AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bharti Airtel: ಭಾರ್ತಿ ಏರ್​ಟೆಲ್​ ಎರಡನೇ ತ್ರೈಮಾಸಿಕ ಲಾಭ ರೂ. 1134 ಕೋಟಿ

ಟೆಲಿಕಾಂ ಕಂಪೆನಿ ಭಾರ್ತಿ ಏರ್​ಟೆಲ್ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 1134 ಕೋಟಿ ರೂಪಾಯಿ ಲಾಭವನ್ನು ಗಳಿಸಿದೆ. ಹಣಕಾಸು ಫಲಿತಾಂಶದ ಇನ್ನಷ್ಟು ವಿವರ ಈ ಲೇಖನದಲ್ಲಿದೆ.

Bharti Airtel: ಭಾರ್ತಿ ಏರ್​ಟೆಲ್​ ಎರಡನೇ ತ್ರೈಮಾಸಿಕ ಲಾಭ ರೂ. 1134 ಕೋಟಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Nov 02, 2021 | 6:12 PM

Share

ಟೆಲಿಕಾಂ ಸೇವೆ ಒದಗಿಸುವ ಭಾರ್ತಿ ಏರ್​ಟೆಲ್ ನವೆಂಬರ್ 2ನೇ ತಾರೀಕಿನ ಮಂಗಳವಾರದಂದು ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದ ಹಣಕಾಸು ಫಲಿತಾಂಶವನ್ನು ಪ್ರಕಟಿಸಿದೆ. ತೆರಿಗೆ ನಂತರದ ಲಾಭವು 1,134 ಕೋಟಿ ರೂಪಾಯಿ ಬಂದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಭಾರ್ತಿ ಏರ್​ಟೆಲ್ 763 ಕೋಟಿ ರೂಪಾಯಿ ನಷ್ಟವಾಗಿತ್ತು. ತ್ರೈಮಾಸಿಕ ಆಧಾರದಲ್ಲಿ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ತೆರಿಗೆ ನಂತರದ ಲಾಭವು ಶೇ 300ರಷ್ಟು ಹೆಚ್ಚಾಗಿದೆ.

ಹಿಂದಿನ ತ್ರೈಮಾಸಿಕದಲ್ಲಿ ರೂ. 284 ಕೋಟಿ ಲಾಭ ವರದಿಯಾಗಿತ್ತು. ಕಂಪೆನಿಯು ವರ್ಷದಿಂದ ವರ್ಷಕ್ಕೆ ಕ್ರೋಡೀಕೃತ ಲಾಭವು ಶೇ 13ರಷ್ಟು ಹೆಚ್ಚಾಗಿ, ರೂ. 25,060 ಕೋಟಿಯಿಂದ ರೂ. 28,326 ಕೋಟಿಗೆ ತಲುಪಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದಲ್ಲಿ 26,854 ಕೋಟಿ ರೂಪಾಯಿಯಿಂದ ಶೇ 5ರಷ್ಟು ಹೆಚ್ಚಳವಾಗಿದೆ.

ಪ್ರಸಕ್ತ ಹಣಕಾಸು ವರ್ಷದ ಈ ತ್ರೈಮಾಸಿಕದಲ್ಲಿ ಕ್ರೋಡೀಕೃತ ನಿವ್ವಳ ಲಾಭ 1,141 ಕೋಟಿ ರೂಪಾಯಿ ಮತ್ತು ಆದಾಯ ರೂ. 27,811 ಕೋಟಿ ರೂಪಾಯಿ ಆಗಬಹುದು ಎಂದು ಪೇಟೆಯ ನಿರೀಕ್ಷೆ ಇತ್ತು. ಕಂಪೆನಿಯು ರಿಲಯನ್ಸ್​ ಜಿಯೋದಿಂದ ಒಂದು ಸಲದ ಪಾವತಿಯಾಗಿ 722 ಕೋಟಿ ರೂಪಾಯಿಯನ್ನು ಏರ್​ಟೆಲ್ ಪಡೆದುಕೊಂಡಿದೆ. ಇದು ಸ್ಪೆಕ್ಟ್ರಂ ವರ್ಗಾವಣೆಯ ಮೊತ್ತವಾಗಿದ್ದು, ಇದು ಪರ್ಫಾರ್ಮೆನ್ಸ್​ಗೆ ಸೇರ್ಪಡೆ ಮಾಡುತ್ತದೆ.

ಭಾರ್ತಿ ಏರ್​ಟೆಲ್ ಷೇರು ಮಂಗಳವಾರದ ದಿನಾಂತ್ಯಕ್ಕೆ ಈ ಹಿಂದಿನ ಟ್ರೇಡಿಂಗ್ ಸೆಷನ್​ಗಿಂತ ಶೇ 0.60ರಷ್ಟು ಏರಿಕೆಯಾಗಿ, ರೂ. 712.9ರಲ್ಲಿ ವ್ಯವಹಾರ ಮುಗಿಸಿದೆ.

ಇದನ್ನೂ ಓದಿ: ದೂರಸಂಪರ್ಕ ಇಲಾಖೆಯಿಂದ ಏರ್​ಟೆಲ್​, VILಗೆ ರೂ. 3050 ಕೋಟಿ ದಂಡ; ಪಾವತಿಸಲು 3 ವಾರದ ಗಡುವು

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