ಅಮೆರಿಕ (America) ಗ್ರಾಹಕ ದರಗಳು 2022ರ ಫೆಬ್ರವರಿಯಲ್ಲಿ ಏರಿಕೆ ಕಂಡಿದ್ದು, ಇದು 40 ವರ್ಷಗಳಲ್ಲೇ ಗರಿಷ್ಠ ವಾರ್ಷಿಕ ಹೆಚ್ಚಳವಾಗಿದೆ. ಉಕ್ರೇನ್ ವಿರುದ್ಧ ರಷ್ಯಾದ ಯುದ್ಧವು ಕಚ್ಚಾ ತೈಲ ಮತ್ತು ಇತರ ಸರಕುಗಳ ವೆಚ್ಚವನ್ನು ಹೆಚ್ಚಿಸಿರುವುದರಿಂದ ಹಣದುಬ್ಬರವು ಮುಂದಿನ ತಿಂಗಳುಗಳಲ್ಲಿ ಮತ್ತಷ್ಟು ವೇಗವನ್ನು ಪಡೆಯಲಿದೆ. ಗ್ರಾಹಕ ಬೆಲೆ ಸೂಚ್ಯಂಕವು ಜನವರಿಯಲ್ಲಿ ಶೇ 0.6ರಷ್ಟು ಗಳಿಕೆ ದಾಖಲಿಸಿತ್ತು. ಫೆಬ್ರವರಿ ತಿಂಗಳಲ್ಲಿ ಶೇ 0.8ರಷ್ಟು ಹೆಚ್ಚಾಗಿದೆ ಎಂದು ಕಾರ್ಮಿಕ ಇಲಾಖೆ ಗುರುವಾರ ತಿಳಿಸಿದೆ. ಫೆಬ್ರವರಿಯಿಂದ 12 ತಿಂಗಳಲ್ಲಿ ಗ್ರಾಹಕ ದರ ಸೂಚ್ಯಂಕವು ಶೇ 7.9ರಷ್ಟು ಏರಿದ್ದು, ಇದು ಜನವರಿ 1982ರಿಂದ ವರ್ಷದಿಂದ ವರ್ಷಕ್ಕೆ (Year On Year) ಅತಿದೊಡ್ಡ ಹೆಚ್ಚಳವಾಗಿದೆ. ಇದು ಜನವರಿಯಲ್ಲಿ ಶೇ 7.5 ಜಿಗಿತ ಕಂಡಿತ್ತು. ಹೀಗೆ ಶೇ 6ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಾರ್ಷಿಕ ಗ್ರಾಹಕರ ದರ ಸೂಚ್ಯಂಕವು ಸತತ ಐದನೇ ನೇರ ತಿಂಗಳು ಏರಿಕೆ ಕಂಡಿತು. ರಾಯಿಟರ್ಸ್ ಸಮೀಕ್ಷೆ ನಡೆಸಿದ ಅರ್ಥಶಾಸ್ತ್ರಜ್ಞರ ಅಭಿಮತದ ಪ್ರಕಾರ ಸಿಪಿಐ 0.8ರಷ್ಟು ಏರಿಕೆ ಆಗಿದ್ದು, ವರ್ಷದಿಂದ ವರ್ಷಕ್ಕೆ ಶೇ 7.9ರಷ್ಟು ತಲುಪುವುದನ್ನು ಅಂದಾಜಿಸಿದ್ದರು.
ಅಂದಹಾಗೆ ಹಣದುಬ್ಬರವು ಅಮೆರಿಕದ ಕೇಂದ್ರ ಬ್ಯಾಂಕ್ ಫೆಡರಲ್ ರಿಸರ್ವ್‌ನ ಶೇ 2.0 ಗುರಿಯನ್ನು ಮೀರಿಸಿದೆ. ಅಮೆರಿಕದ ಕೇಂದ್ರ ಬ್ಯಾಂಕ್ನಿಂದ ಹಣದುಬ್ಬರವನ್ನು ತಡೆಯುವ ನಿಟ್ಟಿನಲ್ಲಿ ಮುಂದಿನ ಬುಧವಾರ ಬಡ್ಡಿದರಗಳನ್ನು ಹೆಚ್ಚಿಸಲು ಪ್ರಾರಂಭಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಅರ್ಥಶಾಸ್ತ್ರಜ್ಞರು ಈ ವರ್ಷ ಏಳು ದರ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ. ಕಳೆದ ತಿಂಗಳ ಗ್ರಾಹಕರ ದರ ಸೂಚ್ಯಂಕದ ಡೇಟಾವು ಫೆಬ್ರವರಿ 24ರಂದು ಉಕ್ರೇನ್‌ನ ಮೇಲೆ ರಷ್ಯಾದ ದಾಳಿ ನಂತರ ತೈಲ ಬೆಲೆಗಳ ಏರಿಕೆಯನ್ನು ಸಂಪೂರ್ಣವಾಗಿ ಒಳಗೊಂಡಿರಲಿಲ್ಲ. ಜಾಗತಿಕ ಮಾನದಂಡವಾದ ಬ್ರೆಂಟ್ 2008ರ ಗರಿಷ್ಠ ಮಟ್ಟವಾದ ಯುಎಸ್ಡಿ 139 ದಾಟಿತು. ವರದಿಗಳ ನಂತರ ಬುಧವಾರ ದರಗಳು ಇಳಿಯುವ ಮೊದಲು, ಜಾಗತಿಕ ಮಾನದಂಡವಾದ ಬ್ರೆಂಟ್ 2008ರ ಗರಿಷ್ಠ ಮಟ್ಟವನ್ನು ತಲುಪಿತು. ಉತ್ಪಾದನೆಯನ್ನು ಹೆಚ್ಚಿಸಲು ಯುನೈಟೆಡ್ ಅರಬ್ ಎಮಿರೇಟ್ಸ್ ಸಹ OPEC ಸದಸ್ಯರಿಗೆ ಕರೆ ನೀಡುವ ಮೊದಲಿಗೆ ಈ ಬೆಳವಣಿಗೆ ಆಗಿತ್ತು.
