Penny Stocks: ಒಂದೇ ವರ್ಷದಲ್ಲಿ ಶೇ 9100ರಷ್ಟು ರಿಟರ್ನ್ಸ್ ನೀಡಿರುವ ಪೆನ್ನಿ ಸ್ಟಾಕ್​ಗಳಿವು; ಏನಿದು ಪೆನ್ನಿ ಸ್ಟಾಕ್?

ಇಲ್ಲಿ ಕೆಲವು ಪೆನ್ನಿ ಸ್ಟಾಕ್​ಗಳ ಬಗ್ಗೆ ಮಾಹಿತಿ ಇದೆ. ಇವು ಕಳೆದ ಒಂದು ವರ್ಷದಲ್ಲಿ ಶೇ 9100ರಷ್ಟು ರಿಟರ್ನ್ಸ್ ನೀಡಿದ ಉದಾಹರಣೆ ಸಹ ಇದೆ. ಏನಿದು ಪೆನ್ನಿ ಸ್ಟಾಕ್ಸ್ ಎಂಬ ಮಾಹಿತಿ ಕೂಡ ನೀಡಲಾಗಿದೆ.

Penny Stocks: ಒಂದೇ ವರ್ಷದಲ್ಲಿ ಶೇ 9100ರಷ್ಟು ರಿಟರ್ನ್ಸ್ ನೀಡಿರುವ ಪೆನ್ನಿ ಸ್ಟಾಕ್​ಗಳಿವು; ಏನಿದು ಪೆನ್ನಿ ಸ್ಟಾಕ್?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Oct 07, 2021 | 9:17 PM

ಷೇರು ಮಾರುಕಟ್ಟೆಯಲ್ಲಿ ಬೃಹತ್ ಆದಾಯವನ್ನು ಸೃಷ್ಟಿಸುವುದು ಅಂದರೆ ಕೆಲವು ಅಪಾಯಗಳನ್ನು ಸಹ ಮೈ ಮೇಲೆ ಎಳೆದುಕೊಳ್ಳುವುದು ಅಂತ ಅರ್ಥ. ಅವುಗಳಲ್ಲಿ ಪೆನ್ನಿ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವುದು ಸಹ ಒಂದು. ಪೆನ್ನಿ ಸ್ಟಾಕ್​ಗಳು ಅಂದರೆ ಹೆಸರೇ ಸೂಚಿಸುವಂತೆ, ಬಹಳ ಅಗ್ಗದ ಮತ್ತು ಕಡಿಮೆ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಸ್ಟಾಕ್​ಗಳಾಗಿವೆ. ಈ ಸ್ಟಾಕ್‌ಗಳು ಸಾಮಾನ್ಯವಾಗಿ 25 ರೂಪಾಯಿಗಿಂತ ಕಡಿಮೆ ಬೆಲೆಯನ್ನು ಹೊಂದಿರುತ್ತವೆ. ಇವು ಹೂಡಿಕೆದಾರರಿಗೆ ಬಹಳ ಆಕರ್ಷಕವಾಗಿಯೂ ಇದ್ದು, ಆದರೆ ಅಷ್ಟೇ ಅಪಾಯವು ಇರುತ್ತದೆ. ಈ ಸ್ಟಾಕ್‌ಗಳ ಬಗ್ಗೆ ಮೂಲಭೂತ ಅಂಶಗಳ ಬಗ್ಗೆ ಕಡಿಮೆ ಮಾಹಿತಿ ಲಭ್ಯ ಇರುವುದರಿಂದ ಅವುಗಳನ್ನು ಸಂಶೋಧಿಸುವುದು ಮತ್ತು ವಿಶ್ಲೇಷಿಸುವುದು ತುಂಬಾ ಕಷ್ಟ. ಆದರೂ ಅಂತಹ ಷೇರುಗಳು ಮಲ್ಟಿಬ್ಯಾಗರ್‌ಗಳಾಗುವ ಉತ್ತಮ ಸಾಮರ್ಥ್ಯವನ್ನು ಹೊಂದಿದ್ದು, ಅಲ್ಪಾವಧಿಯಲ್ಲಿಯೇ ಹೂಡಿಕೆದಾರರಿಗೆ ಭಾರಿ ಲಾಭವನ್ನು ನೀಡುತ್ತವೆ. ಆದರೆ ಈ ಸ್ಟಾಕ್‌ಗಳು ಕಡಿಮೆ ಪ್ರಮಾಣದಲ್ಲಿ ವಹಿವಾಟು ಆಗುತ್ತವೆ ಮತ್ತು ಆದ್ದರಿಂದ ವಹಿವಾಟಿನಲ್ಲಿ ಆಗಾಗ ಅಪ್ಪರ್ ಸರ್ಕ್ಯೂಟ್‌ ತಲುಪುತ್ತದೆ. ಅದರ ಜತೆಗೆ ಆಗಾಗ ಲೋವರ್ ಸರ್ಕ್ಯೂಟ್‌ಗಳನ್ನೂ ಮುಟ್ಟುತ್ತದೆ. ಆದರೂ ಹೂಡಿಕೆದಾರರು ಉತ್ತಮ ಮೂಲಭೂತ ಅಂಶಗಳನ್ನು ಹೊಂದಿರುವ ಪೆನ್ನಿ ಸ್ಟಾಕ್ ಕಂಡುಕೊಳ್ಳಲು ಮತ್ತು ಅತ್ಯಂತ ಕಡಿಮೆ ದರದಲ್ಲಿ ಸ್ಟಾಕ್ ಖರೀದಿಸಲು ಸಾಧ್ಯವಾದರೆ ಅಗಾಧವಾದ ಸಂಪತ್ತನ್ನು ಗಳಿಸಬಹುದು.

