TCS Shocker: ಕಾಸು ಕೊಟ್ಟವನಿಗೆ ಕೆಲಸ; ಟಿಸಿಎಸ್​ನಲ್ಲಿ ಹಿರಿಯ ಅಧಿಕಾರಿಗಳಿಂದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ; ಖಾಸಗಿ ವಲಯಕ್ಕೂ ಬಂತಾ ಸರ್ಕಾರಿ ಕಾಯಿಲೆ?

|

Updated on: Jun 23, 2023 | 12:10 PM

Bribes for Jobs Scam at TCS: ಟಿಸಿಎಸ್​ನ ಹಿರಿಯ ಅಧಿಕಾರಿಗಳು ಅಭ್ಯರ್ಥಿಗಳಿಗೆ ಕೆಲಸ ಕೊಡಲು ರೆಕ್ರುಟಿಂಗ್ ಏಜೆನ್ಸಿಗಳಿಂದ ಕಮಿಷನ್ ಪಡೆಯುತ್ತಿದ್ದ ಅಚ್ಚರಿಯ ಪ್ರಕರಣ ಬಯಲಿಗೆ ಬಂದಿದೆ. ಟಿಸಿಎಸ್​ನ ಆರ್​ಎಂಜಿ ಗ್ಲೋಬಲ್ ಹೆಡ್ ಸೇರಿದಂತೆ ಹಲವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

TCS Shocker: ಕಾಸು ಕೊಟ್ಟವನಿಗೆ ಕೆಲಸ; ಟಿಸಿಎಸ್​ನಲ್ಲಿ ಹಿರಿಯ ಅಧಿಕಾರಿಗಳಿಂದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ; ಖಾಸಗಿ ವಲಯಕ್ಕೂ ಬಂತಾ ಸರ್ಕಾರಿ ಕಾಯಿಲೆ?
ಟಿಸಿಎಸ್
Follow us on

ನವದೆಹಲಿ: ಭಾರತದ ಅತಿದೊಡ್ಡ ಐಟಿ ಸಂಸ್ಥೆಗಳಲ್ಲಿ ಒಂದೆನಿಸಿರುವ ಮತ್ತು ಭಾರತದಲ್ಲಿ ಅತಿಹೆಚ್ಚು ಐಟಿ ಉದ್ಯೋಗಿಗಳನ್ನು ಹೊಂದಿರುವ ಹಾಗೂ ಅತ್ಯುತ್ತಮ ಕೆಲಸದ ವಾತಾರವಣಕ್ಕೆ ಹೆಸರುವಾಸಿಯೂ ಆಗಿರುವ ಟಾಟಾ ಕನ್ಸಲ್ಟೆನ್ಸಿ ಸಂಸ್ಥೆ(TCS- Tata Consultancy Services) ಒಳ್ಳೆಯ ಹೆಸರಿಗೆ ಮಸಿ ಮೆತ್ತುವಂತಹ ಬೆಳವಣಿಗೆ ಬೆಳಕಿಗೆ ಬಂದಿದೆ. ಟಿಸಿಎಸ್​ನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೆಲಸ ಕೊಡಲು ಕನ್ಸಲ್ಟೆನ್ಸಿ ಸಂಸ್ಥೆಗಳಿಂದ ಲಂಚ ಸ್ವೀಕರಿಸಿದ (Bribes For Jobs Scam) ಪ್ರಕರಣ ಇದು. ಟಿಸಿಎಸ್​ನ ಕೆಲ ಹಿರಿಯ ಅಧಿಕಾರಿಗಳೇ ಈ ಕೃತ್ಯದಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ. ದಿ ಮಿಂಟ್ ಪತ್ರಿಕೆ ಈ ಎಕ್ಸ್​ಕ್ಲೂಸಿವ್ ವರದಿ ಪ್ರಕಟಿಸಿದ್ದು, 100 ಕೋಟಿ ರೂ ಮೊತ್ತದ ಕರ್ಮಕಾಂಡದ ಕಥೆ ಇದಾಗಿದೆ. ಕಂಪನಿಯ ಉದ್ಯೋಗಿಯೊಬ್ಬರು ಈ ಪ್ರಕರಣವನ್ನು ಸಿಇಒ ಮತ್ತು ಸಿಒಒ ಗಮನಕ್ಕೆ ತಂದಿದ್ದರಿಂದ ಕರ್ಮಕಾಂಡ ಬಯಲಿಗೆ ಬಂದಿದೆ. ಭ್ರಷ್ಟಾಚಾರದಲ್ಲಿ ತೊಡಗಿದ್ದರೆಂದು ಆರೋಪಿಸಲಾಗಿರುವ ರಿಸೋರ್ಸ್ ಮ್ಯಾನೇಜ್ಮೆಂಟ್ ಗ್ರೂಪ್​ನ ಗ್ಲೋಬಲ್ ಹೆಡ್ ಇಎಸ್ ಚಕ್ರವರ್ತಿ ಸೆರಿದಂತೆ ನಾಲ್ವರು ಹಿರಿಯ ಅಧಿಕಾರಿಗಳನ್ನು ಟಿಸಿಎಸ್ ವಜಾಗೊಳಿಸಿದೆ. ಜೊತೆಗೆ, ಮೂರು ಸ್ಟ್ಯಾಫಿಂಗ್ ಸಂಸ್ಥೆ ಅಥವಾ ಕನ್ಸಲ್ಟೆನ್ಸಿ ಸಂಸ್ಥೆಗಳನ್ನು ನಿಷೇಧಿಸಿದೆ.

