Car Loans: ಅಗ್ಗದ ಬಡ್ಡಿ ದರದಲ್ಲಿ ಕಾರು ಸಾಲ ಒದಗಿಸುತ್ತಿವೆ ಈ 9 ಬ್ಯಾಂಕ್​ಗಳು

| Updated By: Srinivas Mata

Updated on: Nov 02, 2021 | 11:46 PM

ಹಬ್ಬದ ಸಂದರ್ಭದಲ್ಲಿ ಈ 9 ಬ್ಯಾಂಕ್​ಗಳಿಂದ ಅಗ್ಗದ ದರ ಕಾರು ಸಾಲವನ್ನು ಒದಗಿಸಲಾಗುತ್ತಿದೆ. ಆ ಬಗೆಗಿನ ಸಂಪೂರ್ಣವಾದ ವಿವರ ಈ ಲೇಖನದಲ್ಲಿದೆ.

Car Loans: ಅಗ್ಗದ ಬಡ್ಡಿ ದರದಲ್ಲಿ ಕಾರು ಸಾಲ ಒದಗಿಸುತ್ತಿವೆ ಈ 9 ಬ್ಯಾಂಕ್​ಗಳು
ಸಾಂದರ್ಭಿಕ ಚಿತ್ರ
Follow us on

ಹಬ್ಬದ ಸಂದರ್ಭಗಳಲ್ಲಿ ಸಾಮಾನ್ಯವಾಗಿ ವಾಹನಗಳ ಮಾರಾಟ ಹೆಚ್ಚಾಗಿರುತ್ತದೆ. ಗ್ರಾಹಕರನ್ನು ಸೆಳೆಯಲು ಈ ಬಾರಿ ಹೆಚ್ಚಿನ ಕಂಪೆನಿಗಳು ಆಫರ್‌ಗಳನ್ನು ನೀಡಿವೆ. ಇತ್ತೀಚಿನ ದಿನಗಳಲ್ಲಿ ವಾಹನ ಸಾಲಗಳ ದರಗಳು ಅತ್ಯಂತ ಕಡಿಮೆ ಮಟ್ಟದಲ್ಲಿವೆ. ಮತ್ತು ಒಬ್ಬರ ಕನಸಿನ ಕಾರನ್ನು ಖರೀದಿಸಲು ಫಂಡ್​ನ ಉತ್ತಮ ಮೂಲವಾಗಿದೆ. ಕೆಲವು ಬ್ಯಾಂಕ್‌ಗಳು ವಾಹನದ ಆನ್-ರೋಡ್ ಬೆಲೆಯ ಶೇ 90ರ ವರೆಗೆ ಸಾಲವನ್ನು ನೀಡುತ್ತಿವೆ. ಕಾರನ್ನು ಖರೀದಿಸಲು ಸಾಲ ತೆಗೆದುಕೊಳ್ಳುವ ಮೊದಲು ಕೆಳಗೆ ಪಟ್ಟಿ ಮಾಡಲಾದ ಕೊಡುಗೆಗಳನ್ನು ಪರಿಶೀಲಿಸಿ.

ಅತ್ಯುತ್ತಮ 9 ಕಾರು ಸಾಲಗಳು:
1. ಪಂಜಾಬ್ ಮತ್ತು ಸಿಂಧ್ ಬ್ಯಾಂಕ್: ಪ್ರಸ್ತುತ ಶೇ 6.80ರಿಂದ ಪ್ರಾರಂಭವಾಗುವ ಬಡ್ಡಿ ದರಗಳೊಂದಿಗೆ ಅಗ್ಗದ ವಾಹನ ಸಾಲವನ್ನು ನೀಡುತ್ತಿದೆ. ನವೆಂಬರ್ 10, 2021ರ ವರೆಗೆ ಯಾವುದೇ ಪ್ರೊಸೆಸಿಂಗ್ ಶುಲ್ಕವಿಲ್ಲ. ರೂ. 1 ಲಕ್ಷದ ಐದು ವರ್ಷಗಳ ಸಾಲಕ್ಕೆ ರೂ. 1,971 ಮಾಸಿಕ ಕಂತು ಬರುತ್ತದೆ.

