ಟಿವಿ9 ಡೇರ್​2ಡ್ರೀಮ್​ ಪ್ರಶಸ್ತಿ​ ಸೀಸನ್​-3ರ ಪ್ರದಾನ ಸಮಾರಂಭ ನವೆಂಬರ್​ 30 ಮಧ್ಯಾಹ್ನ 1ಕ್ಕೆ

| Updated By: Srinivas Mata

Updated on: Nov 27, 2021 | 1:08 PM

ಟಿವಿ9 ನೆಟ್​ವರ್ಕ್​ ಮತ್ತು SAP India ಸಹಯೋಗದಲ್ಲಿ ಡೇರ್​2ಡ್ರೀಮ್​ ಅವಾರ್ಡ್ಸ್​​ ಪ್ರಶಸ್ತಿ ಪ್ರದಾನ ಸಮಾರಂಭದ ಬಗ್ಗೆ ವಿವರ ಈ ಲೇಖನದಲ್ಲಿದೆ.

ಟಿವಿ9 ಡೇರ್​2ಡ್ರೀಮ್​ ಪ್ರಶಸ್ತಿ​ ಸೀಸನ್​-3ರ ಪ್ರದಾನ ಸಮಾರಂಭ ನವೆಂಬರ್​ 30 ಮಧ್ಯಾಹ್ನ 1ಕ್ಕೆ
ಪ್ರಶಸ್ತಿ ಪ್ರದಾನದ ಬಗ್ಗೆ ಮಾಹಿತಿ
Follow us on

ಟಿವಿ9 ನೆಟ್​ವರ್ಕ್​ ಮತ್ತು SAP India ಸಹಯೋಗದಲ್ಲಿ ಡೇರ್​2ಡ್ರೀಮ್​ ಅವಾರ್ಡ್ಸ್​​ ಮೂರನೇ ಅವತರಣಿಕೆಯ ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 30, 2021ರಂದು ಮಂಗಳವಾರ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ. ಕಿರು, ಸಣ್ಣ ಮತ್ತು ಮಧ್ಯಮ ಸಂಸ್ಥೆಗಳ ಸಚಿವಾಲಯದ ಕಾರ್ಯದರ್ಶಿ ಆದ ಬಿ.ಬಿ. ಸ್ವಾಯಿನ್ ಅವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಮುಖ ಭಾಷಣ ಮಾಡಲಿದ್ದಾರೆ. ಕೊರೊನಾ ಸಾಂಕ್ರಾಮಿಕದ ಸಂಕಷ್ಟ ಕಾಲವನ್ನು ಮೆಟ್ಟಿ ನಿಂತ ಉದ್ಯಮಿಗಳ ಯಶೋಗಾಥೆಯನ್ನು ಗುರುತಿಸುವುದು ಇದರ ಧ್ಯೇಯವಾಗಿದೆ. ಈ ಕೈಗಾರಿಕೋದ್ಯಮಿ ನಾಯಕರು ಕೊರೊನಾ ಪಿಡುಗಿನ ಸಂಕಷ್ಟ ಕಾಲದಲ್ಲಿ ಹೊಸ ವಿಧಾನಗಳನ್ನು ಅಳವಡಿಸಿಕೊಂಡು, ಡಿಜಿಟಲ್​ ಬದಲಾವಣೆಗೆ ಮಣೆ ಹಾಕಿ, ಉತ್ಪನ್ನ ಅಭಿವೃದ್ಧಿ ತಂತ್ರಗಳು ಮತ್ತು ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ತಮ್ಮ ಕೈಗಾರಿಕೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.

ಟಿವಿ9 ಡೇರ್​2ಡ್ರೀಮ್​ ಅವಾರ್ಡ್​ ವಿಭಾಗಗಳು ಹೀಗಿವೆ:
ಎರಡು ಸೆಗ್ಮೆಂಟ್ ಒಟ್ಟು 15 ವಿಭಾಗಗಳಲ್ಲಿ ಅವಾರ್ಡ್​​ಗಳನ್ನು ನೀಡಲಾಗುವುದು:
1. 75 ಕೋಟಿ ರೂಪಾಯಿಯಿಂದ 150 ಕೋಟಿ ರೂಪಾಯಿ ವಾರ್ಷಿಕ ವಹಿವಾಟು ಹೊಂದಿರುವ ಕೈಗಾರಿಕೆಗಳು
2. 150 ಕೋಟಿ ರೂಪಾಯಿ ವಾರ್ಷಿಕ ವಹಿವಾಟು ಹೊಂದಿರುವ ಮಧ್ಯಮ ಕಾರ್ಪೊರೇಟ್ ವಲಯ

15 ವಿಭಾಗಗಳು ಹೀಗಿವೆ:
1. ಕಂಪೆನಿ ಆಫ್​ ದಿ ಇಯರ್ ವಲಯವಾರು ಪ್ರಶಸ್ತಿಗಳು (ಪ್ರತಿ ವಲಯದಲ್ಲೂ 8-9 ಪ್ರಶಸ್ತಿ​​ಗಳು)
2. ಎಮರ್ಜಿಂಗ್​ ಕಂಪೆನಿ ಆಫ್​ ದಿ ಇಯರ್​
3. ತಂತ್ರಜ್ಞಾನ ಅಳವಡಿಸಿಕೊಂಡು ಉದ್ಯಮವನ್ನು ಮಾರ್ಪಾಡು ಮಾಡಿರುವ ಕೈಗಾರಿಕೆ

ಪ್ರೇರಣಾದಾಯಕ ನಾಯಕ:
1. ಯುವ ಉದ್ಯಮ ನಾಯಕ
2. ವರ್ಷದ ಮಹಿಳಾ ಉದ್ಯಮಿ
3. ವರ್ಷದ ಉದ್ಯಮಿ

ಭಾರತದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದ ಕಾರ್ಯಕ್ರಮವನ್ನು ಮುಂಚೂಣಿ ನ್ಯೂಸ್​ ಚಾನೆಲ್​ ಟಿವಿ9 ಭಾರತ್​​ವರ್ಷ್​​ದಲ್ಲಿ ಮತ್ತು ಟಿವಿ9 ನೆಟ್​ವರ್ಕ್​​ನ ನಾನಾ​​ ಡಿಜಿಟಲ್​ ವೇದಿಕೆಗಳಲ್ಲಿ ಪ್ರಸಾರ ಮಾಡಲಾಗುವುದು.

ಇದನ್ನೂ ಓದಿ: Dare 2 Dream Awards: ಟಿವಿ9, ಸ್ಯಾಪ್ ಇಂಡಿಯಾ ಸಹಯೋಗದಲ್ಲಿ ಡೇರ್​2ಡ್ರೀಮ್ ಅವಾರ್ಡ್ಸ್; ವಿವರ ಓದಿ