ಹೆಚ್ಚಿನ ಅಪಾಯ ಇರುವುದರಿಂದ ಪೆನ್ನಿ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವುದು ತೀರಾ ಸಾಮಾನ್ಯವಲ್ಲ. ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುವ ಸಾಮರ್ಥ್ಯ ಹೆಚ್ಚಿಗೆ ಇರುವ ಹೂಡಿಕೆದಾರರು ಮಾತ್ರ ಇಂಥ ಸ್ಟಾಕ್​ಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಸಾಧ್ಯ. ಈ ಸ್ಟಾಕ್​ಗಳ ಸಾಮರ್ಥ್ಯವು ಅಧಿಕವಾಗಿದ್ದರೂ ಅದೇ ವೇಳೆ ನೆಲ ಕಚ್ಚುವ ಸಂಭವವೂ ಜಾಸ್ತಿ ಇರುತ್ತದೆ. ಹೆಚ್ಚಿನ ಅಪಾಯ ತೆಗೆದುಕೊಳ್ಳುವಂಥ ಹೂಡಿಕೆದಾರರಾಗಿದ್ದರೂ ಪೋರ್ಟ್​ಫೋಲಿಯೋದಲ್ಲಿ ಶೇ 2 ರಿಂದ 3ರಷ್ಟಕ್ಕಿಂತ ಹೆಚ್ಚಿನ ಪೆನ್ನಿ ಸ್ಟಾಕ್‌ಗಳನ್ನು ಒಳಗೊಂಡಿರಬಾರದು. ಅಲ್ಲದೆ, ಅಂತಹ ಷೇರುಗಳೊಂದಿಗೆ ಖರೀದಿಸುವ ಮತ್ತು ಅದನ್ನೇ ದೀರ್ಘಕಾಲ ಇಟ್ಟುಕೊಂಡಿರುವ ಉದ್ದೇಶ ಬೇಡ. ನೀವು ಈ ಸ್ಟಾಕ್‌ನಿಂದ ಯೋಗ್ಯವಾದ ಆದಾಯ ಪಡೆದಿದ್ದರೆ ಅದನ್ನು ಇರಿಸಿಕೊಳ್ಳುವುದಕ್ಕಿಂತ ಮಾರಾಟ ಮಾಡುವುದು ಹೆಚ್ಚು ಸೂಕ್ತ. ಮೊದಲೇ ಹೇಳಿದಂತೆ ಈ ಹೆಚ್ಚಿನ ಅಪಾಯದ ಹೊರತಾಗಿಯೂ ಕೆಲವು ಪೆನ್ನಿ ಸ್ಟಾಕ್‌ಗಳು ಕಳೆದ 1 ವರ್ಷದಲ್ಲಿ ಹೂಡಿಕೆದಾರರಿಗೆ ಅತಿ ಹೆಚ್ಚು ಆದಾಯವನ್ನು ಗಳಿಸಿಕೊಡುವಲ್ಲಿ ಯಶಸ್ವಿಯಾಗಿವೆ. ಅಂತಹ ಕೆಲವು ಸ್ಟಾಕ್‌ಗಳನ್ನು ನೋಡೋಣ:

