LinkedIn Layoff: ಲಿಂಕ್ಡ್​ಇನ್​ನಲ್ಲಿ ಲೇ ಆಫ್; ಕೆಲಸ ಹುಡುಕಿ ತೋರಿಸುವ ಕಂಪನಿಯಲ್ಲಿ ಕೆಲಸ ಕಳೆದುಕೊಳ್ಳಲಿರುವ 668 ಉದ್ಯೋಗಿಗಳು

|

Updated on: Oct 17, 2023 | 10:42 AM

Job Cuts: ಈ ವರ್ಷ 1.4 ಲಕ್ಷಕ್ಕೂ ಹೆಚ್ಚು ಮಂದಿಯ ಲೇ ಆಫ್ ನಡೆದಿರುವ ಟೆಕ್ ಕ್ಷೇತ್ರದಲ್ಲಿ ಈಗ ಇನ್ನಷ್ಟು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಮೈಕ್ರೋಸಾಫ್ಟ್ ಮಾಲಕತ್ವದ ಲಿಂಕ್ಡ್​ಇನ್​ನಲ್ಲಿ ಕೆಲಸ ಮಾಡುತ್ತಿರುವ 20,000 ಮಂದಿ ಪೈಕಿ ಶೇ. 3ರಷ್ಟು ಮಂದಿಗೆ ಕೆಲಸ ಹೋಗುತ್ತಿದೆ. 668 ಮಂದಿ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗುತ್ತಿದೆ. ಮೇ ತಿಂಗಳಲ್ಲಿ ಲಿಂಕ್ಡ್ ಇನ್ 716 ಮಂದಿಯನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿತ್ತು.

LinkedIn Layoff: ಲಿಂಕ್ಡ್​ಇನ್​ನಲ್ಲಿ ಲೇ ಆಫ್; ಕೆಲಸ ಹುಡುಕಿ ತೋರಿಸುವ ಕಂಪನಿಯಲ್ಲಿ ಕೆಲಸ ಕಳೆದುಕೊಳ್ಳಲಿರುವ 668 ಉದ್ಯೋಗಿಗಳು
ಲಿಂಕ್ಡ್​ಇನ್
Follow us on

ನವದೆಹಲಿ, ಅಕ್ಟೋಬರ್ 17: ಈ ವರ್ಷ ಟೆಕ್ ಕ್ಷೇತ್ರದಲ್ಲಿ ಉದ್ಯೋಗಕಡಿತ (job loss) ನಿಲ್ಲುವ ಸಾಧ್ಯತೆ ಕಾಣುತ್ತಿಲ್ಲ. ಹೆಚ್ಚೂಕಡಿಮೆ ಒಂದೂವರೆ ಲಕ್ಷ ಉದ್ಯೋಗಿಗಳಿಗೆ ಕೆಲಸ ನಷ್ಟ ಕಂಡಿರುವ ಟೆಕ್ ಕ್ಷೇತ್ರದಲ್ಲಿ ಈಗ ಇನ್ನಷ್ಟು ಲೇ ಆಫ್ (layoffs) ನಡೆಯುತ್ತಿದೆ. ಮೈಕ್ರೋಸಾಫ್ಟ್ ಮಾಲಕತ್ವದ ಲಿಂಕ್ಡ್​ಇನ್ (LinkedIn) ಸಂಸ್ಥೆಯ ಎಂಜಿನಿಯರಿಂಗ್, ಫೈನಾನ್ಸ್ ಮತ್ತು ಎಚ್​ಎರ್ ವಿಭಾಗದಿಂದ 668 ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಮೇ ತಿಂಗಳಲ್ಲಿ 716 ಮಂದಿಯನ್ನು ಕೆಲಸದಿಂದ ತೆಗೆದಿದ್ದ ಲಿಂಕ್ಡ್​ಇನ್ ಈಗ ಮತ್ತೊಂದು ಶಾಕ್ ಕೊಡಲು ನಿರ್ಧರಿಸಿದೆ. ನಿರೀಕ್ಷಿತ ರೀತಿಯಲ್ಲಿ ಆದಾಯ ಹೆಚ್ಚಳ ಆಗಿಲ್ಲದಿರುವುದು ಲಿಂಕ್ಡ್ ಇನ್ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ರಾಯ್ಟರ್ಸ್ ಸುದ್ದಿ ಸಂಸ್ಥೆ ಇದರ ವರದಿ ಮಾಡಿದೆ.

ಲಿಂಕ್ಡ್​ಇನ್​ನಲ್ಲಿ 20,000 ಮಂದಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಶೇ. 3ರಷ್ಟು ಮಂದಿಗೆ ಕೆಲಸ ಹೋಗುತ್ತಿದೆ. ಈ ಬಗ್ಗೆ ಲಿಂಕ್ಡ್​ಇನ್ ತನ್ನ ಬ್ಲಾಗ್ ಪೋಸ್ಟ್​ನಲ್ಲಿ ಬರೆದುಕೊಂಡಿದ್ದು ಹೀಗೆ:

‘ನಮ್ಮ ಸಂಘಟನೆಯ ರಚನೆಯಲ್ಲಿ ಬದಲಾವಣೆ ಮಾಡುತ್ತಿರುವ ಹೊತ್ತಿನಲ್ಲೇ ನಮ್ಮ ಭವಿಷ್ಯಕ್ಕೆ ಅಗತ್ಯವಾದ ಆದ್ಯತೆಗಳಿಗೆ ಹೂಡಿಕೆ ಮುಂದುವರಿಸುತ್ತೇವೆ. ನಮ್ಮ ಸದಸ್ಯರು ಮತ್ತು ಗ್ರಾಹಕರಿಗೆ ಮೌಲ್ಯಯುತ ಸೇವೆ ಸಿಗುವುದನ್ನು ನಾವು ಖಾತ್ರಿಪಡಿಸಲು ಯತ್ನಿಸುತ್ತಿದ್ದೇವೆ’ ಎಂದು ಲಿಂಕ್ಡ್​ಇನ್ ಬರೆದಿದೆ.

