WhatsApp Pay Cashback: ದೀಪಾವಳಿಗೆ ಆಫರ್; ವಾಟ್ಸಾಪ್ ಪೇ ಮೂಲಕ ಪಾವತಿಗೆ ರೂ. 51 ಕ್ಯಾಶ್​ಬ್ಯಾಕ್

WhatsApp Pay Cashback: ದೀಪಾವಳಿಗೆ ಆಫರ್; ವಾಟ್ಸಾಪ್ ಪೇ ಮೂಲಕ ಪಾವತಿಗೆ ರೂ. 51 ಕ್ಯಾಶ್​ಬ್ಯಾಕ್
ಸಾಂದರ್ಭಿಕ ಚಿತ್ರ

WhatsApp Cashback Offer: ದೀಪಾವಳಿ ಪ್ರಯುಕ್ತ ವಾಟ್ಸಾಪ್ ಪೇದಿಂದ 51 ರೂಪಾಯಿ ಕ್ಯಾಶ್​ಬ್ಯಾಕ್ ಆಫರ್ ನೀಡಲಾಗುತ್ತಿದೆ. ಆ ಬಗ್ಗೆ ವಿವರ ಇಲ್ಲಿದೆ.

TV9kannada Web Team

| Edited By: Srinivas Mata

Nov 02, 2021 | 2:15 PM

ಈ ದೀಪಾವಳಿಗೆ ವಾಟ್ಸಾಪ್​ ಪೇ (WhatsApp Pay)ನಿಂದ ಬಳಕೆದಾರರಿಗೆ ಕ್ಯಾಶ್‌ಬ್ಯಾಕ್ ಡೀಲ್‌ಗಳನ್ನು ನೀಡುತ್ತಿದೆ. ವಾಟ್ಸಾಪ್ ಪೇ ಅನ್ನು ಜನಪ್ರಿಯ ಚಾಟ್ ಮೆಸೆಂಜರ್ ಅಪ್ಲಿಕೇಷನ್ ಮೂಲಕ ಪ್ರತಿ ವಹಿವಾಟಿನ ಮೇಲೆ ಐದು ಬಾರಿ 51 ರೂಪಾಯಿಗಳ ಕ್ಯಾಶ್‌ಬ್ಯಾಕ್ ನೀಡುವ ಪ್ರಚಾರ ಮಾಡಲಾಗುತ್ತಿದೆ. ಅದರ ಸೇವೆಯನ್ನು ಬಳಸಿಕೊಂಡು ಯಾರಿಗಾದರೂ ನೀವು ಎಷ್ಟು ಹಣವನ್ನು ನೀಡಬಹುದು ಎಂಬುದಕ್ಕೆ ಯಾವುದೇ ಮಿತಿಯಿಲ್ಲ. ನಿಮ್ಮ ಸ್ನೇಹಿತರಿಗೆ ರೂ. 1 ಪಾವತಿಸಬಹುದು ಮತ್ತು ಪ್ರತಿಯಾಗಿ 51 ರೂಪಾಯಿಗಳನ್ನು ಪಡೆಯಬಹುದು. ಬೀಟಾ ಚಾನೆಲ್ ಮೋಡ್‌ನಲ್ಲಿ ಪ್ರಚಾರದ ಕೊಡುಗೆ ಈಗಾಗಲೇ ಲಭ್ಯವಿದೆ. ಈ ವಾಟ್ಸಾಪ್ ಪೇ ಪ್ರಚಾರವು ಮೊದಲ ಐದು ವಹಿವಾಟುಗಳಿಗೆ ಲಭ್ಯ ಇರುವುದರಿಂದ ಬಳಕೆದಾರರು ರೂ. 255ರ ವರೆಗೆ ಪಡೆಯಬಹುದು. ಪ್ರತಿ ಐದು ವಹಿವಾಟುಗಳಿಗೆ 51 ರೂಪಾಯಿ ಖಾತ್ರಿಯಾಗಿ ದೊರೆಯಲಿದೆ. ನೀವು ವಾಟ್ಸಾಪ್ ಪೇ ಸೇವೆಗೆ ಜೋಡಣೆ ಮಾಡಿರುವ ಬ್ಯಾಂಕ್ ಖಾತೆಗೆ ಹಣವನ್ನು ತಕ್ಷಣವೇ ಜಮಾ ಮಾಡಲಾಗುತ್ತದೆ.

