Two Wheeler Loan: ಸ್ಕೂಟರ್, ಬೈಕ್ ಖರೀದಿಗೆ ಪ್ರಮುಖ ಬ್ಯಾಂಕ್​ಗಳಲ್ಲಿನ ಬಡ್ಡಿ ದರ ಹೀಗಿದೆ

| Updated By: Srinivas Mata

Updated on: Aug 13, 2021 | 8:06 PM

ದ್ವಿಚಕ್ರ ವಾಹನ ಸಾಲದ ಬಡ್ಡಿ ದರ ಯಾವ ಬ್ಯಾಂಕ್​ಗಳಲ್ಲಿ ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಸಾಲ ಪಡೆಯುವ ಮುನ್ನ ಯಾವ ಬ್ಯಾಂಕ್​ನಲ್ಲಿ ಎಷ್ಟು ಬಡ್ಡಿ ಎಂಬ ಸಂಗತಿ ಇಲ್ಲಿದೆ.

Two Wheeler Loan: ಸ್ಕೂಟರ್, ಬೈಕ್ ಖರೀದಿಗೆ ಪ್ರಮುಖ ಬ್ಯಾಂಕ್​ಗಳಲ್ಲಿನ ಬಡ್ಡಿ ದರ ಹೀಗಿದೆ
ಜಾವಾ ಎಲೆಕ್ಟ್ರಿಕ್ ಬೈಕ್ (ಸಾಂದರ್ಭಿಕ ಚಿತ್ರ)
Follow us on

ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಸಂಗತಿ ಈಗಲೂ ತನ್ನ ಪ್ರಾಶಸ್ತ್ಯ ಕಳೆದುಕೊಂಡಿಲ್ಲ. ಹಲವರ ಅಭಿಪ್ರಾಯದ ಪ್ರಕಾರ, ತಮ್ಮದೇ ಸ್ವಂತ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳುವ ಕಡೆಗೆ ನಿಗಾ ಮಾಡುತ್ತಿದ್ದಾರೆ. ಸಾರ್ವಜನಿಕ ಸಾರಿಗೆಯನ್ನು ಸಾಧ್ಯವಾದಷ್ಟೂ ಬೇಡ ಅಂದುಕೊಳ್ಳುತ್ತಿದ್ದಾರೆ. ಸ್ವಂತ ವಾಹನ ಅಂದಾಕ್ಷಣ ಕಾರು ಅಂತಲೇ ಅಲ್ಲವಲ್ಲ. ಆರ್ಥಿಕ ಸ್ಥಿತಿಗತಿ, ನಿರ್ವಹಣೆ ಮತ್ತಿತರ ಸಂಗತಿಗಳನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಕಾರಿನ ಬದಲಿಗೆ ದ್ವಿಚಕ್ರ ವಾಹನಗಳ ಆಲೋಚಿಸುವುದು ಉತ್ತಮ. ಇನ್ನೂ ಒಂದು ಅಂಶ ಏನೆಂದರೆ, ಕಾರು ಚಲಾಯಿಸುವಾಗ ಎಷ್ಟೇ ಮೈಯೆಲ್ಲಾ ಕಣ್ಣಾಗಿಟ್ಟುಕೊಂಡರೂ ಅಪಘಾತದ ಸಾಧ್ಯತೆ ಇದ್ದೇ ಇರುತ್ತದೆ. ಇನ್ನು ಪ್ರಯಾಣದ ಅವಧಿಯು ಕಾರಿಗಿಂತ ದ್ವಿಚಕ್ರ ವಾಹನದಲ್ಲಿ ಕಡಿಮೆ ಇರುತ್ತದೆ. ಒಂದು ವೇಳೆ ನಿಮಗೂ ಇಂಥದ್ದೇ ಆಲೋಚನೆಗಳಿದ್ದು, ದ್ವಿಚಕ್ರ ವಾಹನ ಖರೀದಿ ಮಾಡಬೇಕು ಅಂದುಕೊಂಡು ಹಣಕಾಸಿನ ಕೊರತೆ ಆಗಿದೆಯಾ? ಅದಕ್ಕಾಗಿ ಸಾಲ ಪಡೆದುಕೊಳ್ಳಬಹುದು; ಅದು ಕೂಡ ಸ್ಪರ್ಧಾತ್ಮಕವಾದ ಬಡ್ಡಿ ದರದಲ್ಲಿ.

