Budget 2021 | ಅಪೂರ್ಣ ರೈಲ್ವೆ ಯೋಜನೆಗಳು ಹಲವು, ಇನ್ನೆಷ್ಟು ವರ್ಷ ಕಾಯಬೇಕು ಸ್ವಾಮಿ?

ರೈಲ್ವೆ ಇಲಾಖೆಯಿಂದ ಕರ್ನಾಟಕಕ್ಕೆ ಸಿಗಬೇಕಿರುವಷ್ಟು ಆದ್ಯತೆ ಸಿಗುತ್ತಿಲ್ಲ ಎಂಬುದು ಹಳೆಯ ಕೂಗು. ಈ ವರ್ಷವಾದರೂ ಕೇಂದ್ರ ಸರ್ಕಾರ ತನ್ನ ಬಜೆಟ್​ನಲ್ಲಿ ರಾಜ್ಯದಲ್ಲಿ ಬಹುಕಾಲದಿಂದ ಬಾಕಿಯಿರುವ ಯೋಜನೆಗಳಿಗೆ ಈ ಬಾರಿಯಾದರೂ ಮೋಕ್ಷ ಸಿಗಲಿದೆಯೇ?

Budget 2021 | ಅಪೂರ್ಣ ರೈಲ್ವೆ ಯೋಜನೆಗಳು ಹಲವು, ಇನ್ನೆಷ್ಟು ವರ್ಷ ಕಾಯಬೇಕು ಸ್ವಾಮಿ?
ರೈಲು ಸಂಚಾರ
Follow us
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 29, 2021 | 6:45 PM

ದೇಶದ ಅಭಿವೃದ್ಧಿ ವಿಚಾರದಲ್ಲಿ ರೈಲ್ವೆ ತುಂಬಾನೇ ಪ್ರಾಮುಖ್ಯತೆ ವಹಿಸುತ್ತದೆ. ಜನರ ಸಂಚಾರದ ಜೊತೆಗೆ ಸರಕು ಸಾಗಣೆಯಲ್ಲಿಯೂ ರೈಲ್ವೆ ವಲಯ ಬಹಳ ಮಹತ್ವ ಪಡೆದುಕೊಂಡಿದೆ. ಬಂದರಿನಿಂದ ಇತರ ರಾಜ್ಯಗಳಿಗೆ ವಸ್ತುಗಳನ್ನು ಕಡಿಮೆ ವೆಚ್ಚದಲ್ಲಿ ಸಾಗಿಸಲು ರೈಲ್ವೆ ಸಹಕಾರಿ. ಆದರೆ, ಉತ್ತರ ಕರ್ನಾಟಕದ ಸಾಕಷ್ಟು ರೈಲು ಯೋಜನೆಗಳು ಅಭಿವೃದ್ಧಿ ಕಾಣದೆ ಮೂಲೆಗುಂಪಾಗಿವೆ.

ಆಸಕ್ತಿ ತೋರದ ರಾಜಕಾರಣಿಗಳು 2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ 28 ಸಂಸದರು ಆಯ್ಕೆ ಆಗಿ ಹೋಗಿದ್ದಾರೆ. ಕೇಂದ್ರದಲ್ಲಿ ಆಡಳಿತದಲ್ಲಿ ಎನ್​​ಡಿಎ ಇದ್ದು, ರಾಜ್ಯದ 25 ಸಂಸದರು ಬಿಜೆಪಿಯವರೇ. ಆದರೆ, ಈ ಸಂಸದರು ರಾಜ್ಯಕ್ಕೆ ಹೊಸ ಹೊಸ ರೈಲು ಯೋಜನೆ ತಂದುಕೊಡಲು, ಈಗಿರುವ ರೈಲು ಯೋಜನೆಯನ್ನು ಪೂರ್ಣಗೊಳಿಸಲು ಕೇಂದ್ರದ ಮುಂದೆ ಸರಿಯಾದ ರೀತಿಯಲ್ಲಿ ಒತ್ತಾಯಿಸಿಲ್ಲ ಎಂಬ ಅಸಮಾಧಾನ ಜನರಲ್ಲಿದೆ.

