AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Agricultural Credit: ಕೃಷಿ ಸಾಲದ ಗುರಿಯನ್ನು 22ರಿಂದ 25 ಲಕ್ಷ ಕೋಟಿ ರೂಗೆ ಹೆಚ್ಚಿಸುವ ಸಾಧ್ಯತೆ

Budget Expectations: ಮುಂಬರುವ ಹಣಕಾಸು ವರ್ಷಕ್ಕೆ 22ರಿಂದ 25 ಲಕ್ಷ ಕೋಟಿ ರೂ ಕೃಷಿ ಸಾಲಕ್ಕೆ ಸರ್ಕಾರ ಗುರಿ ಇಟ್ಟಿದ್ದು ಬಜೆಟ್​ನಲ್ಲಿ ಅದನ್ನು ಘೋಷಿಸಬಹುದು. ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರದ ಕೃಷಿ ಸಾಲದ ಟಾರ್ಗೆಟ್ 20 ಲಕ್ಷ ಕೋಟಿ ರೂ ಇದೆ. ಕಳೆದ 10 ವರ್ಷಗಳಿಂದ ಸರ್ಕಾರ ತಾನು ನಿರೀಕ್ಷಿಸಿದಕ್ಕಿಂತ ಹೆಚ್ಚೇ ಕೃಷಿ ಸಾಲ ವಿತರಣೆ ಆಗಿದೆ.

Agricultural Credit: ಕೃಷಿ ಸಾಲದ ಗುರಿಯನ್ನು 22ರಿಂದ 25 ಲಕ್ಷ ಕೋಟಿ ರೂಗೆ ಹೆಚ್ಚಿಸುವ ಸಾಧ್ಯತೆ
ಕೃಷಿ ಸಾಲ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 23, 2024 | 5:06 PM

Share

ನವದೆಹಲಿ, ಜನವರಿ 23: ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವ ಇರಾದೆಯಲ್ಲಿರುವ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕೃಷಿ ಸಾಲದ (Agricultural Credit Target) ಪ್ರಮಾಣ ಹೆಚ್ಚಿಸುವ ಆಲೋಚನೆಯಲ್ಲಿದೆ. ವರದಿ ಪ್ರಕಾರ ಫೆಬ್ರುವರಿ 1ರ ಬಜೆಟ್​ನಲ್ಲಿ ಕೃಷಿ ಸಾಲದ ಪ್ರಮಾಣವನ್ನು 25 ಲಕ್ಷ ಕೋಟಿ ರೂಗೆ ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ. ಸದ್ಯ ಈ ಹಣಕಾಸು ವರ್ಷದಲ್ಲಿ (2023-24) ಕೃಷಿ ಸಾಲದ ಗುರಿ 20 ಲಕ್ಷ ಕೋಟಿ ರೂ ಇದೆ. ಮುಂಬರುವ ಹಣಕಾಸು ವರ್ಷಕ್ಕೆ 22ರಿಂದ 25 ಲಕ್ಷ ಕೋಟಿ ರೂ ಕೃಷಿ ಸಾಲಗಳಿಗೆ ಗುರಿ ಇಡುವ ಸಾಧ್ಯತೆ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಸ್18 ವರದಿ ಮಾಡಿದೆ.

ರೈತರಿಗೆ ನೀಡಲಾಗುವ ಸಾಲಕ್ಕೆ ಬಡ್ಡಿ ಎಷ್ಟು?