ಫ್ಲೋಮಿಕ್ ಗ್ಲೋಬಲ್ ಲಾಜಿಸ್ಟಿಕ್ಸ್ – ಶೇ 9,113 ಈ ಸ್ಟಾಕ್ ಅಕ್ಟೋಬರ್ 2020 ರಲ್ಲಿ ಸುಮಾರು ರೂ. 1.24 ರಿಂದ ಸುಮಾರು ರೂ. 114ಕ್ಕೆ ಜಿಗಿದಿದೆ. ಕೇವಲ 1 ವರ್ಷದಲ್ಲಿ ತನ್ನ ಹೂಡಿಕೆದಾರರಿಗೆ ಶೇ 9,100ರಷ್ಟು ಲಾಭವನ್ನು ನೀಡಿದೆ. ಫ್ಲೋಮಿಕ್ ಗ್ಲೋಬಲ್ ಲಾಜಿಸ್ಟಿಕ್ಸ್ ಸಾಗರ ಸರಕು ಸೇವೆಗಳನ್ನು ಒದಗಿಸುತ್ತದೆ. ಇದರಲ್ಲಿ ಡಾಕ್ಯುಮೆಂಟ್ಸ್, ಪ್ಯಾಲೆಟೈಸೇಶನ್, ಸರಕು ಮೇಲ್ವಿಚಾರಣೆ ಮತ್ತು ಲೋಡಿಂಗ್, ಸರಕು ಟ್ರ್ಯಾಕಿಂಗ್ ಮತ್ತು ಇತರ ಸೇವೆಗಳು ಸೇರಿವೆ.

ಆದಿನಾಥ್ ಟೆಕ್ಸ್​ಟೈಲ್ಸ್ – ಶೇ 4,717 ಈ ಸ್ಟಾಕ್ ಅಕ್ಟೋಬರ್ 2020ರಲ್ಲಿ ಸುಮಾರು ರೂ. 1.48ರಿಂದ ಸುಮಾರು ರೂ.71 ಕ್ಕೆ ಜಿಗಿದಿದೆ. ಕೇವಲ 1 ವರ್ಷದಲ್ಲಿ ತನ್ನ ಹೂಡಿಕೆದಾರರಿಗೆ ಶೇ 4,717ರಷ್ಟು ಲಾಭವನ್ನು ನೀಡಿದೆ. ಆದಿನಾಥ್ ಟೆಕ್ಸ್‌ಟೈಲ್ಸ್ ಲಿಮಿಟೆಡ್ ಭಾರತದಲ್ಲಿ ಮಿಶ್ರಿತ ಅಕ್ರಿಲಿಕ್ ಮತ್ತು ಇತರ ನೂಲುಗಳನ್ನು ತಯಾರಿಸುತ್ತದೆ ಹಾಗೂ ಮಾರಾಟ ಮಾಡುತ್ತದೆ. ಇದು ಹೊಲಿಯದ ಸೂಟಿಂಗ್, ಶರ್ಟ್ ಮತ್ತು ಉಡುಗೆ ಸಾಮಗ್ರಿಗಳ ವ್ಯಾಪಾರ ಮಾಡುತ್ತದೆ. ಆದಿನಾಥ್ ಟೆಕ್ಸ್‌ಟೈಲ್ಸ್ ಲಿಮಿಟೆಡ್ ಅನ್ನು 1979ರಲ್ಲಿ ಸ್ಥಾಪಿಸಲಾಗಿದ್ದು, ಇದು ಭಾರತದ ಲುಧಿಯಾನದಲ್ಲಿದೆ.