ಇದನ್ನೂ ಓದಿ: ಕೇವಲ 699 ರುಪಾಯಿಗೆ 10 ಸಿನಿಮಾ ನೋಡಿ; ಪಿವಿಆರ್ ಐನಾಕ್ಸ್​ನಿಂದ ಆಕರ್ಷಕ ಸಬ್​ಸ್ಕ್ರಿಪ್ಷನ್ ಆಫರ್

ಲಿಂಕ್ಡ್​ಇನ್ ಸಂಸ್ಥೆ ವಿಶ್ವಾದ್ಯಂತ 95 ಕೋಟಿಗೂ ಹೆಚ್ಚು ಮಂದಿಯ ನೆಟ್ವರ್ಕ್ ಹೊಂದಿದೆ. ಎಲ್ಲಾ ಕ್ಷೇತ್ರದ ಉದ್ಯೋಗಿಗಳ ಪ್ರೊಫೆಷನಲ್ ನೆಟ್ವರ್ಕ್ ಇದಾಗಿದೆ. ಉದ್ಯೋಗ ಅರಸಲು ಅಥವಾ ಉದ್ಯೋಗಿಗಳನ್ನು ಹುಡುಕಲು ಈ ನೆಟ್ವರ್ಕ್ ಬಹಳ ಉತ್ತಮ ಪ್ಲಾಟ್​ಫಾರ್ಮ್ ಆಗಿದೆ. ಇದು ಕೇವಲ ಉದ್ಯೋಗಕ್ಕಾಗಿ ಮಾತ್ರ ಸೀಮಿತವಾಗದೇ, ಬ್ಲಾಗ್​ಪೋಸ್ಟ್​ಗಳಿಗೂ ಅವಕಾಶ ನೀಡುತ್ತದೆ.

ಲಿಂಕ್ಡ್​ಇನ್ ಸಂಸ್ಥೆ ಆದಾಯ ಹೆಚ್ಚಿಸಲು ಪರದಾಡುತ್ತಿದೆ. 2023ರ ಹಣಕಾಸು ವರ್ಷದ 3ನೇ ಕ್ವಾರ್ಟರ್​ನಲ್ಲಿ ಶೇ. 10ರಷ್ಟು ಆದಾಯ ಹೆಚ್ಚಳ ಕಂಡಿದ್ದ ಅದು ಮಾರ್ಚ್ ಅಂತ್ಯದ ಕೊನೆಯ ಕ್ವಾರ್ಟರ್​ನಲ್ಲಿ ಶೇ. 5ರಷ್ಟು ಮಾತ್ರವೇ ಆದಾಯ ಹೆಚ್ಚಳ ಕಂಡಿದೆ.

ಮೇ ತಿಂಗಳಲ್ಲಿ ಲಿಂಕ್ಡ್​ಇನ್ 716 ಉದ್ಯೋಗಿಗಳನ್ನು ಲೇ ಆಫ್ ಮಾಡಲು ನಿರ್ಧರಿಸಲಾಗಿತ್ತು. ಆಗ ಸೇಲ್ಸ್, ಆಪರೇಷನ್ಸ್ ಹಾಗೂ ಸಪೋರ್ಟ್ ವಿಭಾಗಗಳಿಂದ ಉದ್ಯೋಗಕಡಿತವಾಗಿತ್ತು.

ಇದನ್ನೂ ಓದಿ: ಬ್ಯಾಂಕುಗಳಿಗಿಂತ ಎನ್​ಬಿಎಫ್​ಸಿಗಳಲ್ಲಿ ಠೇವಣಿ ದರ ಯಾಕೆ ಹೆಚ್ಚು? ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಎಸ್​ಬಿ ಖಾತೆ ತೆರೆಯಲು ಯಾಕೆ ಸಾಧ್ಯವಿಲ್ಲ?

ಈ ವರ್ಷ ಟೆಕ್ ಕ್ಷೇತ್ರದಲ್ಲಿ ಬಹಳ ಹೆಚ್ಚಿನ ಪ್ರಮಾಣದಲ್ಲಿ ಲೇ ಆಫ್ ಆಗುತ್ತಿದೆ. 8-9 ತಿಂಗಳಲ್ಲೇ ಒಂದೂವರೆ ಲಕ್ಷದಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಈ ವರ್ಷ ಮುಗಿಯುವುದರೊಳಗೆ ಇನ್ನೂ ಬಹಳಷ್ಟು ಮಂದಿಯ ಲೇ ಆಫ್ ನಡೆಯುವ ಭೀತಿ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