ಗ್ರಾಮೀಣ ಭಾಗದ ಬ್ಯಾಂಕುಗಳಲ್ಲಿ ಕಿರು ಅವಧಿಯ ಕೃಷಿ ಸಾಲಗಳಿಗೆ ಬಡ್ಡಿದರ 2 ಪ್ರತಿಶತದಷ್ಟು ಕಡಿಮೆ ಇರುತ್ತದೆ. ಶೇ. 7ರ ಬಡ್ಡಿದರದಲ್ಲಿ ರೈತರು 3 ಲಕ್ಷ ರೂವರೆಗೂ ಸಾಲ ಪಡೆಯಬಹುದು. ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿದರೆ ವಾರ್ಷಿಕ ಬಡ್ಡಿಯಲ್ಲಿ ಇನ್ನಷ್ಟು 3 ಪ್ರತಿಶತದಷ್ಟು ಕಡಿತ ಮಾಡಲಾಗುತ್ತದೆ. ಆದರೆ, ದೀರ್ಘಾವಧಿ ಸಾಲಗಳಿಗೆ ಈ ಸೌಲಭ್ಯ ಇರುವುದಿಲ್ಲ. ಬ್ಯಾಂಕ್​ನ ಸಾಮಾನ್ಯ ಬಡ್ಡಿದರದಲ್ಲೇ ಸಾಲ ಪಡೆಯಬೇಕಾಗುತ್ತದೆ.

ಇದನ್ನೂ ಓದಿ: ಫೆಬ್ರವರಿ 1 ರಂದು ಬಜೆಟ್ ಮಂಡಿಸಲಿದ್ದಾರೆ ನಿರ್ಮಲಾ ಸೀತಾರಾಮನ್, ಏನಿದು ಮಧ್ಯಂತರ ಬಜೆಟ್?

ಸರ್ಕಾರದ ನಿರೀಕ್ಷೆಯಂತೆ ಸಾಲದ ವಿತರಣೆ

ಕಳೆದ 10 ವರ್ಷದಲ್ಲಿ ಸರ್ಕಾರ ಕೃಷಿ ಸಾಲಕ್ಕೆ ಇಟ್ಟಿರುವ ಗುರಿ ಬಹುತೇಕ ಈಡೇರಿದೆ. 2023-24ರ ಹಣಕಾಸು ವರ್ಷಕ್ಕೆ 20 ಲಕ್ಷ ಕೋಟಿ ರೂನಷ್ಟು ಸಾಲ ವಿತರಣೆಯ ಗುರಿ ಇಡಲಾಗಿತ್ತು. ಡಿಸೆಂಬರ್​ವರೆಗೆ, ಅಂದರೆ ಮೂರು ತಿಂಗಳು ಇರುವಾಗಲೇ 16.37 ಲಕ್ಷ ಕೋಟಿ ರೂನಷ್ಟು ಸಾಲ ವಿತರಣೆ ಆಗಿದೆ. ಅಂದರೆ ಶೇ. 82ರಷ್ಟು ಗುರಿ ತಲುಪಲಾಗಿದೆ. ಖಾಸಗಿ ಮತ್ತು ಸರ್ಕಾರಿ ಬ್ಯಾಂಕುಗಳೆರಡರಿಂದಲೂ ವಿತರಣೆ ಆದ ಕೃಷಿ ಸಾಲಗಳ ದತ್ತಾಂಶ ಇದು.

ಹಿಂದಿನ ಕೆಲ ವರ್ಷಗಳಲ್ಲಿ ಸರ್ಕಾರ ಮಾಡಿದ್ದ ಅಂದಾಜಿಗಿಂತಲೂ ಹೆಚ್ಚು ಕೃಷಿ ಸಾಲಗಳ ವಿತರಣೆ ಆಗಿರುವುದು ಗಮನಾರ್ಹ. ಉದಾಹರಣೆಗೆ, 2022-23ರ ಹಣಕಾಸು ವರ್ಷದಲ್ಲಿ ಸರ್ಕಾರ 18.50 ಲಕ್ಷ ಕೋಟಿ ರೂನಷ್ಟು ಕೃಷಿ ಸಾಲಗಳ ಗುರಿ ಇಟ್ಟುಕೊಂಡಿತ್ತು. ವಾಸ್ತವದಲ್ಲಿ ಆ ಹಣಕಾಸು ವರ್ಷ ವಿತರಣೆ ಆದ ಕೃಷಿ ಸಾಲಗಳ ಪ್ರಮಾಣ 21.55 ಲಕ್ಷ ಕೋಟಿ ರೂ. ಅಂದರೆ ಸರ್ಕಾರದ ಗುರಿಗಿಂತಲೂ 3 ಲಕ್ಷ ಕೋಟಿ ರೂ ಹೆಚ್ಚೇ ಸಾಲ ನಿಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!