Vacuum Bomb: ಉಕ್ರೇನ್​ ಮೇಲೆ ರಷ್ಯಾದಿಂದ ವ್ಯಾಕ್ಯೂಮ್​ ಬಾಂಬ್​ ದಾಳಿ; ಮನುಷ್ಯ ದೇಹವನ್ನೇ ಆವಿ ಮಾಡುವ ಭಯಾನಕ ಸ್ಫೋಟಕ ಇದು !

ವ್ಯಾಕ್ಯೂಮ್​ ಬಾಂಬ್​​ಗಳನ್ನು ಥರ್ಮಾಬಾರಿಕ್​ ಬಾಂಬ್​​ಗಳು ಎಂದೂ ಕರೆಯಲಾಗುತ್ತದೆ. ಈ ಬಾಂಬ್​​ಗಳನ್ನು ಯಾವ ಜಾಗದಲ್ಲಿ ಎಸೆಯಲಾಗುತ್ತದೆಯೋ ಅಲ್ಲಿರುವ ವಸ್ತುಗಳು ಅಥವಾ ಜನರ ಮೇಲೆ ಅತ್ಯಂತ ಹೆಚ್ಚಿನ ಪ್ರಮಾಣದ ಉಷ್ಣತೆ ಮತ್ತು ಒತ್ತಡವನ್ನು ಸೃಷ್ಟಿಸಿ ಸ್ಫೋಟಿಸುತ್ತದೆ. 

Vacuum Bomb: ಉಕ್ರೇನ್​ ಮೇಲೆ ರಷ್ಯಾದಿಂದ ವ್ಯಾಕ್ಯೂಮ್​ ಬಾಂಬ್​ ದಾಳಿ; ಮನುಷ್ಯ ದೇಹವನ್ನೇ ಆವಿ ಮಾಡುವ ಭಯಾನಕ ಸ್ಫೋಟಕ ಇದು !
ಉಕ್ರೇನ್​ ಮೇಲೆ ವಾಕ್ಯೂಮ್​ ಬಾಂಬ್​ ದಾಳಿ ಮಾಡುತ್ತಿರುವ ರಷ್ಯಾ
Follow us
| Updated By: Lakshmi Hegde

Updated on: Mar 02, 2022 | 8:43 AM

ತಾನು ಉಕ್ರೇನ್​ ಮೇಲೆ ಯುದ್ಧ ಮಾಡುವುದಿಲ್ಲ ಎಂದು ಜಗತ್ತನ್ನು ನಂಬಿಸುತ್ತಲೇ ಬಂದ ರಷ್ಯಾ (Russia) ಕೊನೆಗೂ ಮಾಡಿದ್ದು ಅದನ್ನೇ. ತಮ್ಮ ಗುರಿ ಉಕ್ರೇನ್​​ನ್ನು (Ukraine) ವಶಪಡಿಸಿ ಕೊಳ್ಳುವುದಲ್ಲ, ಅಲ್ಲಿನ ನಾಗರಿಕರನ್ನು ಕೊಲ್ಲುವುದಲ್ಲ ಎಂದು ಹೇಳುತ್ತಲೇ ಬಂದಿದ್ದ ರಷ್ಯಾ ಇದೀಗ ಉಕ್ರೇನ್​​ನಲ್ಲಿ ಸಿಕ್ಕಸಿಕ್ಕಲ್ಲಿ ಶೆಲ್​, ಬಾಂಬ್​, ಕ್ಷಿಪಣಿ ದಾಳಿ ನಡೆಸುತ್ತಿದೆ. ಇದರಿಂದ ಸಹಜವಾಗಿಯೇ ನಾಗರಿಕರೂ ಜೀವ ಬಿಡುತ್ತಿದ್ದಾರೆ. ನಿನ್ನೆ ಕರ್ನಾಟಕದ ವಿದ್ಯಾರ್ಥಿಯೊಬ್ಬ ರಷ್ಯಾ ಬಾಂಬ್​ ದಾಳಿಗೆ ಮೃತಪಟ್ಟಿದ್ದಾರೆ. ಈ ಮಧ್ಯೆ ಯುನೈಟೆಡ್​ ಸ್ಟೇಟ್ಸ್​​ ಮತ್ತು ಮಾನವ ಹಕ್ಕು ಗ್ರೂಪ್​ಗೆ ಉಕ್ರೇನ್​ನ ರಾಯಭಾರಿ ಗಂಭೀರ ಆರೋಪ ಮಾಡಿದ್ದಾರೆ. ರಷ್ಯಾ ಕ್ಲಸ್ಟರ್​ ಬಾಂಬ್​ ಮತ್ತು ವಾಕ್ಯೂಮ್​​ ಬಾಂಬ್(ನಿರ್ವಾತ ಬಾಂಬ್​​​)​​ಗಳ ಮೂಲಕ ರಷ್ಯಾ ಮೇಲೆ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ವಾಕ್ಯೂಮ್​ ಮತ್ತು ಕ್ಲಸ್ಟರ್​ ಬಾಂಬ್​​ಗಳಿಂದ ದಾಳಿ ಮಾಡುತ್ತಿರುವ ಕ್ರಮವನ್ನು ಅಮ್ನೆಸ್ಟಿ ಇಂಟರ್​ನ್ಯಾಶನಲ್​ ಮತ್ತು ಹ್ಯೂಮನ್​ ರೈಟ್ಸ್​ ವಾಚ್​ ಸೇರಿ ಇನ್ನೂ ಅನೇಕ ಅಂತಾರಾಷ್ಟ್ರೀಯ ಸಂಸ್ಥೆಗಳು ಖಂಡಿಸಿವೆ.

