ಅಕ್ಟೋಬರ್ 1, 2021ರಿಂದ ಅನ್ವಯ ಆಗುವಂತೆ ಕೆಲವು ಬದಲಾವಣೆಗಳು ಆಗಲಿವೆ. ಅದರಲ್ಲಿ ನಿಮ್ಮ ಗಮನಕ್ಕೆ ಬರಲೇಬೇಕಾದ ಕೆಲವು ಸಂಗತಿಗಳಿವೆ. ಇದನ್ನು ತಿಳಿಯದಿದ್ದಲ್ಲಿ ಅನಗತ್ಯವಾದ ಸಮಸ್ಯೆಗಳಿಗೆ ಸಿಲುಕಿಕೊಳ್ಳಬೇಕಾಗುತ್ತದೆ. ಇಲ್ಲಿ ಪ್ರಸ್ತಾಪಿಸುತ್ತಿರುವ ಬದಲಾವಣೆಗಳು ಎಲ್ಲರ ಬದುಕಿನಲ್ಲೂ ಪರಿಣಾಮ ಬೀರಲಿವೆ. ಪೆನ್ಷನ್ ನಿಯಮ ಬದಲಾವಣೆಯಿಂದ ಬ್ಯಾಂಕ್ ಚೆಕ್ ಪುಸ್ತಕಗಳ ಅಕ್ಟೋಬರ್ 1ರಿಂದ ಅನ್ವಯ ಆಗುವ ಬದಲಾವಣೆಗಳು ಇಲ್ಲಿವೆ.
1. ಪೆನ್ಷನ್ ನಿಯಮ ಬದಲಾವಣೆ
ಅಕ್ಟೋಬರ್ 1, 2021ರಿಂದ ಡಿಜಿಟಲ್ ಜೀವನ ಪ್ರಮಾಣಪತ್ರಗಳಿಗೆ ಸಂಬಂಧಿಸಿದ ನಿಯಮಗಳು ಬದಲಾಗಲಿವೆ. 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಯಾರಿಗಾದರೂ ಇದು ಅನ್ವಯ ಆಗುತ್ತದೆ. 80 ವರ್ಷಕ್ಕಿಂತ ಮೇಲ್ಪಟ್ಟ ಪಿಂಚಣಿದಾರರು ದೇಶದ ಎಲ್ಲ ಮುಖ್ಯ ಅಂಚೆ ಕಚೇರಿಗಳ ಜೀವನ್ ಪ್ರಮಾಣ ಕೇಂದ್ರದಲ್ಲಿ ತಮ್ಮ ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಸಲ್ಲಿಸುವ ಸೌಲಭ್ಯವನ್ನು ಹೊಂದಿರುತ್ತಾರೆ. ಈ ಕಾರ್ಯ ಪೂರ್ಣಗೊಳಿಸಲು ಕೊನೆ ದಿನಾಂಕವನ್ನು ನವೆಂಬರ್ 30, 2021 ಎಂದು ನಿಗದಿಪಡಿಸಲಾಗಿದೆ. ಈ ಕಾರ್ಯದ ವ್ಯಾಪಕ ಸ್ವರೂಪದ ಪರಿಣಾಮವಾಗಿ, ಅವುಗಳನ್ನು ಈಗಾಗಲೇ ಮುಚ್ಚಲಾಗಿದ್ದರೆ ಈ ಜೀವನ್ ಪ್ರಮಾಣ ಕೇಂದ್ರಗಳ ಐಡಿಯನ್ನು ಸಕ್ರಿಯಗೊಳಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಭಾರತೀಯ ಅಂಚೆ ಇಲಾಖೆಯನ್ನು ಕೇಳಲಾಗಿದೆ.
