Dhanteras 2021: ನವೆಂಬರ್ 2ರ ಧನ್​ತೇರಸ್​ನಂದು ಚಿನ್ನ ಖರೀದಿಗೆ ಶುಭ ಮುಹೂರ್ತದ ಮಾಹಿತಿ ಇಲ್ಲಿದೆ

Gold Buying Muhurat Today: ನವೆಂಬರ್ 2, 2021ರಂದು ಧನ್​ತೇರಸ್​ನೊಂದಿಗೆ ದೀಪಾವಳಿ ಹಬ್ಬ ಆರಂಭವಾಗುತ್ತದೆ. ಈ ದಿನದಂದು ಚಿನ್ನ, ಬೆಳ್ಳಿ, ಪಾತ್ರೆಗಳ ಖರೀದಿಯನ್ನು ಶುಭ ಎಂದು ಪರಿಗಣಿಸಲಾಗುತ್ತದೆ. ಆ ಮುಹೂರ್ತದ ಬಗ್ಗೆ ವಿವರ ಇಲ್ಲಿದೆ.

Dhanteras 2021: ನವೆಂಬರ್ 2ರ ಧನ್​ತೇರಸ್​ನಂದು ಚಿನ್ನ ಖರೀದಿಗೆ ಶುಭ ಮುಹೂರ್ತದ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Nov 02, 2021 | 11:29 AM

ಧನ್​ತೇರಸ್ ಎಂದೂ ಕರೆಯುವ ಧನತ್ರಯೋದಶಿಯು ನವೆಂಬರ್ 2, 2021ರಂದು ಇದೆ. ಐದು ದಿನಗಳ ದೀರ್ಘ ದೀಪಾವಳಿ ಹಬ್ಬದ ಪ್ರಾರಂಭವನ್ನು ಇದು ಸೂಚಿಸುತ್ತದೆ. ಇದನ್ನು ಮಂಗಳಕರವೆಂದು ಪರಿಗಣಿಸಿ, ಜನರು ಚಿನ್ನ ಮತ್ತು ಇತರ ವಸ್ತುಗಳನ್ನು ಖರೀದಿಸಲು ಸಿದ್ಧರಾಗಿದ್ದಾರೆ. ವಾಸ್ತವವಾಗಿ, ಜನರು ಈ ಮಂಗಳಕರ ಸಂದರ್ಭದಲ್ಲಿ ವಸ್ತುಗಳನ್ನು ಖರೀದಿಸಲು ಇಡೀ ವರ್ಷ ತಮ್ಮ ಹಣವನ್ನು ಉಳಿಸುತ್ತಾರೆ. ಈ ದಿನದಂದು ಬೆಲೆಬಾಳುವ ಲೋಹಗಳ ಸಾಂಪ್ರದಾಯಿಕ ಖರೀದಿಗಳಿಂದಾಗಿ ವ್ಯಾಪಾರ ಸಮುದಾಯಕ್ಕೆ ಧನ್​ತೇರಸ್ ವಿಶೇಷ ಪ್ರಾಮುಖ್ಯ ಹೊಂದಿದೆ. ಧನ್​ತೇರಸ್‌ನಲ್ಲಿ- ಈ ವಿಶೇಷ ದಿನವನ್ನು ಗುರುತಿಸಲು ಜನರು ಚಿನ್ನ, ಆಭರಣಗಳು, ಉಪಕರಣಗಳು ಮತ್ತು ಪಾತ್ರೆಗಳನ್ನು ಖರೀದಿಸಲು ಮಾರುಕಟ್ಟೆಗೆ ಬರುತ್ತಾರೆ. ಧನ್​ತೇರಸ್ ಏಕೆ ಮಹತ್ವದ್ದಾಗಿದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಸರಿ, ಅದರ ಬಗ್ಗೆ ದಂತಕಥೆಗಳು ಮತ್ತು ಜನಪದದಲ್ಲಿ ಉಲ್ಲೇಖಗಳಿವೆ. ಹಿಂದೂ ಪುರಾಣಗಳ ಪ್ರಕಾರ, ಧನ್ವಂತರಿ ದೇವರನ್ನು ಪೂಜಿಸುವ ಮೂಲಕ ಧನ್​ತೇರಸ್ ಅನ್ನು ಆಚರಿಸಲಾಗುತ್ತದೆ.

ಧನ್​ತೇರಸ್ ಏಕೆ ಆಚರಿಸಲಾಗುತ್ತದೆ? ಧನ್​ತೇರಸ್‌ನಂದು ಲಕ್ಷ್ಮಿ ದೇವಿಯು ತನ್ನ ಭಕ್ತರ ಮನೆಗಳಿಗೆ ಭೇಟಿ ನೀಡುತ್ತಾಳೆ ಮತ್ತು ಅವರ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂದು ನಂಬಲಾಗುತ್ತದೆ. ಅಲ್ಲದೆ, ಸಂಪತ್ತು ಮತ್ತು ಆಸ್ತಿಗಳ ಅಧಿಪತಿ ಕುಬೇರನನ್ನು (ಧನ-ಕುಬೇರ) ಸಹ ಈ ದಿನ ಪೂಜಿಸಲಾಗುತ್ತದೆ.