ಯುನೈಟೆಡ್ ಸ್ಟೇಟ್ಸ್‌ನಲ್ಲಿನ ಉಕ್ರೇನ್ ರಾಯಭಾರಿ ಒಕ್ಸಾನಾ ಮಾರ್ಕರೋವಾ ಮಾತನಾಡಿ, ಮಾಸ್ಕೋ ವಾಕ್ಯೂಮ್​ ಬಾಂಬ್​​ ಎಂದು ಕರೆಯಲ್ಪಡುವ ಥರ್ಮೋಬಾರಿಕ್​ ಶಸ್ತ್ರಾಸ್ತ್ರವನ್ನು ಉಕ್ರೇನ್​ ಮೇಲೆ ಪ್ರಯೋಗ ಮಾಡುತ್ತಿದೆ. ರಷ್ಯಾ ಉಕ್ರೇನ್​ಗೆ ಮಾಡಲು ಹೊರಟಿರುವ ಹಾನಿ ಬಹುದೊಡ್ಡದು ಎಂದು ಆರೋಪಿಸಿದ್ದಾರೆ. ಮಾನವ ಹಕ್ಕು ಸಂಸ್ಥೆ ಆಮ್ನೆಸ್ಟಿ ಕೂಡ ಇದನ್ನು ಖಂಡಿಸಿದ್ದು, ರಷ್ಯಾದ ಫೋರ್ಸ್​​ಗಳು ಉಕ್ರೇನ್​ ವಿರುದ್ಧ ದಾಳಿ ಮಾಡಲು ನಿಷೇಧಿತ ಕ್ಲಸ್ಟರ್​ ಯುದ್ಧಸಾಮಗ್ರಿಗಳನ್ನು ಬಳಸುತ್ತಿರುವಂತೆ ತೋರುತ್ತಿದೆ. ಉಕ್ರೇನ್​​ನ ಈಶಾನ್ಯದಲ್ಲಿರುವ ಒಂದು ಪ್ರೀಸ್ಕೂಲ್​ (ಅಂಗನವಾಡಿ)ನಲ್ಲಿ ನಾಗರಿಕರು ಆಶ್ರಯ ಪಡೆದಿದ್ದರು. ಹಾಗಿದ್ದಾಗ್ಯೂ ಅಲ್ಲಿ ಉಕ್ರೇನ್​  ದಾಳಿ ನಡೆಸಿದೆ ಎಂದು ಹೇಳಿದೆ.

