Sign In

By signing in or creating an account, you agree with Associated Broadcasting Company's Terms & Conditions and Privacy Policy.

Apple Card: ಭಾರತಕ್ಕೆ ಬರಲಿದೆಯೇ ಆ್ಯಪಲ್ ಕ್ರೆಡಿಟ್ ಕಾರ್ಡ್? ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಆ್ಯಪಲ್ ಸಿಇಒ ಮಾತುಕತೆ?

Credit Card From Apple In India: ಭಾರತದಲ್ಲಿ ಐಫೋನ್ ಉತ್ಪಾದನೆ ಹೆಚ್ಚಿಸುತ್ತಿರುವ ಮತ್ತು ಆ್ಯಪಲ್ ಸ್ಟೋರ್​ಗಳನ್ನು ಸ್ಥಾಪಿಸುತ್ತಿರುವ ಆ್ಯಪಲ್ ಕಂಪನಿ ಇದೀಗ ಇಲ್ಲಿ ಕ್ರೆಡಿಟ್ ಕಾರ್ಡ್ ತರಲು ಹೊರಟಿದೆ. ಈ ನಿಟ್ಟಿನಲ್ಲಿ ಆರ್​ಬಿಐ ಜೊತೆ ಸಮಾಲೋಚನೆ ನಡೆಸಿ ಎಚ್​ಡಿಎಫ್​ಸಿ ಬ್ಯಾಂಕ್ ಜೊತೆ ಮಾತುಕತೆ ನಡೆಸುತ್ತಿದೆ.

Apple Card: ಭಾರತಕ್ಕೆ ಬರಲಿದೆಯೇ ಆ್ಯಪಲ್ ಕ್ರೆಡಿಟ್ ಕಾರ್ಡ್? ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಆ್ಯಪಲ್ ಸಿಇಒ ಮಾತುಕತೆ?
ಆ್ಯಪಲ್ ಕಾರ್ಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 23, 2023 | 1:50 PM

ನವದೆಹಲಿ: ಅಮೆರಿಕದಲ್ಲಿ ಬಹಳ ಜನಪ್ರಿಯವಾಗಿರುವ ಆ್ಯಪಲ್ ಕ್ರೆಡಿಟ್ ಕಾರ್ಡ್ (Apple Credit Card) ಇದೀಗ ಭಾರತಕ್ಕೂ ಕಾಲಿಡುವ ಸಾಧ್ಯತೆ ತೋರುತ್ತಿದೆ. ಮನಿಕಂಟ್ರೋಲ್​ನಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ಆ್ಯಪಲ್ ಕಾರ್ಡ್ ಅನ್ನು ಭಾರತಕ್ಕೆ ತರಲು ಇಲ್ಲಿನ ಪ್ರಾಧಿಕಾರ ಸಂಸ್ಥೆಗಳು ಹಾಗು ಬ್ಯಾಂಕುಗಳ ಜೊತೆ ಆ್ಯಪಲ್ ಮಾತುಕತೆ ನಡೆಸುತ್ತಿದ್ದಾರೆ. ಇದು ಇನ್ನೂ ಆರಂಭಿಕ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಒಂದು ಸ್ಪಷ್ಟ ಚಿತ್ರಣ ಸಿಗಬಹುದು ಎನ್ನಲಾಗಿದೆ. ಈ ವರದಿಯು ಎರಡು ಮೂಲಗಳನ್ನು ಉಲ್ಲೇಖಿಸಿದ್ದು, ಏಪ್ರಿಲ್ ತಿಂಗಳಲ್ಲಿ ಆ್ಯಪಲ್ ಸಿಇಒ ಟಿಮ್ ಕುಕ್ (Apple CEO Tim Cook) ಅವರು ಭಾರತಕ್ಕೆ ಭೇಟಿ ನೀಡಿದ್ದಾಗ ಎಚ್​ಡಿಎಫ್​ಸಿ ಬ್ಯಾಂಕ್ ಸಿಇಒ ಮತ್ತು ಎಂಡಿ ಶಶಿಧರ್ ಜಗದೀಶನ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸಿದ್ದರು ಎಂದು ಹೇಳಿದೆ.