ಜನರು ಧನ್​ತೇರಸ್​ನಲ್ಲಿ ಲೋಹವನ್ನು ಏಕೆ ಖರೀದಿಸುತ್ತಾರೆ? ಧನ್​ತೇರಸ್‌ನಲ್ಲಿ ಚಿನ್ನ, ಆಭರಣಗಳು ಮತ್ತು ಪಾತ್ರೆಗಳನ್ನು ಖರೀದಿಸುವುದು ಜನಪದ ಕಥೆಗಳಲ್ಲೇ ಮೂಲವಾಗಿ ಕಂಡುಬರುತ್ತದೆ. ಅದರ ಪ್ರಕಾರ, ಹಿಮಾ ಎಂಬ ರಾಜನಿರುತ್ತಾನೆ. ಆತನ ಮಗ ಮದುವೆಯಾದ ನಾಲ್ಕನೇ ದಿನದಲ್ಲಿ ಸಾಯುತ್ತಾನೆ ಎಂದು ಭವಿಷ್ಯ ನುಢಿಯಲಾಗುತ್ತದೆ. ಹಿಮಾ ರಾಜನ ಸೊಸೆಯು ತನ್ನ ಪತಿಯನ್ನು ರಕ್ಷಿಸಿಕೊಳ್ಳುವುದಕ್ಕೆ ಯಮರಾಜ ತನ್ನ ಮನೆಗೆ ಪ್ರವೇಶಿಸದಂತೆ ತಡೆಯುವ ಮೂಲಕ ಬಾಗಿಲಲ್ಲಿ ಬಹಳಷ್ಟು ದೀಪಗಳು, ಚಿನ್ನಾಭರಣಗಳು ಮತ್ತು ಬೆಳ್ಳಿಯ ನಾಣ್ಯಗಳ ರಾಶಿಯನ್ನು ಇರಿಸುತ್ತಾಳೆ.

ಜಾನಪದದ ಪ್ರಕಾರ, ಹೊಳೆಯುವ ಆಭರಣಗಳಿಂದ ಬರುವ ಬಲವಾದ ಬೆಳಕು ಮತ್ತು ಪ್ರಕಾಶಮಾನವಾದ ದೀಪಗಳು ಹಾವಿನಂತೆ ಕಾಣಿಸಿಕೊಂಡ ಯಮರಾಜನನ್ನು ಕುರುಡಾಗಿಸಿತು. ಆದ್ದರಿಂದ ಅವನು ಹಿಮಾ ಮಗನ ಪ್ರಾಣವನ್ನು ತೆಗೆಯಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ, ಚಿನ್ನ ಮತ್ತು ಬೆಳ್ಳಿ ಆಭರಣಗಳು ಅಥವಾ ಹೊಸ ಪಾತ್ರೆಗಳನ್ನು ಖರೀದಿಸುವುದರಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬ ಸದಸ್ಯರನ್ನು ಯಾವುದೇ ಅನಾರೋಗ್ಯದಿಂದ ರಕ್ಷಿಸಬಹುದು ಎಂದು ನಂಬಲಾಗಿದೆ. ಧನ್​ತೇರಸ್‌ನಲ್ಲಿ ಲೋಹಗಳನ್ನು ಖರೀದಿಸುವುದು ಮನೆಗೆ ಅದೃಷ್ಟ, ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.

ಧನ್​ತೇರಸ್​ನಲ್ಲಿ ಚಿನ್ನವನ್ನು ಖರೀದಿಸಲು ಶುಭ ಸಮಯ 2ನೇ ನವೆಂಬರ್ 2021ರಂದು ಧನ್​ತೇರಸ್ ಶುಭ ಸಮಯದಲ್ಲಿ ಚಿನ್ನವನ್ನು ಖರೀದಿಸಲು ರಾತ್ರಿ 7.10 ಮತ್ತು 8.44ರ ಮಧ್ಯೆ ಉತ್ತಮ. ಹಳದಿ ಬೆಲೆಬಾಳುವ ಲೋಹವನ್ನು ಬೆಳಗ್ಗೆ 11.31ರಿಂದ ಸಂಜೆ 4.10ರ ಮಧ್ಯೆ ಖರೀದಿ ಮಾಡಬಹುದು.

ಇದನ್ನೂ ಓದಿ: Dhanteras Gold Purchase: ಧನ್​ತೇರಸ್​ನಲ್ಲಿ ಚಿನ್ನವನ್ನು ಏಕೆ ಖರೀದಿಸಬೇಕು ಎಂಬುದಕ್ಕೆ ಇಲ್ಲಿದೆ ವಿವರಣೆ