JP Morgan Fine: 4.7 ಕೋಟಿ ದಾಖಲೆಗಳನ್ನು ಅಳಿಸಿಹಾಕಿದ ಜೆಪಿ ಮಾರ್ಗನ್​ಗೆ ಬಿತ್ತು 33ಕೋಟಿ ರೂ ದಂಡ

SEC Fine on JP Morgan For Deleting e-Records: ಎಸ್​ಇಸಿ ಜೂನ್ 22ರಂದು ಆರೋಪಿಸಿರುವ ಪ್ರಕಾರ 2018ರ ಜನವರಿಯಿಂದ ಏಪ್ರಿಲ್​ವರೆಗಿನ ಅವಧಿಯಲ್ಲಿ 47 ಮಿಲಿಯನ್​ನಷ್ಟು ಇ ದಾಖಲೆಗಳನ್ನು ಜೆಪಿ ಮಾರ್ಗನ್ ಸೆಕ್ಯೂರಿಟೀಸ್ ಖಾಯಂ ಆಗಿ ಅಳಿಸಿಹಾಕಿದೆ. ಈ ಸಂಬಂಧ 4 ಮಿಲಿಯನ್ ಡಾಲರ್ ದಂಡ ವಿಧಿಸಲಾಗಿದೆ.

JP Morgan Fine: 4.7 ಕೋಟಿ ದಾಖಲೆಗಳನ್ನು ಅಳಿಸಿಹಾಕಿದ ಜೆಪಿ ಮಾರ್ಗನ್​ಗೆ ಬಿತ್ತು 33ಕೋಟಿ ರೂ ದಂಡ
ಜೆಪಿ ಮಾರ್ಗನ್
Follow us
|

Updated on: Jun 23, 2023 | 3:02 PM

ನವದೆಹಲಿ: ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಜೆಪಿ ಮಾರ್ಗನ್ ಚೇಸ್ (JP Morgan Chase) 4.7 ಕೋಟಿಯಷ್ಟು ಇಮೇಲ್, ಮೆಸೇಜ್ ಇತ್ಯಾದಿ ಎಲೆಕ್ಟ್ರಾನಿಕ್ ದಾಖಲೆಗಳನ್ನು (Electronic Records) ಆಕಸ್ಮಿಕವಾಗಿ ಅಳಿಸಿಹಾಕಿರುವುದು ಬೆಳಕಿಗೆ ಬಂದಿದೆ. ಹಲವಾರು ತನಿಖೆಗಳಿಗೆ ಅವಶ್ಯಕವಾಗಿದ್ದ ಈ ದಾಖಲೆಗಳನ್ನು ಅಳಿಸಿಹಾಕಿದ ಜೆಪಿ ಮಾರ್ಗನ್ ಸಂಸ್ಥೆಗೆ ಅಮೆರಿಕದ ಸೆಕ್ಯುರಿಟೀಸ್ ಮತ್ತು ಎಕ್ಸ್​ಚೇಂಜ್ ಕಮಿಷನ್ (SEC- Securities and Exchange Commission) 4 ಮಿಲಿಯನ್ ಡಾಲರ್​​ನಷ್ಟು ದಂಡ ವಿಧಿಸಿದೆ. 4 ಮಿಲಿಯನ್ ಡಾಲರ್ ಎಂದರೆ ಸುಮಾರು 33 ಕೋಟಿ ರುಪಾಯಿಯಷ್ಟು ದಂಡವನ್ನು ಜೆಪಿ ಮಾರ್ಗನ್ ಪಾವತಿಸಬೇಕಾಗುತ್ತದೆ.

ಎಸ್​ಇಸಿ ಜೂನ್ 22ರಂದು ಆರೋಪಿಸಿರುವ ಪ್ರಕಾರ 2018ರ ಜನವರಿಯಿಂದ ಏಪ್ರಿಲ್​ವರೆಗಿನ ಅವಧಿಯಲ್ಲಿ 47 ಮಿಲಿಯನ್​ನಷ್ಟು ಇ ದಾಖಲೆಗಳನ್ನು ಜೆಪಿ ಮಾರ್ಗನ್ ಸೆಕ್ಯೂರಿಟೀಸ್ ಖಾಯಂ ಆಗಿ ಅಳಿಸಿಹಾಕಿದೆ. ಎಸ್​ಇಸಿ ತನಿಖೆ ನಡೆಸುತ್ತಿರುವ 8 ಸೇರಿ 12 ಪ್ರಕರಣಗಳಲ್ಲಿ ಜೆಪಿ ಮಾರ್ಗನ್ ಚೇಸ್​ನಲ್ಲಿರುವ ದಾಖಲೆಗಳನ್ನು ಪರಿಶೀಲಿಸಲು ತನಿಖಾ ಸಂಸ್ಥೆಗಳು ಮನವಿ ಮಾಡಿದ್ದವು. ಆಗ ಈ ಎಲೆಕ್ಟ್ರಾನಿಕ್ ದಾಖಲೆಗಳು ಅಳಿಸಿಹೋಗಿರುವುದು ಬೆಳಕಿಗೆ ಬಂದಿತ್ತು.

ಇದನ್ನೂ ಓದಿTCS Shocker: ಕಾಸು ಕೊಟ್ಟವನಿಗೆ ಕೆಲಸ; ಟಿಸಿಎಸ್​ನಲ್ಲಿ ಹಿರಿಯ ಅಧಿಕಾರಿಗಳಿಂದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ; ಖಾಸಗಿ ವಲಯಕ್ಕೂ ಬಂತಾ ಸರ್ಕಾರಿ ಕಾಯಿಲೆ?

