Multibagger: ಕೇವಲ 18 ತಿಂಗಳಲ್ಲಿ 1 ಲಕ್ಷ ರೂ. ಹೂಡಿಕೆ 1.06 ಕೋಟಿ ರೂಪಾಯಿಗೆ ಬೆಳೆದ ಮಲ್ಟಿಬ್ಯಾಗರ್ ಸ್ಟಾಕ್ ಇದು

| Updated By: Srinivas Mata

Updated on: Dec 07, 2021 | 11:30 AM

ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್​ನಲ್ಲಿ ಮಾಡಿದ ರೂ. 1 ಲಕ್ಷದ ಹೂಡಿಕೆಯು ಕೇವಲ 18 ತಿಂಗಳಲ್ಲಿ 1 ಕೋಟಿ ರೂಪಾಯಿಗೂ ಹೆಚ್ಚಾಗಿದೆ. ಯಾವುದು ಆ ಸ್ಟಾಕ್ ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.

Multibagger: ಕೇವಲ 18 ತಿಂಗಳಲ್ಲಿ 1 ಲಕ್ಷ ರೂ. ಹೂಡಿಕೆ 1.06 ಕೋಟಿ ರೂಪಾಯಿಗೆ ಬೆಳೆದ ಮಲ್ಟಿಬ್ಯಾಗರ್ ಸ್ಟಾಕ್ ಇದು
ಸಾಂದರ್ಭಿಕ ಚಿತ್ರ
Follow us on

ಕೊವಿಡ್​-19 ಪರಿಣಾಮ ಜಾಗತಿಕ ಆರ್ಥಿಕತೆಯ ಮೇಲೇ ಆಗಿದೆ. ಆದರೂ ಭಾರತದ ಷೇರು ಮಾರುಕಟ್ಟೆಯಲ್ಲಿ ಉತ್ತಮ ಸಂಖ್ಯೆಯಲ್ಲಿ ಷೇರುಗಳು ಹೂಡಿಕೆದಾರರಿಗೆ ಅದ್ಭುತವಾದ ರಿಟರ್ನ್ಸ್​ ನೀಡಿವೆ. ಇವುಗಳಲ್ಲಿ ಕೆಲವು ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್​ಗಳು ಸಹ ಒಳಗೊಂಡಿವೆ. ಅಂಥವುಗಳಲ್ಲಿ ಸಿಂಪ್ಲೆಕ್ಸ್ ಪೇಪರ್ಸ್ ಷೇರುಗಳು ಸಹ ಒಂದು. ಇದು ಪ್ರಮುಖ ಬೆಂಚ್‌ಮಾರ್ಕ್ ರಿಟರ್ನ್ ಅನ್ನು ಮೀರಿಸಿದೆ. ಸಿಂಪ್ಲೆಕ್ಸ್ ಪೇಪರ್ಸ್ ಷೇರಿನ ಬೆಲೆಯು ಪ್ರತಿ ಷೇರಿಗೆ ರೂ. 0.54 ರಿಂದ (31 ಜುಲೈ 2020ರ ಬೆಲೆ) ರೂ. 57.35ಕ್ಕೆ ಏರಿದೆ. ಈ ಒಂದೂವರೆ ವರ್ಷದ ಅವಧಿಯಲ್ಲಿ ಸುಮಾರು 106 ಪಟ್ಟು ಏರಿಕೆಯಾಗಿದೆ. ಈ ಮಲ್ಟಿಬ್ಯಾಗರ್ ಸ್ಟಾಕ್‌ನ ಬೆಲೆ ಇತಿಹಾಸದ ಪ್ರಕಾರ, ಕಳೆದ 5 ಟ್ರೇಡ್ ಸೆಷನ್‌ಗಳಲ್ಲಿ ತನ್ನ ಷೇರುದಾರರಿಗೆ ಶೇ 21.50ರಷ್ಟು ಲಾಭವನ್ನು ನೀಡಿದೆ. ಎಲ್ಲ 5 ಸೆಷನ್‌ಗಳಲ್ಲಿ ಶೇ 5ರ ಅಪ್ಪರ್ ಸರ್ಕ್ಯೂಟ್ ಅನ್ನು ತಲುಪಿದೆ. ಕಳೆದ ಒಂದು ತಿಂಗಳಲ್ಲಿ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಪ್ರತಿ ಷೇರಿಗೆ ರೂ. 22.30ರಿಂದ ರೂ. 57.35 ಮಟ್ಟಕ್ಕೆ ಏರಿದೆ. ಈ ಅವಧಿಯಲ್ಲಿ ಶೇ 155ರಷ್ಟು ರಿಟರ್ನ್ಸ್ ನೀಡಿದೆ. ಕಳೆದ 6 ತಿಂಗಳಲ್ಲಿ ಈ ಸ್ಟಾಕ್ ರೂ. 2.87ರ ಹಂತದಿಂದ ರೂ. 57.35ಕ್ಕೆ ಏರಿಕೆಯಾಗಿದ್ದು, ಈ ಅವಧಿಯಲ್ಲಿ ಶೇ 1900ರಷ್ಟು ಹೆಚ್ಚಳವಾಗಿದೆ.

