಲಿವೆ.

ಇದನ್ನೂ ಓದಿ: ಟಿಸಿಎಸ್​ನಲ್ಲಿ 3 ವರ್ಷದಲ್ಲಿ ಎಐ ಏಜೆಂಟ್​ಗಳು ಉದ್ಯೋಗಿಗಳ ಸಮಕ್ಕೆ ಬರಲಿವೆಯಂತೆ

ಎಐ ನೇಟಿವ್ ವ್ಯವಸ್ಥೆಯನ್ನು ಕಂಪನಿ ಅಳವಡಿಸಿದೆ. ಅಂದರೆ, ಎಐ ಅನ್ನು ಮುಖ್ಯವಾಗಿಸಿಕೊಂಡು ಅದರ ಸುತ್ತ ವ್ಯವಸ್ಥೆ ನಿರ್ಮಿಸಲಾಗಿದೆ. ಇಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಎಐ ಪರಿಕರಗಳ ಬಲ ಇರುತ್ತದೆ.

ಒಟ್ಟಾರೆಯಾಗಿ, ಜಾಗತಿಕವಾಗಿ ತಂತ್ರಜ್ಞಾನ ಕಂಪನಿಗಳಲ್ಲಿ ನಡೆಯುತ್ತಿರುವ ಬದಲಾವಣೆಗಳು ಮತ್ತು ಎಐ (AI) ಅಳವಡಿಕೆಯ ಕಾರಣದಿಂದ ಉದ್ಯೋಗ ಕಡಿತದ ಸರಣಿಯಲ್ಲಿ ಇದೂ ಒಂದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More