‘ಅಳಿಸಿಹೋದ ಆ ದಾಖಲೆಗಳನ್ನು ಮರಳಿಪಡೆಯಲು ಆಗುವುದಿಲ್ಲ. ಈ ದಾಖಲೆಗಳು ಯಾವ್ಯಾವು ಎಂಬ ಸುಳಿವೂ ಇಲ್ಲ. ಆ ದಾಖಲೆಗಳು ತನಿಖೆಗಳಿಗೆ ಪ್ರಬಲ ಸಾಕ್ಷ್ಯಾಧಾರ ಒದಗಿಸುತ್ತಿದ್ದವೋ ಗೊತ್ತಿಲ್ಲ’ ಎಂದು ಎಸ್​ಇಸಿ ಹೇಳಿಕೆ ನೀಡಿದೆ.

ಜೆಪಿ ಮಾರ್ಗನ್ ಸೆಕ್ಯೂರಿಟೀಸ್​ನಂತಹ ಬ್ರೋಕರೇಜ್ ಮತ್ತು ಹಣಕಾಸು ಸಂಸ್ಥೆಗಳು ಕನಿಷ್ಠ 3 ವರ್ಷಗಳ ಅವಧಿಯ ವ್ಯಾವಹಾರಿಕ ಸಂವಾದಗಳ (ಬ್ಯುಸಿನೆಸ್ ಕಮ್ಯೂನಿಕೇಶನ್ಸ್) ದಾಖಲೆಗಳನ್ನು ಉಳಿಸಿಟ್ಟುಕೊಳ್ಳಬೇಕೆಂದು ಅಮೆರಿಕದಲ್ಲಿ ಕಾನೂನು ಇದೆ. ಆದರೆ, 2018ರ ಮೊದಲ ಮೂರು ತಿಂಗಳ ಅವಧಿಯಲ್ಲಿ ತಾಂತ್ರಿಕ ದೋಷಗಳನ್ನು ಸರಿಪಡಿಸುವ ಸಂದರ್ಭದಲ್ಲಿ ಜೆಪಿ ಮಾರ್ಗನ್ ಸೆಕ್ಯೂರಿಟೀಸ್ ಸಂಸ್ಥೆ ಇಂತಹ ಕೋಟ್ಯಂತರ ಎಲೆಕ್ಟ್ರಾನಿಕ್ ದಾಖಲೆಗಳನ್ನು ಆಕಸ್ಮಿಕವಾಗಿ ಅಳಿಸಿಹಾಕಿದೆ. ಬ್ಯಾಂಕ್ ದಾಖಲೆಗಳನ್ನು ಸಂಗ್ರಹಿಸಿ ಇಡುವ ಜವಾಬ್ದಾರಿ ಹೊತ್ತಿದ್ದ ಬೇರೊಂದು ಸಂಸ್ಥೆ, ಈ ದಾಖಲೆಗಳನ್ನು ರಕ್ಷಿಸಬಹುದು ಎಂದು ಹೇಳಿತ್ತು. ಆದರೆ, Chase ಡೊಮೈನ್​ಗೆ ಕಳುಹಿಸಲಾದ ಇಮೇಲ್​ಗಳನ್ನು ರಕ್ಷಿಸಲಾಗಿಲ್ಲ. ಜೆಪಿ ಮಾರ್ಗನ್ ಚೇಸ್​ನ ಗ್ರಾಹಕರ ಜೊತೆ ನಿಯಮಿತವಾಗಿ ಸಂಪರ್ಕದಲ್ಲಿದ್ದ ಜೆಪಿ ಮಾರ್ಗನ್ ಸೆಕ್ಯೂರಿಟೀಸ್​ನ 7,500 ಉದ್ಯೋಗಿಗಳ ಇಮೇಲ್ ಇನ್​ಬಾಕ್ಸ್​ಗಳಿಂದ ಆ ದಾಖಲೆಗಳೆಲ್ಲವೂ ಅಳಿಸಿಹೋಗಿದೆ ಎಂಬ ಆರೋಪ ಇದೆ.

ಇದನ್ನೂ ಓದಿApple Card: ಭಾರತಕ್ಕೆ ಬರಲಿದೆಯೇ ಆ್ಯಪಲ್ ಕ್ರೆಡಿಟ್ ಕಾರ್ಡ್? ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಆ್ಯಪಲ್ ಸಿಇಒ ಮಾತುಕತೆ?

ವಾಟ್ಸಾಪ್​ನಂತಹ ಪ್ಲಾಟ್​ಪಾರ್ಮ್​ಗಳಲ್ಲಿ ವ್ಯಾವಹಾರಿಕ ಸಂವಾದಗಳನ್ನು ಉಳಿಸಿಟ್ಟುಕೊಳ್ಳಬೇಕೆಂಬ ನಿಯಮಗಳ ಪಾಲನೆ ಮಾಡದ್ದಕ್ಕೆ 2021ರಲ್ಲಿ ಜೆಪಿ ಮಾರ್ಗನ್ ಚೇಸ್ ಸಂಸ್ಥೆ ಎಸ್​ಇಸಿಗೆ 125 ಮಿಲಿಯನ್ ಡಾಲರ್ ಹಾಗೂ ಕಮಾಡಿಟೀಸ್ ಫ್ಯೂಚರ್ಸ್ ಟ್ರೇಡಿಂಗ್ ಕಮಿಷನ್ ಪ್ರಾಧಿಕಾರಕ್ಕೆ 75 ಮಿಲಿಯನ್ ಡಾಲರ್ ದಂಡ ಪಾವತಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?