ಅದೇ ರೀತಿ, ಕಳೆದ ಒಂದು ವರ್ಷದಲ್ಲಿ ಈ ಮಲ್ಟಿಬ್ಯಾಗರ್ ಸ್ಟಾಕ್ ರೂ. 0.84ರಿಂದ ರೂ. 57.35 ಮಟ್ಟಕ್ಕೆ ಏರಿದ್ದು, ಈ ಅವಧಿಯಲ್ಲಿ ಶೇ 6700ರಷ್ಟು ಹೆಚ್ಚಳವಾಗಿದೆ. ಅದೇ ರೀತಿ ಕಳೆದ 18 ತಿಂಗಳಲ್ಲಿ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ರೂ. 0.54 ರಿಂದ ರೂ. 57.35ಕ್ಕೆ ಏರಿದ್ದು, ಈ ಅವಧಿಯಲ್ಲಿ ಸುಮಾರು ಶೇ 10,500ರಷ್ಟು ಮೌಲ್ಯಯುತವಾಗಿದೆ.

ಹೂಡಿಕೆಯ ಮೇಲೆ ಪರಿಣಾಮ
ಸಿಂಪ್ಲೆಕ್ಸ್ ಪೇಪರ್ಸ್ ಷೇರಿನ ಬೆಲೆ ಇತಿಹಾಸವನ್ನು ಗಣನೆಗೆ ತೆಗೆದುಕೊಳ್ಳುವುದಾದರೆ, ಹೂಡಿಕೆದಾರರು ಒಂದು ವಾರದ ಹಿಂದೆ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ನಲ್ಲಿ 1 ಲಕ್ಷವನ್ನು ಹೂಡಿಕೆ ಮಾಡಿ, ಪ್ರತಿ ಷೇರಿಗೆ ರೂ. 47.25 ಮಟ್ಟದಲ್ಲಿ ಖರೀದಿಸಿದ್ದರೆ ಇಂದು 1.21 ಲಕ್ಷ ರೂಪಾಯಿಯಾಗಿ ಬದಲಾಗುತ್ತಿತ್ತು. ಹೂಡಿಕೆದಾರರು ಒಂದು ತಿಂಗಳ ಹಿಂದೆ ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ 2.55 ಲಕ್ಷ ರೂಪಾಯಿಗೆ ಬದಲಾಗುತ್ತಿತ್ತು. ಹೂಡಿಕೆದಾರರು 6 ತಿಂಗಳ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ, 20 ಲಕ್ಷ ಆಗುತ್ತಿತ್ತು.

ಒಂದು ವರ್ಷದ ಹಿಂದೆ ಈ ಸ್ಟಾಕ್‌ನಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಮತ್ತು ಈ ಅವಧಿಯಲ್ಲಿ ಆ 1 ರೂಪಾಯಿ ರೂ. 68 ಲಕ್ಷ ರೂಪಾಯಿಯಾಗಿ ಬದಲಾಗುತ್ತಿತ್ತು. ಅದೇ ರೀತಿ ಹೂಡಿಕೆದಾರರು 18 ತಿಂಗಳ ಹಿಂದೆ ಈ ಷೇರಿನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿ, ರೂ. 0.54ರ ಮಟ್ಟದಲ್ಲಿ ಒಂದು ಷೇರು ಅಂತ ಖರೀದಿಸಿದ್ದರೆ, 1 ರೂಪಾಯಿ ಮೊತ್ತವು 1.06 ಕೋಟಿ ರೂಪಾಯಿ ಆಗಿರುತ್ತಿತ್ತು.

ನಿಫ್ಟಿ 50 ರಿಟರ್ನ್
ಸಿಫ್ಲೆಕ್ಸ್ ಪೇಪರ್ಸ್ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಭಾರತದಲ್ಲಿನ ಆಲ್ಫಾ ಸ್ಟಾಕ್‌ಗಳಲ್ಲಿ ಒಂದಾಗಿದೆ. ಏಕೆಂದರೆ ಇದು ಈ ಅವಧಿಯಲ್ಲಿ NSE ನಿಫ್ಟಿ ಗಳಿಕೆಯನ್ನೂ ಮೀರಿದೆ. 18 ತಿಂಗಳ ಅವಧಿಯಲ್ಲಿ ನಿಫ್ಟಿ ಶೇಕಡಾ 55ರಷ್ಟು ಗಳಿಕೆಯನ್ನು ನೀಡಿದರೆ, ಈ ಪೆನ್ನಿ ಸ್ಟಾಕ್ ತನ್ನ ಷೇರುದಾರರಿಗೆ ಶೇಕಡಾ 10,500ರಷ್ಟು ಲಾಭವನ್ನು ನೀಡಿದೆ.

ಇದನ್ನೂ ಓದಿ: Penny Stocks: ಒಂದೇ ವರ್ಷದಲ್ಲಿ ಶೇ 9100ರಷ್ಟು ರಿಟರ್ನ್ಸ್ ನೀಡಿರುವ ಪೆನ್ನಿ ಸ್ಟಾಕ್​ಗಳಿವು; ಏನಿದು ಪೆನ್ನಿ ಸ್ಟಾಕ್?