ನವದೆಹಲಿ, ನವೆಂಬರ್ 6: ಭಾರತದಲ್ಲಿ ಅಕ್ಟೋಬರ್ ತಿಂಗಳಲ್ಲಿ ಒಟ್ಟಾರೆ ವಾಹನಗಳ ರೀಟೇಲ್ ಮಾರಾಟದಲ್ಲಿ ಶೇ. 32ರಷ್ಟು ಹೆಚ್ಚಳವಾಗಿದೆ. ಆಟೊಮೊಬೈಲ್ ಡೀಲರ್ಗಳ ಒಕ್ಕೂಟವಾದ ಎಫ್ಎಡಿಎ ಪ್ರಕಟಿಸಿರುವ ಮಾಹಿತಿ ಪ್ರಕಾರ ಅಕ್ಟೋಬರ್ನ ಒಂದು ತಿಂಗಳಲ್ಲಿ 28,32,944 ವಾಹನಗಳ ಮಾರಾಟವಾಗಿದೆ. ಇದರಲ್ಲಿ ದ್ವಿಚಕ್ರ ವಾಹನ, ಕಾರುಗಳೂ ಸೇರಿವೆ. ಕಳೆದ ವರ್ಷದ (2023) ಅಕ್ಟೋಬರ್ನಲ್ಲಿ 21,43,929 ವಾಹನಗಳ ಮಾರಾಟವಾಗಿತ್ತು. ಅದಕ್ಕೆ ಹೋಲಿಸಿದರೆ ಈ ವರ್ಷ ಶೇ. 32ರಷ್ಟು ಹೆಚ್ಚು ವಾಹನಗಳ ಸೇಲ್ ಆಗಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ವಾಹನಗಳ ಮಾರಾಟದಲ್ಲಿ ಬರೋಬ್ಬರಿ ಶೇ. 75ರಷ್ಟು ಹೆಚ್ಚಳವಾಗಿದೆ. ಅಕ್ಟೋಬರ್ನಲ್ಲಿ ಹಬ್ಬದ ಸೀಸನ್ ಪ್ರಯುಕ್ತ ಡಿಸ್ಕೌಂಟ್ ಹೆಚ್ಚಿದ್ದರಿಂದ ಹೆಚ್ಚು ಸೇಲ್ ಆಗಿರುವ ಸಾಧ್ಯತೆ ಇದೆ.
ವಾಹನಗಳ ಮಾರಾಟದಲ್ಲಿ ಆಗಿರುವ ಹೆಚ್ಚಳದಲ್ಲಿ ಗ್ರಾಮೀಣ ಭಾಗದ ಪಾಲು ಹೆಚ್ಚಿದೆ. ಅದರಲ್ಲೂ ದ್ವಿಚಕ್ರ ವಾಹನ ಮತ್ತು ಪ್ಯಾಸೆಂಜರ್ ವಾಹನಗಳ ಮಾರಾಟವು ಗ್ರಾಮೀಣ ಭಾಗದಲ್ಲಿ ಹೆಚ್ಚು ಹೆಚ್ಚಳ ಕಂಡಿದೆ. ಗ್ರಾಮೀಣ ಭಾಗದಲ್ಲಿ ಈ ಬಾರಿ ಉತ್ತಮ ಮುಂಗಾರು ಮತ್ತು ಉತ್ತಮ ಬೆಳೆ ನಿರೀಕ್ಷೆ ಇರುವುದರಿಂದ ಜನರ ಹುಮ್ಮಸ್ಸು ಹೆಚ್ಚಿರಬಹುದು ಎನ್ನಲಾಗಿದೆ.
ಇದನ್ನೂ ಓದಿ: ಅಕ್ಟೋಬರ್ನಲ್ಲಿ ದ್ವಿಚಕ್ರ ವಾಹನಗಳ ಭರ್ಜರಿ ಮಾರಾಟ; ಹಬ್ಬದ ಸೀಸನ್ನಲ್ಲಿ ಭಾರೀ ಬಿಸಿನೆಸ್
ಇಲ್ಲಿ ಪ್ರಯಾಣಿಕ ವಾಹನ ವಿಭಾಗದಲ್ಲಿ ಕಾರು, ಬಸ್ಸು ಇತ್ಯಾದಿ ಜನರನ್ನು ಸಾಗಿಸುವ ವಾಹನಗಳು ಸೇರುತ್ತವೆ. 2023ರ ಅಕ್ಟೋಬರ್ನಲ್ಲಿ ಈ ಪ್ಯಾಸೆಂಜರ್ ವಾಹನಗಳು ಮಾರಾಟವಾದ ಸಂಖ್ಯೆ 3,64,991. ಈ ಬಾರಿ ಅದು ಶೇ. 32.38ರಷ್ಟು ಹೆಚ್ಚಳವಾಗಿದೆ.
ಇದನ್ನೂ ಓದಿ: ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ ಲಕ್ಷ ಕೋಟಿ ರೂ ದಾಖಲೆ ಮಾರಾಟ; ಸಣ್ಣ ನಗರಗಳಿಂದಲೇ ಭರ್ಜರಿ ಶಾಪಿಂಗ್
ದ್ವಿಚಕ್ರ ವಾಹನಗಳ ಮಾರಾಟವು ಕಳೆದ ವರ್ಷದ ಅಕ್ಟೋಬರ್ನಲ್ಲಿ 15,14,634 ಇತ್ತು. ಈ ಬಾರಿ ಮಾರಾಟ ಪ್ರಮಾಣ ಶೇ. 36.35ರಷ್ಟು ಹೆಚ್ಚಾಗಿದೆ. ಇನ್ನು ತ್ರಿಚಕ್ರ ವಾಹನಗಳ ಮಾರಾಟವು ಕಳೆದ ವರ್ಷದಕ್ಕಿಂತ ಶೇ. 11.45ರಷ್ಟು ಹೆ್ಚಾಗಿದೆ. ಹಾಗೆಯೇ, ಟ್ರಾಕ್ಟರ್ಗಳ ಮಾರಾಟ 2023ರ ಅಕ್ಟೋಬರ್ನಲ್ಲಿ 62,542 ಇತ್ತು. ಈ ಬಾರಿ ಆ ಸಂಖ್ಯೆ ಶೇ. 3.08ರಷ್ಟು ಏರಿಕೆ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