2. ಚೆಕ್ ಬುಕ್ ನಿಯಮ ಬದಲಾವಣೆ
ಮೂರು ಬ್ಯಾಂಕ್‌ಗಳ ಹಳೆಯ ಚೆಕ್‌ಬುಕ್‌ಗಳು ಮತ್ತು MICR ಕೋಡ್‌ಗಳು ಅಮಾನ್ಯವಾಗುತ್ತವೆ. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (OBC), ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಅಲಹಾಬಾದ್ ಬ್ಯಾಂಕ್ ಇವೇ ಆ ಮೂರು ಬ್ಯಾಂಕ್‌ಗಳು. ಇತ್ತೀಚಿನ ವಿಲೀನದ ಹಿನ್ನೆಲೆಯಲ್ಲಿ ಈ ಬದಲಾವಣೆಗಳನ್ನು ಘೋಷಿಸಲು ಬ್ಯಾಂಕ್‌ಗಳು ಟ್ವಿಟರ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿವೆ. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (ಒಬಿಸಿ) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಪಂಜಾಬ್ ನ್ಯಾಷನಲ್ ಬ್ಯಾಂಕಿನೊಂದಿಗೆ ವಿಲೀನಗೊಂಡಿವೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಹಳೆಯ ಚೆಕ್ ಬುಕ್ ಮತ್ತು ಈಗಾಗಲೇ ಇರುವ ಎಂಐಸಿಆರ್ ಕೋಡ್ ಮತ್ತು ಐಎಫ್ಎಸ್ಸಿ ಕೋಡ್ಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.
3 ಆಟೋ ಡೆಬಿಟ್ ಫೆಸಿಲಿಟಿ ನಿಯಮ ಬದಲಾವಣೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ) ಇತ್ತೀಚಿನ ಆದೇಶದ ಪ್ರಕಾರ, ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ನಿಂದ ಸ್ವಯಂ ಡೆಬಿಟ್ ಸೌಲಭ್ಯವು ಕೆಲವು ಬದಲಾವಣೆಗಳಿಗೆ ಒಳಪಡುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಎಲ್ಲ ಬ್ಯಾಂಕ್‌ಗಳು ‘ಹೆಚ್ಚುವರಿ ಅಂಶ ದೃಢೀಕರಣ’ ಕೈಗೊಳ್ಳುವಂತೆ ಆರ್ಬಿಐ ಆದೇಶಿಸಿದೆ. ಇದರರ್ಥ ಏನೆಂದರೆ, ಮಾಸಿಕ ಯುಟಿಲಿಟಿ ಬಿಲ್‌ಗಳು ಅಥವಾ ಮಾಸಿಕ ಆಟೋ-ಡೆಬಿಟ್ ವಹಿವಾಟು ಚಂದಾದಾರಿಕೆಗಳು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಇಂಥವು ಬಳಕೆದಾರರ ಅನುಮೋದನೆಯಿಲ್ಲದೆ ರಿನೀವಲ್ ಆಗುವುದಿಲ್ಲ. ಇದನ್ನು ಕೈಗೊಳ್ಳಲು ಅಧಿಸೂಚನೆಯನ್ನು ಪಾವತಿಗೆ 24 ಗಂಟೆಗಳ ಮುಂಚಿತವಾಗಿ ಸಂಬಂಧಿತ ಬ್ಯಾಂಕ್ ಗ್ರಾಹಕರಿಗೆ ಕಳುಹಿಸುತ್ತದೆ. ವಹಿವಾಟನ್ನು ಅನುಮೋದಿಸಿ ಮತ್ತು ದೃಢೀಕರಿಸಿದ ನಂತರ ಖಾತೆಯಿಂದ ಹಣವನ್ನು ಡೆಬಿಟ್ ಮಾಡಲಾಗುತ್ತದೆ. ಈ ಸೂಚನೆಯು ಎಸ್ಸೆಮ್ಮೆ ಅಥವಾ ಇ-ಮೇಲ್ ರೂಪದಲ್ಲಿ ಬರಬಹುದು.
