ರಿಲಾಯನ್ಸ್ ಇಂಡಸ್ಟ್ರೀಸ್
ನವದೆಹಲಿ, ಮೇ 31: ಮುಕೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಗ್ರೂಪ್ಗೆ ಸೇರಿದ ಸಂಸ್ಥೆಯೊಂದು ಎರಡನೇ ಬಾರಿ ಟೈಮ್ಸ್ ಮ್ಯಾಗಝಿನ್ನ ವಿಶ್ವದ 100 ಅತಿ ಪ್ರಭಾವಿ ಕಂಪನಿಗಳ ಪಟ್ಟಿಯಲ್ಲಿ (Time’s 100 Most Influential companies 2024) ಸ್ಥಾನ ಪಡೆದಿದೆ. 2024ರ ಈ ಪಟ್ಟಿಯಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್, ಟಾಟಾ ಗ್ರೂಪ್ ಮತ್ತು ಸೀರಂ ಇನ್ಸ್ಟಿಟ್ಯೂಟ್ ಸಂಸ್ಥೆಗಳು ಸ್ಥಾನ ಪಡೆದಿವೆ. ಈ ಮೊದಲು ರಿಲಾಯನ್ಸ್ ಜಿಯೋ ಈ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಈ ಟೈಮ್ಸ್ ಪ್ರಭಾವಿ ಕಂಪನಿಗಳ ಪಟ್ಟಿಯಲ್ಲಿ ಎರಡು ಬಾರಿ ಸ್ಥಾನ ಪಡೆದ ಮೊದಲ ಸಂಸ್ಥೆ ರಿಲಾಯನ್ಸ್ ಗ್ರೂಪ್. ಐದು ವಿಭಾಗದಲ್ಲಿ ನೀಡಲಾಗಿರುವ ಈ ವರ್ಷದ ಪಟ್ಟಿಯಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಮತ್ತು ಟಾಟಾ ಗ್ರೂಪ್ ಸಂಸ್ಥೆಗಳು ಟೈಟಾನ್ಸ್ ಕೆಟಗರಿಯಲ್ಲಿ ಸ್ಥಾನ ಪಡೆದಿವೆ. ಸೀರಂ ಸಂಸ್ಥೆ ಇನ್ನೋವೇಟರ್ಸ್ ಕೆಟಗರಿಯಲ್ಲಿ ಸೇರ್ಪಡೆಯಾಗಿದೆ.
ಭಾರತ ಮೂಲದ ಆದಿತ್ ಮೂರ್ತಿ ಎಂಬುವವರು ಸ್ಥಾಪಿಸಿದ ಭೂಮಿತ್ರಾ (Boomitra) ಎಂಬ ಸಂಸ್ಥೆಯೂ ಕೂಡ 2024ರ ಟೈಮ್ಸ್ ಅತ್ಯಂತ ಪ್ರಭಾವಿ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ರೈತರಿಗೆ ಕಾರ್ಬನ್ ಕ್ರೆಡಿಟ್ ಆದಾಯ ಒದಗಿಸುವಂತಹ ವಿನೂತನ ಯೋಜನೆಯನ್ನು ಈ ಭೂಮಿತ್ರಾ ರೂಪಿಸಿದೆ. ಡಿಸ್ರಪ್ಟರ್ಸ್ ಕೆಟಗರಿಯಲ್ಲಿ ಟೈಮ್ಸ್ ಮ್ಯಾಗಝಿನ್ ಈ ಕಂಪನಿಯನ್ನು ಪಟ್ಟಿ ಮಾಡಿದೆ.
ಶಿಯೋಮಿ, ಹುವಾವೇ, ಟಿಕ್ ಟಾಕ್, ಬೈಡು ಮೊದಲಾದ ಚೀನೀ ಕಂಪನಿಗಳಿವೆ. ಮೈಕ್ರೋಸಾಫ್ಟ್, ಓಪನ್ಎಐ, ಗೂಗಲ್, ಎಎಂಡಿ, ಸೆರಿಬ್ರಲ್ ಸಿಸ್ಟಮ್ಸ್ ಮೊದಲಾದ ಟೆಕ್ನಾಲಜಿ ಕಂಪನಿಗಳು ಟೈಮ್ಸ್ ಮ್ಯಾಗಝಿನ್ ಪಟ್ಟಿಯಲ್ಲಿವೆ.