ಟಿಸಿಎಸ್​ನಲ್ಲಿ ಇಂಥದ್ದೊಂದು ಭ್ರಷ್ಟಾಚಾರ ಹಗರಣ ಬಯಲಿಗೆ ಬಂದಿದ್ದು ಇದೇ ಮೊದಲು. ಸಂಸ್ಥೆಯ ಹಿರಿಯರಾದ ಕೆ ಕೃತಿವಾಸನ್ ಅವರು ಸಿಇಒ ಆಗಿ ನೇಮಕವಾದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ಆಗಿದೆ.

ಇದನ್ನೂ ಓದಿHAL: ಅಮೆರಿಕದ ಜಿಇ ಜೊತೆ ಸೇರಿ ಫೈಟರ್ ಜೆಟ್ ಎಂಜಿನ್ ತಯಾರಿಕೆಗೆ ಎಚ್​ಎಎಲ್ ಒಪ್ಪಂದ; ಒಮ್ಮೆಲೇ ಜಿಗಿದ ಷೇರುಬೆಲೆ

ಗಮನಿಸಬೇಕಾದ ಸಂಗತಿ ಎಂದರೆ ಉದ್ಯೋಗ ಹಂಚಿಕೆಗೆ ಲಂಚ ಸ್ವೀಕರಿಸುವ ಕಾರ್ಯ ಕಳೆದ 3 ವರ್ಷಗಳಿಂದ ನಡೆದಿತ್ತು ಎಂದು ಹೇಳಲಾಗುತ್ತಿದೆ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಉದ್ಯೋಗಿ ಈ ಬಗ್ಗೆ ಸಿಇಒ ಮತ್ತು ಸಿಒಒ ಅವರಿಗೆ ರಹಸ್ಯವಾಗಿ ಮಾಹಿತಿ ಕೊಟ್ಟಿದ್ದರು. ಟಿಸಿಎಸ್​ನ ರಿಸೋರ್ಸ್ ಮ್ಯಾನೇಜ್ಮೆಂಟ್ ಗ್ರೂಪ್​ನ ಗ್ಲೋಬಲ್ ಮುಖ್ಯಸ್ಥ ಇಎಸ್ ಚಕ್ರವರ್ತಿ ಅವರು ಹೈರಿಂಗ್ ಏಜೆನ್ಸಿಗಳಿಂದ ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು.

