AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Russia Ukraine War: ಉಕ್ರೇನ್ ಪರವಾಗಿ ನಿಲ್ಲುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಘೋಷಣೆ

ಯುದ್ಧರಂಗಕ್ಕೆ ಅಮೆರಿಕ ಪ್ರವೇಶಿಸಿದರೆ ಪರಿಸ್ಥಿತಿ ಬದಲಾಗಬಹುದು ಎಂದು ಈವರೆಗೆ ಹಲವು ವಿಶ್ಲೇಷಿಸಿದ್ದರು. ಆದರೆ ಇಂಥ ಊಹಾಪೋಹಗಳಿಗೆ ತೆರೆ ಎಳೆದಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ರಷ್ಯಾ ವಿರುದ್ಧ ನೇರ ಹೋರಾಟಕ್ಕೆ ಅಮೆರಿಕ ಮುಂದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Russia Ukraine War: ಉಕ್ರೇನ್ ಪರವಾಗಿ ನಿಲ್ಲುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಘೋಷಣೆ
ಅಮೆರಿಕ ಅಧ್ಯಕ್ಷ ಜೋ ಬೈಡೆನ್
Follow us
TV9 Web
| Updated By: ganapathi bhat

Updated on:Mar 02, 2022 | 9:58 AM

ಉಕ್ರೇನ್ ಮೇಲೆ ರಷ್ಯಾ ಅಪ್ರಚೋದಿತ ದಾಳಿ ನಡೆಸುತ್ತಿದೆ. ರಷ್ಯಾ (Russia) ಪ್ರೀಪ್ಲ್ಯಾನ್ ಯುದ್ಧ ನಡೆಸುತ್ತಿದೆ. ನ್ಯಾಟೋ ದೇಶಗಳು ಪ್ರತಿಕ್ರಿಯಿಸಲ್ಲ ಎಂದು ಭಾವಿಸಿದ್ದರು. ಅಮೆರಿಕ (America) ವಾಯುನೆಲೆಯಲ್ಲಿ ರಷ್ಯಾ ವಿಮಾನಗಳಿಗೆ ಬ್ಯಾನ್ ಮಾಡಲಾಗಿದೆ. ಇಡೀ ವಿಶ್ವವೇ ರಷ್ಯಾ ಅಧ್ಯಕ್ಷ ಪುಟಿನ್‌ರನ್ನ ದೂರ ಇಟ್ಟಿದೆ. ರಷ್ಯಾ ವಿರುದ್ಧ ಉಕ್ರೇನ್ (Ukraine) ಧೈರ್ಯವಾಗಿ ಯುದ್ಧ ಮಾಡ್ತಿದೆ. ನಾವು ಉಕ್ರೇನ್ ಪರವಾಗಿ ರಷ್ಯಾ ವಿರುದ್ಧ ಹೋರಾಡಲ್ಲ. ಆದರೆ ಉಕ್ರೇನ್ ಪರವಾಗಿ ಅಮೆರಿಕ ನಿಲ್ಲುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ತಿಳಿಸಿದ್ದಾರೆ.