ಇದನ್ನೂ ಓದಿ: ಹೂಡಿಕೆದಾರ ಮೀನಾಕ್ಷಿ ಶ್ರೀಕಾಂತ್ ಷೇರು ಒಲ್ಲೆ ಎನ್ನುವುದೇಕೆ? ಪಿರಾಮಿಡ್ ಸ್ಟ್ರಕ್ಚರ್ ರೀತಿಯಲ್ಲಿದೆ ಅವರ ಇನ್ವೆಸ್ಟ್ಮೆಂಟ್ ಸ್ಟ್ರಾಟಿಜಿ
ಟೈಮ್ಸ್ ಮ್ಯಾಗಝಿನ್ ಅತ್ಯಂತ ಪ್ರಭಾವಿ ಕಂಪನಿಗಳು 2024
ಮುಂದಾಳುಗಳು (ಲೀಡರ್ಸ್)
- ಸೆಲೆನಾ ಗೋಮೆಜ್
- ರಾಪ್ಪಿ
- ಪಿನ್ಇಂಟರೆಸ್ಟ್
- ಟೊಯೋಟೋ
- ಟೇಪೆಸ್ಟ್ರಿ
- ಥೈಸನ್ ಕ್ರುಪ್ ನುಸೇರಾ
- ಎಫೆಕ್ಸ್
- ರೆಡ್ಡಿಟ್
- ಬಿಎಂಡಬ್ಲ್ಯು
- ನಿಯಾರಾ
- ಟಿ ಮೊಬೈಲ್ ಯುಎಸ್
- ಬ್ಲ್ಯಾಕ್ ರಾಕ್
- ಯುನೈಟೆಡ್ ಏರ್ಲೈನ್ಸ್
- ಬೈಡು
- ಎಂಬರ್ ಟೆಕ್ನಾಲಜೀಸ್
- ಇಂಟರ್ ಮಿಯಾಮಿ ಸಿಎಫ್
- ಬ್ಲಂಡ್ಸ್ಟೋನ್
- ನಿಪ್ಪೋನ್ ಸ್ಟೀಲ್
- ವಾಟರ್ಶೆಡ್
- ಡ್ಯಾಂಕೋ ಲ್ಯಾಬೊರೇಟರೀಸ್
ಸಂಚಲನ ಸೃಷ್ಟಿಸಿದವರು (ಡಿಸ್ರಪ್ಟರ್ಸ್ ವಿಭಾಗ)
- ಡಬ್ಲ್ಯುಎನ್ಬಿಎ
- ಶಿಯೋಮಿ
- ಅಥ್ಲೆಟಿಕ್ ಬ್ರಿವಿಂಗ್ ಕಂಪನಿ
- ಬೂಮಿತ್ರ
- ಸ್ಟಾನ್ಲೀ
- ಫ್ರಿಡಾ
- ಕೋರ್ವೀವ್
- ಓಲಿಪಾಪ್
- ಕ್ಲೈಮ್ವರ್ಕ್ಸ್
- ಲ್ಯೂಡೋ ಸ್ಟುಡಿಯೋ
- ಸೋಲ್ ಡೀ ಜನೇರೋ
- ಪಿಡಿಡಿ ಹೋಲ್ಡಿಂಗ್ಸ್
- ವಿನ್ಫಾಸ್ಟ್
- ಏರ್ಬಿಎನ್ಬಿ
- ಫಾರ್ಮ್ಬಾಕ್ಸ್ ಆರ್ಎಕ್ಸ್
- ಗೂಡ್ ಆರ್ಎಕ್ಸ್
- ವೇಮೋ
- ಪಲಂಟೀರ್
- ಡೈಸನ್
- ಡೀಪಾಪ್
ಪರಿವರ್ತಕರು (ಇನ್ನೋವೇಟರ್ಸ್)
- ಆಂಥ್ರೋಪಿಕ್
- ಟೋರಿ ಬುರ್ಚ್
- ಗಾರ್ಡಂಟ್ ಹೆಲ್ತ್
- ಹೈರಾಕ್ಸ್
- ಟ್ರಾನ್ಶನ್
- ಗೂಗಲ್
- ಸೇಲ್ಡ್ರೋನ್
- ಎಎಂಡಿ
- ಬೋಸ್ಟನ್ ಮೆಟಲ್
- ಲಾಮ್ಡಾ ಡೆವಲಪ್ಮೆಂಟ್
