Closing Bell: ಷೇರುಪೇಟೆ ಸೂಚ್ಯಂಕ 488 ಪಾಯಿಂಟ್ಸ್ ಏರಿಕೆ; ಟಾಟಾ ಮೋಟಾರ್ಸ್ ಷೇರು ಶೇ 12ರಷ್ಟು ಗಳಿಕೆ
ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಅಕ್ಟೋಬರ್ 7ನೇ ತಾರೀಕಿನ ಗುರುವಾರದಂದು ಗಳಿಕೆ ಕಂಡಿವೆ. ಟಾಟಾ ಮೋಟಾರ್ಸ್ ಕಂಪೆನಿಯ ಷೇರು ಅದ್ಭುತವಾದ ಏರಿಕೆ ದಾಖಲಿಸಿದೆ.
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಗುರುವಾರದಂದು (ಅಕ್ಟೋಬರ್ 7, 2021) ಏರಿಕೆಯಲ್ಲೇ ವ್ಯವಹಾರ ಮುಗಿಸಿದೆ. ಈ ವಾರದ ಫ್ಯೂಚರ ಅಂಡ್ ಆಪ್ಷನ್ಸ್ನ ಎಕ್ಸ್ಪೈರಿ ದಿನ ಇಂದಿನದಾಗಿತ್ತು. ಬಿಎಸ್ಇ ಸೆನ್ಸೆಕ್ಸ್ 488 ಪಾಯಿಂಟ್ಸ್ ಅಥವಾ ಶೇ 0.82ರಷ್ಟು ಏರಿಕೆಯನ್ನು ಕಂಡರೆ, ನಿಫ್ಟಿ- 50 ಸೂಚ್ಯಂಕವು 144 ಪಾಯಿಂಟ್ಸ್ ಅಥವಾ ಶೇ 0.82ರಷ್ಟು ಏರಿಕೆ ಕಂಡು, 17,790 ಪಾಯಿಂಟ್ಸ್ನೊಂದಿಗೆ ವ್ಯವಹಾರ ಮುಗಿಸಿತು.
ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇ 1.7 ಹಾಗೂ ಶೇ 1.4 ಸೇರ್ಪಡೆ ಮಾಡಿವೆ Volatility Index, India VIX ಈ ಮಧ್ಯೆ ಶೇ 7ರಷ್ಟು ಕುಸಿತ ಕಂಡಿದೆ. ಅಂದಹಾಗೆ ಶುಕ್ರವಾರ, ಅಕ್ಟೋಬರ್ 8ನೇ ತಾರೀಕಿನಂದು ಟಿಸಿಎಸ್ನ ಫಲಿತಾಂಶ ಇದ್ದು, ಆ ಹಿನ್ನೆಲೆಯಲ್ಲಿ ಇಂದಿನ ವಹಿವಾಟಿನಲ್ಲಿ ಶೇ 2ರಷ್ಟು ಏರಿಕೆಯನ್ನು ಕಂಡಿತು.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಟಾಟಾ ಮೋಟಾರ್ಸ್ ಶೇ 12.04 ಟೈಟಾನ್ ಕಂಪೆನಿ ಶೇ 10.60 ಮಹೀಂದ್ರಾ ಅಂಡ್ ಮಹೀಂದ್ರಾ ಶೇ 5.29 ಮಾರುತಿ ಸುಜುಕಿ ಶೇ 4.07 ಐಷರ್ ಮೋಟಾರ್ಸ್ ಶೇ 3.37
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಒಎನ್ಜಿಸಿ ಶೇ -4.58 ಡಾ.ರೆಡ್ಡೀಸ್ ಲ್ಯಾಬ್ಸ್ ಶೇ -1.32 ಕೋಲ್ ಇಂಡಿಯಾ ಶೇ -1.11 ಬ್ರಿಟಾನಿಯಾ ಶೇ -0.96 ಎಚ್ಡಿಎಫ್ಸಿ ಶೇ -0.87
ಇದನ್ನೂ ಓದಿ: Do’s And Don’ts In Share Market: ಷೇರು ಮಾರ್ಕೆಟ್ನಲ್ಲಿ ಮಾಡುವ ಹಾಗೂ ಮಾಡಬಾರದು ಕೆಲಸಗಳಿವು