ಯುನೈಟೆಡ್ ಸ್ಟೇಟ್ಸ್ ಮತ್ತು ಅದರ ಮಿತ್ರರಾಷ್ಟ್ರಗಳು ರಷ್ಯಾದ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿವೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮಂಗಳವಾರ ದೇಶಕ್ಕೆ ರಷ್ಯಾದ ತೈಲ ಆಮದುಗಳನ್ನು ನಿಷೇಧಿಸಿದ್ದಾರೆ. ರಷ್ಯಾವು ವಿಶ್ವದ ಎರಡನೇ ಅತಿದೊಡ್ಡ ಕಚ್ಚಾ ತೈಲ ರಫ್ತುದಾರ ದೇಶವಾಗಿದೆ. ಅಮೆರಿಕದಲ್ಲಿ ಗ್ಯಾಸೋಲಿನ್ ಬೆಲೆಗಳು ಒಂದು ತಿಂಗಳ ಹಿಂದೆ ಯುಎಸ್ಡಿ 3.469ಕ್ಕೆ ಹೋಲಿಸಿದರೆ ಪ್ರತಿ ಗ್ಯಾಲನ್‌ಗೆ ಯುಎಸ್ಡಿ 4.318 ದಾಖಲೆಯ ಸರಾಸರಿಯನ್ನು ಹೊಂದಿದೆ ಎಂದು AAA ಡೇಟಾ ತೋರಿಸಿದೆ. ನ್ಯೂಯಾರ್ಕ್‌ನಲ್ಲಿನ ಜೆಪಿ ಮೋರ್ಗನ್ ಫಂಡ್ಸ್‌ನ ಡೇವಿಡ್ ಕೆಲ್ಲಿ ಪ್ರಕಾರ, ವರ್ಷಕ್ಕೆ ಗ್ಯಾಸೋಲಿನ್ ಸರಾಸರಿ ಯುಎಸ್ಡಿ 4.20 ರಷ್ಟಿದ್ದರೆ, ಅದು ಸರಾಸರಿ ಮನೆಯ ವೆಚ್ಚಗಳಿಗೆ ಯುಎಸ್ಡಿ 1,000ಕ್ಕಿಂತ ಹೆಚ್ಚು ಸೇರ್ಪಡೆ ಮಾಡುತ್ತದೆ. ರಷ್ಯಾ-ಉಕ್ರೇನ್ ಯುದ್ಧವು ಗೋಧಿ ಮತ್ತು ಇತರ ಸರಕುಗಳ ಬೆಲೆಗಳನ್ನು ಹೆಚ್ಚಿಸಿದ್ದು, ಎರಡನೇ ತ್ರೈಮಾಸಿಕದಲ್ಲಿ ಹಣದುಬ್ಬರವನ್ನು ಆತಂಕಕಾರಿ ಮಾಡಿದೆ.
“ನಮ್ಮ ಅಂದಾಜಿನಂತೆ ಗ್ಯಾಸೋಲಿನ್ ಮತ್ತು ನೈಸರ್ಗಿಕ ಅನಿಲದ ಬೆಲೆಗಳು ಮುಂದಿನ ಹತ್ತು ತಿಂಗಳಲ್ಲಿ ಪ್ರತಿ ತಿಂಗಳು ಒಟ್ಟಾರೆ ವರ್ಷದಿಂದ ವರ್ಷಕ್ಕೆ ಶೇ 1 ಫುಲ್ ಪಾಯಿಂಟ್ ಸೇರಿಸಲು ಟ್ರ್ಯಾಕ್‌ನಲ್ಲಿವೆ,” ಎಂದು ಯುಎಸ್ನ ಕನೆಕ್ಟಿಕಟ್ ಸ್ಟ್ಯಾಮ್‌ಫೋರ್ಡ್‌ನ ನ್ಯಾಟ್‌ವೆಸ್ಟ್ ಮಾರ್ಕೆಟ್‌ನಲ್ಲಿ ಮುಖ್ಯ ಅರ್ಥಶಾಸ್ತ್ರಜ್ಞ ಕೆವಿನ್ ಕಮ್ಮಿನ್ಸ್ ಹೇಳಿದ್ದಾರೆ. ಕಡಿಮೆ ಆದಾಯದ ಕುಟುಂಬಗಳು ಹೆಚ್ಚಿನ ಹಣದುಬ್ಬರದ ಭಾರವನ್ನು ಹೊರುತ್ತವೆ. ಏಕೆಂದರೆ ತಮ್ಮ ಆದಾಯದ ಹೆಚ್ಚಿನದನ್ನು ಆಹಾರ ಮತ್ತು ಗ್ಯಾಸೋಲಿನ್‌ಗೆ ಖರ್ಚು ಮಾಡುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: Russia Ukraine War: ಉಕ್ರೇನ್ ಪರವಾಗಿ ನಿಲ್ಲುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಘೋಷಣೆ