ಮುಂಬೈ, ಜನವರಿ 23: ಕಾಂಟಿನೆಂಟಲ್ ಪ್ರಸ್ತುಪಡಿಸುವ ಮತ್ತು ಟಿವಿ9 ನೆಟ್ವರ್ಕ್ನಿಂದ ಆಯೋಜಿತವಾದ ರಸ್ತೆ ಸಾರಿಗೆ ಮುಂದಾಳುಗಳ ಸಮಾವೇಶ (Leaders of Road Transport Conclave) ಇಂದು ಮಂಗಳವಾರ ಮುಂಬೈನಲ್ಲಿ ನಡೆಯುತ್ತಿದೆ. ಮುಂಬೈನ ತಾಜ್ ಸಾಂತಾಕ್ರುಜ್ನ ಇಂಪೀರಿಯಲ್ ಹಾಲ್ನಲ್ಲಿ ಮಧ್ಯಾಹ್ನ 2:45ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ.
ಭಾರತದ ರಸ್ತೆ ಸಾರಿಗೆ ಕ್ಷೇತ್ರದ ಸಾಧನೆ, ಸವಾಲುಗಳ ಬಗ್ಗೆ ಮತ್ತು ಲಭ್ಯ ಇರುವ ಆಧುನಿಕ ತಂತ್ರಜ್ಞಾನ ಅಳವಡಿಕೆ ಸಾಧ್ಯತೆ ಕುರಿತು ಚರ್ಚೆ, ನಿಷ್ಕರ್ಷೆಗಳು ನಡೆಯಲಿವೆ. ಲಾಜಿಸ್ಟಿಕ್ಸ್ ಮತ್ತು ಸಾರಿಗೆ ಕ್ಷೇತ್ರದ ಪರಿಣಿತರು ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಳೆದ ಎರಡು ವರ್ಷಗಳಿಂದ ಟಿವಿ9 ನೆಟ್ವರ್ಕ್ ವತಿಯಿಂದ ಲೀಡರ್ಸ್ ಆಫ್ ರೋಡ್ ನೆಟ್ವರ್ಕ್ ಕಾಂಕ್ಲೇವ್ ನಡೆಯುತ್ತಾ ಬಂದಿದೆ. 2023ರ ನವೆಂಬರ್ ತಿಂಗಳಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಾರ್ಯಕ್ರಮ ನಡೆದಿತ್ತು.
ಇದನ್ನೂ ಓದಿ: Stock Market: ಇತಿಹಾಸದಲ್ಲಿ ಮೊದಲ ಬಾರಿಗೆ ಹಾಂಕಾಂಗ್ ಅನ್ನು ಹಿಂದಿಕ್ಕಿದೆ ಭಾರತದ ಷೇರುಪೇಟೆ; ಚೀನಾ ಸಮೀಪ ದೌಡು
ದೆಹಲಿ ಸರ್ಕಾರದ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗು ಆಯುಕ್ತರಾದ ಆಶೀಶ್ ಕುಂದ್ರ, ಬೆಸ್ಟ್ ರೋಡ್ವೇಸ್ ಸಂಸ್ಥೆಯ ಸಿಇಒ ಆಶೀಶ್ ಗುಪ್ತ, ಕ್ಯಾರವನ್ ರೋಡ್ವೇಸ್ ಲಿ ಸಂಸ್ಥೆಯ ಮಾಲೀಕ ರಾಜೀವ್ ಎನ್ ಗುಪ್ತಾ, ಎಕ್ಸ್ಪ್ರೆಸ್ ರೋಡ್ವೇಸ್ ಪ್ರೈ ಲಿ ಸಂಸ್ಥೆಯ ಮಾಲೀಕ ಸಂಕಿತ್ ಗುಪ್ತಾ, ಕಾಂಟಿನೆಂಟಲ್ ಟೈರ್ ಕಂಪನಿಯ ಹಿರಿಯ ಪ್ರತಿನಿಧಿ ರಜನೀಶ್ ಕೊಚಗಾವೆ ಮೊದಲಾದವರು ದೆಹಲಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