ಟಾಟಾ ಟೆಲಿ ಸರ್ವಿಸಸ್ – ಶೇ 1,223 ಈ ಸ್ಟಾಕ್ ಅಕ್ಟೋಬರ್ 2020ರಲ್ಲಿ ಸುಮಾರು ರೂ. 3ರಿಂದ ಪ್ರಸ್ತುತ ಸುಮಾರು ರೂ. 40ಕ್ಕೆ ಜಿಗಿದಿದೆ. ಕೇವಲ 1 ವರ್ಷದಲ್ಲಿ ತನ್ನ ಹೂಡಿಕೆದಾರರಿಗೆ ಶೇ 1,223ರಷ್ಟು ಲಾಭವನ್ನು ನೀಡಿದೆ. ಟಾಟಾ ಟೆಲಿ ಸರ್ವಿಸಸ್ (ಮಹಾರಾಷ್ಟ್ರ) ಲಿಮಿಟೆಡ್ ಮೂಲ ಮತ್ತು ಸೆಲ್ಯುಲಾರ್ ದೂರಸಂಪರ್ಕ ಸೇವೆಗಳನ್ನು ಒದಗಿಸುತ್ತದೆ. ಕಂಪೆನಿಯು ತಂತು ಮತ್ತು ನಿಸ್ತಂತು ದೂರಸಂಪರ್ಕ ಚಟುವಟಿಕೆಗಳಲ್ಲಿ ತೊಡಗಿದೆ. ಕಂಪೆನಿಯು ಸುಮಾರು ಎರಡು ಏಕೀಕೃತ ಪ್ರವೇಶ (ಮೂಲ ಮತ್ತು ಸೆಲ್ಯುಲಾರ್) ಸೇವಾ ಪರವಾನಗಿಗಳನ್ನು ಹೊಂದಿದೆ. ಒಂದು ಮುಂಬೈ ಸೇವಾ ಪ್ರದೇಶಕ್ಕೆ ಮತ್ತು ಇನ್ನೊಂದು ಮಹಾರಾಷ್ಟ್ರ ಮತ್ತು ಗೋವಾಕ್ಕೆ ಹೊಂದಿದೆ.

ಬ್ರೈಟ್‌ಕಾಮ್ ಗುಂಪು – ಶೇ 1,186 ಈ ಸ್ಟಾಕ್ ಅಕ್ಟೋಬರ್ 2020ರಲ್ಲಿ ಸುಮಾರು ರೂ 5.5ರಿಂದ ಸುಮಾರು ರೂ.71ಕ್ಕೆ ಜಿಗಿದಿದೆ. ಕೇವಲ 1 ವರ್ಷದಲ್ಲಿ ತನ್ನ ಹೂಡಿಕೆದಾರರಿಗೆ ಶೇ 1,186ರಷ್ಟು ಲಾಭವನ್ನು ನೀಡಿದೆ. ಬ್ರೈಟ್‌ಕಾಮ್ ಗ್ರೂಪ್ ಲಿಮಿಟೆಡ್ ಈ ಹಿಂದೆ ಲೈಕೋಸ್ ಇಂಟರ್‌ನೆಟ್ ಲಿಮಿಟೆಡ್ ಹೆಸರಿನಲ್ಲಿದ್ದು, ಭಾರತ ಆಧಾರಿತ ಸೇವಾ ಕಂಪೆನಿಯಾಗಿದೆ. ಡಿಜಿಟಲ್ ಮಾರ್ಕೆಟಿಂಗ್ ಸೇವೆಗಳು ಮತ್ತು ಕಂಪ್ಯೂಟರ್ ಸಾಫ್ಟ್‌ವೇರ್ ಮತ್ತು ಸೇವೆಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಕಂಪೆನಿಯು ಎರಡು ವಿಭಾಗಗಳ ಮೂಲಕ ಕಾರ್ಯ ನಿರ್ವಹಿಸುತ್ತದೆ: ಡಿಜಿಟಲ್ ಮಾರ್ಕೆಟಿಂಗ್ ವಿಭಾಗ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿ ವಿಭಾಗ. ಇದು ಜಾಗತಿಕ ಮಾಹಿತಿ ತಂತ್ರಜ್ಞಾನ ಅನುಷ್ಠಾನ ಮತ್ತು ಹೊರಗುತ್ತಿಗೆ ಸೇವೆಗಳ ಪೂರೈಕೆದಾರ.

