AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ರಷ್ಯಾದ ಯುದ್ಧ ಟ್ಯಾಂಕ್​​ಗಳಿಗೆ ಜೋತು ಬೀಳುತ್ತಿರುವ ಉಕ್ರೇನ್​ ನಾಗರಿಕರು; ಸೇನೆಯನ್ನು ತಡೆಯಲು ಇನ್ನಿಲ್ಲದ ಪ್ರಯತ್ನ

ಪೋಲೆಂಡ್, ಹಂಗೇರಿ, ಜೆಕಿಯಾ, ಸ್ಲೋವಾಕಿಯಾ ದೇಶಗಳ ಸಾಂಸ್ಕೃತಿಕ ಮತ್ತು ರಾಜಕೀಯ ಒಕ್ಕೂಟವಾದ ವಿಸೆಗ್ರಾಡ್​​ ವಿಡಿಯೋವನ್ನು ಶೇರ್ ಮಾಡಿಕೊಂಡಿದೆ. ಉತ್ತರ ಉಕ್ರೇನ್​​ನಲ್ಲಿರುವ ಬಖ್ಮಾಚ್​ ನಗರದ  ಚೆರ್ನಿಹಿವ್ ಪ್ರದೇಶದಲ್ಲಿ ಉಕ್ರೇನ್​ ನಾಗರಿಕರು ಸಾಹಸವನ್ನೇ ಮಾಡುತ್ತಿದ್ದಾರೆ ಎಂದು ಹೇಳಿದೆ.

Video: ರಷ್ಯಾದ ಯುದ್ಧ ಟ್ಯಾಂಕ್​​ಗಳಿಗೆ ಜೋತು ಬೀಳುತ್ತಿರುವ ಉಕ್ರೇನ್​ ನಾಗರಿಕರು; ಸೇನೆಯನ್ನು ತಡೆಯಲು ಇನ್ನಿಲ್ಲದ ಪ್ರಯತ್ನ
ಉಕ್ರೇನ್​ ರಸ್ತೆಗಳಲ್ಲಿ ರಷ್ಯಾದ ಯುದ್ಧ ಟ್ಯಾಂಕ್​​ಗಳು
TV9 Web
| Edited By: |

Updated on: Mar 02, 2022 | 9:29 AM

Share

ರಷ್ಯಾ ಉಕ್ರೇನ್​ ಮೇಲೆ ಆಕ್ರಮಣ (Russia Attack On Ukraine) ಮಾಡಿ ಇಂದು ಏಳನೇ ದಿನ. ಉಕ್ರೇನಿಯನ್ನರು ರಷ್ಯಾ ವಿರುದ್ಧ ಧೈರ್ಯದಿಂದ ಹೋರಾಡುತ್ತಿದ್ದಾರೆ.  ನಾಗರಿಕರೂ ಸಹ ರಷ್ಯಾ ಸೈನಿಕರನ್ನು ಹಿಮ್ಮೆಟ್ಟಿಸಲು ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ. ಬೀದಿಬೀದಿಯಲ್ಲಿ ನಿಂತ ರಷ್ಯಾ ಯೋಧರೊಂದಿಗೆ ಮಾತಿನ ಯುದ್ಧಕ್ಕೆ ಇಳಿಯುತ್ತಿದ್ದಾರೆ.  ಈ ಮಧ್ಯೆ ಉಕ್ರೇನ್​ ನಾಗರಿಕರು ರಷ್ಯಾದ ಯುದ್ಧ ಟ್ಯಾಂಕ್​ಗಳು ಮುಂದೆ ಸಾಗದಂತೆ ತಡೆಯಲು ಅದರ ಮೇಲೆ ಹತ್ತುವ, ಅಡ್ಡಗಟ್ಟುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದು, ವಿಡಿಯೋಗಳು ವೈರಲ್ ಆಗಿವೆ.

ಪೋಲೆಂಡ್, ಹಂಗೇರಿ, ಜೆಕಿಯಾ, ಸ್ಲೋವಾಕಿಯಾ ದೇಶಗಳ ಸಾಂಸ್ಕೃತಿಕ ಮತ್ತು ರಾಜಕೀಯ ಒಕ್ಕೂಟವಾದ ವಿಸೆಗ್ರಾಡ್​​ ವಿಡಿಯೋವನ್ನು ಶೇರ್ ಮಾಡಿಕೊಂಡಿದೆ. ಉತ್ತರ ಉಕ್ರೇನ್​​ನಲ್ಲಿರುವ ಬಖ್ಮಾಚ್​ ನಗರದ  ಚೆರ್ನಿಹಿವ್ ಪ್ರದೇಶದಲ್ಲಿ ಉಕ್ರೇನ್​ ನಾಗರಿಕರು ಸಾಹಸವನ್ನೇ ಮಾಡುತ್ತಿದ್ದಾರೆ. ಇಲ್ಲಿ ಹಾದುಹೋಗುವ ರಷ್ಯಾದ ಯುದ್ಧ ಟ್ಯಾಂಕ್​​ಗಳನ್ನು ತಡೆಯಲು, ಅವುಗಳ ಮೇಲೆ ಹತ್ತುತ್ತಿದ್ದಾರೆ. ಜೋತು ಬೀಳುತ್ತಿದ್ದಾರೆ. ಅಡ್ಡ ಹೋಗುತ್ತಿದ್ದಾರೆ ಎಂದು ವಿಸೆಗ್ರಾಡ್​ ತಿಳಿಸಿದೆ.

ಉಕ್ರೇನ್​ ರಸ್ತೆಯಲ್ಲಿ ನಿಂತಿರುವ ರಷ್ಯಾ ಸೈನಿಕರನ್ನು ಉಕ್ರೇನ್​ ನಾಗರಿಕರು ಮಾತನಾಡಿಸುತ್ತಿದ್ದಾರೆ. ಇಲ್ಲೇಕೆ ಬಂದಿರಿ? ನಿಮ್ಮದೇಶದಲ್ಲಿ ನಿಮಗೆ ಮಾಡಲು ಕೆಲಸವಿಲ್ಲವಾ? ಎಂಬಿತ್ಯಾದಿ ವ್ಯಂಗ್ಯ, ಆಕ್ರೋಶ ಭರಿತ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಹೀಗೆ ಉಕ್ರೇನ್​ ನಾಗರಿಕರು ರಷ್ಯಾ ಸೈನಿಕರನ್ನು ಮಾತನಾಡಿಸುವ ಹಲವು ದೃಶ್ಯಗಳನ್ನು ಒಳಗೊಂಡ ವಿಡಿಯೋವೊಂದನ್ನು ಉಕ್ರೇನಿಯನ್​ ವಿದೇಶಾಂಗ ವ್ಯವಹಾರಗಳ ಇಲಾಖೆ ನಿನ್ನೆ ಶೇರ್ ಮಾಡಿಕೊಂಡಿತ್ತು.

ಇದನ್ನೂ ಓದಿ: ಉಕ್ರೇನ್​ನ ಐದು ಪ್ರಮುಖ ನಗರಗಳನ್ನು ವಶಡಿಸಿಕೊಳ್ಳಲು ರಷ್ಯಾ ಯಾಕೆ ಹವಣಿಸುತ್ತಿದೆ? ಮಾಹಿತಿ ಇಲ್ಲಿದೆ

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?