ಇದೇ ವರದಿ ಪ್ರಕಾರ, ಭಾರತದಲ್ಲಿ ಆ್ಯಪಲ್ ಸಂಸ್ಥೆ ಕ್ರೆಡಿಟ್ ಕಾರ್ಡ್ ತರಲು ಉದ್ದೇಶಿಸಿರುವುದನ್ನು ಆರ್​ಬಿಐಗೆ ತಿಳಿಸಿ ಸಮಾಲೋಚನೆ ಮತ್ತು ಸಲಹೆಗಳನ್ನು ಪಡೆದಿತ್ತು. ಕೋಬ್ರ್ಯಾಂಡ್​ನ ಕ್ರೆಡಿಟ್ ಕಾರ್ಡ್​ಗಳಿಗೆ ಇರುವ ನಿಯಮಗಳ ಅನುಸಾರ ಆ್ಯಪಲ್ ಕಾರ್ಡ್ ರೂಪಿಸಬಹುದು ಎಂದು ಆರ್​ಬಿಐ ಸಲಹೆ ನೀಡಿತ್ತು ಎಂದು ಹೇಳಲಾಗಿದೆ. ಇದಾದ ಬಳಿಕ ಎಚ್​​ಡಿಎಫ್​ಸಿ ಬ್ಯಾಂಕ್ ಜೊತೆ ಆ್ಯಪಲ್ ಮಾತುಕತೆಗೆ ಮುಂದಾಗಿರಬಹುದು. ಎಚ್​ಡಿಎಫ್​ಸಿ ಮತ್ತು ಆ್ಯಪಲ್ ಎರಡೂ ಒಟ್ಟಿಗೆ ಕೋ ಬ್ರ್ಯಾಂಡ್​ನಲ್ಲಿ ಕ್ರೆಡಿಟ್ ಕಾರ್ಡ್ ರೂಪಿಸುವ ಬಗ್ಗೆ ಎರಡೂ ಕಂಪನಿಗಳ ಮಧ್ಯೆ ಮತುಕತೆ ಆಗುತ್ತಿದೆ. ಇದು ಇನ್ನೂ ಆರಂಭಿಕ ಹಂತದಲ್ಲಿದ್ದು, ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ.

ಇದನ್ನೂ ಓದಿTCS Shocker: ಕಾಸು ಕೊಟ್ಟವನಿಗೆ ಕೆಲಸ; ಟಿಸಿಎಸ್​ನಲ್ಲಿ ಹಿರಿಯ ಅಧಿಕಾರಿಗಳಿಂದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ; ಖಾಸಗಿ ವಲಯಕ್ಕೂ ಬಂತಾ ಸರ್ಕಾರಿ ಕಾಯಿಲೆ?

ಆ್ಯಪಲ್ ಸಂಸ್ಥೆ ಯಾವುದೇ ಜಂಟಿ ಭಾಗಿತ್ವ ಇಲ್ಲದೇ ತನ್ನೇ ಪರಿಪೂರ್ಣ ಕ್ರೆಡಿಟ್ ಕಾರ್ಡ್ ಅನ್ನು ಭಾರತದಲ್ಲಿ ತರಲು ಬಯಸಿತ್ತು. ಆದರೆ, ಆರ್​ಬಿಐ ಇದಕ್ಕೆ ಒಪ್ಪಿಲ್ಲ. ಹೀಗಾಗಿ, ಎಚ್​ಡಿಎಫ್​ಸಿ ಬ್ಯಾಂಕ್ ಜೊತೆ ಆ್ಯಪಲ್ ಮಾತುಕತೆಗೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಭಾರತದಲ್ಲಿ ಕ್ರೆಡಿಟ್ ಕಾರ್ಡುಗಳನ್ನು ನೀಡುವುದು ಬ್ಯಾಂಕುಗಳೇ. ಇದು ನಿಯಮವೂ ಹೌದು. ಈ ಬಗ್ಗೆ ಆ್ಯಪಲ್​ಗೆ ಯಾವುದೇ ವಿನಾಯಿತಿ ಇಲ್ಲ ಎಂದು ಆರ್​ಬಿಐ ಹೇಳಿದೆ. ಹೀಗಾಗಿ, ಆ್ಯಪಲ್ ಕಂಪನಿಗೆ ಬ್ಯಾಂಕೊಂದನ್ನು ಜೋಡಿಸಿಕೊಳ್ಳುವುದು ಅನಿವಾರ್ಯವೂ ಹೌದು.

ಭಾರತದಲ್ಲಿ ಯಾಕೆ ಆ್ಯಪಲ್ ಕಾರ್ಡ್?