4 ನಿಯಮ ಬದಲಾವಣೆಗೆ ಒಳಪಡುವ ಹೂಡಿಕೆಗಳು
ಮ್ಯೂಚುವಲ್ ಫಂಡ್ ಹೂಡಿಕೆದಾರರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಸೆಬಿ ಒಂದು ನಿಯಮವನ್ನು ತಂದಿದೆ. ಈ ನಿಯಮವು ಅಸೆಟ್ ಅಂಡರ್ ಮ್ಯಾನೇಜ್‌ಮೆಂಟ್ (ಎಎಂಸಿ) ಅಂದರೆ ಮ್ಯೂಚುವಲ್ ಫಂಡ್ ಹೌಸ್‌ನಲ್ಲಿ ಕೆಲಸ ಮಾಡುವ ಕಿರಿಯ ಉದ್ಯೋಗಿಗಳಿಗೆ ಅನ್ವಯಿಸುತ್ತದೆ. ಮ್ಯಾನೇಜ್‌ಮೆಂಟ್ ಕಂಪೆನಿಗಳ ಅಡಿಯಲ್ಲಿರುವ ಆಸ್ತಿಯ ಕಿರಿಯ ಉದ್ಯೋಗಿಗಳು ತಮ್ಮ ಒಟ್ಟು ಸಂಬಳದ ಶೇಕಡಾ 10 ರಷ್ಟನ್ನು ಆ ಮ್ಯೂಚುವಲ್ ಫಂಡ್‌ನ ಘಟಕಗಳಲ್ಲಿ ಅಕ್ಟೋಬರ್ 1, 2021ರಿಂದ ಜಾರಿಗೆ ಬರುವಂತೆ ಹೂಡಿಕೆ ಮಾಡಬೇಕು. ಇದೇ ರೀತಿ ಹಂತಹಂತವಾಗಿ ಅವರ ಸಂಬಳದ ಶೇಕಡಾ 20ರಷ್ಟನ್ನು 2023ರ ಹೊತ್ತಿಗೆ ಮಾಡಬೇಕಾಗುತ್ತದೆ. ಈ ಹೂಡಿಕೆಯು ಲಾಕ್-ಇನ್ ಅವಧಿಯನ್ನು ಹೊಂದಿರುತ್ತದೆ.
5. ಖಾಸಗಿ ಮದ್ಯದ ಅಂಗಡಿಗಳು ಮುಚ್ಚಲು..
ದೆಹಲಿಯಲ್ಲಿ ಮುಂದಿನ ತಿಂಗಳಿಂದ ಆರಂಭಿಸಿ ಖಾಸಗಿ ಮದ್ಯದಂಗಡಿಗಳು ನವೆಂಬರ್ 16, 2021ರವರೆಗೆ ಮುಚ್ಚಲಾಗುತ್ತವೆ. ಆ ಸಮಯದವರೆಗೆ ಸರ್ಕಾರಿ ಮಳಿಗೆಗಳಲ್ಲಿ ಮಾತ್ರ ಮಾರಾಟವಾಗುತ್ತವೆ. ಹೊಸ ಅಬಕಾರಿ ನೀತಿಯ ಅಡಿಯಲ್ಲಿ ರಾಜಧಾನಿಯನ್ನು 32 ವಲಯಗಳಾಗಿ ವಿಭಜಿಸುವ ಮೂಲಕ ಪರವಾನಗಿ ಹಂಚಿಕೆ ಪ್ರಕ್ರಿಯೆಯನ್ನು ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ಈ ನಿಯಮ ಬದಲಾವಣೆಯಂತೆ, ಹೊಸ ಪಾಲಿಸಿಯ ಅಡಿಯಲ್ಲಿ ಬರುವ ಅಂಗಡಿಗಳಿಗೆ ಮಾತ್ರ ನವೆಂಬರ್ 17ರಿಂದ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ.
ಇದನ್ನೂ ಓದಿ: Bank Holidays in October 2021: ಅಕ್ಟೋಬರ್ನಲ್ಲಿ ವಿವಿಧ ರಾಜ್ಯಗಳೆಲ್ಲ ಸೇರಿ 21 ಬ್ಯಾಂಕ್ ರಜಾ ದಿನಗಳು
(These 5 Changes Can Affect Day To Day Life From October 1 2021)