ಉತ್ತರ ಕರ್ನಾಟಕದ ಸಾಕಷ್ಟು ರೈಲು ಯೋಜನೆಗಳಿಗೆ ಅನುಮೋದನೆ ಸಿಕ್ಕಿ ದಶಕಗಳೇ ಕಳೆದಿದ್ದರೂ, ಅವು ಇನ್ನೂ ನೀಲ ನಕ್ಷೆಯಲ್ಲೇ ಇದೆ. ಕೆಲವು ಯೋಜನೆಗಳು ಜಾರಿಗೆ ಬಂದಿವೆ. ಆದರೆ, ರಾಜಕಾರಣಿಗಳ ಆರಂಭ ಶೂರತ್ವದಿಂದಾಗಿ ರೈಲು ಯೋಜನೆಗಳು ವರ್ಷ ಕಳೆದಂತೆ ಕುಂಟುತ್ತಲೇ ಸಾಗುತ್ತಿವೆ. ಉತ್ತರ ಕರ್ನಾಟಕದ ಎಲ್ಲಾ ಸಂಸದರು ಬಿಜೆಪಿ ಪಕ್ಷದವರೇ. ಆದರೆ, ಅವರಲ್ಲೂ ಇಚ್ಛಾಶಕ್ತಿಯ ಕೊರತೆ ಎದ್ದುಕಾಣುತ್ತಿದೆ.

ಅರ್ಧಕ್ಕೆ ನಿಂತ ಯೋಜನೆಗಳ ಪಟ್ಟಿ ಹುಬ್ಬಳ್ಳಿ-ಅಂಕೋಲ: 1998ರಲ್ಲಿಯೇ ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗಕ್ಕೆ ಅನುಮತಿ ಸಿಕ್ಕಿದೆ. 168 ಕಿ.ಮೀ. ದೂರದ ಈ ಯೋಜನೆ ಉತ್ತರ ಕರ್ನಾಟಕ ಹಾಗೂ ಕರಾವಳಿಯನ್ನು ಸಂಪರ್ಕಿಸುತ್ತವೆ. ಈ ರೈಲು ಮಾರ್ಗ ಪಶ್ವಿಮ ಘಟ್ಟದ ನಡುವೆ ಸಾಗುತ್ತದೆ. ಹೀಗಾಗಿ, ಪರಿಸರವಾದಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಯೋಜನೆಗೆ ಹಸಿರು ಪೀಠ ತಡೆ ನೀಡಿದೆ. ಹೀಗಾಗಿ, ಯೋಜನೆ ಹಳಿ ತಪ್ಪಿದೆ.

ಕುಡಚಿ- ಬಾಗಲಕೋಟೆ: ಬೆಳಗಾವಿಯ ಕುಡಚಿ ಹಾಗೂ ಬಾಗಲಕೋಟೆ ರೈಲು ಮಾರ್ಗಕ್ಕೆ 2010ರಲ್ಲಿ ಗ್ರೀನ್​ ಸಿಗ್ನಲ್​ ಸಿಕ್ಕಿತ್ತು. ಬೇಸರದ ಸಂಗತಿ ಎಂದರೆ, 141 ಕಿ.ಮೀ ಮಾರ್ಗದಲ್ಲಿ ಪೂರ್ಣಗೊಂಡಿದ್ದು ಕೇವಲ 33 ಕಿ.ಮೀ. ಕಾಮಗಾರಿ ಮಾತ್ರ. ₹ 816 ಕೋಟಿ ಯೋಜನೆಯ ಗಾತ್ರ ಈಗ ₹ 2,200 ಕೋಟಿಗೆ ಏರಿಕೆ ಆಗಿದೆ. ಸುಮಾರು 11 ವರ್ಷಗಳಲ್ಲಿ ಯೋಜನೆಗೆ ಇಷ್ಟು ಹಿನ್ನಡೆ ಉಂಟಾಗಿರುವುದಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಗದಗ-ವಾಡಿ: ಗದಗ ಹಾಗೂ ಗುಲ್ಬರ್ಗದ ವಾಡಿ ನಡುವಿನ ರೈಲು ಮಾರ್ಗ ಯೋಜನೆ 220 ಕಿ.ಮೀ. ಇದೆ. ರಸ್ತೆ ಮಾರ್ಗಕ್ಕಿಂತ ಇದು 100 ಕಿ. ಮೀ. ದೂರ ಕಡಿಮೆ. ಈ ಯೋಜನೆ ಪೂರ್ಣಗೊಂಡಿಲ್ಲ.