ಆ ಬಳಿಕ ಟಿಸಿಎಸ್​ನ ಟಾಪ್ ಮ್ಯಾನೇಜ್ಮೆಂಟ್ ಒಂದು ಕಮಿಟಿ ರಚಿಸಿ ತನಿಖೆ ನಡೆಸಿತು. ಅದಾದ ಬಳಿಕ ನೇಮಕಾತಿ ವಿಭಾಗದ ಮುಖ್ಯಸ್ಥರನ್ನು ರಜೆಯ ಮೆಲೆ ಕಳುಹಿಸಿತು. ಆರ್​ಎಂಜಿಯ ನಾಲ್ವರು ಅಧಿಕಾರಿಗಳನ್ನು ಕೆಲಸದಿಂದ ತೆಗೆದುಹಾಕಲಾಯಿತು. ಇಎಸ್ ಚಕ್ರವರ್ತಿ ಅವರನ್ನು ಕಚೇರಿಗೆ ಬರದಂತೆ ನಿರ್ಬಂಧಿಸಲಾಯಿತು. ಆರ್​ಬಿಎಂ ವಿಭಾಗದ ಮತ್ತೊಬ್ಬ ಅಧಿಕಾರಿ ಜಿಕೆ ಅರುಣ್ ಅವರನ್ನೂ ಮನೆಗೆ ಕಳುಹಿಸಲಾಯಿತು.

ಇದನ್ನೂ ಓದಿPM Kisan: ಮೊಬೈಲ್​ನಲ್ಲಿ ಮುಖ ಸ್ಕ್ಯಾನ್ ಮಾಡಿ, ಪಿಎಂ ಕಿಸಾನ್ ಸ್ಕೀಮ್​ಗೆ ಇಕೆವೈಸಿ ಪೂರ್ಣಗೊಳಿಸಿ; ಫಿಂಗರ್ ಪ್ರಿಂಟ್ ಬೇಕಿಲ್ಲ, ಕೂತಲ್ಲೇ ಮುಗಿಯುತ್ತೆ ಇ-ಕೆವೈಸಿ

ಟಿಸಿಎಸ್​ನ ಅಧಿಕಾರಿಯೊಬ್ಬರು ಈ ಬಗ್ಗೆ ಮಿಂಟ್​ಗೆ ಪ್ರತಿಕ್ರಿಯಿಸಿದ್ದು, ಈ ಬೆಳವಣಿಗೆಯಿಂದ ಕಂಪನಿಯ ಹಿರಿಯ ನಾಯಕತ್ವವು ಆಘಾತಗೊಂಡಿರುವುದಾಗಿ ತಿಳಿಸಿದ್ದಾರೆ. ಕಳೆದ 3 ವರ್ಷಗಳಿಂದ ಕಂಪನಿ 3 ಲಕ್ಷ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಂಡಿದೆ. ಇವರಿಗೆ ಕೆಲಸ ಕೊಡಲು ಪಡೆದಿರುವ ಕಮಿಷನ್​ಗಳನ್ನು ಗಣಿಸಿದರೆ 100 ಕೋಟಿ ಆಗಬಹುದು ಎಂದೂ ಒಬ್ಬ ಅಧಿಕಾರಿ ಹೇಳಿದ್ದಾಗಿ ಮಿಂಟ್ ವರದಿ ಮಾಡಿದೆ. ಆದರೆ, ಕಳೆದ 3 ವರ್ಷಗಳಿಂದ ಈ ಘಟನೆ ನಡೆಯುತ್ತಿದ್ದರೂ ಟಾಪ್ ಎಕ್ಸಿಕ್ಯೂಟಿವ್​ಗಳ ಗಮನಕ್ಕೆ ಹೇಗೆ ಬಾರದೇ ಹೋಯಿತು ಎಂಬುದೂ ಸೋಜಿಗ.

ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಮಾತ್ರವೇ ಇಂಥ ಲಂಚ ಘಟನೆಗಳನ್ನು ಕಂಡು ಅಭ್ಯಾಸವಾಗಿರುವ ಜನಸಾಮಾನ್ಯರಿಗೆ ಕಾರ್ಪೊರೇಟ್ ಕಂಪನಿಯೊಳಗಿನ ಭ್ರಷ್ಟಾಚಾರ ಕಂಡು ಆಘಾತಗೊಳ್ಳುವುದರಲ್ಲಿ ಅಚ್ಚರಿ ಇಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