ಏನಿದು ವ್ಯಾಕ್ಯೂಮ್​ ಬಾಂಬ್​

ರಷ್ಯಾ ಉಕ್ರೇನ್​ ಮೇಲೆ ನಿರ್ವಾತ ಬಾಂಬ್​​ಗಳ ಮೂಲಕ ದಾಳಿ ಮಾಡುತ್ತಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಹೀಗಂದರೆ ಏನು? ಯಾವ ರೀತಿ ಕಾರ್ಯ ನಿರ್ವಹಿಸುತ್ತವೆ ಎಂಬ ಕುತೂಹಲ ಹೆಚ್ಚಿದೆ. ಈ ವಾಕ್ಯೂಮ್​ ಅಥವಾ ನಿರ್ವಾತ ಬಾಂಬ್​​ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ..

ವ್ಯಾಕ್ಯೂಮ್​ ಬಾಂಬ್​​ಗಳನ್ನು ಥರ್ಮಾಬಾರಿಕ್​ ಬಾಂಬ್​​ಗಳು ಎಂದೂ ಕರೆಯಲಾಗುತ್ತದೆ. ಈ ಬಾಂಬ್​​ಗಳನ್ನು ಯಾವ ಜಾಗದಲ್ಲಿ ಎಸೆಯಲಾಗುತ್ತದೆಯೋ ಅಲ್ಲಿರುವ ವಸ್ತುಗಳು ಅಥವಾ ಜನರ ಮೇಲೆ ಅತ್ಯಂತ ಹೆಚ್ಚಿನ ಪ್ರಮಾಣದ ಉಷ್ಣತೆ ಮತ್ತು ಒತ್ತಡವನ್ನು ಸೃಷ್ಟಿಸಿ ಸ್ಫೋಟಿಸುತ್ತದೆ.  ಇದು ಅತ್ಯಂತ ಭಯಾನಕ ಬಾಂಬ್​ ಎನ್ನಿಸಿಕೊಳ್ಳಲು ಕಾರಣ, ಸ್ಫೋಟಗೊಂಡಲ್ಲಿ ಇರುವ ಮಾನವರ ದೇಹವನ್ನು ಆವಿ ಮಾಡುವ ಶಕ್ತಿಯನ್ನು ಹೊಂದಿರುತ್ತದೆ. ವ್ಯಾಕ್ಯೂಮ್​ ಬಾಂಬ್​ ಸ್ಫೋಟಗೊಳ್ಳುವ ಜಾಗದ ಸುತ್ತಮುತ್ತ ಇರುವ ಆಮ್ಲಜನಕವನ್ನು ಹೀರಿಕೊಳ್ಳುತ್ತದೆ. ಇದರಿಂದಾಗಿ ಅತ್ಯಂತ ಹೆಚ್ಚಿನ ತಾಪಮಾನದೊಂದಿಗೆ ಸ್ಫೋಟಗೊಳ್ಳುತ್ತದೆ. ಸಾಮಾನ್ಯ ಬಾಂಬ್​​ಗಳು ಸ್ಫೋಟವಾದಾಗ ಉಂಟಾಗುವ ಸ್ಫೋಟ ತರಂಗಗಳಿಗಿಂತಲೂ, ವ್ಯಾಕ್ಯೂಮ್​ ಬಾಂಬ್​ ಸ್ಫೋಟದ ತರಂಗಗಳು ಹೆಚ್ಚಿನ ಅವಧಿವರೆಗೆ ಇರುತ್ತವೆ.

ಇದನ್ನೂ ಓದಿ: Russia-Ukraine War: ಕೀವ್​​ನಲ್ಲಿರುವ ಟಿವಿ ಟವರ್​ ಮೇಲೆ ರಷ್ಯಾ ಬಾಂಬ್​​ ದಾಳಿ; 5 ಮಂದಿ ಸಾವು, ಚಾನಲ್​​ಗಳೆಲ್ಲ ಸ್ಥಗಿತ