ವಾರಿ ರಿನೀವಬಲ್ ಟೆಕ್ನಾಲಜೀಸ್ – ಶೇ 938 ಈ ಸ್ಟಾಕ್ ಅಕ್ಟೋಬರ್ 2020 ರಲ್ಲಿ ಸುಮಾರು 17.8 ರೂಪಾಯಿಯಿಂದ ಸುಮಾರು 185ಕ್ಕೆ ಜಿಗಿದಿದೆ. ಕೇವಲ 1 ವರ್ಷದಲ್ಲಿ ತನ್ನ ಹೂಡಿಕೆದಾರರಿಗೆ ಶೇ 938ರಷ್ಟು ಲಾಭವನ್ನು ನೀಡಿದೆ. ವಾರಿ ರಿನೀವಬಲ್ ಟೆಕ್ನಾಲಜಿ ಲಿಮಿಟೆಡ್ (WRTL), ಈ ಹಿಂದೆ ಸಂಗಮ್ ನವೀಕರಿಸಬಹುದಾದ ಲಿಮಿಟೆಡ್ ಆಗಿದ್ದು, ಭಾರತ ಮೂಲದ ನವೀಕರಿಸಬಹುದಾದ ಇಂಧನ ಕಂಪೆನಿ. ಕಂಪೆನಿಯು ನವೀಕರಿಸಬಹುದಾದ ಇಂಧನ ಮೂಲಗಳ ಮೂಲಕ ವಿದ್ಯುತ್ ಉತ್ಪಾದನೆಯ ವ್ಯವಹಾರದಲ್ಲಿ ತೊಡಗಿದೆ.

ರಟ್ಟನ್ ಇಂಡಿಯಾ ಇನ್​ಫ್ರಾಸ್ಟ್ರಕ್ಚರ್ – ಶೇ 697 ಈ ಸ್ಟಾಕ್ ಅಕ್ಟೋಬರ್ 2020ರಲ್ಲಿ ಸುಮಾರು ರೂ. 5ರಿಂದ ಪ್ರಸ್ತುತ ರೂ. 42ಕ್ಕೆ ಏರಿದೆ. ಕೇವಲ 1 ವರ್ಷದಲ್ಲಿ ತನ್ನ ಹೂಡಿಕೆದಾರರಿಗೆ ಸುಮಾರು ಶೇ 700ರಷ್ಟು ಲಾಭವನ್ನು ನೀಡಿದೆ. ರಟ್ಟನ್ ಇಂಡಿಯಾ ಎಂಟರ್‌ಪ್ರೈಸಸ್ ಲಿಮಿಟೆಡ್ ಭಾರತದಲ್ಲಿ ಮಾನವ ಸಂಪನ್ಮೂಲ ಸಲಹಾ ಮತ್ತು ಮಾನವ ಸಂಪನ್ಮೂಲ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಕಂಪೆನಿಯು ವೇತನದಾರರ ನಿರ್ವಹಣೆ ಮತ್ತು ಇತರ ಸಂಬಂಧಿತ ಸೇವೆಗಳನ್ನು ಒದಗಿಸುತ್ತದೆ. ಕಂಪೆನಿಯನ್ನು ಮೊದಲು ರಟ್ಟನ್ ಇಂಡಿಯಾ ಇನ್​ಫ್ರಾಸ್ಟ್ರಕ್ಚರ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು ಮತ್ತು ಅದರ ಹೆಸರನ್ನು ರಟ್ಟನ್ ಇಂಡಿಯಾ ಎಂಟರ್​ಪ್ರೈಸಸ್ ಲಿಮಿಟೆಡ್ ಎಂದು ಮಾರ್ಚ್ 2021ರಲ್ಲಿ ಬದಲಾಯಿಸಲಾಯಿತು. ರಟ್ಟನ್ ಇಂಡಿಯಾ ಎಂಟರ್​ಪ್ರೈಸಸ್ ಲಿಮಿಟೆಡ್ ಅನ್ನು 2010ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ನವದೆಹಲಿಯಲ್ಲಿದೆ.

ಗಣೇಶ್ ಹೌಸಿಂಗ್ – ಶೇ 629 ಈ ಸ್ಟಾಕ್ ಅಕ್ಟೋಬರ್ 2020ರಲ್ಲಿ ಸುಮಾರು ರೂ. 25ರಿಂದ ಸುಮಾರು ರೂ. 182ಕ್ಕೆ ಜಿಗಿದಿದೆ. ಕೇವಲ 1 ವರ್ಷದಲ್ಲಿ ತನ್ನ ಹೂಡಿಕೆದಾರರಿಗೆ ಸುಮಾರು ಶೇ 629ರಷ್ಟು ಲಾಭವನ್ನು ನೀಡಿದೆ. ಗಣೇಶ್ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ ಭಾರತದಲ್ಲಿ ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದೆ. ಇದು ವಸತಿ, ವಾಣಿಜ್ಯ, ಚಿಲ್ಲರೆ ವ್ಯಾಪಾರ ಮತ್ತು ಪ್ರಚಾರ ಹಾಗೂ ಅಭಿವೃದ್ಧಿಯಲ್ಲಿ ತೊಡಗಿದೆ.