2. ಬ್ಯಾಂಕ್ ಆಫ್ ಇಂಡಿಯಾ: ಈ ಬ್ಯಾಂಕ್ ಸದ್ಯಕ್ಕೆ ಡಿಸೆಂಬರ್ 31ರ ವರೆಗೆ ಶೂನ್ಯ ಪ್ರೊಸೆಸಿಂಗ್ ಶುಲ್ಕದೊಂದಿಗೆ ಶೇ 6.85ರ ಬಡ್ಡಿದರದಲ್ಲಿ ಕಾರು ಸಾಲಗಳನ್ನು ನೀಡುತ್ತಿದೆ. ಮತ್ತು ರೂ. 1 ಲಕ್ಷ ಸಾಲಕ್ಕೆ ಮಾಸಿಕ ರೂ. 1,973ರಿಂದ ಪ್ರಾರಂಭವಾಗುತ್ತದೆ.

3. ಇಂಡಿಯನ್ ಬ್ಯಾಂಕ್: ಈ ಬ್ಯಾಂಕ್​ನಿಂದ ಶೇ 6.90ರ ಬಡ್ಡಿದರದಲ್ಲಿ ಕಾರು ಸಾಲಗಳನ್ನು ಮತ್ತು 1 ಲಕ್ಷ ರೂಪಾಯಿಗೆ ಐದು ವರ್ಷಗಳ ಅವಧಿಯ ಸಾಲಕ್ಕೆ 1,975 ರೂಪಾಯಿ ಇಎಂಐ ಬರುತ್ತದೆ.

4. ಬ್ಯಾಂಕ್ ಆಫ್ ಬರೋಡಾ: ಬ್ಯಾಂಕ್​ ಆಫ್​ ಬರೋಡಾದಿಂದ ಶೇ 7ರ ಬಡ್ಡಿ ದರದಲ್ಲಿ ಕಾರು ಸಾಲವನ್ನು ನೀಡಲಾಗುತ್ತಿದೆ. ಯಾವುದೇ ಗ್ರಾಹಕರು ಐದು ವರ್ಷಗಳ ಅವಧಿಯ ಸಾಲಕ್ಕೆ 1 ಲಕ್ಷ ರೂಪಾಯಿಗಳ ಕಾರ್ ಲೋನ್ ತೆಗೆದುಕೊಂಡರೆ ಇಎಂಐ 1,980 ರೂ. ಆಗುತ್ತದೆ

5. ಬ್ಯಾಂಕ್ ಆಫ್ ಮಹಾರಾಷ್ಟ್ರ: ಈ ಬ್ಯಾಂಕ್​ನಿಂದ ಶೇ 7.05ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ ಮತ್ತು ಐದು ವರ್ಷಗಳವರೆಗೆ ಸಾಲಕ್ಕೆ ಪ್ರತಿ 1 ಲಕ್ಷ ರೂಪಾಯಿಗೆ 1,982 ರೂಪಾಯಿ ಇಎಂಐ ಬರುತ್ತದೆ.

6, 7, 8. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಸೆಂಟ್ರಲ್ ಬ್ಯಾಂಕ್ ಇಂಡಿಯಾ: ಈ ಮೂರು ಬ್ಯಾಂಕ್​ಗಳು ಒಂದೇ ರೀತಿಯಾಗಿ ವಾರ್ಷಿಕ ಶೇ 7.25ರ ಬಡ್ಡಿ ದರವನ್ನು ವಿಧಿಸುತ್ತವೆ. ಇನ್ನು 5 ವರ್ಷದ ಅವಧಿಗೆ ಪ್ರತಿ 1 ಲಕ್ಷ ರೂಪಾಯಿ ಮೊತ್ತಕ್ಕೆ ತಿಂಗಳಿಗೆ 1,992 ರೂಪಾಯಿ ಇಎಂಐ ಬರುತ್ತದೆ.

9. ಪಂಜಾಬ್ ನ್ಯಾಷನಲ್ ಬ್ಯಾಂಕ್: ಈ ನವದೆಹಲಿ ಮೂಲದ ಬ್ಯಾಂಕ್ ಶೇ 7.30ರ ಬಡ್ಡಿದರದಲ್ಲಿ ಸಾಲ ಒದಗಿಸುತ್ತದೆ ಮತ್ತು ರೂ. 1,994 ಇಎಂಐ ಬರುತ್ತದೆ.

ಇದನ್ನೂ ಓದಿ: SBI Two Wheeler Loan: ಎಸ್​ಬಿಐನಿಂದ ಪ್ರೀ ಅಪ್ರೂವ್ಡ್ ದ್ವಿಚಕ್ರ ವಾಹನ ಸಾಲ; ಗರಿಷ್ಠ 3 ಲಕ್ಷ ರೂ. ತನಕ ಲಭ್ಯ