ಭಾರತದಲ್ಲಿ ನಗದುರಹಿತ ವಹಿವಾಟು ಬಹಳ ಗಮನಾರ್ಹವಾಗಿ ಬೆಳೆದಿದೆ. ಜನರಿಗೂ ಇದು ಬಹಳ ಅನುಕೂಲವಾಗಿದೆ. ಅಮೆಜಾನ್, ಗೂಗಲ್, ಸ್ಯಾಮ್ಸುಂಗ್ ಇತ್ಯಾದಿ ಕಂಪನಿಗಳು ಭಾರತದಲ್ಲಿ ಹಣಕಾಸು ಸೇವಾ ಕ್ಷೇತ್ರದಲ್ಲಿ ಹೆಜ್ಜೆ ಹಾಕಲು ಮಹತ್ವಾಕಾಂಕ್ಷಿ ಯೋಜನೆಗಳನ್ನು ಹಾಕಿಕೊಂಡಿವೆ. ಹೀಗಾಗಿ, ಆ್ಯಪಲ್ ಕೂಡ ಈ ಸ್ಪರ್ಧೆಯಲ್ಲಿ ಹಿಂದುಳಿಯದೇ ಇರಲು ನಿರ್ಧರಿಸಿರಬಹುದು.

ಇದನ್ನೂ ಓದಿPM Kisan: ಮೊಬೈಲ್​ನಲ್ಲಿ ಮುಖ ಸ್ಕ್ಯಾನ್ ಮಾಡಿ, ಪಿಎಂ ಕಿಸಾನ್ ಸ್ಕೀಮ್​ಗೆ ಇಕೆವೈಸಿ ಪೂರ್ಣಗೊಳಿಸಿ; ಫಿಂಗರ್ ಪ್ರಿಂಟ್ ಬೇಕಿಲ್ಲ, ಕೂತಲ್ಲೇ ಮುಗಿಯುತ್ತೆ ಇ-ಕೆವೈಸಿ

ಅಷ್ಟೇ ಅಲ್ಲ, ಭಾರತದ ಸ್ಮಾರ್ಟ್​ಫೋನ್ ಮಾರುಕಟ್ಟೆ ಅಗಾಧವಾದುದು. ಆ್ಯಪಲ್ ಫೋನ್​ಗಳು ಭಾರತದಲ್ಲೇ ತಯಾರಾಗುತ್ತಿರುವುದರಿಂದ ಐಫೋನ್​ಗಳು ಕಡಿಮೆ ಬೆಲೆಗೆ ಸಿಗಲಿದೆ. ಇದರಿಂದ ಆ್ಯಪಲ್​ನ ಐಫೋನ್​ಗಳ ಮಾರಾಟ ಮುಂದಿನ ದಿನಗಳಲ್ಲಿ ಗಣನೀಯವಾಗಿ ಹೆಚ್ಚುವ ನಿರೀಕ್ಷೆ ಇದೆ. ಹೀಗಾಗಿ, ಆ್ಯಪಲ್ ಸಂಸ್ಥೆ ತನ್ನದೇ ಕ್ರೆಡಿಟ್ ಕಾರ್ಡ್ ಹೊಂದುವುದು ಉತ್ತಮ ಎಂದು ಭಾವಿಸಿರಬಹುದು.

ಆ್ಯಪಲ್ ಕಂಪನಿಯ ಕ್ರೆಡಿಟ್ ಕಾರ್ಡ್ ಅಮೆರಿಕದಲ್ಲಿ ಬಹಳ ಜನಪ್ರಿಯವಾಗಿದೆ. ಗೋಲ್ಡ್​ಮ್ಯಾನ್ ಸ್ಯಾಕ್ಸ್ ಮತ್ತು ಮಾಸ್ಟರ್​ಕಾರ್ಡ್ ಸಂಸ್ಥೆಗಳ ಜೊತೆಗೂಡಿ ಆ್ಯಪಲ್ ಅಲ್ಲಿ ಬಹಳ ಉತ್ಕೃಷ್ಟ ಗುಣಮಟ್ಟದ ಮತ್ತು ತಂತ್ರಜ್ಞಾನದ ಕ್ರೆಡಿಟ್ ಕಾರ್ಡ್ ಹೊರತಂದಿದೆ. ಇಂಥದ್ದೇ ಕಾರ್ಡ್ ಭಾರತಕ್ಕೂ ಬರುತ್ತಾ?

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