ವಾಟ್ಸಾಪ್ ಆಂಡ್ರಾಯ್ಡ್ ಬೀಟಾ ಅಪ್ಲಿಕೇಷನ್ ಚಾಟ್ ವಿಂಡೋದ ಮೇಲ್ಭಾಗದಲ್ಲಿ ಬ್ಯಾನರ್ ಅನ್ನು ತೋರಿಸುತ್ತದೆ. ಇದು “ನಗದು ನೀಡಿ, 51 ರೂಪಾಯಿ ವಾಪಸ್ ಪಡೆಯಿರಿ,” ಎಂಬ ಬ್ಯಾನರ್ ಅನ್ನು ಪ್ರದರ್ಶಿಸುತ್ತದೆ. ಆದ್ದರಿಂದ ಮೂಲಭೂತವಾಗಿ ನೀವು ವಿವಿಧ ಪಾವತಿಗಳಲ್ಲಿ 5 ಬಾರಿ 255 ರೂಪಾಯಿಗಳವರೆಗೆ ಕ್ಯಾಶ್​ಬ್ಯಾಕ್ ಪಡೆಯಬಹುದು. ಸದ್ಯಕ್ಕೆ ಪ್ರಚಾರವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಸೀಮಿತ ಆಗಿರುವಂತೆ ತೋರುತ್ತಿದೆ.

WhatsApp ಪಾವತಿ: ಸೆಟ್​ ಮಾಡುವುದು ಹೇಗೆ? – ಯಾವುದೇ WhatsApp ಚಾಟ್‌ನಲ್ಲಿ ಟೆಕ್ಸ್ಟ್ ಜಾಗದಲ್ಲಿ “Re” ಐಕಾನ್ ಕ್ಲಿಕ್ ಮಾಡಬೇಕು. – ಪಾವತಿ ವಿಧಾನವನ್ನು ಸೇರ್ಪಡೆ ಮಾಡಲು WhatsAppನಿಂದ ನೋಟಿಫಿಕೇಷನ್ ಅನ್ನು ಸ್ವೀಕರಿಸುತ್ತೀರಿ. ಅದನ್ನು ಕ್ಲಿಕ್ ಮಾಡಬೇಕು. – ಪಟ್ಟಿಯಿಂದ ಬ್ಯಾಂಕ್ ಆಯ್ಕೆ ಮಾಡಿ. – ನಿಮ್ಮ ಬ್ಯಾಂಕಿನ ನೋಂದಾಯಿತ ಮೊಬೈಲ್ ಫೋನ್‌ಗೆ WhatsApp ಸಂಖ್ಯೆ ಹೊಂದಿಕೆ ಅಗುತ್ತದೆಯೇ ಎಂದು ಎರಡು ಬಾರಿ ಪರಿಶೀಲಿಸಬೇಕು. – ನೀವು ಮುಂದುವರಿದರೆ ಗುರುತನ್ನು ಪರಿಶೀಲಿಸಲು ಫೋನ್ ಸಂಖ್ಯೆಗೆ ಎಸ್ಸೆಮ್ಮೆಸ್ ಕಳುಹಿಸಲಾಗುತ್ತದೆ. – ಈಗಾಗಲೇ ಯುಪಿಐ PIN ಹೊಂದಿದ್ದರೆ ಸೇವೆಯನ್ನು ಸಕ್ರಿಯಗೊಳಿಸಲು ನೀವು ಈಗ ಮಾಡಬೇಕಾಗಿರುವುದು ಏನೆಂದರೆ ಅದನ್ನು ನಮೂದಿಸಬೇಕು. ಯುಪಿಐ ಅನ್ನು ನೀವು ಮೊದಲ ಬಾರಿಗೆ ಬಳಸುತ್ತಿದ್ದರೆ ಹೊಸ PIN ಅನ್ನು ಸೃಷ್ಟಿಸಬೇಕಾಗುತ್ತದೆ.

