ಪ್ರಸ್ತುತ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ (Cost of essential items) ಗಳು ಏರುಮುಖವಾಗಿ ಸಾಗುತ್ತಲೇ ಇದೆ. ಒಂದೆಡೆ ರಷ್ಯಾ ಮತ್ತು ಉಕ್ರೇನ್ (russia and ukraine) ದೇಶಗಳ ನಡುವಿನ ಯುದ್ಧದಿಂದಾಗಿ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಇದರಿಂದ ಅನೇಕ ದೇಶಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಭಾರತದಲ್ಲೂ ಹಣದುಬ್ಬರ(Inflation) ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸಲು ರೆಸ್ಟೋರೆಂಟ್ಗಳು, ಬಾರ್ಗಳು, ಕೆಫೆಗಳಂಥ ಅನೇಕ ವ್ಯಾಪಾರ ಸಂಸ್ಥೆಗಳು ವಸ್ತುಗಳ ಬೆಲೆ ಏರಿಸಿವೆ. ಇಷ್ಟೊಂದು ದುಬಾರಿಯಾದರೆ ಹೇಗಪ್ಪಾ ಎಂಬ ಪರಿಸ್ಥಿತಿ ಬಂದಿದೆ. ಹೀಗಿದ್ದಾಗ ಹಣ ಉಳಿತಾಯ ಮಾಡುವುದು ಹೇಗೆ?
ಆಹಾರ ಮತ್ತು ಪಾನೀಯಗಳ ಬೆಲೆಗಳು ಶೇ.15ರಷ್ಟು ಏರಿಕೆಯಾಗಿದೆ. ರೆಸ್ಟೋರೆಂಟ್ ಮಾಲೀಕರ ಪ್ರಕಾರ, ಕಳೆದ ಮೂರು ತಿಂಗಳಲ್ಲಿ ಬೆಲೆಗಳು ಶೇ.7ರಿಂದ 30ರ ವರೆಗೆ ಏರಿಕೆಯಾಗಿದೆ. ರೆಸ್ಟೋರೆಂಟ್ಗಳಲ್ಲಿ ಮಾತ್ರವಲ್ಲ, ಆನ್ ಲೈನ್ನಲ್ಲಿ ಆಹಾರ ಆರ್ಡರ್ ಮಾಡುವುದು ದುಬಾರಿಯಾಗಿದೆ. ಡೋಮಿನೋಸ್ ಫಿಜಾ, ಕೆಎಫ್ ಸಿ ಮತ್ತು ಫಿಜ್ಜಾ ಹಟ್ ಇವುಗಳು ತಮ್ಮ ಬೆಲೆಗಳನ್ನು ಏರಿಸಿವೆ.
ಸ್ಪೆಷಾಲಿಟಿ ರೆಸ್ಟೋರೆಂಟ್ ಗಳನ್ನು ನಡೆಸುವ ರೆಸ್ಟೋರೆಂಟ್ ಪ್ಲಾಂಟ್ಗಳಾದ ಮೇನ್ ಲ್ಯಾಂಡ್ ಚೈನಾ, ಏಷ್ಯಾ ಕಿಚನ್ ಮತ್ತು ಸಿಗ್ರಿ ಗ್ಲೋಬಲ್ ಇವುಗಳ ಅಧ್ಯಕ್ಷ ಅಂಜನ್ ಚಟರ್ಜಿ ಹೇಳುವ ಪ್ರಕಾರ, ರಷ್ಯಾ- ಉಕ್ರೇನ್ ಯುದ್ಧ ಈ ರೀತಿ ಪರಿಣಾಮ ಬೀರುತ್ತದೆಂದು ತಾವು ನಿರೀಕ್ಷಿಸಿರಲಿಲ್ಲ ಎನ್ನುತ್ತಾರೆ. ಸನ್ ಫ್ಲವರ್ ಆಯಿಲ್ ಮತ್ತು ಪೆಟ್ರೋಲ್- ಡೀಸೆಲ್ ಬೆಲೆಗಳು ಮಿತಿ ಮೀರಿ ಏರಿಕೆಯಾಗಿವೆ. ಇಂತಹ ಪರಿಸ್ಥಿತಿಯಲ್ಲಿ ರೆಸ್ಟೋರೆಂಟ್ ಮಾಲೀಕರ ಬಳಿ ಬೆಲೆ ಏರಿಸದ ಹೊರತು ಬೇರೆ ವಿಧಿ ಇಲ್ಲ.
ಗ್ರಾಹಕ ದರ ಸೂಚಿಯ ಪ್ರಕಾರ, ಫೆಬ್ರವರಿಯಲ್ಲಿ ಶೇ.5.85ರಷ್ಟು ಇದ್ದ ಆಹಾರ ಹಣದುಬ್ಬರ ಮಾರ್ಚ್ನಲ್ಲಿ ಶೇ.7.68ರಷ್ಟಾಯಿತು. ಇಂಥ ಹಣದುಬ್ಬರ ವಾತಾವರಣದಲ್ಲಿ ನಿಮ್ಮ ಖರ್ಚುಗಳನ್ನು ಉಳಿಸಲು ನಾವು ಮುಂದೆ ನೀಡುವ ಕೆಲವೊಂದು ಟಿಪ್ಸ್ಗಳು ಸಹಾಯಕವಾಗಬಹುದು.
Published On - 9:56 am, Fri, 20 May 22