- ಬಾಂಜಾ
- ಸೆರಿಬ್ರಾಸ್ ಸಿಸ್ಟಮ್ಸ್
- ರೆಡ್ವುಡ್ ಮೆಟೀರಿಯಲ್ಸ್
- ಸ್ಕೋಪೆಲಿ
- ಹುವಾವೇ
- ಬರ್ನ್ ಮ್ಯಾನುಫ್ಯಾಕ್ಚರಿಂಗ್
- ಯುಬಿಕೋ
- ಇಜೆನಿಸಿಸ್
- ಕ್ರೇಜಿ ಮೇಪಲ್ ಸ್ಟುಡಿಯೋ
- ಮಿಸ್ಟ್ರಾಲ್ ಎಐ
ದೈತ್ಯರು (ಟೈಟಾನ್ಸ್)
- ಇಂಟೆಲ್
- ಜಾಜ್ವೇರ್ಸ್
- ಅಮೇಜಾನ್
- ಸೌದಿ ಅರಾಮ್ಕೋ
- ಏರ್ಬಸ್
- ನುಬ್ಯಾಂಕ್
- ಎನ್ವಿಶನ್ ಎನರ್ಜಿ
- ಎಲಿ ಲಿಲ್ಲಿ
- ಬಿವೈಡಿ
- ಟಿಕ್ಟಾಕ್
- ಮೈಕ್ರೋಸಾಫ್ಟ್
- ಸ್ಪೈರೋ
- ಯುಪಿಎಸ್
- ಡಿಸ್ನೀ
- ಬ್ಯಾಂಕ್ ಆಫ್ ಅಮೆರಿಕಾ
- ಟಾಟಾ ಗ್ರೂಪ್
- ಫೈಝರ್
- ರಿಲಾಯನ್ಸ್ ಇಂಡಸ್ಟ್ರೀಸ್
- ಹಾನ್ವಾ ಗ್ರೂಪ್
- ಎನ್ವಿಡಿಯಾ
ಇದನ್ನೂ ಓದಿ: ಬ್ಯಾಂಕುಗಳಲ್ಲಿ ಅನ್ಕ್ಲೇಮ್ಡ್ ಡೆಪಾಸಿಟ್ ಪ್ರಮಾಣ ಮಾರ್ಚ್ ಅಂತ್ಯಕ್ಕೆ 78,213 ಕೋಟಿ ರೂ
ಪ್ರಥಮರು (ಪಯೋನೀರ್ಸ್ ವಿಭಾಗ)
- ಸೀರಂ ಇನ್ಸ್ಟಿಟ್ಯೂಟ್
- ಹೈಲ್ಯಾಂಡ್ ಎಲೆಕ್ಟ್ರಿಕ್ ಫ್ಲೀಟ್ಸ್
- ಓಪನ್ಎಐ
- ಇನ್ಟ್ಯೂಟಿವ್ ಮೆಷೀನ್ಸ್
- ಫೂಡ್4ಎಜುಕೇಶನ್
- ಎಪಿಕ್ ಗೇಮ್ಸ್
- ಪೋವಿನ್
- ಟುಮಾರೋ ಡಾಟ್ ಐಒ
- ವರ್ಟೆಕ್ಸ್ ಫಾರ್ಮಾಸ್ಯೂಟಿಕಲ್ಸ್
- ದಿ ಗೂಡ್ ಚಾರ್ಕೋಲ್ ಕಂಪನಿ
- ಟ್ರಾನ್ಸ್ಕ್ರಿಪ್ಟಾ ಬಯೋ
- ಓವರ್ಟೈಮ್
- ಎಂ ಕೋಪಾ
- ಏಸಾಯ್
- ಪ್ರೋಜಿನಿ
- ಬ್ರೈಟ್ಲೈನ್
- ಲಾಂಜಾ ಜೆಟ್
- ಫ್ಲಟರ್ ಎಂಟರ್ಟೈನ್ಮೆಂಟ್
- ಟೆಂಟ್ ಪಾರ್ಟ್ನರ್ಶಿಪ್ ಫಾರ್ ರೆಫ್ಯೂಜೀಸ್
- ವರ್ಲ್ಡ್ ಸೆಂಟ್ರಲ್ ಕಿಚನ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