ವಾಟ್ಸಾಪ್​ನ ಈ ಕ್ರಮವು Google Pay, PayTM, PhonePe ಸೇರಿದಂತೆ ಪಾವತಿ ಅಪ್ಲಿಕೇಷನ್‌ಗಳನ್ನು ಹೆಚ್ಚು ಅವಲಂಬಿಸಿರುವ ಬಳಕೆದಾರರನ್ನು ಆಕರ್ಷಿಸುವ ಉದ್ದೇಶವನ್ನು ಹೊಂದಿದೆ. ಆ್ಯಪ್‌ನ ಬೀಟಾ ಆವೃತ್ತಿಯಲ್ಲಿ ಮಾತ್ರ ಗುರುತಿಸಲಾದ ಕಾರಣ ಈ ವೈಶಿಷ್ಟ್ಯವನ್ನು ಹೆಚ್ಚು ಮಂದಿಗೆ ಇನ್ನೂ ಬಿಡುಗಡೆ ಮಾಡಲಾಗಿಲ್ಲ. ಆದ್ದರಿಂದ ಬೀಟಾ ಪರೀಕ್ಷಕರು ಈ ವೈಶಿಷ್ಟ್ಯವನ್ನು ಪರಿಶೀಲಿಸಬೇಕು. ಮುಂದಿನ ದಿನಗಳಲ್ಲಿ ಇದು ಹೆಚ್ಚು ಮಂದಿಗೆ ದೊರೆಯುವ ಸಾಧ್ಯತೆಯಿದೆ.

ಕಳೆದ ತಿಂಗಳ ಆರಂಭದಲ್ಲಿ WhatsApp ವೈಶಿಷ್ಟ್ಯಗಳ ಟ್ರ್ಯಾಕರ್ ಕ್ಯಾಶ್​ಬ್ಯಾಕ್ ಅನ್ನು ಗುರುತಿಸಿತು. Wabetainfo ಚಾಟ್ ವಿಂಡೋದ ಮೇಲ್ಭಾಗದಲ್ಲಿ ಹೊಸ ಕ್ಯಾಶ್‌ಬ್ಯಾಕ್ ಬ್ಯಾನರ್ ಅನ್ನು ತೋರಿಸುವ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿದೆ. ಬ್ಯಾನರ್‌ನಲ್ಲಿ “ನಿಮ್ಮ ಮುಂದಿನ ಪಾವತಿಯಲ್ಲಿ ಕ್ಯಾಶ್‌ಬ್ಯಾಕ್ ಪಡೆಯಿರಿ. ಪ್ರಾರಂಭಿಸಲು ಟ್ಯಾಪ್ ಮಾಡಿ” ಎಂದಿದೆ. ಬಳಕೆದಾರರು ತಮ್ಮ ಮೊದಲ ಪಾವತಿಯ ನಂತರ ಕ್ಯಾಶ್‌ಬ್ಯಾಕ್ ಪಡೆಯುತ್ತಾರೆಯೇ ಅಥವಾ ಮೆಸೇಜಿಂಗ್ ಅಪ್ಲಿಕೇಷನ್ ಅನ್ನು ಬಳಸಿಕೊಂಡು ತಮ್ಮ ಮೊದಲ ಪಾವತಿಯನ್ನು ಮಾಡುವ ಮೊದಲು ಪಡೆಯುತ್ತಾರೆಯೇ ಎಂಬುದನ್ನು ಬಹಿರಂಗಪಡಿಸಲಾಗಿಲ್ಲ.

ಇದನ್ನೂ ಓದಿ: Yamaha Festive Offer: ಯಮಹಾದಿಂದ ಹಬ್ಬದ ಆಫರ್​; ರೂ. 4000 ತನಕ ಕ್ಯಾಶ್​ಬ್ಯಾಕ್

Follow us on

Related Stories

Most Read Stories

Click on your DTH Provider to Add TV9 Kannada