ಆದರೆ, ಸಾಲ ಪಡೆಯುವ ಮುನ್ನ ಕೆಲವು ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ವಿವಿಧ ಬ್ಯಾಂಕ್​ಗಳ ಬಡ್ಡಿ ದರ, ಪ್ರೊಸೆಸಿಂಗ್ ಶುಲ್ಕ, ಅವಧಿಪೂರ್ವವಾಗಿ ಪಾವತಿಸಿದರೆ ತಗುಲುವ ಶುಲ್ಕ, ಇತ್ಯಾದಿ ಸಂಗತಿಗಳನ್ನು ಹೋಲಿಸಿ ನೋಡಬೇಕು. ಇನ್ನು ಈಗಾಗಲೇ ಪ್ರೀ ಅಪ್ರೂವ್ಡ್ ಸಾಲಕ್ಕೆ ಈಗಿರುವ ಬ್ಯಾಂಕ್​ನಿಂದಲೇ ಅರ್ಹರಿದ್ದೀರಾ ಮತ್ತಿತರ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಇನ್ನು ಹೆಚ್ಚಿಗೆ ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಅವಶ್ಯಕತೆಗಿಂತ ಹೆಚ್ಚಿನ ಮೊತ್ತವನ್ನು ತೆಗೆದುಕೊಳ್ಳಬಾರದು. ಸಾಲ ಪಡೆಯುವುದಕ್ಕೆ ಸಹಿ ಹಾಕುವ ಮುನ್ನ ಮರುಪಾವತಿ ಸಾಮರ್ಥ್ಯವನ್ನು ಮೌಲ್ಯಮಾಪನವನ್ನು ಮಾಡಬೇಕು. ಈ ಲೇಖನದಲ್ಲಿ ಟಾಪ್ 20 ಬ್ಯಾಂಕ್​ಗಳಲ್ಲಿ ದ್ವಿಚಕ್ರ ವಾಹನಗಳ ಸಾಲದ ವಾರ್ಷಿಕ ಬಡ್ಡಿ ದರದ ವಿವರ ಇದೆ. ಇದರಲ್ಲಿ 1 ಲಕ್ಷ ರೂಪಾಯಿ ಮೊತ್ತಕ್ಕೆ ಮೂರು ವರ್ಷದ ಅವಧಿಗೆ ಎಷ್ಟು ಇಎಂಐ ಎಂಬ ಮಾಹಿತಿ ಸಹ ಇದೆ.

ಸೆಂಟ್ರಲ್ ಬ್ಯಾಂಕ್: ಶೇ 7.25- 3099 ರೂ.
ಬ್ಯಾಂಕ್ ಆಫ್ ಇಂಡಿಯಾ: ಶೇ 7.35- 3104 ರೂ,
ಯುಕೋ ಬ್ಯಾಂಕ್*: ಶೇ 7.45- 3108 ರೂ.
ಪಂಜಾಬ್ ನ್ಯಾಷನಲ್ ಬ್ಯಾಂಕ್: ಶೇ 8.70- 3166 ರೂ.
ಜಮ್ಮು ಮತ್ತು ಕಾಶ್ಮೀರ್ ಬ್ಯಾಂಕ್: ಶೇ 8.70- 3166 ರೂ.
ಪಂಜಾಬ್ ಅಂಡ್ ಸಿಂದ್ ಬ್ಯಾಂಕ್: ಶೇ 8.80- 3171 ರೂ.
ಕೆನರಾ ಬ್ಯಾಂಕ್: ಶೇ 9- 3180 ರೂ.
ಆಕ್ಸಿಸ್ ಬ್ಯಾಂಕ್: ಶೇ 9- 3180 ರೂ.
ಐಸಿಐಸಿಐ ಬ್ಯಾಂಕ್: ಶೇ 9.50- 3203 ರೂ.
ಐಡಿಬಿಐ ಬ್ಯಾಂಕ್: ಶೇ 9.80- 3217 ರೂ.
ಯೂನಿಯನ್ ಬ್ಯಾಂಕ್: ಶೇ 9.90- 3222 ರೂ.
ಬ್ಯಾಂಕ್ ಆಫ್ ಮಹಾರಾಷ್ಟ್ರ: ಶೇ 10.05- 3229 ರೂ.
ಇಂಡಿಯನ್ ಓವರ್​ಸೀಸ್​ ಬ್ಯಾಂಕ್: ಶೇ 10.05- 3229 ರೂ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ:: ಶೇ 10.25- 3238 ರೂ.
ಇಂಡಿಯನ್ ಬ್ಯಾಂಕ್: ಶೇ 10.35- 3243 ರೂ.
ಸೌತ್ ಇಂಡಿಯನ್ ಬ್ಯಾಂಕ್: ಶೇ 10.95- 3272 ರೂ.
ಬ್ಯಾಂಕ್ ಆಫ್ ಬರೋಡ: ಶೇ 11- 3274 ರೂ.
ಎಚ್​ಡಿಎಫ್​ಸಿ ಬ್ಯಾಂಕ್: ಶೇ 12- 3321 ರೂ.
ಯೆಸ್ ಬ್ಯಾಂಕ್: ಶೇ 12- 3321 ರೂ.
ಕರ್ಣಾಟಕ ಬ್ಯಾಂಕ್: ಶೇ 12.50- 3345 ರೂ.
ಧನಲಕ್ಷ್ಮೀ ಬ್ಯಾಂಕ್: ಶೇ 12.50- 3345 ರೂ.
ಫೆಡರಲ್ ಬ್ಯಾಂಕ್: ಶೇ 12.50- 3345 ರೂ.
ಕರೂರ್ ವೈಶ್ಯ ಬ್ಯಾಂಕ್: ಶೇ 14- 3418 ರೂ.

ಇಲ್ಲಿರುವ ಮಾಹಿತಿಯು ಬ್ಯಾಂಕ್​ಬಜಾರ್​ನಿಂದ ಪಡೆದಿರುವಂಥದ್ದು. ಸಮೀಪದ ಬ್ಯಾಂಕ್​ ಶಾಖೆಯಲ್ಲಿ ಇನ್ನೊಮ್ಮೆ ಪರಿಶೀಲಿಸಿ, ಮುಂದುವರಿಯಿರಿ.

ಇದನ್ನೂ ಓದಿ: Gold Loan: ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದಲ್ಲಿ ಶೇ 7.5 ಬಡ್ಡಿ ದರಕ್ಕೆ ಸಿಗುತ್ತಿದೆ ಗೋಲ್ಡ್​ ಲೋನ್

(Two Wheeler Loan Rate Of Interest In Top 20 Banks Points To Be Consider Before Applying For Loan Here)