ಗದಗ-ಯಲೋಗಿ: ಗದಗದಿಂದ ಯಲೋಗಿಗೆ ರೈಲಿನ ಮೂಲಕ ಸಾಗಬೇಕೆಂದರೆ ಸುತ್ತುವರಿದು ಹೋಗಬೇಕು. ಗದಗ-ಯಲೋಗಿ ನಡುವೆ ನೇರ ರೈಲು ಮಾರ್ಗ ಯೋಜನೆ ಅನುಷ್ಠಾನಕ್ಕೆ ಬಂದಿದ್ದರೆ, ಇಲ್ಲಿಯ ಜನರ ಸುತ್ತಾಟದ ಬವಣೆ ಕಡಿಮೆ ಆಗುತ್ತಿತ್ತು.

ಜೋಡಿ ರೈಲು ಮಾರ್ಗಗಳು

ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶ, ತಮಿಳುನಾಡು, ಕೇರಳಗಳಿಗೆ ಹೋಲಿಕೆ ಮಾಡಿದರೆ, ಕರ್ನಾಟಕದಲ್ಲಿ ಜೋಡಿ ರೈಲು ಮಾರ್ಗಗಳ ಸಂಖ್ಯೆ ತುಂಬಾನೇ ಕಡಿಮೆ. ಈ ವಿಚಾರದಲ್ಲಿ ಪ್ರತಿವರ್ಷವೂ ಕರ್ನಾಟಕಕ್ಕೆ ಮೋಸ ಆಗುತ್ತಲೇ ಇದೆ. ಇನ್ನು, ಕೇಂದ್ರ ಸರ್ಕಾರ ಇದಕ್ಕೆ ಬಜೆಟ್​ನಲ್ಲಿ ಹಣ ನೀಡಿದರೂ, ಕಾರಣಾಂತರಗಳಿಂದ ಅನೇಕ ಯೋಜನೆಗಳು ಜಾರಿಗೆ ಬರುತ್ತಿಲ್ಲ. ಪ್ರಮುಖ ಮಾರ್ಗ ಎನಿಸಿಕೊಂಡಿರುವ ಬೆಂಗಳೂರು-ಹುಬ್ಬಳ್ಳಿ ನಡುವೆ ಪೂರ್ಣ ಪ್ರಮಾಣದಲ್ಲಿ ಜೋಡಿ ರೈಲು ಮಾರ್ಗ ಆಗಿಲ್ಲ. ಒಂಟಿ ಮಾರ್ಗದಿಂದಾಗಿ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗುತ್ತಿದೆ. ರೈಲು ವಿದ್ಯುದೀಕರಣದ  ಸಾಕಷ್ಟು ಯೋಜನೆಗಳು ದಶಕಗಳ ಹಿಂದೆಯೇ ಪೂರ್ಣಗೊಳ್ಳಬೇಕಿತ್ತು. ಆದರೆ, ಅವುಗಳ ಕಾಮಗಾರಿ ಇನ್ನೂ ಕುಂಟುತ್ತಲೇ ಸಾಗುತ್ತಿದೆ.

ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾರಾ ರಾಜಕಾರಣಿಗಳು ಕರ್ನಾಟಕದ ಸಾಕಷ್ಟು ರೈಲು ಯೋಜನೆಗಳು ಕುಂಠಿತಗೊಳ್ಳಲು ಹಣದ ಕೊರತೆ ಮುಖ್ಯ ಕಾರಣ. ಈ ಬಾರಿಯ ಬಜೆಟ್​ನಲ್ಲಿ ನಮ್ಮ ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯ ಹೇರಬೇಕಾಗಿದೆ. ಈ ಮೂಲಕ ರಾಜ್ಯದ ಅಭಿವೃದ್ಧಿಗೆ ಪಣತೊಡಬೇಕಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ ಮೊದಲ ರೈಲು! ಮೆಜೆಸ್ಟಿಕ್​ನಿಂದ 45 ನಿಮಿಷ ಮಾತ್ರ

Budget 2021: ಬಜೆಟ್ ಮೊಬೈಲ್ ಆ್ಯಪ್​ನಲ್ಲಿ ಏನಿದೆ?

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್