ರಿಲಯನ್ಸ್ ಪವರ್ – ಶೇ 405 ಈ ಸ್ಟಾಕ್ ಅಕ್ಟೋಬರ್ 2020 ರಲ್ಲಿ ಸುಮಾರು ರೂ. 3ರಿಂದ ಪ್ರಸ್ತುತ ಸುಮಾರು ರೂ. 14ಕ್ಕೆ ಜಿಗಿದಿದೆ. ಕೇವಲ 1 ವರ್ಷದಲ್ಲಿ ತನ್ನ ಹೂಡಿಕೆದಾರರಿಗೆ ಶೇ 400ರಷ್ಟು ಲಾಭವನ್ನು ನೀಡಿದೆ. ರಿಲಯನ್ಸ್ ಪವರ್ ಲಿಮಿಟೆಡ್ ಅದರ ಅಂಗಸಂಸ್ಥೆಗಳೊಂದಿಗೆ ಭಾರತದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿದೆ. ಇದರ ವಿದ್ಯುತ್ ಯೋಜನೆಗಳ ಬಂಡವಾಳವು ಕಲ್ಲಿದ್ದಲು, ಅನಿಲ, ಜಲವಿದ್ಯುತ್, ಗಾಳಿ ಮತ್ತು ಸೌರ ಶಕ್ತಿಯನ್ನು ಆಧರಿಸಿದೆ. ಕಂಪೆನಿಯು 5,945 ಮೆಗಾವ್ಯಾಟ್‌ಗಳ (MW) ಕಾರ್ಯಾಚರಣೆಯ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಈ ಕಂಪೆನಿಯನ್ನು 1995ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ಮುಂಬೈನಲ್ಲಿ ನೆಲೆಗೊಂಡಿದೆ.

HFCL – ಶೇ 379 ಈ ಸ್ಟಾಕ್ ಅಕ್ಟೋಬರ್ 2020ರಲ್ಲಿ ಸುಮಾರು ರೂ. 16 ರಿಂದ ಸುಮಾರು ರೂ. 79ಕ್ಕೆ ಜಿಗಿದಿದೆ. ಕೇವಲ 1 ವರ್ಷದಲ್ಲಿ ತನ್ನ ಹೂಡಿಕೆದಾರರಿಗೆ ಶೇ 379ರಷ್ಟು ಲಾಭವನ್ನು ನೀಡಿದೆ. HFCL ಲಿಮಿಟೆಡ್ ಟೆಲಿಕಾಂ ಉತ್ಪನ್ನಗಳನ್ನು ಭಾರತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಯಾರಿಸುತ್ತದೆ ಮತ್ತು ಮಾರಾಟ ಮಾಡುತ್ತದೆ. ಕಂಪೆನಿಯು ಟೆಲಿಕಾಂ ಉತ್ಪನ್ನಗಳು ಮತ್ತು ಟರ್ನ್‌ಕೀ ಒಪ್ಪಂದಗಳು ಮತ್ತು ಸೇವೆಗಳ ವಿಭಾಗಗಳ ಮೂಲಕ ಕಾರ್ಯ ನಿರ್ವಹಿಸುತ್ತದೆ. ಕಂಪೆನಿಯನ್ನು ಈ ಹಿಂದೆ ಹಿಮಾಚಲ್ ಫ್ಯೂಚರಿಸ್ಟಿಕ್ ಕಮ್ಯುನಿಕೇಷನ್ಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು ಮತ್ತು ಅದರ ಹೆಸರನ್ನು ಅಕ್ಟೋಬರ್ 2019ರಲ್ಲಿ HFCL ಲಿಮಿಟೆಡ್ ಎಂದು ಬದಲಾಯಿಸಲಾಯಿತು. HFCL ಲಿಮಿಟೆಡ್ ಅನ್ನು 1987ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ನವ ದೆಹಲಿಯಲ್ಲಿದೆ.