ಸ್ಟೇಟ್ ಆಫ್ ಯೂನಿಯನ್ ಉದ್ದೇಶಿಸಿ ಬೈಡೆನ್ ಭಾಷಣ ಮಾಡಿದ್ದಾರೆ. ಉಕ್ರೇನ್ ಪರವಾಗಿ ನಿಲ್ಲುವುದಾಗಿ ಬೈಡೆನ್ ಘೋಷಣೆ ಮಾಡಿದ್ದಾರೆ. ಉಕ್ರೇನ್ ಮತ್ತು ರಷ್ಯಾ ಸಂಘರ್ಷದಲ್ಲಿ (Russia Ukraine War) ರಷ್ಯಾ ಮೊದಲ ದಿನದಿಂದಲೂ ಮೇಲುಗೈ ಸಾಧಿಸಿದೆ. ಯುದ್ಧರಂಗಕ್ಕೆ ಅಮೆರಿಕ ಪ್ರವೇಶಿಸಿದರೆ ಪರಿಸ್ಥಿತಿ ಬದಲಾಗಬಹುದು ಎಂದು ಈವರೆಗೆ ಹಲವು ವಿಶ್ಲೇಷಿಸಿದ್ದರು. ಆದರೆ ಇಂಥ ಊಹಾಪೋಹಗಳಿಗೆ ತೆರೆ ಎಳೆದಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ರಷ್ಯಾ ವಿರುದ್ಧ ನೇರ ಹೋರಾಟಕ್ಕೆ ಅಮೆರಿಕ ಮುಂದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸ್ಟೇಟ್ ಆಫ್ ಯೂನಿಯನ್ ಉದ್ದೇಶಿಸಿ ಮಾತನಾಡಿದ ಅವರು, ಉಕ್ರೇನ್ ಮೇಲೆ ರಷ್ಯಾ ಪೂರ್ವನಿಯೋಜಿತ ಮತ್ತು ಅಪ್ರಚೋದಿತ ದಾಳಿ ನಡೆಯುತ್ತಿದೆ. ನ್ಯಾಟೊ ದೇಶಗಳು ಉಕ್ರೇನ್ ರಕ್ಷಣೆಗೆ ಧಾವಿಸುವುದಿಲ್ಲ ಎಂದೇ ರಷ್ಯಾ ಭಾವಿಸಿಕೊಂಡಿದೆ. ಆದರೆ ನಾವು ಸುಮ್ಮನೆ ಕುಳಿತಿಲ್ಲ. ಇಡೀ ವಿಶ್ವವೇ ರಷ್ಯಾದ ನಡೆಯನ್ನು ಖಂಡಿಸಿದೆ. ಅಮೆರಿಕ ವಾಯುನೆಲೆಯಲ್ಲಿ ರಷ್ಯಾ ವಿಮಾನಗಳನ್ನು ನಿರ್ಬಂಧಿಸಲಾಗಿದೆ. ರಷ್ಯಾ ವಿರುದ್ಧ ಉಕ್ರೇನ್​ನ ಜನರು ಧೈರ್ಯವಾಗಿ ಹೋರಾಡುತ್ತಿದ್ದಾರೆ. ನಾವು ಉಕ್ರೇನ್ ಪರ ಇರುವುದರು ನಿಜ. ಆದರೆ ರಷ್ಯಾ ವಿರುದ್ಧ ನೇರವಾಗಿ ಸಂಘರ್ಷಕ್ಕೆ ಇಳಿಯುವುದಿಲ್ಲ ಎಂದು ಹೇಳಿದ್ದಾರೆ.

ರಷ್ಯಾದ ಪುಟಿನ್ ಯುದ್ಧಭೂಮಿಯಲ್ಲಿ ಜಯಗಳಿಸಬಹು. ಆದರೆ ಭವಿಷ್ಯದಲ್ಲಿ ತಕ್ಕ ಬೆಲೆ ತೆರಲಿದ್ದಾರೆ. ಯುದ್ಧಭೂಮಿಯಲ್ಲಿ ಪುಟಿನ್ ಲಾಭಗಳಿಸಬಹು. ದೀರ್ಘಾವಧಿಯಲ್ಲಿ ರಷ್ಯಾ ನಿರಂತರ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಭವಿಷ್ಯ ಏನಾಗಲಿದೆ ಎಂದು ಪುಟಿನ್​ಗೆ ತಿಳಿದಿಲ್ಲ. ಕೆಲವು ನಿರ್ಬಂಧಗಳಿಂದ ರಷ್ಯಾವನ್ನು ಉಸಿರುಗಟ್ಟಿಸುತ್ತಿದ್ದೇವೆ. ಇದು ರಷ್ಯಾ ಆರ್ಥಿಕ ಶಕ್ತಿಯನ್ನು ಕುಗ್ಗಿಸುತ್ತದೆ. ಮುಂಬರುವ ವರ್ಷಗಳಲ್ಲಿ ರಷ್ಯಾ ಮಿಲಿಟರಿ ದುರ್ಬಲಗೊಳ್ಳಲಿದೆ ಎಂದು ಸ್ಟೇಟ್ ಆಫ್ ದಿ ಯೂನಿಯನ್ ಭಾಷಣದಲ್ಲಿ ಜೋ ಬೈಡನ್ ಹೇಳಿದ್ದಾರೆ.

ಇದನ್ನೂ ಓದಿ: Russia-Ukraine War: ಕೀವ್​​ನಲ್ಲಿರುವ ಟಿವಿ ಟವರ್​ ಮೇಲೆ ರಷ್ಯಾ ಬಾಂಬ್​​ ದಾಳಿ; 5 ಮಂದಿ ಸಾವು, ಚಾನಲ್​​ಗಳೆಲ್ಲ ಸ್ಥಗಿತ

ಇದನ್ನೂ ಓದಿ: Russia- Ukraine Crisis: ರಷ್ಯಾ- ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ಏನಾಗಲಿದೆ ಭಾರತದ ಆರ್ಥಿಕ ಪರಿಸ್ಥಿತಿ?

Published On - 8:51 am, Wed, 2 March 22

ಪಾಟ್ನಾದಲ್ಲಿ 1,200 ಕೋಟಿ ವೆಚ್ಚದ ಟರ್ಮಿನಲ್ ಉದ್ಘಾಟಿಸಿದ ಮೋದಿ
ಪಾಟ್ನಾದಲ್ಲಿ 1,200 ಕೋಟಿ ವೆಚ್ಚದ ಟರ್ಮಿನಲ್ ಉದ್ಘಾಟಿಸಿದ ಮೋದಿ
ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​