ಸಿಜಿ ಪವರ್ – ಶೇ 378 ಈ ಸ್ಟಾಕ್ ಅಕ್ಟೋಬರ್ 2020ರಲ್ಲಿ ಸುಮಾರು ರೂ. 24ರಿಂದ ಪ್ರಸ್ತುತ ಸುಮಾರು ರೂ. 115ಕ್ಕೆ ಏರಿದೆ. ಕೇವಲ 1 ವರ್ಷದಲ್ಲಿ ತನ್ನ ಹೂಡಿಕೆದಾರರಿಗೆ ಶೇ 378ರಷ್ಟು ಲಾಭವನ್ನು ನೀಡಿದೆ. CG ಪವರ್ ಮತ್ತು ಇಂಡಸ್ಟ್ರಿಯಲ್ ಸಲ್ಯೂಷನ್ಸ್ ಲಿಮಿಟೆಡ್, ಈ ಹಿಂದೆ ಕ್ರಾಂಪ್ಟನ್ ಗ್ರೀವ್ಸ್ ಲಿಮಿಟೆಡ್, ಪವರ್ ಟ್ರಾನ್​ಫರ್ಮರ್ ಮತ್ತು ರಿಯಾಕ್ಟರ್, ಕಡಿಮೆ ಟೆನ್ಷನ್ ಮೋಟಾರ್ ಮತ್ತು ಸ್ವಿಚ್ ಗೇರುಗಳ ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ. ಯುಟಿಲಿಟಿಗಳು, ಕೈಗಾರಿಕೆಗಳು ಮತ್ತು ಗ್ರಾಹಕರಿಗೆ ಕಂಪೆನಿಯು ಎಂಡ್​ ಟು ಎಂಡ್ ಪರಿಹಾರಗಳನ್ನು ಒದಗಿಸುತ್ತದೆ. ಇದು ವಿದ್ಯುತ್ ಮತ್ತು ವಿತರಣಾ ಟ್ರಾನ್ಸ್‌ಫಾರ್ಮರ್‌ಗಳು, ಹೆಚ್ಚುವರಿ ಅಧಿಕ ವೋಲ್ಟೇಜ್ (EHV), ಮಧ್ಯಮ ವೋಲ್ಟೇಜ್ (MV) ಸರ್ಕ್ಯೂಟ್ ಬ್ರೇಕರ್‌ಗಳು, ಮಿಂಚಿನ ಬಂಧಕಗಳು, ಐಸೊಲೇಟರ್‌ಗಳು ಮತ್ತು ವ್ಯಾಕ್ಯೂಮ್ ಇಂಟರಪ್ಟರ್‌ಗಳನ್ನು ಸಹ ತಯಾರಿಸುತ್ತದೆ.

ಇವುಗಳು ಕೆಲವು ಪೆನ್ನಿ ಸ್ಟಾಕ್‌ಗಳಾಗಿವೆ. ಅದು ಮಲ್ಟಿಬ್ಯಾಗರ್ ಅನ್ನು ತನ್ನ ಹೂಡಿಕೆದಾರರಿಗೆ ದೃಢವಾದ ಆದಾಯವನ್ನು ನೀಡಿದೆ. ಆದರೂ ಪೆನ್ನಿ ಸ್ಟಾಕ್‌ನಲ್ಲಿ ಹೂಡಿಕೆ ಮಾಡುವ ಮೊದಲು ಯಾವಾಗಲೂ ಜಾಗರೂಕರಾಗಿರಬೇಕು ಮತ್ತು ಸಾಧ್ಯವಾದಷ್ಟು ಸಂಶೋಧನೆ ಮಾಡಬೇಕು. ಕಡಿಮೆ ಅಪಾಯವನ್ನು ತೆಗೆದುಕೊಳ್ಳ ಬಯಸುವ ಹೂಡಿಕೆದಾರರು ಪೆನ್ನಿ ಸ್ಟಾಕ್ ಬದಲಿಗೆ ಮ್ಯೂಚುವಲ್ ಫಂಡ್ ಅಥವಾ ಇತರ ಸುರಕ್ಷಿತ ಲಾರ್ಜ್ ಕ್ಯಾಪ್ ಸ್ಟಾಕ್​ಗಳಿಗೆ ಆದ್ಯತೆ ನೀಡಬೇಕು.

ಇದನ್ನೂ ಓದಿ: Do’s And Don’ts In Share Market: ಷೇರು ಮಾರ್ಕೆಟ್​ನಲ್ಲಿ ಮಾಡುವ ಹಾಗೂ ಮಾಡಬಾರದು ಕೆಲಸಗಳಿವು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